• Home
  • »
  • News
  • »
  • entertainment
  • »
  • Darling Krishna: ಅವಳು ದಿಲ್ ಇವಳು ಪಸಂದ್- ಈ ಕೃಷ್ಣನೇ ಅಲ್ವೆ ಲಕ್ಕಿ ಮ್ಯಾನ್

Darling Krishna: ಅವಳು ದಿಲ್ ಇವಳು ಪಸಂದ್- ಈ ಕೃಷ್ಣನೇ ಅಲ್ವೆ ಲಕ್ಕಿ ಮ್ಯಾನ್

ಅವಳು ದಿಲ್ ಇವಳು ಪಸಂದ್

ಅವಳು ದಿಲ್ ಇವಳು ಪಸಂದ್

ಶಶಾಂಕ್ ಈ ಮೊದಲೇ ಡಾರ್ಲಿಂಗ್ ಕೃಷ್ಣ ಜೊತೆಗೆ ಸಿನಿಮಾ ಮಾಡ್ತಿದ್ದೀನಿ ಅಂತಲೇ ನ್ಯೂಸ್​ 18 ಕನ್ನಡ ಡಿಜಿಟಲ್​ಗೆ ಹೇಳಿದ್ದರು. ಅಕ್ಟೋಬರ್ ತಿಂಗಳಲ್ಲಿ ಆ ಸಿನಿಮಾ ಶುರು ಆಗುತ್ತದೆ ಅಂತಲೂ ತಿಳಿಸಿದ್ದರು.

  • Share this:

ಕನ್ನಡದ ಡಾರ್ಲಿಂಗ್ (Darling Krishna) ಕೃಷ್ಣನ ಸಿನಿಮಾ ಓಟಿಟಿಗೆ (OTT) ಹೋಗಿದೆ. ಲಕ್ಕಿ ಮ್ಯಾನ್ (Lucky Man) ಅಂತಲೇ ಎಲ್ಲರ ಮನಸ್ಸು ಕದ್ದ ಈ ಚಿತ್ರ ಶೀಘ್ರದಲ್ಲಿಯೇ ಓಟಿಟಿಯಲ್ಲೂ ಪ್ರದರ್ಶನ ಕಾಣುತ್ತಿದೆ. ಇದು ಈಗ ಹಳೆ ವಿಚಾರ ಬಿಡಿ, ಆದರೆ ಇದೇ ಕೃಷ್ಣನ ಮುಂದಿನ (Two Cinemas) ಎರಡು ಸಿನಿಮಾಗಳು ಸದ್ಯ ಸುದ್ದಿಯಲ್ಲಿವೆ. ಅದರಲ್ಲಿ ಒಂದು ಸಿನಿಮಾ ರಿಲೀಸ್​ಗೆ ರೆಡಿ ಇದೆ. ಇನ್ನೂ ಒಂದು ಹಬ್ಬಕ್ಕೆ ಮುಹೂರ್ತ ಮುಗಿಸಿಕೊಂಡಿದೆ. ಎರಡೂ ಚಿತ್ರದ ದಾಟಿ ಮತ್ತು ಓಟ ಬೇರೆನೆ ಇವೆ. ಒಂದು ಚಿತ್ರವನ್ನ ಡೈರೆಕ್ಟರ್ ಶಶಾಂಕ್ ನಿರ್ದೇಶನದ ಜೊತೆಗೆ ನಿರ್ಮಾಣ ಮಾಡುತ್ತಿದ್ದಾರೆ. ಇನ್ನೂ ಒಂದು ಸಿನಿಮಾವನ್ನ ಶಿವತೇಜಸ್ ನಿರ್ದೇಶನ ಮಾಡಿದ್ದರೆ. ಇದು ರಿಲೀಸ್​ಗೆ ರೆಡಿ ಇದೆ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ.


ಡಾರ್ಲಿಂಗ್ ಕೃಷ್ಣನಿಗೆ ಶಶಾಂಕ್ ಆ್ಯಕ್ಷನ್ ಕಟ್
ನಿರ್ಮಾಪಕ ಮತ್ತು ನಿರ್ದೇಶಕ ಶಶಾಂಕ್ ಮತ್ತೊಂದು ಸಿನಿಮಾ ಮಾಡೋಕೆ ಮುಂದಾಗಿದ್ದಾರೆ. ಇತ್ತೀಚಿಗಷ್ಟೇ ಹೊಸಬರನ್ನ ಹಾಕಿಕೊಂಡು ಲವ್ 360 ಸಿನಿಮಾ ಮಾಡಿದ್ದರು. ಇದು ಹೆಸರು ತಂದುಕೊಡ್ತು, ದುಡ್ಡು ತಂದು ಕೊಡ್ತು. ಮತ್ತೊಂದು ಸಿನಿಮಾ ನಿರ್ಮಿಸಿ ನಿರ್ದೇಶಿಸೋಕೆ ಉತ್ಸಾಹವನ್ನೂ ಕೊಟ್ಟಿದೆ.


Kannada Actor Darling Krishna two projects are now in News
ಡಾರ್ಲಿಂಗ್ ಕೃಷ್ಣ- ಡೈರೆಕ್ಟರ್ ಶಶಾಂಕ್ ಹೊಸ ಸಿನಿಮಾ


ಶಶಾಂಕ್ ಈ ಮೊದಲೇ ಡಾರ್ಲಿಂಗ್ ಕೃಷ್ಣ ಜೊತೆಗೆ ಸಿನಿಮಾ ಮಾಡ್ತಿದ್ದೀನಿ ಅಂತಲೇ ನ್ಯೂಸ್​ 18 ಕನ್ನಡ ಡಿಜಿಟಲ್​ಗೆ ಹೇಳಿದ್ದರು. ಅಕ್ಟೋಬರ್ ತಿಂಗಳಲ್ಲಿ ಆ ಸಿನಿಮಾ ಶುರು ಆಗುತ್ತದೆ ಅಂತಲೂ ತಿಳಿಸಿದ್ದರು.


ಡಾರ್ಲಿಂಗ್ ಕೃಷ್ಣನ ಚಿತ್ರಕ್ಕೆ ಡೈರೆಕ್ಟರ್ ಶಶಾಂಕ್ ನಿರ್ಮಾಣ
ಆ ಪ್ರಕಾರ ವಿಜಯದಶಮಿ ದಿನ ಚಿತ್ರಕ್ಕೆ ಮುಹೂರ್ತ ಆಗಿದೆ. ಡಾರ್ಲಿಂಗ್ ಕೃಷ್ಣ ಮತ್ತು ಸಿನಿಮಾ ತಂಡ ಜೊತೆಗೂಡಿ ಈ ಚಿತ್ರದ ಮುಹೂರ್ತದ ಕೆಲಸ ಮುಗಿಸಿದ್ದಾರೆ. ಶಶಾಂಕ್ ಸಿನಿಮಾಸ್ ಹಾಗೂ ಕೌರವ ಪ್ರೋಡಕ್ಷನ್ ಹೌಸ್ ಜೊತೆಯಾಗಿ ಸಿನಿಮಾ ನಿರ್ಮಿಸುತ್ತಿದೆ.


ಇದನ್ನೂ ಓದಿ: Dhruva Sarja Birthday: ಆ್ಯಕ್ಷನ್ ಪ್ರಿನ್ಸ್ ಧ್ರುವ ಜನ್ಮದಿನಕ್ಕೆ ಮಾರ್ಟಿನ್ ಸ್ಪೆಷಲ್ ಗಿಫ್ಟ್


ಸಿನಿಮಾದ ಶೀರ್ಷಿಕೆ ಕೂಡ ಶೀಘ್ರದಲ್ಲಿ ರಿವೀಲ್ ಆಗುತ್ತಿದೆ. ಚಿತ್ರದ ಇತರ ಮಾಹಿತಿ ಕೂಡ ಹೊರ ಬೀಳಬೇಕಿದೆ. ಉಳಿದಂತೆ ಶಶಾಂಕ್ ಹೊಸ ಸಿನಿಮಾ ಆರಂಭಿಸಿದ ಖುಷಿಯಲ್ಲಿ ವಿಜಯದಶಮಿ ಹಬ್ಬ ಮಾಡಿದ್ದಾರೆ.


ಡಾರ್ಲಿಂಗ್ ಕೃಷ್ಣ ದಿಲ್ ಪಸಂದ್ ನವೆಂಬರ್ 11ಕ್ಕೆ ರಿಲೀಸ್
ಡಾರ್ಲಿಂಗ್ ಕೃಷ್ಣ ಅಭಿನಯದ ದಿಲ್​ ಪಸಂದ್ ಚಿತ್ರ ರೆಡಿ ಇದೆ. ನಿರ್ದೇಶಕ ಶಿವತೇಜಸ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ. ನಿರ್ದೇಶಕ ರಾಘವೇಂದ್ರ ಬಂಡವಾಳ ಹಾಕಿದ್ದಾರೆ. ಸಿನಿಮಾ ಇದೇ ನವೆಂಬರ್-11 ರಂದು ರಿಲೀಸ್ ಕೂಡ ಆಗುತ್ತಿದೆ.


ದಿಲ್​ ಪಸಂದ್ ಚಿತ್ರಕ್ಕೆ ಇಬ್ಬರು ನಾಯಕಿಯರು
ದಿಲ್​ಪಸಂದ್ ಸಿನಿಮಾ ಇಬ್ಬರು ನಾಯಕಿ ನಟಿಯರು ಇದ್ದಾರೆ. ಗುರು ಶಿಷ್ಯರು ಚಿತ್ರದ ಮೂಲಕ ಭಾರೀ ವೈರಲ್ ಆಗಿರೋ ನಟಿ ನಿಶ್ವಿಕಾ ನಾಯ್ಡು, ಫಸ್ಟ್ ಟೈಮ್ ಪರಿಪೂರ್ಣ ಪ್ರೇಮ ಕಥೆ ಇರೋ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.


Kannada Actor Darling Krishna two projects are now in News
ಶಶಾಂಕ್ ನಿರ್ಮಾಣ-ನಿರ್ದೇಶನದ ಸಿನಿಮಾ


ಈ ಚಿತ್ರದಲ್ಲಿ ಕೊಂಚ ಜಾಸ್ತಿನೇ ಬೋಲ್ಡ್ ಆಗಿಯೇ ಅಭಿನಯಿಸಿರೋದರ ಝಲಕ್ ಈಗಾಗಲೇ ಬಿಟ್ಟಿರೋ ಚಿತ್ರದ ಟೀಸರ್​ನಲ್ಲಿ ಗೊತ್ತಾಗುತ್ತದೆ. ನಿಶ್ವಿಕಾ ತಮ್ಮ ಈ ಚಿತ್ರದ ಪಾತ್ರದ ಬಗ್ಗೆ ತುಂಬಾ ಪಾಸಿಟಿವ್ ವೈಬ್ಸ್​ ನಲ್ಲಿಯೇ ಇದ್ದಾರೆ.


ಜೊತೆ ಜೊತೆಯಲಿ ಸೀರಿಯಲ್ ಖ್ಯಾತಿಯ ನಟಿ ಮೇಘಾ ಶೆಟ್ಟಿ ಈ ಸಿನಿಮಾದಲ್ಲಿ ಮುಗ್ದ ಹುಡುಗಿಯ ಪಾತ್ರ ಮಾಡಿದ್ದಾರೆ. ಏನಂದ್ರೆ ಏನೂ ತಿಳಿಯದ ಹೆಣ್ಣುಮಗಳ ರೋಲ್​ನಲ್ಲಿ ಕಾಣಿಸಿಕೊಂಡು ಸಿನಿಪ್ರೇಮಿಗಳಿಗೆ ಬೇರೆಯದ್ದೇ ಫೀಲ್ ಕೊಡುವ ಹಾಗೆ ಕಾಣಿಸಿಕೊಂಡಿದ್ದಾರೆ.


ಡಬ್ಬಿಂಗ್ ಮಾಡೋವಾಗ್ಲೇ ಫುಲ್ ಖುಷ್ ಆದ ದಿಲ್ ಪಸಂದ್ ಕೃಷ್ಣ
ಡಾರ್ಲಿಂಗ್ ಕೃಷ್ಣ ಚಿತ್ರವನ್ನ ಸಿಕ್ಕಾಪಟ್ಟ ಎಂಜಾಯ್ ಮಾಡಿದ್ದಾರೆ. ಡಬ್ಬಿಂಗ್ ಮಾಡೋವಾಗ್ಲೂ ಅಷ್ಟೇ, ತುಂಬಾ ಖುಷಿಪಟ್ಟು ತಮ್ಮ ಪಾತ್ರದ ಡಬ್ಬಿಂಗ್ ಕೆಲಸ ಮುಗಿಸಿಕೊಟ್ಟಿದ್ದಾರೆ.


ಇದನ್ನೂ ಓದಿ: Singer Vasuki Vaibhav: ಥಿಯೇಟರ್​​ನಲ್ಲಿ ವಾಸುಕಿ ವೈಭವ್ ಹಾಗೂ ಯುವಕರ ನಡುವೆ ಗಲಾಟೆ


ಚಿತ್ರದ ನಿರ್ಮಾಪಕ ರಾಘವೇಂದ್ರ ಕೂಡ ಖುಷಿಯಾಗಿದ್ದಾರೆ. ನಿರ್ದೇಶಕ ಶಿವತೇಜಸ್ ಕಥೆ ಹೇಳಿದಂತೆ ಚಿತ್ರ ಮಾಡಿದ್ದಾರೆ ಅಂತಲೇ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಡಾರ್ಲಿಂಗ್ ಕೃಷ್ಣನ ಎರಡು ಸಿನಿಮಾಗಳು ಸದ್ಯ ಸುದ್ದಿಯಲ್ಲಿವೆ.

First published: