ಡಾರ್ಲಿಂಗ್ ಕೃಷ್ಣ ಅಭಿನಯದ ಕೌಸಲ್ಯ ಸುಪ್ರಜಾ ರಾಮ (Darling Krishna New Movie) ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದೆ. ನಿರ್ದೇಶಕ ಶಶಾಂಕ್ ಅವರು ತಮ್ಮ ಚಿತ್ರದ ಪ್ರಚಾರವನ್ನ ಎಂದಿನಂತೆ ಸ್ಕಿಟ್ ಮೂಲಕವೇ ಶುರು (Krishna Film Updates) ಮಾಡಿದ್ದಾರೆ. ಈ ಸಲ ತಮ್ಮ ಚಿತ್ರದ ಹಾಡಿನ ಬಗ್ಗೆ ಹೇಳಲು ಒಂದು ಪುಟ್ಟ ಸ್ಕಿಟ್ ಮಾಡಿದ್ದಾರೆ. ಈ ಸ್ಕಿಟ್ ಮೂಲಕ ಡಾರ್ಲಿಂಗ್ ಕೃಷ್ಣನ ಪರಕಾಯ ಪ್ರವೇಶದ ಅಸಲಿ ಮ್ಯಾಟರ್‌ನ್ನು ಕೂಡ ರಿವೀಲ್ ಮಾಡಿದ್ದಾರೆ. ಒಬ್ಬ ಕಲಾವಿದ ಸಿನಿಮಾ ಮುಗಿದ್ಮೇಲೆನೂ ಆಯಾ ಪಾತ್ರದಿಂದ ಹೊರಗೆ (Actor Darling Krishna) ಬರದೇ ಇದ್ದರೇ ಏನೆಲ್ಲ (Song Release Soon) ತೊಂದರೆ ಆಗುತ್ತದೆ ಅನ್ನುವ ಒಂದು ಸಣ್ಣ ಝಲಕ್ ಕೂಡ ಇಲ್ಲಿದೆ. ಆದರೆ ಇದು ರಿಯಲ್ ಅಲ್ಲವೇ ಅಲ್ಲ.
ಜಸ್ಟ್ ಹೊಸ ರೀತಿಯ ಪ್ರಚಾರ (ಅಂತಲೇ ಹೇಳಬಹುದು. ಇದರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಡಾರ್ಲಿಂಗ್ ಕೃಷ್ಣ ಪರಕಾಯ ಪ್ರವೇಶ ಪ್ರಾಬ್ಲಂ!
ಡೈರೆಕ್ಟರ್ ಕೌಸಲ್ಯ ಸುಪ್ರಜಾ ರಾಮ ಸಿನಿಮಾ ಶೂಟಿಂಗ್ ಪೂರ್ಣ ಮಾಡಿದ್ದಾರೆ. ಈ ಮೂಲಕ ಪ್ರಚಾರದ ಕೆಲಸವನ್ನೂ ಶುರು ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತದ ಹಾಡುಗಳನ್ನ ರಿಲೀಸ್ ಕೂಡ ಮಾಡುತ್ತಿದ್ದಾರೆ. ಇದನ್ನ ಹೇಳಲಿಕ್ಕೆ ಒಂದು ಸ್ಪೆಷಲ್ ವಿಡಿಯೋ ಕೂಡ ಮಾಡಿದ್ದಾರೆ. ಅದು ನಿಜಕ್ಕೂ ಸ್ಪೆಷಲ್ ಆಗಿದೆ.
ಕೌಸಲ್ಯ ಸುಪ್ರಜಾ ರಾಮ ಸಿನಿಮಾದ ಶಿವಾನಿ ಹಾಡು ರಿಲೀಸ್ ಆಗುತ್ತಿದೆ. ಇದೇ 21 ರಂದು ಸಂಜೆ 6 ಗಂಟೆಗೆ ಹಾಡು ರಿಲೀಸ್ ಆಗುತ್ತಿದೆ. ಇದನ್ನ ಹೇಳಲಿಕ್ಕೆ ಡೈರೆಕ್ಟರ್ ಶಶಾಂಕ್ ಅವರು ಒಂದು ಸ್ಕಿಟ್ ಮಾಡಿದ್ದಾರೆ. ಇದು ಸ್ಪೆಷಲ್ ಆಗಿಯೇ ಇದೆ.
ಕೌಸಲ್ಯ ಸುಪ್ರಜಾ ರಾಮ ಸಿನಿಮಾ ಸ್ಪೆಷಲ್ ವಿಡಿಯೋ ವೈರಲ್
ಕೌಸಲ್ಯ ಸುಪ್ರಜಾ ರಾಮ ಸಿನಿಮಾದ ಡೈರೆಕ್ಟರ್ ಶಶಾಂಕ್ ತಮ್ಮ ಚಿತ್ರದ ಪ್ರಚಾರದ ಪ್ಲಾನ್ ಮಾಡಿಕೊಂಡು ಕುಳಿತಿರುತ್ತಾರೆ. ಆಗ ನಾಯಕ ಡಾರ್ಲಿಂಗ್ ಕೃಷ್ಣ ಬರ್ತಾರೆ. ಡೈರೆಕ್ಟ್ರೇ ಯಾವಾಗ ಟೀಸರ್ ರಿಲೀಸ್ ಮಾಡ್ತೀರಾ? ಅಂತ ಡಾರ್ಲಿಂಗ್ ಕೃಷ್ಣ ಕೇಳ್ತಾರೆ.
ಅದ್ಕಕೇನೆ ಡೈರೆಕ್ಟರ್ ಶಶಾಂಕ್, ನಮ್ಮ ಶಿವಾನಿ ಹಾಡೆ ಸಿನಿಮಾದ ಟೀಸರ್, ಇದರಲ್ಲಿಯೆ ಎಲ್ಲ ಇದಿಯಲ್ಲ ಅಂತ ಹೇಳ್ತಾರೆ. ಆಗ ನಾಯಕ ನಟ ಕೃಷ್ಣ, ಹಾಗಾದ್ರೆ ಹಾಡು ತೋರಿಸಿಯಲ್ಲ ಅಂತ ಕೇಳ್ತಾರೆ. ಅದಕ್ಕೇ ಚಿತ್ರದ ನಾಯಕಿ ಬಿಂದು ಬರಲಿ ಇರಪ್ಪ ಅಂತ ಡೈರೆಕ್ಟರ್ ಶಶಾಂಕ್ ತಿಳಿಸುತ್ತಾರೆ.
ಡಾರ್ಲಿಂಗ್ ಕೃಷ್ಣ ಹೊಸ ರೀತಿಯ ವಿಡಿಯೋ ವೈರಲ್
ಇದನ್ನ ಕೇರೇ ಮಾಡದ ಡಾರ್ಲಿಂಗ್ ಕೃಷ್ಣ ಯಾರದು ಅಂತಲೇ ಕೇಳ್ತಾರೆ. ಆ ಕೂಡಲೇ ಡಾರ್ಲಿಂಗ್ ಕೃಷ್ಣ ಇನ್ನೂ ಚಿತ್ರದ ಪಾತ್ರದಿಂದ ಹೊರ ಬಂದಿಲ್ಲ ಅಂತ ತಿಳಿದು, ನಮ್ಮ ಚಿತ್ರದ ಶಿವಾನಿ ಅಲ್ವೇ ಅಂತ ಕೇಳ್ತಾರೆ. ಅಲ್ಲಿಗೆ ಈ ಮಾತು ಮುಗಿಯುತ್ತೆ.
ಆದರೆ ನಾಯಕಿ ಬಿಂದು ಇಲ್ಲಿಗೆ ಬಂದಾಗ, ಯಾಕ್ರಿ ಲೇಟು ಅಂತ ನಾಯಕ ಡಾರ್ಲಿಂಗ್ ಕೃಷ್ಣ ಕೇಳ್ತಾರೆ. ಆದರೆ ಡಾರ್ಲಿಂಗ್ ಕೃಷ್ಣ ತಾವೇ ಲೇಟಾಗಿ ಬಂದಿರೋದು ಅನ್ನೋದನ್ನೇ ಮರೆತು ಬಿಡ್ತಾರೆ. ಹೀಗೆ ಚಿತ್ರದ ನಾಯಕನ ಪಾತ್ರದ ಝಲಕ್ ಅನ್ನು ಡೈರೆಕ್ಟರ್ ಶಶಾಂಕ್ ಇಲ್ಲಿ ಕೊಟ್ಟಿದ್ದಾರೆ.
ಡಾರ್ಲಿಂಗ್ ಕೃಷ್ಣನ ಪರಕಾಯ ಪ್ರವೇಶದ ಕಿರಿಕಿರಿ!
ಆದರೆ ಇಲ್ಲಿ ಇನ್ನೂ ಒಂದು ಸತ್ಯವೂ ಇದೆ ಅನಿಸುತ್ತದೆ. ನಾಯಕ ಡಾರ್ಲಿಂಗ್ ಕೃಷ್ಣನ ಪರಕಾಯ ಪ್ರವೇಶದಿಂದ ಕೃಷ್ಣನ ಪತ್ನಿ ನಟಿ ಮಿಲನಾ ನಾಗರಾಜ್ ಕೂಡ ಕಿರಿಕಿರಿ ಅನುಭವಿಸುತ್ತಾರೆ ಅನ್ನೋದನ್ನ ಡೈರೆಕ್ಟರ್ ಶಶಾಂಕ್ ಕೂಡ ಇಲ್ಲಿ ಹೇಳ್ತಾರೆ. ಜೊತೆಗೆ ಮಿಲನಾ ಅವರಿಗೆ ಏನೆಲ್ಲ ತೊಂದರೆ ಆಗುತ್ತಿದೆ ಅನ್ನೋ ಸತ್ಯವೂ ಇದೇ ವಿಡಿಯೋದಲ್ಲಯೇ ದೊರೆಯುತ್ತದೆ.
ಇದನ್ನೂ ಓದಿ: Sudeep: ಕಿಚ್ಚನ ಮುಂದೆ ಎರಡು ಕ್ಷೇತ್ರದ ಟಿಕೆಟ್ ಇಟ್ಟ ಬಿಜೆಪಿ? ಆಫರ್ ಒಪ್ಪಿಕೊಳ್ತಾರಾ ರನ್ನ?
ಕೌಸಲ್ಯ ಸುಪ್ರಜಾ ರಾಮ ಸಿನಿಮಾದ ಪ್ರಚಾರ ಈ ರೀತಿ ಶುರು ಆಗಿದೆ. ಶೀಘ್ರದಲ್ಲಿಯೇ ಈ ಚಿತ್ರದ ಶಿವಾನಿ ಹಾಡು ರಿಲೀಸ್ ಆಗುತ್ತಿದೆ. ಇದನ್ನ ಹೇಳಲಿಕ್ಕೆ ಮಾಡಿರೋ ಈ ಸ್ಪೆಷಲ್ ವಿಡಿಯೋ ಕೂಡ ಗಮನ ಸೆಳೆಯುತ್ತಿದೆ ಅಂತಲೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ