ಕನ್ನಡದ ಸಿನಿಮಾಗಳು ಈಗ ಕೇವಲ (Hoysala in Canada) ಕನ್ನಡಕ್ಕೆ ಸೀಮಿತವಾಗಿಲ್ಲ. ಕರ್ನಾಟಕ ದಾಟಿ ಹೋಗುತ್ತಿವೆ. ಪಕ್ಕದ ರಾಜ್ಯದಲ್ಲಿ ರಿಲೀಸ್ ಆಗೋದು (Daali Dhananjaya) ಈಗ ಹೊಸದೇನೂ ಅಲ್ಲ. ದೇಶ-ವಿದೇಶಕ್ಕೂ ಕನ್ನಡದ ಸಿನಿಮಾಗಳು ಲಗ್ಗೆ ಇಡುತ್ತಿವೆ. ಕನ್ನಡ (Hoysala Kannada Cinema) ಸಿನಿಮಾಗಳೆ ರಿಲೀಸ್ ಆಗದೆ ಇರೋ ದೇಶದಲ್ಲೂ ಕನ್ನಡ ಸಿನಿಮಾಗಳು ರಾರಾಜಿಸುತ್ತಿವೆ. ಹಾಗಿರೋವಾಗ ಕನ್ನಡ ಚಿತ್ರಗಳ ಪ್ರದರ್ಶನ ವರ್ಷ ವರ್ಷಕ್ಕೂ, ವಾರ ವಾರಕ್ಕೂ ವಿಸ್ತಾರ ಆಗುತ್ತಿದೆ. ದೂರದ ಅದ್ಯಾವುದೋ ದೇಶದಲ್ಲಿರೋ ಕನ್ನಡಿಗರಿಗೂ (Kannada Movie) ಕನ್ನಡ ಸಿನಿಮಾಗಳನ್ನ ನೋಡುವ ಅವಕಾಶ ದೊರೆಯುತ್ತಿದೆ. ಆ ಸಾಲಿನಲ್ಲಿ ಡಾಲಿ ಧನಂಜಯ್ ಅಭಿನಯದ ಹೊಯ್ಸಳ ಚಿತ್ರ ಕೆನಡಾ ದೇಶಕ್ಕೂ ಈಗ ಕಾಲಿಡುತ್ತಿದೆ.
ಡಾಲಿ ಧನಂಜಯ್ ಅಭಿನಯದ ಹೊಯ್ಸಳ ಚಿತ್ರದ ಸದ್ದು ಜೋರಾಗಿದೆ. ಮೊನ್ನೆ ಮೊನ್ನೆ ಸಿನಿಮಾ ತಂಡ ಧನಂಜಯ್ ನಿರ್ವಹಿಸಿರೋ ಗುರದೇವ ಪಾತ್ರದ ಟೀಸರ್ ಬಿಟ್ಟಿತ್ತು.
ಸೂಪರ್ ಕಾಪ್ ಡಾಲಿ ಧನಂಜಯ್ ಗುರುದೇವ!
ಇದನ್ನ ನೋಡಿದ್ರೆ ಇಲ್ಲಿ ಭರ್ಜರಿ ಪೊಲೀಸ್ ಆಫೀಸರ್ ಪಾತ್ರವನ್ನ ಧನಂಜಯ್ ನಿರ್ವಹಿಸಿದ್ದಾರೆ ಅನ್ನೋ ಝಲಕ್ ಸಿಕ್ಕಿದ್ದು, ವಿಲನ್ ಪಾತ್ರ ಮೂಲಕ ಜನರ ಮನಸ್ಸಲ್ಲಿ ಉಳಿದಿರೋ ಡಾಲಿ ಈ ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿ ಕಂಗೊಳಿಸುತ್ತಿದ್ದಾರೆ.
ಡಾಲಿ ಧನಂಜಯ್ ಈ ಮೂಲಕ ತಮ್ಮ ಅಭಿಮಾನಿಗಳಿಗೆ ಹೊಸ ರೀತಿಯ ಅನುಭವ ಕೊಡಲು ರೆಡಿ ಆಗಿದ್ದಾರೆ. ಬೆಳಗಾವಿ ಜಿಲ್ಲೆಯ ಸುತ್ತ-ಮುತ್ತ ಚಿತ್ರೀಕರಣ ಮಾಡಲಾಗಿರೋ ಈ ಚಿತ್ರ ಬೆಳಗಾವಿ ಕಥೆಯನ್ನ ಹೇಳುತ್ತಿದೆ.
ಹೊಯ್ಸಳ ಚಿತ್ರದ ಕಥೆ ರೀಲಾ ರಿಯಲ್ಲಾ?
ಗುರುದೇವ ಹೆಸರಿನ ಪೊಲೀಸ್ ಆಫೀಸರ್ ಪಾತ್ರದ ಮೂಲಕ ಇಲ್ಲಿಯ ಅಸಲಿ ಪೊಲೀಸ್ ಆಫೀಸರ್ ಕಥೆಯನ್ನ ಡೈರೆಕ್ಟರ್ ವಿಜಯ್ ಇಲ್ಲಿ ಹೇಳಿದಂತೆ ಕಾಣುತ್ತಿದೆ.
ಧನಂಜಯ್ ಚಿತ್ರ ಜೀವನದಲ್ಲಿ ಈ ಸಿನಿಮಾ ಬೇರೆ ಲೆವಲ್ಗೆ ತೆಗೆದುಕೊಂಡು ಹೋಗುವಂತೆ ಕಾಣುತ್ತಿದೆ. ಬೆಳಗಾವಿ ಅಂದ್ರೆ ಸದಾ ಸುದ್ದಿಯಲ್ಲಿರೋ ಊರು ಅನ್ನೋ ಸತ್ಯ ಗೊತ್ತೇ ಇದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿವಿಚಾರದಲ್ಲಿ ಇಲ್ಲಿ ಏನೇನೋ ಪ್ರತಿಭಟನೆ ನಡೆಯುತ್ತಲೇ ಇರುತ್ತವೆ.
ಕೆನಡಾ ಮಂದಿಗೆ ಹೊಯ್ಸಳ ಗುರುದೇವ ದರುಶನ
ಅಂತಹ ಪರಿಸ್ಥಿತಿಯಲ್ಲಿ ನಡೆದ ಒಂದು ಘಟನೆಯನ್ನ ಚಿತ್ರ ಮಾಡಿರಬಹುದು ಅನ್ನುವ ಅನುಮಾನವೂ ಈಗ ಮೂಡಿದೆ. ಇಂತಹ ವಿಶೇಷ ಚಿತ್ರವನ್ನ ಕರ್ನಾಟಕದಲ್ಲಿ ಅಷ್ಟೇ ತೋರಿಸಿದ್ರೆ ಹೇಗೆ? ದೂರದ ಕೆನಡಾದಲ್ಲಿ ಇರೋ ಕನ್ನಡಿಗರು ನೋಡೋದು ಬೇಡ್ವೆ?
ಈ ಒಂದು ವಿಷಯದ ಹಿನ್ನೆಲೆಯಲ್ಲಿ ಮೈಸೂರು ಸ್ಟುಡಿಯೋ ಹೌಸ್, ಕನ್ನಡದ ಹೊಯ್ಸಳ ಚಿತ್ರವನ್ನ ಕೆನಡಾದಲ್ಲಿ ರಿಲೀಸ್ ಮಾಡುತ್ತಿದೆ. ಮೈಸೂರು ಸ್ಟುಡಿಯೋ ಹೌಸ್ನ ಈ ಒಂದು ಪ್ರಯತ್ನಕ್ಕೆ ಹೊಯ್ಸಳ ಚಿತ್ರ ನಿರ್ಮಾಣ ಸಂಸ್ಥೆ ಕೆಆರ್ಜಿ ಸಾಥ್ ಕೊಟ್ಟಿದೆ.
ಡಾಲಿ ಧನಂಜಯ್ಗೆ ಅಮೃತಾ ಅಯ್ಯರ್ ಜೋಡಿ
ಹೊಯ್ಸಳ ಚಿತ್ರದ ಪ್ರಚಾರದ ಕೆಲಸ ಈಗಾಗಲೇ ಶುರು ಆಗಿದೆ. ನಾಯಕ ನಟ ಧನಂಜಯ್ ನಂಜನಗೂಡಿನಲ್ಲಿ ಚಿತ್ರದ ಪ್ರಚಾರವನ್ನ ಆರಂಭಿಸಿದ್ದಾರೆ. ಈ ಮೂಲಕ ಧನಂಜಯ್ಗೆ ಈ ಚಿತ್ರದಲ್ಲಿ ನಟಿ ಅಮೃತಾ ಅಯ್ಯರ್ ಸಾಥ್ ಕೊಟ್ಟಿದ್ದಾರೆ. ಗುಳ್ಟು ನವೀನ್ ಶಂಕರ್, ಅಚ್ಯುತ್ ಕುಮಾರ್ ಅಭಿನಯಿಸಿದ್ದಾರೆ.
ಇವರೆಲ್ಲರಿಂದ ಈ ಹೊಯ್ಸಳ ಸಿನಿಮಾದ ಬಗ್ಗೆ ನಿರೀಕ್ಷೆ ಕೂಡ ಇದೆ. ಧನಂಜಯ್ ಚಿತ್ರ ಪ್ರೇಮಿಗಳು ಈ ಚಿತ್ರವನ್ನ ಈಗ ಎದುರು ನೋಡುತ್ತಿದ್ದಾರೆ. ಮಾರ್ಚ್-30 ರಂದು ಹೊಯ್ಸಳ ಚಿತ್ರ ರಿಲೀಸ್ ಆಗುತ್ತಿದೆ.
ಗುರುದೇವ ಒಳ್ಳೆಯವನೋ ಕೆಟ್ಟವನೋ ಜಡ್ಜ್ಮೆಂಟ್ ಸಿಗ್ವಲ್ತ್
ಚಿತ್ರದಲ್ಲಿ ಉತ್ತರ ಕರ್ನಾಟಕ ಭಾಷೆ ಕೂಡ ಬಳಕೆ ಆಗಿದೆ. ನಟ ಅಚ್ಯುತ್ ಕುಮಾರ್ ನಿರ್ವಹಿಸಿರೋ ಪಾತ್ರದ ಮಾತುಗಾರಿಕೆ ಇಲ್ಲಿ ಜೋರಾಗಿಯೇ ಇವೆ. ಹಾಗೆ ಅಚ್ಯುತ್ ಕುಮಾರ್ ಇಲ್ಲಿ ಅದ್ಭುತ ಡೈಲಾಗ್ ಹೇಳಿದ್ದಾರೆ.
"ಪೊಲೀಸ್ ಆಫೀಸರ್ ಗುರುದೇವ ಒಳ್ಳೆಯವನೋ ಕೆಟ್ಟವನೋ ಜಡ್ಜ್ಮೆಂಟ್ಗೆ ಸಿಗವಲ್ತು. ಆದರೆ ಮಂದಿಗೆ ಇವಾ ಬಾಳ ಫೆವರಿಟ್ ಅದಾನ" ಅನ್ನೋ ಡೈಲಾಗ್ ಸಿಕ್ಕಾಪಟ್ಟಿ ಜನರನ್ನ ಸೆಳೆದು ಬಿಟ್ಟಿದೆ ಅಂತಲೇ ಹೇಳಬಹುದು. ಇನ್ನುಳಿದಂತೆ ಚಿತ್ರದ ಬರುವಿಕೆಯನ್ನ ಜನ ಎದುರು ನೋಡ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ