Love Birds Review: ಮದುವೆ ಬಗ್ಗೆ ದೊಡ್ಡ ಪಾಠ ಮಾಡ್ತಾರೆ ಲವ್​ ಬರ್ಡ್ಸ್​!

ಲವ್ ಮಾಕ್ಟೆಲ್ ಜೋಡಿಗೆ ಇಲ್ಲೂ ಒಳ್ಳೆ ಮಾರ್ಕ್ಸ್

ಲವ್ ಮಾಕ್ಟೆಲ್ ಜೋಡಿಗೆ ಇಲ್ಲೂ ಒಳ್ಳೆ ಮಾರ್ಕ್ಸ್

ಆರಂಭದಲ್ಲಿ ಇದೊಂದು ಸಿಂಪಲ್ ಲವ್ ಸ್ಟೋರಿ ಆಗಿಯೇ ಕಾಣುತ್ತದೆ. ಒಂದಷ್ಟು ಫನ್​ ಎಲಿಮೆಂಟ್ಸ್ ಇರೋ ಚಿತ್ರ ಅನಿಸದೇ ಇರದು. ಆದರೆ ಚಿತ್ರದ ಕಥೆ ಶೃತಿ ಹಿಡಿದಂತೆ ಅಲ್ಲಿ ಬೇರೆ ಭಾವನೆ ಮೂಡುತ್ತದೆ. ಕಥೆ ಸಾಗಿದಂತೆ ಪ್ರೇಕ್ಷಕರ ಮನದಲ್ಲೂ ಏರಿಳಿತಗಳು ಮೂಡುತ್ತವೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:
  • published by :

ಪ್ರೀತಿಯಲ್ಲಿ ಸುಃಖ ಇದೆ, ಪ್ರೇಮದಲ್ಲಿ (Love Birds Review) ಉಲ್ಲಾಸ ಇದೆ. ಮದುವೆಯಲ್ಲಿ ಏನೇನೋ ಇದೆ. ಪ್ರೀತಿಸಿ ಮದುವೆ ಆದ್ರೆ ಆಗೋ ಸಮಸ್ಯೆ ಒಂದಾದ್ರೆ, ಮದುವೆ ಮ್ಯಾಚ್​ ಮೇಕಿಂಗ್ ಸೈಟ್​​ನಲ್ಲಿ ಸಿಕ್ಕ ಹುಡುಗ-ಹುಡುಗಿಯ ಮದುವೆ (Love Birds marriage) ದುರಂತಗಳೇ ಬೇರೆ. ಅದನ್ನ ಸುಮ್ನೆ ನೇರವಾಗಿ ಹೇಳಿದ್ರೆ ಹೇಗಿರುತ್ತದೆ? ಇದನ್ನ ಅರ್ಥ ಮಾಡಿಕೊಂಡಿರೋ ಡೈರೆಕ್ಟರ್ ಪಿ.ಸಿ.ಶೇಖರ್ ಲವ್ ಬರ್ಡ್ಸ್ (Love Birds Film) ಮಾಡಿ ಲವ್ಲಿ ಕಥೆ ಹೆಣೆದಿದ್ದಾರೆ. ಚಿತ್ರವನ್ನ ನೋಡ್ತಾ ಹೋದ್ರೆ, ಆರಂಭದಲ್ಲಿ ಇದೊಂದು ಸಿಂಪಲ್ ಲವ್ ಸ್ಟೋರಿ ಆಗಿ ಕಾಣುತ್ತದೆ. ಒಂದಷ್ಟು ಫನ್​ ಎಲಿಮೆಂಟ್ಸ್ (Love Birds Story) ಇರೋ ಚಿತ್ರ ಅನಿಸದೇ ಇರದು. ಆದರೆ ಕಥೆ ಶೃತಿ ಹಿಡಿದಂತೆ ಬೇರೆ ಭಾವನೆ ಮೂಡುತ್ತದೆ. ಕಥೆ ಸಾಗಿದಂತೆ ಪ್ರೇಕ್ಷಕರ ಮನದಲ್ಲೂ ಏರಿಳಿತಗಳು ಮೂಡುತ್ತವೆ.


ಹಾರುವ ಹಕ್ಕಿಗಳು ಲವ್ ಬರ್ಡ್​ ಆಗಿದ್ದರೇ, ಹೇಗೆ ಹೊಯ್ದಾಟ ಇರುತ್ತದೆಯೋ, ಹಾಗೆ ಲವ್ ಬರ್ಡ್ಸ್ ಚಿತ್ರದ ಕಥೆ ಸೆಕೆಂಡ್ ಹಾಫ್​ ಆದ್ಮೇಲೆ ಒಂದಷ್ಟು ಹಾರಾಡುತ್ತದೆ. ಲವ್ ಬರ್ಡ್ಸ್​ ಮದುವೆ ಅದ್ಮೇಲೆ ಎಲ್ಲರಂತೆ ಅಂತಲೂ ಹೇಳುವಂತೆ ಮಾಡುತ್ತದೆ.


Kannada Actor Darling Krishna Acted Love Birds Movie Review
ಲವ್ ಬರ್ಡ್ಸ್ ಮಧ್ಯೆ ಲಾಯರ್ ಮಾಯಾ ಯಾಕೆ?


ಲವ್ ಬರ್ಡ್ಸ್ ಚಿತ್ರದಲ್ಲಿ ಕೃಷ್ಣ-ಮಿಲನಾ ಪ್ರೇಮಿಗಳಲ್ವಾ?
ಲವ್ ಬರ್ಡ್ಸ್ ಸಿನಿಮಾದಲ್ಲಿ ಹೆಸರಿಗಷ್ಟೆ ಲವ್ ಬರ್ಡ್ಸ್ ಅನ್ನಬಹುದು. ಆದರೆ ಇಲ್ಲಿರೋ ದೀಪಕ್ ಆಗಲಿ, ಪೂಜಾ ಆಗಲಿ, ಇವರಾರು ಲವರ್ಸ್ ಅಲ್ಲವೇ ಅಲ್ಲ. ಮ್ಯಾಟ್ರಿಮೊನಿ ಸೈಟ್​​ಲ್ಲಿ ಒಂದಾದ ಜೋಡಿ ಇವರು. ಅಪ್ಪ- ಅಮ್ಮನ ಒತ್ತಾಯಕ್ಕೆ ಮದುವೆಯಲ್ಲಿ ಬೀಳೋ ಗಂಡ-ಹೆಂಡತಿ ಅನ್ನೋದು ಅಷ್ಟೇ ಸತ್ಯ.




ದೀಪಕ್ ತಂದೆ ರಂಗಾಯಣ ರಘು ಉತ್ತರ ಕರ್ನಾಟಕದವರು. ತಾಯಿ ವೀಣಾ ಸುಂದರ್ ಮಂಡ್ಯದ ಗೌಡ್ತಿ ಕಣ್ರೀ. ಇವರ ಡೆಡ್ಲಿ ಕಾಂಬಿನೇಷನ್ ಇಲ್ಲಿ ನಗು ತರಿಸುತ್ತದೆ.


ಅಪ್ಪನಾಗಿ ಸಾಧು ಇಲ್ಲಿ ಕಾಮಿಡಿಗಿಂತಲೂ ಸೀರಿಯೆಸ್ ಜಾಸ್ತಿ
ಆದರೆ ಹುಡುಗಿ ಪೂಜಾ ಅಪ್ಪ ಮಿಸ್ಟರ್ ಸಾಧು ಕೋಕಿಲ, ಇವರ ಮೂಲತಃ ಮಂಗಳೂರಿನವರು. ಇನ್ನೂ ಅದೇ ಸ್ಲಾಂಗ್​ ಅಲ್ಲಿಯೇ ಮಾತನಾಡೋ ಚಿಕ್ಕಮಗಳೂರು ನಿವಾಸಿ. ಅಲ್ಲಿಗೆ ಇಲ್ಲೂ ಮಿಕ್ಸ್ ಕಲ್ಚರ್ ಇದೆ. ಹಾಗಾಗಿಯೇ ಲವ್ ಬರ್ಡ್ ಲೈಫ್​ಲ್ಲಿ ಏನೇನೋ ಆಗುತ್ತದೆ.


ಪೂಜಾ ಪಾತ್ರಧಾರಿ ಮಿಲನಾ ನಾಗರಾಜ್ ಕಣ್ಣಿಗೆ ಕನ್ನಡಕ ಹಾಕಿಕೊಂಡು ಇಂಡಿಪೆಂಡ್ ಹುಡುಗಿಯಾಗಿ ತುಂಬಾ ಚೆನ್ನಾಗಿಯೇ ಅಭಿನಯಸಿದ್ದಾರೆ. ಐಟಿ ಫೀಲ್ಡ್​ನ ದೀಪಕ್ ಆಗಿ ಡಾರ್ಲಿಂಗ್ ಕೃಷ್ಣ ನಟಿಸಿದ್ದಾರೆ.


ಲವ್ ಮಾಕ್ಟೆಲ್ ಜೋಡಿಗೆ ಇಲ್ಲೂ ಒಳ್ಳೆ ಮಾರ್ಕ್ಸ್
ಇವರ ಜೋಡಿ ಲವ್ ಮಾಕ್ಟೆಲ್ ಚಿತ್ರದಿಂದಲೇ ಜನಕ್ಕೆ ಇಷ್ಟ ಆಗಿದೆ. ಈ ಒಂದು ಕಾರಣಕ್ಕೆ ಲವ್ ಬರ್ಡ್ಸ್ ನಲ್ಲೂ ಇವರ ರಿಯಲ್ ಕೆಮೆಸ್ಟ್ರಿ ಹೆಚ್ಚು ಜನಕ್ಕೆ ಇಷ್ಟ ಆಗುತ್ತದೆ. ನೈಜವಾಗಿಯೇ ಅಭಿನಯಿಸಿ ಸಿಕ್ಕಾಪಟ್ಟೆ ಸ್ಕೋರ್ ಮಾಡಿದ್ದಾರೆ.


Kannada Actor Darling Krishna Acted Love Birds Movie Review
ಲವ್ ಬರ್ಡ್ಸ್ ಮಧ್ಯೆ ಲಾಯರ್ ಮಾಯಾ ಯಾಕೆ?


ಆದರೆ ಈ ಜೋಡಿಯಲ್ಲಿ ಒಂದು ಟ್ವಿಸ್ಟ್ ಬರುತ್ತದೆ. ಎಲ್ಲರ ಮನೆಯಲ್ಲೂ ಇರೋ ಗಂಡ-ಹೆಂಡತಿ ನಡುವಿನ ಒಂದು ಸಣ್ಣ ಜಗಳ ಇಲ್ಲಿ ಡಿವೋರ್ಸ್ ಹಂತಕ್ಕೆ ಹೋಗುತ್ತದೆ.


ಲವ್ ಬರ್ಡ್ಸ್ ಮಧ್ಯೆ ಲಾಯರ್ ಮಾಯಾ ಯಾಕೆ?
ಇದನ್ನ ಕೊಡಿಸಲು ಬರುವ ಲಾಯರ್ ಮಾಯಾ ಸಾಕಷ್ಟು ಸಾಹಸ ಮಾಡುತ್ತಾರೆ. ಹೇಗಾದ್ರೂ ಮಾಡಿ ಇವರನ್ನ ಒಂದು ಮಾಡಬೇಕು ಅಂತಲು ಕಸರತ್ತು ಮಾಡ್ತಾರೆ. ಆದರೆ ಇಲ್ಲಿ ಲಾಯರ್ ಸೋಲ್ತಾರಾ? ಇಲ್ಲ ಲಾಯರ್ ಗೆಲ್ತಾರಾ? ಅನ್ನೋದು ಇಂಟ್ರಸ್ಟಿಂಗ್ ಪಾಯಿಂಟ್.


ಹಾಗಿರೋ ಈ ಕಥೆಯಲ್ಲಿ ಲಾಯರ್ ಮಾಯಾ ಪಾತ್ರಧಾರಿ ಸಂಯುಕ್ತಾ ಹೊರನಾಡು, ಸಿಕ್ಕಾಪಟ್ಟೆ ಸ್ಕೋರ್ ಮಾಡಿದ್ದಾರೆ. ಇವರ ಕಟ್ಟಕಡೆಯ ಆ ಒಂದು ವಿಡಿಯೋದಿಂದ ಸಿನಿಮಾ ಎಂಡ್ ಆಗುತ್ತದೆ.


ಲಾಯರ್ ಮಾಯಾ ಏನು ನಿನ್ನ ಲಾ ಪಾಯಿಂಟ್?
ಅಲ್ಲಿಗೆ ವಾಟ್ ಎ ಲಾಯರ್ ಅನ್ನುವಂತೆನೂ ಮಾಡುತ್ತದೆ. ಇಷ್ಟೆಲ್ಲ ಹೇಳಿದ್ಮೇಲೆ ಲವ್ ಬರ್ಡ್ಸ್ ಸಿನಿಮಾ ಹ್ಯಾಪಿ ಎಂಡಿಂಗಾ? ಶ್ಯಾಡ್ ಎಂಡಿಂಗಾ? ಅನ್ನೋದನ್ನ ದೊಡ್ಡ ಪರದೆ ಮೇಲೆ ನೋಡಿದ್ರೆ ಮಜಾ ಇದೆ.


ಅರ್ಜುನ್ ಜನ್ಯ ಸಂಗೀತ ಸಾಂದರ್ಭಿಕವಾಗಿಯೇ ಇದೆ. ಪಳ ಪಳ ಅನ್ನುವ ಹಾಡು ಮನಸಿನಲ್ಲಿ ಉಳಿಯುತ್ತದೆ. ಲವ್ ಬರ್ಡ್ಸ್ ಆಗಿಯೆ ಹಾರಾಡೋ ಪ್ರೇಮಿಗಳಿಗೆ ಇಲ್ಲೊಂದು ಪಾಠವೂ ಇದೆ.


ಇದನ್ನೂ ಓದಿ: Prithvi Shaw: ಟೀಂ ಇಂಡಿಯಾ ಆಟಗಾರನ ಮೇಲೆ ಹಲ್ಲೆಗೆ ಯತ್ನಿಸಿದ ನಟಿ, ಹೀರೋಯಿನ್ ಸಪ್ನಾ ಗಿಲ್ ಬಂಧನ


ಒಂದು ವೇಳೆ ಮದುವೆ ಆದ್ರೆ ಏನು ಮಾಡಬೇಕು, ಏನು ಮಾಡಬಾರದು ಅನ್ನೋ ವಿಷಯಗಳು ಇವೆ. ಇದನ್ನ ತಿಳಿಯೋ ಆಸಕ್ತರು ಈ ಚಿತ್ರ ನೋಡಬಹುದು.

First published: