• Home
  • »
  • News
  • »
  • entertainment
  • »
  • Darling Krishna Movie: ಡಾರ್ಲಿಂಗ್ ಕೃಷ್ಣ- ಶಶಾಂಕ್ ಚಿತ್ರದ ಟೈಟಲ್ ಹಿಂಗ್ಯಾಕಿದೆ?

Darling Krishna Movie: ಡಾರ್ಲಿಂಗ್ ಕೃಷ್ಣ- ಶಶಾಂಕ್ ಚಿತ್ರದ ಟೈಟಲ್ ಹಿಂಗ್ಯಾಕಿದೆ?

ಡಾರ್ಲಿಂಗ್ ಕೃಷ್ಣ-ಶಶಾಂಕ್ ಹೊಸ ಸಿನಿಮಾ

ಡಾರ್ಲಿಂಗ್ ಕೃಷ್ಣ-ಶಶಾಂಕ್ ಹೊಸ ಸಿನಿಮಾ

ಕೌಸಲ್ಯ ಸುಪ್ರಜಾ ರಾಮ ಅನ್ನೋ ಸುಪ್ರಭಾತದ ಮೊದಲ ಲೈನ್ ಇಲ್ಲಿ ಟೈಟಲ್ ಆಗಿದೆ. ಅದೇ ಟೈಟಲ್ ನಲ್ಲಿಯೇ ಈಗ ಸಿನಿಮಾ ಶೂಟಿಂಗ್ ಕೂಡ ಆರಂಭಗೊಂಡಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಡಾರ್ಲಿಂಗ್ ಕೃಷ್ಣ (Darling Krishana) ಮತ್ತು ಶಶಾಂಕ್ (Shashank) ಜೊತೆಗೂಡಿ ಒಂದು ಸಿನಿಮಾ ಮಾಡಿದ್ದಾರೆ. ಕೌರವ ಬಿ.ಸಿ.ಪಾಟೀಲ್ (B C Patil) ಕೂಡ ಇವರ ಈ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ. ಈ ಮೂವರ ಸಿನಿಮಾದ ಟೈಟಲ್ (Title) ನಲ್ಲಿ ಒಂದಲ್ಲ ಎರಡಲ್ಲ ಮೂರು ಮೂರು ಹೆಸರುಗಳಿವೆ. ಅದನ್ನ ಈಗಾಗಲೇ ರಿವೀಲ್ (Reval) ಕೂಡ ಮಾಡಿದ್ದಾರೆ. ಆದರೆ ಇದನ್ನ ಹೇಳುವ ರೀತಿ ತುಂಬಾ ವಿಶೇಷವಾಗಿಯೇ ಇದೆ. ಟೈಟಲ್ ರಿವೀಲ್ ಮಾಡೊಕೆ ಪುಟ್ಟ ಸ್ಕಿಟ್​​ ಅನ್ನೇ ಡೈರೆಕ್ಟರ್ ಶಶಾಂಕ್ ಪ್ಲಾನ್ ಮಾಡಿದ್ದರು. ಇದರಲ್ಲಿ ನಟ ಡಾರ್ಲಿಂಗ್ ಕೃಷ್ಣ ಮತ್ತು ಸ್ವತಃ ಶಶಾಂಕ್ ಅಭಿನಯಿಸಿದ್ದಾರೆ. ಇದನ್ನ ನೋಡಿದವ್ರು ವಾರೆ ವ್ಹಾ ಅಂತಲೂ ಹೇಳಿ ನಕ್ಕು ಬಿಡ್ತಾರೆ.


ಡೈರೆಕ್ಟರ್ ಶಶಾಂಕ್ ತಮ್ಮ ಸಿನಿಮಾ ಪ್ರಚಾರಕ್ಕೆ ಹೊಸ ಹೊಸ ಐಡಿಯಾಗಳನ್ನ ಮಾಡ್ತಾನೇ ಇದ್ದಾರೆ. ಲವ್ 360 ಸಿನಿಮಾದ ಟೈಮ್​ ನಲ್ಲೂ ಶಶಾಂಕ್ ನಾಯಕಿ ರಚನಾ ಇಂದರ್ ಮತ್ತು ನಾಯಕ ಪ್ರವೀಣ್ ಜೊತೆಗೂಡಿ ಸ್ಕಿಟ್ ಮಾಡಿದ್ದರು.


ಈ ಮೂಲಕ ಶಶಾಂಕ್ ಚಿತ್ರ ಪ್ರಚಾರವನ್ನ ಪುಟ್ಟ ಸ್ಕಿಟ್ ಮೂಲಕ ಮಾಡಹುದು ಅಂತಲೇ ತೋರಿಸಿಕೊಟ್ಟಿದ್ದರು. ಈಗ ತಮ್ಮ ನಿರ್ದೇಶನದ ಮತ್ತು ನಿರ್ಮಾಣದ ಚಿತ್ರದ ಟೈಟಲ್ ರಿವೀಲ್ ಮಾಡೋಕೆ ಒಂದು ಇಂಟ್ರೆಸ್ಟಿಂಗ್ ಸ್ಕಿಟ್ ಮಾಡಿದ್ದರು. ಇದು ಕೂಡ ಮಜವಾಗಿಯೇ ಇತ್ತು.


Kannada Actor Darling Krishna and Shashank New Movie Title Reveal
ಸುಪ್ರಭಾತದ ಮೊದಲ ಲೈನ್ ಇಲ್ಲಿ ಸಿನಿಮಾ ಟೈಟಲ್


ಈ ಸಲದ ಸ್ಕಿಟ್ ಅನ್ನ ಎರಡು ಭಾಗವಾಗಿಯೆ ಮಾಡಿದ್ದರು. ಒಂದರಲ್ಲಿ ಟೈಟಲ್ ಯಾವುದನ್ನ ಇಡಬೇಕು ಅನ್ನೋ ಚರ್ಚೆ ಇರುತ್ತದೆ. ಇದರಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಶಶಾಂಕ್ ಅಭಿನಯಿಸಿದ್ದಾರೆ.


ಚಿತ್ರದ ಟೈಟಲ್ ರಿವೀಲ್​​ ಗೆ ಶಶಾಂಕ್ ಹೊಸ ಐಡಿಯಾ

ಎರಡನೇ ವೀಡಿಯೋ ಸ್ಕಿಟ್ ನಲ್ಲಿ ಒಳ್ಳೆ ಟೈಟಲ್​​ ಕೊಟ್ಟವರಿಗೆ 10 ಸಾವಿರ ರೂಪಾಯಿ ಕೂಡ ಬಹುಮಾನ ಇಡೋ ಸೀನ್ ಕೂಡ ಇದೆ. ಎಷ್ಟು ಪ್ರಯತ್ನ ಮಾಡಿದರೂ ಟೈಟಲ್ ಹೊಳೆಯೋದೇ ಇಲ್ಲ. ಆಗ ಪ್ರತಿ ದಿನ ಬೆಳಗ್ಗೆ ಕೇಳೋ ಸುಪ್ರಭಾತವೇ ಟೈಟಲ್ ಆಗುತ್ತದೆ.
ಹೌದು, ಇದೇ ಕೌಸಲ್ಯ ಸುಪ್ರಜಾ ರಾಮ ಅನ್ನೋ ಸುಪ್ರಭಾತದ ಮೊದಲ ಲೈನ್ ಇಲ್ಲಿ ಟೈಟಲ್ ಆಗಿದೆ. ಅದೇ ಟೈಟಲ್ ನಲ್ಲಿಯೇ ಈಗ ಸಿನಿಮಾ ಶೂಟಿಂಗ್ ಕೂಡ ಆರಂಭಗೊಂಡಿದೆ.




ಇದನ್ನೂ ಓದಿ: Parimala Lodge: ಪರಿಮಳ ಲಾಡ್ಜ್​ನಲ್ಲಿ ಸಖತ್ ಕಾಮಿಡಿ ಸಿಗುತ್ತಂತೆ! ಆದ್ರೂ ಕಣ್ಣೀರು ತರಿಸುತ್ತಂತೆ


ಕೌಸಲ್ಯ ಸುಪ್ರಜಾ ರಾಮ ಅನ್ನೋ ಟೈಟಲ್ ಫೈನಲ್ ಆಗಿದೆ. ಶಶಾಂಕ್ ಸಿನಿಮಾಸ್ ಮತ್ತು ಬಿ.ಸಿ.ಪಾಟೀಲರ ಕೌರವ ಪ್ರೋಡಕ್ಷನ್ ಮೂಲಕವೇ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣನ ತಂದೆ- ತಾಯ ಆಗಿ ನಟ ಸುಧಾ ಬೆಳವಾಡಿ ಹಾಗೂ ರಂಗಾಯಣ ರಘೂ ಅಭಿನಯಿಸಿದ್ದಾರೆ.


ಡಾರ್ಲಿಂಗ್ ಕೃಷ್ಣನಿಗೆ ಈ ಚಿತ್ರದಲ್ಲೂ ಇಬ್ಬರು ಹೀರೋಯಿನ್ 


ಡೈರೆಕ್ಟರ್ ಗಿರಿರಾಜ್ ಕೂಡ ಈ ಚಿತ್ರದಲ್ಲಿ ಅಭಿನಯಸುತ್ತಿದ್ದಾರೆ. ಎಂದಿನಂತೆ ಡಾರ್ಲಿಂಗ್ ಕೃಷ್ಣನಿಗೆ ಇಲ್ಲೂ ಇಬ್ಬರು ನಾಯಕಿಯರು ಇದ್ದಾರೆ. ಒಬ್ಬರು ಹೊಸಬರು ಇನ್ನೂ ಒಬ್ಬರು ಗೊತ್ತಿರೋ ನಟಿನೇ ಅಭಿನಯಿಸುತ್ತಿದ್ದಾರೆ. ಆದರೆ ಯಾರು ಅನ್ನೋದು ಮಾತ್ರ ಇನ್ನೂ ರಿವೀಲ್ ಆಗಿಲ್ಲ ಅಷ್ಟೆ.


ಇನ್ನುಳಿದಂತೆ ಸಿನಿಮಾದ ಕೌಸಲ್ಯ ಸುಪ್ರಜಾ ರಾಮ ಸಿನಿಮಾದ ಚಿತ್ರೀಕರಣ ಕೆಲಸ ಶುರು ಆಗಿದೆ. ಅಂದುಕೊಂಡಂತೆ ಸಿನಿಮಾ ತೆಗೆಯಲು ಒಳ್ಳೆಯ ಟೀಮ್ ಇಲ್ಲಿ ಜೊತೆಯಾಗಿದೆ.


ಇದನ್ನೂ ಓದಿ: Kantara Telugu Collection: ತೆಲುಗಿನಲ್ಲೂ ಮೋಡಿ ಮಾಡಿದ ಶಿವ, ಎರಡೇ ದಿನಕ್ಕೆ ಕಾಂತಾರ ಕಲೆಕ್ಷನ್ 11.5 ಕೋಟಿ


ಲಕ್ಕಿ ಮ್ಯಾನ್, ಲವ್ ಮಾಕ್ಟೆಲ್ ದಂತಹ ಇಂಗ್ಲೀಷ್ ಟೈಟಲ್ ಸಿನಿಮಾದಲ್ಲಿ ಅಭಿನಯಿಸಿದ್ದ ಡಾರ್ಲಿಂಗ್ ಕೃಷ್ಣ ಈಗ ಕನ್ನಡದ ಟೈಟಲ್ ಇರೋ ಸಿನಿಮಾದಲ್ಲಿ ಅಭಿನಯಿಸ್ತಿರೋ ಖುಷಿಯಲ್ಲಿಯೇ ಇದ್ದಾರೆ.

First published: