Yajamana Movie Box Office Collections: ಬಾಕ್ಸಾಫಿಸ್​ನಲ್ಲಿ ಧೂಳೆಬ್ಬಿಸುತ್ತಿರುವ ಡಿ-ಬಾಸ್​: ಮೂರು ದಿನಗಳಲ್ಲಿ 'ಯಜಮಾನ'ನ ಗಳಿಕೆ ಎಷ್ಟು ಗೊತ್ತಾ..?

ಈಗಾಗಲೇ ತೆರೆ ಕಂಡು ಯಶಸ್ವೀ ಪ್ರದರ್ಶನ ಕಾಣುತ್ತಿರುವ 'ಯಜಮಾನ' ಸಿನಿಮಾ ಸದ್ಯ ಬಾಕ್ಸಾಫಿಸ್​ನಲ್ಲೂ ಧೂಳೆಬ್ಬಿಸುತ್ತಿದೆ. ತೆರೆಕಂಡ ಮೂರೇ ದಿನಕ್ಕೇ ಕೋಟಿ ಕೋಟಿ ಬಾಚಿಕೊಳ್ಳುತ್ತಿದೆ. ಅಲ್ಲದೆ ಇದೇ ಶುಕ್ರವಾರ ಅಮೆರಿಕದಲ್ಲೂ ಖಾತೆ ತೆರೆಯೋಕೆ ಸಜ್ಜಾಗಿದ್ದಾನೆ 'ಯಜಮಾನ'.

ಬಾಕ್ಸಾಫಿಸ್​ನಲ್ಲಿ 'ಯಜಮಾನ'ನ ಅಬ್ಬರ

ಬಾಕ್ಸಾಫಿಸ್​ನಲ್ಲಿ 'ಯಜಮಾನ'ನ ಅಬ್ಬರ

  • News18
  • Last Updated :
  • Share this:
- ಅನಿತಾ ಈ, 

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ 'ಯಜಮಾನ' ಸಿನಿಮಾ ಕಳೆದ ಶುಕ್ರವಾರಷ್ಟೆ ತೆರೆಕಂಡಿದ್ದು, ಎಲ್ಲೆಡೆ ಯಶ್ವೀ ಪ್ರದರ್ಶನ ಕಾಣುತ್ತಿದೆ. ಶುಕ್ರವಾರದಿಂದ ಭಾನುವಾರದವರೆಗೆ 'ಯಜಮಾನ' ಅಂದಾಜು 30 ಕೋಟಿ ಗಳಿಕೆ ಮಾಡಿದ್ದಾನೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Yajamana Movie Review: ಕಾವೇರಿ ಕಾಯುವ ದಾಸ ಎಲ್ಲರಿಗೂ ಖಾಸ ಖಾಸ: ಸಿನಿಮಾ ನೋಡಿದವ ಹೇಳೋದು ನಾನೇ 'ಯಜಮಾನ'..!

ಖಡಕ್​ ಡೈಲಾಗ್ಸ್​, ಕಾಮಿಡಿ, ಆ್ಯಕ್ಷನ್​ ಸೇರಿದಂತೆ ಉತ್ತಮವಾದ ಕಥಾವಸ್ತುವಿನಿಂದಾಗಿ 'ಯಜಮಾನ' ಈ ವಾರ ಮುನ್ನುಗ್ಗುತ್ತಿದ್ದಾರೆ.  ಈಗಾಗಲೇ ಈ ಸಿನಿಮಾ ಹಾಕಿರುವ ಹಣ ವಾಪಸ್​ ಬಂದಿದ್ದು, ಚಿತ್ರದ ನಿರ್ಮಾಪಕರಾದ ಶೈಲಜಾ ನಾಗ್​ ಹಾಗೂ ಬಿ. ಸುರೇಶ್​ ಲಾಭದಲ್ಲಿದ್ದಾರೆ.

ಇಂದು ಶಿವರಾತ್ರಿ ಹಬ್ಬ ಸಾಕಷ್ಟು ಜನರಿಗೆ ರಜೆ ಸಹ. ಅಲ್ಲದೆ ಶಿವರಾತ್ರಿಯ ಮರು ದಿನ ಜಾಗರಣೆ ಮಾಡಿದವರಿಗೂ ರಜೆ ಸಿಗುತ್ತೆ. ಹೀಗಿರುವಾಗ ಕನ್ನಡದಲ್ಲಿ ಯಾವುದೇ ಟಕ್ಕರ್​ ಕೊಡುವ ಸಿನಿಮಾಗೂ ಇಲ್ಲ. ಇದರಿಂದಾಗಿ ಇನ್ನೆರಡು ದಿನಗಳು ಯಜಮಾನನಿಗೆ ಒಳ್ಳೆಯ ಕಲೆಕ್ಷನ್​ ಮಾಡಿಕೊಡಲಿದೆ.ಆದರೆ ಡಿಬಾಸ್​ ಅಭಿಮಾನಿಗಳು ಈಗಾಗಲೇ 'ಯಜಮಾನ' 45 ಕೋಟಿಗೂ ಹೆಚ್ಚು ಗಳಿಸಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುತ್ತಾ ಸಂಭ್ರಮಿಸುತ್ತಿದ್ದಾರೆ.

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ಡಿಬಾಸ್ ಅಭಿನಯದ #ಯಜಮಾನ ಚಿತ್ರವು ಕೇವಲ ಮೂರು ದಿನಗಳಲ್ಲಿ 45 ಕೋಟಿಗೂ ಅಧಿಕ ಕಲೆಕ್ಷನ್ ಕಂಡು ವಿಶ್ವದಾಧ್ಯಂತ ಅದ್ದೂರಿ ಪ್ರದರ್ಶನ ಕಾಣುತ್ತಿದೆ🔥❤#BoxOfficeSultan #DBoss #ChallengingStarDarshan #Yajamana @dasadarshan @iamRashmika @shylajanag @Dbeatsmusik pic.twitter.com/xGGKaEvEg9ಆದರೆ ಡಿಬಾಸ್​ ಏನೇ ಮಾಡಿದರೂ ಅಥವಾ ಅವರಿಗೆ ಸಂಬಂಧಿಸಿದ ಯಾವುದೇ ವಿಷಯವಾದರೂ ಅವರ ಅಭಿಮಾನಿಗಳು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅದನ್ನು ಸುದ್ದಿ ಮಾಡದೆ ಇರುವುದಿಲ್ಲ. ಹೀಗಿರುವಾಗ 'ಯಜಮಾನ'ನ ಕಲೆಕ್ಷನ್​ ವಿಷಯ ಬಂದಾಗ ಅಭಿಮಾನಿಗಳು ಹೇಗೆ ಸುಮ್ಮನಿರುತ್ತಾರೆ.

ಇದನ್ನೂ ಓದಿ: ಎಷ್ಟೇ ಟ್ರೋಲ್ ಮಾಡಿದ್ದರೂ ಕನ್ನಡಿಗರಿಗೆ ರಶ್ಮಿಕಾರ ಪ್ರೀತಿ ತುಂಬಿದ ಭಾವನಾತ್ಮಕ ಪತ್ರ..!

ಇನ್ನು 'ಯಜಮಾನ' ಸಿನಿಮಾ ಸದ್ಯ ಭಾರತದಲ್ಲಿ ಮಾತ್ರ ತೆರೆಕಂಡಿದ್ದು, ರಾಜ್ಯ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲೂ ತೆರೆ ಕಂಡಿರುವ ಕಾರಣಕ್ಕೆ ಸಿನಿಮಾದಲ್ಲಿ ಇಂಗ್ಲಿಷ್​ ಸಬ್​ಟೈಟಲ್​ ಸಹ ಕೊಡಲಾಗಿದೆ.

ಅಲ್ಲದೇ ಇದೇ ಶುಕ್ರವಾರ (ಮಾ.8)ದಂದು 'ಯಜಮಾನ' ಅಮೆರಿಕದಲ್ಲಿ ತೆರೆ ಕಾಣಲಿದ್ದಾನೆ. ಆದರೆ ಅಂದು ಮಾರ್ವೆಲ್​ ಸ್ಟುಡಿಯೋದ  ಬಹು ನಿರೀಕ್ಷಿತ ಸಿನಿಮಾ 'ಕ್ಯಾಪ್ಟನ್​ ಮಾರ್ವೆಲ್​' ತೆರೆ ಕಾಣಲಿದೆ. ಇದರ ನಡುವೆ ವಿದೇಶದಲ್ಲಿ 'ಯಜಮಾನ' ಅಬ್ಬರ ಹೇಗಿರಲಿದೆ ಎಂದು ಕಾದುನೋಡಬೇಕಷ್ಟೆ.

PHOTOS: ಕಬಿನಿ ಹಾಗೂ ಕಟ್ಟೆಕಾಡಿನಲ್ಲಿ ನಟ ದರ್ಶನ್​ ತೆಗೆದಿರುವ ವನ್ಯಜೀವಿಗಳ ಚಿತ್ರಗಳು
First published: