ಕನ್ನಡ ಚಿತ್ರರಂಗದ ರಿಯಲ್ ಲವ್ ಬರ್ಡ್ಸ್ (Love Birds Movie) ಯಾರೂ ಅನ್ನುವುದು ಹೇಳೋದೇ ಬೇಡ. ಸೆಲೆಬ್ರಿಟಿ ದಂಪತಿಗಳಲ್ಲಿ ಆಗ ಪ್ರಿಯಾಂಕಾ-ಉಪ್ಪಿ ಇದ್ದರು. ಅವರಾದ್ಮೇಲೆ ರಾಧಿಕಾ ಪಂಡಿತ್-ರಾಕಿಂಗ್ ಸ್ಟಾರ್ ಯಶ್ ಲವ್ ಬರ್ಡ್ಸ್ (Real Love Birds) ಅನಿಸಿಕೊಂಡರು. ಮೊನ್ನೆ ಮೊನ್ನೆ ಈ ಒಂದು ಪಟ್ಟಿಗೆ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಸೇರಿಕೊಂಡಿದ್ದಾರೆ. ಸದ್ಯಕ್ಕೆ ಲವ್ ಬರ್ಡ್ಸ್ (Darling Krishna) ಎಂದು ಕರೆಸಿಕೊಳ್ಳುವಲ್ಲಿ ಮಿಲನಾ ಮತ್ತು ಡಾರ್ಲಿಂಗ್ ಕೃಷ್ಣ ಗಮನ ಸೆಳೆದಿದ್ದಾರೆ. ಒಂದಲ್ಲ ಎರಡಲ್ಲ ಪ್ರೀತಿ-ಪ್ರೇಮದ ಕಥೆಯ ಮೂರು ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ಇವರ ಎರಡು (Milana Nagaraj) ಸಿನಿಮಾಗಳು ಹಿಟ್ ಆಗಿವೆ. ಮೂರನೇ ಹಿಟ್ ನಿರೀಕ್ಷೆಯಲ್ಲಿ ಈ ಜೋಡಿ ಇದೆ.
ಫೆಬ್ರವರಿ ತಿಂಗಳು "ಲವ್ ಬರ್ಡ್ಸ್" ಪ್ರೇಮಿಗಳ ತಿಂಗಳು !
ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರಿಗೆ ಫೆಬ್ರವರಿ ತಿಂಗಳು ತುಂಬಾ ವಿಶೇಷವಾದ ತಿಂಗಳೇ ಆಗಿದೆ. ಪ್ರೀತಿ-ಪ್ರೇಮ ಅಂತ ಇದೇ ತಿಂಗಳು ಒಂದಷ್ಟು ವರ್ಷ ಜೊತೆಗೆ ಓಡಾಡಿದರು. ಫೆಬ್ರವರಿ ತಿಂಗಳು ಬಂದಾಗ, ಯಾರಿಗೂ ತಿಳಿಯದ ರೀತಿ ಪ್ರೇಮಿಗಳ ದಿನವನ್ನೂ ಆಚರಿಸಿದರು.
ಪ್ರೇಮಿಗಳು ಅತಿ ಇಷ್ಟಪಡುವ ಫೆಬ್ರವರಿಯಲ್ಲಿ ಈ ಜೋಡಿ ಮದುವೆ ಕೂಡ ಆದರು. ಇವರ ಜೋಡಿಯ ಮೊದಲ ಸಿನಿಮಾ ಲವ್ ಮಾಕ್ಟೆಲ್ ಜನವರಿ ತಿಂಗಳಲ್ಲಿ ರಿಲೀಸ್ ಆಯಿತು.
ಲಾಕ್ ಡೌನ್ 2020 ಟೈಮ್ ಅಲ್ಲಿ ಲವ್ ಮಾಕ್ಟೆಲ್
ಜನರ ಮನಸಿಗೆ ಈ ಚಿತ್ರ ತುಂಬಾನೆ ಹಿಡಿಸಿತು. ಲಾಕ್ ಡೌನ್ ಟೈಮ್ ಬೇರೆ, ಆ ಸಮಯದಲ್ಲಿಯೇ ಈ ಜೋಡಿಯ ಚಿತ್ರವನ್ನ ಜನ ಮನೆಯಲ್ಲಿ ಕುಳಿತು ನೋಡಿದ್ರು. ಕೊರೊನಾ ಲಾಕ್ ಡೌನ್ ಟೈಮ್ನಲ್ಲಿಯೇ ಚಿತ್ರ ಸಿಕ್ಕಾಪಟ್ಟೆ ಓಡಿತು ನೋಡಿ.
ಇದಾದ್ಮೇಲೆ ಲವ್ ಮಾಕ್ಟೆಲ್-2 ಸಿನಿಮಾ ಕೂಡ ರೆಡಿ ಆಯಿತು. ಕೊರೊನಾ ಲಾಕ್ ಡೌನ್ ಈ ಒಂದು ಗದ್ದಲದಲ್ಲಿ ಚಿತ್ರ ಪ್ರೇಮಿಗಳ ಫೆಬ್ರವರಿ ತಿಂಗಳು 11 ರಂದು ರಿಲೀಸ್ ಆಗಬೇಕಿತ್ತು.
ಲವ್ ಮಾಕ್ಟೆಲ್-2 ದಿನಗಳ ಆ ಒಂದು ವಿಶೇಷ ನೆನಪು!
ಈ ಚಿತ್ರವನ್ನ ಮಾಡ್ಬೇಕು ಅನ್ನುವ ಐಡಿಯಾ ಕೂಡ ನಟ-ನಿರ್ದೇಶಕ ಡಾರ್ಲಿಂಗ್ ಕೃಷ್ಣ ಅವರಿಗೆ ಇರಲಿಲ್ಲ. ಆದರೆ ಪಾರ್ಟ್-2 ಮಾಡಬೇಕು ಅನ್ನುವ ನಿರ್ಧಾರ ಆದ್ಮೇಲೆ ಚಿತ್ರದ ಕ್ಲೈಮ್ಯಾಕ್ಸ್ ಬರೆದು ಅಲ್ಲಿಂದಲೇ ಲವ್ ಮಾಕ್ಟೆಲ್-2 ಚಿತ್ರದ ಕಥೆ ಬರೆಯುತ್ತಾ ಬಂದ್ರು. ಅದು ಕೂಡ ಜನರ ಮನಸ್ಸಿಗೆ ಇಷ್ಟ ಆಗಿದೆ.
ಮೊನ್ನೆ ಮೊನ್ನೆಗೆ ಒಂದು ವರ್ಷ ಪೂರ್ಣಗೊಳಿಸಿದ ಈ ಖುಷಿಯಲ್ಲಿಯೇ ಈ ರಿಯಲ್ ಜೋಡಿಯ ಲವ್ ಬರ್ಡ್ಸ್ ಸಿನಿಮಾ ರಿಲೀಸ್ ಆಗುತ್ತಿದೆ. ಲವ್ ಮಾಡೋರಿಗೆ ಒಂದು ರೀತಿ ಇದು ಪಾಠವೂ ಆಗಲಿದೆ. ರಿಯಲ್ ಲವ್ ಬರ್ಡ್ಸ್ ಕೃಷ್ಣ ಮತ್ತು ಮಿಲನಾ ಅವರಿಗೆ ಇದು ಹ್ಯಾಟ್ರಿಕ್ ಹಿಟ್ ಕೂಡ ಆಗಲಿದೆ.
ಲವ್ ಬರ್ಡ್ಸ್ ಚಿತ್ರದಲ್ಲಿ ಲವ್ಲಿ ಕಥೆಯ ಹೂರಣ
ಲವ್ ಬರ್ಡ್ಸ್ ಚಿತ್ರದ ನಿರ್ದೇಶಕ ಪಿ.ಸಿ.ಶೇಖರ್ ಅವರು ತುಂಬಾ ಚೆನ್ನಾಗಿ ಸಿನಿಮಾ ತೆಗೆಯುತ್ತಾರೆ. ಪಕ್ಕಾ ಪ್ಲಾನ್ ಮಾಡಿಕೊಂಡು ಪ್ರಮೋಷನ್ ಕೂಡ ಮಾಡುತ್ತಾರೆ. ಲವ್ ಬರ್ಡ್ಸ್ ಚಿತ್ರವನ್ನ ತುಂಬಾ ಚೆನ್ನಾಗಿ ತೆಗೆದಿದ್ದಾರೆ.
ಅರ್ಜುನ್ ಜನ್ಯ ಸಂಗೀತದಲ್ಲಿ ಒಳ್ಳೆ ಹಾಡುಗಳೂ ಕೂಡ ಮೂಡಿ ಬಂದಿವೆ. ಚಿತ್ರದ ಲವ್ಲಿ ಕಥೆಯನ್ನ ಈ ಹಾಡುಗಳು ಇನ್ನಷ್ಟು ಬೂಸ್ಟ್ ಮಾಡಿವೆ. ಚಿತ್ರದಲ್ಲಿ ಒಂದು ಸುಂದರ ಕಥೆ ಇದೆ.
ಡಾರ್ಲಿಂಗ್ ಕೃಷ್ಣ-ಮಿಲನಾ ಜೋಡಿ 3ನೇ ಚಿತ್ರ ಯಾವುದು?
ಪ್ರೀತಿಸೋವಾಗ ಒಂದು ರೀತಿಯ ಅಟ್ಯಾಚ್ಮೆಂಟ್ ಇರುತ್ತದೆ. ಅದೇ ಪ್ರೇಮಿಗಳ ಲವ್ ಮ್ಯಾರೇಜ್ ಆದ್ರೇ ಆಗೋ ವ್ಯತ್ಯಾಸಗಳೇ ಬೇರೆ ಆಗುತ್ತವೆ. ಆ ಒಂದು ವಿಶೇಷ ಸಮಸ್ಯೆಯನ್ನ ಇಲ್ಲಿ ನೋಡಬಹುದಾಗಿದೆ.
ಲವ್ ಬರ್ಡ್ಸ್ ನನ್ನ ಮತ್ತು ಮಿಲನಾ ಒಟ್ಟಿಗೆ ಅಭಿನಯಿಸಿರೋ ಮೂರನೇ ಸಿನಿಮಾ ಆಗಿದೆ. ಈ ಹಿಂದೆ ಲವ್ ಮಾಕ್ಟೆಲ್ 1 ಮತ್ತು ಲವ್ ಮಾಕ್ಟೆಲ್-2 ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದೇವೆ ಎಂದು ಡಾರ್ಲಿಂಗ್ ಕೃಷ್ಣ, ನ್ಯೂಸ್-18 ಕನ್ನಡ ಡಿಜಿಟಲ್ಗೆ ತಿಳಿಸಿದ್ದಾರೆ.
ಇದೇ ಫೆಬ್ರವರಿ-17ಕ್ಕೆ ಲವ್ ಬರ್ಡ್ಸ್ ಚಿತ್ರ ರಿಲೀಸ್
ಲವ್ ಬರ್ಡ್ಸ್ ಸಿನಿಮಾ ಕೂಡ ಪ್ರೇಮಿಗಳ ತಿಂಗಳು ಇದೇ ಫೆಬ್ರವರಿ-17 ರಂದು ರಿಲೀಸ್ ಆಗುತ್ತಿದೆ. ಪ್ರೀತಿ, ಪ್ರೇಮ, ಮದುವೆ, ಏಕಾಂತ ಹೀಗೆ ಎಲ್ಲ ಕಂಟೆಂಟ್ನ್ನೂ ಈ ಚಿತ್ರ ಹೊಂದಿದೆ.
ಇದನ್ನೂ ಓದಿ: Hemanth Rao: ಅಪ್ಪು-ಯಶ್ ಮೆಚ್ಚಿದ ಕಥೆಗೆ ರಕ್ಷಿತ್ ಶೆಟ್ಟಿ ನಾಯಕ; ಹೊರಬಿತ್ತು ರೋಚಕ ಸ್ಟೋರಿ!
ಹೊಸ ನಿರೀಕ್ಷೆಯೊಂದಿಗೆ ಸಿನಿಮಾ ರಿಲೀಸ್ ಆಗುತ್ತಿದೆ. ಲವ್ಲಿ ಜೋಡಿಯ ಹ್ಯಾಟ್ರಿಕ್ ನಿರೀಕ್ಷೆಯನ್ನೂ ಈಗ ಲವ್ ಬರ್ಡ್ಸ್ ಹುಟ್ಟುಹಾಕಿದೆ ಅಂತ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ