ಲವ್ ಮಾಕ್ಟೇಲ್ ಚಿತ್ರ ಖ್ಯಾತಿಯ (Love Birds Cinema) ನಟ-ನಿರ್ದೇಶಕ ಡಾರ್ಲಿಂಗ್ ಕೃಷ್ಣ ಮತ್ತು ನಟಿ ಮಿಲನಾ ನಾಗರಾಜ್ ಮತ್ತೊಮ್ಮೆ ಜೋಡಿ ಆಗಿದ್ದಾರೆ. ಡೈರೆಕ್ಟರ್ ಪಿ.ಸಿ. ಶೇಖರ್ (Director PC Shekar) ನಿರ್ದೇಶನದ ಈ ಚಿತ್ರದ ಫಸ್ಟ್ ಲುಕ್ ಮೊನ್ನೆ ರಿಲೀಸ್ ಆಗಿತ್ತು. ಅದರಲ್ಲಿ ಕೇವಲ (Milana Nagaraj) ಮಿಲನಾ ನಾಗರಾಜ್ ಪಾತ್ರದ ಪರಿಚಯ ಆಗಿದೆ. ಆದರೆ ಈಗ ಈ ಚಿತ್ರದ ಒಂದು ಟೀಸರ್ ಹೊರ ಬಂದಿದೆ. ಇದು ಡಾರ್ಲಿಂಗ್ (Darling Krishna) ಕೃಷ್ಣ ಮತ್ತು ಮಿಲನಾ ನಾಗರಾಜ್ ಪಾತ್ರಗಳ ಪರಿಚಯವನ್ನ ಸ್ವಲ್ಪ ಜಾಸ್ತಿನೇ ಮಾಡಿದೆ. ಎರಡೂ ಪಾತ್ರಗಳ ವಿಭಿನ್ನ ಹಾದಿಯ ಸಣ್ಣ ಚಿತ್ರಣವೂ ಇಲ್ಲಿ ದೊರೆಯುತ್ತದೆ. ಇದರ ಸುತ್ತ ಇನ್ನಷ್ಟು ವಿಶ್ಲೇಷಣೆ ಇಲ್ಲಿದೆ ಓದಿ.
ಲವ್ ಬರ್ಡ್ಸ್ ಸಿನಿಮಾ ಟೀಸರ್ ರಿಲೀಸ್
ಲವ್ ಬರ್ಡ್ಸ್ ಚಿತ್ರದ ಟೀಸರ್ ರಿಲೀಸ್ ಆಗಿದೆ. ರಿಯಲ್ ಜೋಡಿ ಮತ್ತು ಪತಿ-ಪತ್ನಿ ಇಲ್ಲಿ ವಿಭಿನ್ನ ಪಾತ್ರಗಳನ್ನೆ ಮಾಡಿದ್ದಾರೆ. ಇಬ್ಬರ ಪಾತ್ರದಲ್ಲೂ ವಿಭಿನ್ನ ಹಾದಿ ಇದೆ. ವಿಭಿನ್ನವಾದ ನೇಚರ್ ಇರೋದು ಟೀಸರ್ನಲ್ಲಿ ರಿವೀಲ್ ಆಗಿದೆ.
ಡಾರ್ಲಿಂಗ್ ಕೃಷ್ಣ ಇಲ್ಲಿ ಸಾಫ್ಟ್ವೇರ್ ಇಂಜಿನಿಯರ್ ದೀಪಕ್
ಚಿತ್ರದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಪಾತ್ರದಲ್ಲಿಯೇ ಡಾರ್ಲಿಂಗ್ ಕೃಷ್ಣ ಅಭಿನಯಿಸಿದ್ದಾರೆ. ತಮ್ಮ ಪಾತ್ರದ ಪರಿಚಯವನ್ನ ತಾವೇ ಇಲ್ಲಿ ಮಾಡಿಕೊಡ್ತಾರೆ. ಅದು ಒಂದು ಕ್ಷಣ ವಿಶೇಷ ಕೂಡ ಅನಿಸುತ್ತದೆ.
ನಾನು ಸಾಫ್ಟ್ವೇರ್ ಇಂಜಿನಿಯರ್. ನನ್ನ ಹೆಸರು ದೀಪಕ್. ನಾನು ವಾರ ಪೂರ್ತಿ ದುಡಿಯುತ್ತೇನೆ. ವಾರಾಂತ್ಯದಲ್ಲಿಯೇ ಜಾಲಿ ರೈಡ್ ಹೋಗುತ್ತೇನೆ. ಇದು ನನ್ನ ಲೈಫ್ ಅಂತಲೇ ಡಾರ್ಲಿಂಗ್ ಕೃಷ್ಣ ಸಿನಿಮಾದ ಟೀಸರ್ನಲ್ಲಿ ತಮ್ಮ ಪಾತ್ರದ ಪರಿಚಯವನ್ನ ಮಾಡಿಕೊಳ್ತಾರೆ.
ಫ್ಯಾಷನ್ ಡಿಸೈನರ್ ಪೂಜಾ ಆಗಿ ಬರ್ತಿರೋ ಮಿಲನಾ
ಮಿಲನಾ ನಾಗರಾಜ್ ಇಲ್ಲಿ ವಿಭಿನ್ನವಾಗಿಯೇ ಕಾಣಿಸಿಕೊಂಡಿದ್ದಾರೆ. ಸ್ವತಂತ್ರ ಮಹಿಳಾ ಉದ್ಯೋಗಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಯಾರ ಮೇಲೂ ಅವಲಂಬನೆ ಆಗಿದೇ ತಮ್ಮದೇ ಒಂದು ಬ್ರ್ಯಾಂಡ್ ಕ್ರಿಯೇಟ್ ಮಾಡಿದ್ದಾರೆ.
ನನ್ನ ಹೆಸರು ಪೂಜಾ. ಒಬ್ಬ ಫ್ಯಾಷನ್ ಡಿಸೈನರ್. ನಾನು ಯಾರ ಮೇಲೂ ಡಿಪೆಂಡ್ ಆಗಿಲ್ಲ. ಸ್ವತಂತ್ರವಾಗಿಯೇ ಬದುಕುತ್ತೇನೆ. ಪೂಜಾ ಕಲೆಕ್ಷನ್ಸ್ ನನ್ನ ಬ್ರ್ಯಾಂಡ್. ಇದು ನನ್ನ ಜೀವನ ಅಂತಲೇ ಮಿಲನಾ ನಾಗರಾಜ್ ಇಲ್ಲಿ ಪೂಜಾ ಆಗಿಯೇ ಪೂಜಾ ಪಾತ್ರವನ್ನ ಪರಿಚಯಿಸುತ್ತಾರೆ.
ಮಿಲನಾ ನಾಗರಾಜ್ ಪಾತ್ರದ ಫಸ್ಟ್ ಲುಕ್ ರಿಲೀಸ್
ಲವ್ ಬರ್ಡ್ಸ್ ಚಿತ್ರದ ಸುದ್ದಿ ಇಲ್ಲಿವರೆಗೂ ಇರಲೇ ಇಲ್ಲ. ಆದರೆ ಮೊನ್ನೆ ಸಿನಿಮಾ ನಾಯಕಿ ಮಿಲನಾ ನಾಗರಾಜ್ ಪಾತ್ರದ ಫಸ್ಟ್ ಲುಕ್ ರಿಲೀಸ್ ಆಯಿತು. ಇದಾದ್ಮೇಲೆ ಸಿನಿಮಾದ ಹೆಚ್ಚಿನ ಮಾಹಿತಿ ಏನೂ ರಿವೀಲ್ ಆಗಿರಲಿಲ್ಲ.
ಲವ್ ಬರ್ಡ್ಸ್ ಚಿತ್ರಕ್ಕೆ ಪಿ.ಸಿ.ಶೇಖರ್ ಡೈರೆಕ್ಷನ್
ಆದರೆ ಈಗ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಚಿತ್ರದ ಡೈರೆಕ್ಟರ್ ಪಿ.ಸಿ.ಶೇಖರ್ ಪಕ್ಕಾ ಪ್ಲಾನ್ ಮಾಡಿಕೊಂಡೇ ಕೆಲಸ ಮಾಡುತ್ತಾರೆ. ಎಲ್ಲವನ್ನೂ ಒಮ್ಮೆ ರಿವೀಲ್ ಮಾಡೋದಿಲ್ಲ. ಬದಲಾಗಿ ಒಂದೊಂದೇ ವಿಷಯವನ್ನ ರಿಲೀಸ್ ಮಾಡುತ್ತಾರೆ.
ಅದೇ ರೀತಿ ಡೈರೆಕ್ಟರ್ ಪಿ.ಸಿ.ಶೇಖರ್ ತಮ್ಮ ಈ ಚಿತ್ರದ ಪಾತ್ರಗಳ ಪರಿಚಯದ ಒಂದೇ ಒಂದು ಟೀಸರ್ ರಿಲೀಸ್ ಮಾಡಿದ್ದಾರೆ. ಇದರ ಹೊರತಾಗಿ ಇನ್ನೂ ಏನೂ ಬಿಟ್ಟುಕೊಟ್ಟಿಲ್ಲ.
ಲವ್ ಬರ್ಡ್ಸ್ ಚಿತ್ರಕ್ಕೆ ಕಡ್ಡಿಪುಡಿ ಚಿತ್ರ ಖ್ಯಾತಿಯ ನಟ ಚಂದ್ರು ದುಡ್ಡುಹಾಕಿದ್ದಾರೆ.
ಅರ್ಜುನ್ ಜನ್ಯ ಸಂಗೀತ ಕೊಟ್ಟಿದ್ದಾರೆ. ಚಿತ್ರದ ಇತರ ಪಾತ್ರಗಳ ಪರಿಚಯವನ್ನ ಕೂಡ ಡೈರೆಕ್ಟರ್ ಪಿ.ಸಿ.ಶೇಖರ್ ಹಂತ, ಹಂತವಾಗಿಯೇ ಮಾಡುತ್ತಾರೆ.
ಇದನ್ನೂ ಓದಿ: Tamannaah Bhatia: ಬಟನ್ ಇಲ್ಲದ ಬ್ಲೂ ಡ್ರೆಸ್ನಲ್ಲಿ ತಮನ್ನಾ ಬ್ಯೂಟಿ
ಅದೇ ರೀತಿ ಸದ್ಯ ಚಿತ್ರದ ನಾಯಕಿ ಮತ್ತು ನಾಯಕನ ಪರಿಚಯವನ್ನ ಈಗ ಟೀಸರ್ ಮೂಲಕವೇ ಮಾಡಿಸಿದ್ದಾರೆ. ಇನ್ನುಳಿದಂತೆ ಇತರ ವಿಷಯಗಳನ್ನ ಇನ್ನಷ್ಟೇ ರಿವೀಲ್ ಮಾಡೋ ಸಾಧ್ಯತೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ