ಡಾರ್ಲಿಂಗ್ ಕೃಷ್ಣ ಅಭಿನಯದ ಹೊಸ (Darling Krishna Movie) ಚಿತ್ರದ ಹಾಡು ರಿಲೀಸ್ ಆಗಿದೆ. ಈ ಹಾಡಲ್ಲಿ ಒಂದು ವಿಶೇಷ ಇದೆ. ಚಿತ್ರದ ನಿರ್ದೇಶಕರಾದ ಶಶಾಂಕ್ ಅವರು ಈ ಮೊದಲೆ ಹೇಳಿದ್ದರು. ತಮ್ಮ (Kousalya Supraja Rama Movie) ಚಿತ್ರಕ್ಕೆ ವಿಶೇಷವಾಗಿ ಟೀಸರ್ ಏನೂ ಬಿಡೋದಿಲ್ಲ. ಹಾಡಿನಲ್ಲಿಯೇ ಟೀಸರ್ ಇದೆ. ಟೀಸರ್‌ನಲ್ಲಿಯೇ ಹಾಡಿದೆ ಅನ್ನುವ ಅರ್ಥದಲ್ಲಿಯೇ ಒಂದು ಸ್ಪೆಲ್ ವಿಡಿಯೋ ಮಾಡಿ ಹೇಳಿಕೊಂಡಿದ್ದರು. ಅವರು ಹೇಳಿದಂತೇನೆ ಶಿವಾನಿ ಹಾಡು ಇದೆ. ಚಿತ್ರದ ಈ ಗೀತೆಯಲ್ಲಿ ನಾಯಕ ಮತ್ತು ನಾಯಕಿಯ ಕ್ಯಾರೆಕ್ಟರ್‌ನ ಚಿತ್ರಣ ಇದೆ. ಒಂದು ಹಾಡಲ್ಲಿ (Kannada Film Updates) ಒಂದು ಕಥೆ ಇರೋದು ನೋಡಿದ್ದೇವೆ. ಇಲ್ಲೂ ಅದು ಇದೆ. ಆದರೆ ಟೀಸರ್‌ನಲ್ಲಿರೋ ಕಂಟೆಂಟ್ ಕೂಡ ಇದೆ ಅನ್ನುವ ಫೀಲ್ ಕೂಡ ಆಗುತ್ತದೆ.
ಶಿವಾನಿ ಹಿಂದೆ ಬಿದ್ದ ಮಿಸ್ಟರ್ ಡಾರ್ಲಿಂಗ್ ಕೃಷ್ಣ
ಹೌದು, ಕೌಸಲ್ಯ ಸುಪ್ರಜಾ ರಾಮ ಸಿನಿಮಾದ ಬಗ್ಗೇನೆ ನೀವೂ ಇಲ್ಲಿವರೆಗೂ ಓದಿರೋದು. ಈ ಸಿನಿಮಾದಲ್ಲಿ ಮೆನ್ ವಿಲ್ ಬಿ ಮೆನ್ ಅಂತೀವಲ್ಲ. ಹಾಗೇನೆ ಈ ಚಿತ್ರದ ನಾಯಕ ಇದ್ದಾನೆ ಅಂತಲೇ ಅನಿಸುತ್ತದೆ. ಎ ರಿಯಲ್ ಮ್ಯಾನ್ ಕಥೆ ಇದು ಅನ್ನೋದನ್ನ ಡೈರೆಕ್ಟರ್ ಶಶಾಂಕ್ ಹೇಳಿ ಆಗಿದೆ.
ಅದರಂತೆ ಸಿನಿಮಾದ ನಾಯಕ ಡಾರ್ಲಿಂಗ್ ಕೃಷ್ಣ ಇಲ್ಲಿ ಕಂಪ್ಲೀಟ್ ಬದಲಾಗಿದ್ದಾರೆ. ಈ ಹಿಂದಿನ ಸಿನಿಮಾಗಳ ಲುಕ್ ಇಲ್ಲಿ ಹುಡುಕಿದರೂ ಸಿಗೋದಿಲ್ಲ. ಆ ರೀತಿನೇ ಕೃಷ್ಣನನ್ನ ಶಶಾಂಕ್ ಬದಲಿಸಿದ್ದಾರೆ. ಎ ಟೇಲ್ ಆಫ್ ರಿಯಲ್ ಮ್ಯಾನ್ ಅನ್ನೋ ಟ್ಯಾಗ್ ಲೈನ್ ಕೂಡ ಈ ಚಿತ್ರಕ್ಕಿದೆ. ಅದಕ್ಕೆ ಸೂಕ್ತ ಅನಿಸೋ ರೀತಿಯಲ್ಲಿಯೇ ಕೃಷ್ಣ ಇಲ್ಲಿ ಕಾಣಿಸಿಕೊಂಡಿದ್ದಾರೆ.
ಶಿವಾನಿಗಾಗಿಯೇ ಬದಲಾಗಿ ಬಿಟ್ರು ನೋಡಿ ರಿಯಲ್ ಮ್ಯಾನ್
ಡಾರ್ಲಿಂಗ್ ಕೃಷ್ಣನಿಗೆ ಈ ಚಿತ್ರದಲ್ಲಿ ಬ್ರಿಂದಾ ಅನ್ನುವ ನವ ನಟಿ ಜೋಡಿ ಆಗಿದ್ದಾರೆ. ಚಿತ್ರದಲ್ಲಿ ಬರುವ ಶಿವಾನಿ ಅನ್ನುವ ಪಾತ್ರವನ್ನ ಇಲ್ಲಿ ನಿರ್ವಹಿಸಿದ್ದಾರೆ. ಇವರ ಪಾತ್ರದ ಪರಿಚಯ ಅನ್ನುವ ರೀತಿಯಲ್ಲಿಯೇ ಈಗ ರಿಲೀಸ್ ಶಿವಾನಿ ಹಾಡಿದೆ.
ಈ ಹಾಡನ್ನ ಡೈರೆಕ್ಟರ್ ಶಶಾಂಕ್ ಅವರೇ ಬರೆದಿದ್ದಾರೆ. ಈ ಗೀತೆಯಲ್ಲಿ ನಾಯಕನ ಇಂಟ್ರಡಕ್ಷನ್ ಕೂಡ ಇದೆ. ನಾಯಕಿ ಮೇಲೆ ನಾಯಕ ಲವ್ ಹೇಗಿದೆ ಅನ್ನೋದನ್ನ ಕೂಡ ಇದೇ ವಿಡಿಯೋ ಸಾಂಗ್ ಅಲ್ಲಿ ನೋಡಬಹುದಾಗಿದೆ.
ಕೌಸಲ್ಯಾ ಸುಪ್ರಜಾ ರಾಮ ಸಿನಿಮಾ ಹಾಡು ಸೂಪರ್
ಶಿವಾನಿ ಹಾಡನ್ನ ನಿಶಾನ್ ರೈ ಹಾಡಿದ್ದು, ಅರ್ಜುನ್ ಜನ್ಯ ಅವರ ಸಂಗೀತದಲ್ಲಿ ಈ ಹಾಡು ಮೂಡಿ ಬಂದಿದೆ. ವಿಶೇಷ ಸಾಲುಗಳ ಮೂಲಕ ಎಲ್ಲರನ್ನೂ ಈ ಗೀತೆ ಸೆಳೆಯುತ್ತಿದೆ. ಈಗಾಗಲೇ ಎಲ್ಲರಿಗೂ ಈ ಗೀತೆ ಇಷ್ಟ ಆಗೋ ರೀತಿಯಲ್ಲಿಯ ಮೂಡಿ ಬಂದಿದೆ.
ಸದ್ಯಕ್ಕೆ ಈ ಸಿನಿಮಾದ ಮಾಹಿತಿ ಈ ಹಾಡಿನ ಮೂಲಕ ಈಗ ಇಷ್ಟು ಹೊರ ಬಿದ್ದಿದೆ. ಹೋಗ್ತಾ ಹೋಗ್ತಾ ಡೈರೆಕ್ಟರು ಇನ್ನಷ್ಟು ಮಾಹಿತಿ ಬಿಡ್ತಾ ಹೋಗ್ತಾರೆ. ಅಲ್ಲಿವರೆಗೂ ಈ ಹಾಡು ಕೇಳಬಹುದು. ಮತ್ತೆ ಮತ್ತೆ ಕೇಳುವಂತೆನೂ ಈ ಹಾಡು ಫೀಲ್ ಆಗುತ್ತದೆ.
ರಿಯಲ್ ಮ್ಯಾನ್ ಡಾರ್ಲಿಂಗ್ ಕೃಷ್ಣನ ಹೊಸ ರೀತಿ ಸಿನಿಮಾ
ಇನ್ನೂ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ರಿಯಲ್ ಮ್ಯಾನ್ ರೀತಿಯಲ್ಲಿಯೇ ಕಾಣಿಸಿಕೊಂಡಿದ್ದಾರೆ. ಉದ್ದಗೆ ದಾಡಿ ಬಿಟ್ಟಿದ್ದಾರೆ. ಮೀಸೆ ತಿರುವಿಕೊಂಡೇ ಓಡಾಡ್ತಾರೆ. ಮುಖದಲ್ಲಿ ಆ ಸಿಟ್ಟುಕೂಡ ಕಾಣಿಸುತ್ತದೆ.
ಇದನ್ನೂ ಓದಿ: Rosy Movie: ಲೂಸ್ ಮಾದ ಯೋಗಿಗೆ ಡ್ಯಾನ್ಸ್ ಹೇಳಿಕೊಡಲು ಬರ್ತಿದ್ದಾರೆ ತಮಿಳಿನ ಸ್ಯಾಂಡಿ ಮಾಸ್ಟರ್
ನಿರ್ದೇಶಕ ಶಶಾಂಕ್ ಕಲ್ಪಿಸಿಕೊಂಡ ಪಾತ್ರವನ್ನ ಡಾರ್ಲಿಂಗ್ ಕೃಷ್ಣ ಇಲ್ಲಿ ಜೀವಿಸಿದಂತೆ ಕಾಣುತ್ತದೆ. ಒಟ್ಟಾರೆ, ಕೌಸಲ್ಯ ಸುಪ್ರಜಾ ರಾಮ ಬೇರೆ ಫೀಲ್ ಈಗಲೇ ಕೊಡ್ತಾ ಇದೆ ನೋಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ