ಸ್ಯಾಂಡಲ್ವುಡ್ ನಲ್ಲಿ ಡಾಲಿ (Daali Dhanjaya Produced Movie) ಧನಂಜಯ್ ಅಂತಲೇ ಚಿರಪರಿಚಿತರು. ತಮ್ಮ ಚಿತ್ರ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನೂ ಕಂಡಿದ್ದಾರೆ. ಆದರೂ ತಮ್ಮ ಆಸಕ್ತಿ ಮತ್ತು ಸಿನಿಮಾ ಪ್ರೀತಿಯನ್ನ ಎಂದೂ ಬಿಟ್ಟುಕೊಟ್ಟಿಲ್ಲ. (Orchestra Mysuru Film New Song Release) ಸಿನಿಮಾ ಪಯಣವನ್ನ ಸಾಗಿಸುತ್ತಲೇ ಬಂದಿದ್ದಾರೆ. ಸಾಹಿತ್ಯ ಅಭಿರುಚಿಯು ತುಂಬಾ ಚೆನ್ನಾಗಿಯೇ ಇದೆ. (Orchestra Mysuru Kannada New Movie) ಕವಿತೆ ಬರೆಯುವ ಆಸಕ್ತಿ ಹೀರೋಯಿಸಂನ ಸದ್ದು-ಗದ್ದಲದಲ್ಲಿ ಕಳೆದು ಹೋಗಿಲ್ಲ. ಡಾಲಿ ಮನಸ್ಸಿನ ಕವಿ ಇನ್ನೂ ಜೀವಂತವಾಗಿಯೇ ಇದ್ದಾನೆ. ಆ ಕವಿಯಿಂದಲೇ ಹೆಡ್ (Head Bush Kannada Movie) ಬುಷ್ ಚಿತ್ರದಲ್ಲೂ ಹಬೀಬಿ ಹಾಡು ಮೂಡಿ ಬಂದಿತ್ತು. ಅದನ್ನ ಮೀರಿ ಇನ್ನೂ ಒಂದು ಕವಿತೆ ಈಗ ಹಾಡಿನ ರೂಪ ಪಡೆದಿದೆ.
ಆರ್ಕೆಸ್ಟ್ರಾ ಮೈಸೂರು ಚಿತ್ರದಲ್ಲಿಯೇ ಅದು ಹಾಡಾಗಿಯೇ ಜನರ ಹೃದಯ ತಟ್ಟುತ್ತಿದೆ. ಇದರ ಸುತ್ತ ಒಂದಷ್ಟು ಮಾಹಿತಿ ಇಲ್ಲಿದೆ.
ನಟ ರಾಕ್ಷಸ ಬರೆದ ಹಾಡಿಗೆ ಹೃದಯವೇ ಕರಗುತ್ತಿದೆ!
ನಟ ರಾಕ್ಷಸ ಡಾಲಿ ಧನಂಜಯ್ ಬರೆದ ಹಾಡು ಹೃದಯ ತಟ್ಟುವಂತೇನೆ ಇದೆ. ನದಿಯೊಂದು ಅಂತಲೇ ಸಾಗೋ ಈ ಗೀತೆ ನಿಮ್ಮಲ್ಲಿ ಹೊಸ ಭಾವನೆ ಮೂಡಿಸುತ್ತದೆ. ಕೇಳುಗ ಹೃದಯದಲ್ಲಿ ಹೊಸದೊಂದು ಅಲೆಯನ್ನೂ ಎಬ್ಬಿಸೋ ಭರವಸೆಯನ್ನ ಮೊದಲ ಕೇಳುವಿಕೆಯಲ್ಲಿಯೇ ಮೂಡಿಸುವಂತಿದೆ.
ಡಾಲಿ ಧನಂಜಯ್ ಬರೆದ ಹಾಡುಗಳಲ್ಲಿ ಈ ಒಂದು ಗೀತೆ ವಿಶೇಷ ಭಾವನೆ ಮೂಡಿಸುತ್ತಿದೆ. ಮೊದಲೇ ಸಿನಿಮಾ ಕೂಡ ಆರ್ಕೆಸ್ಟ್ರಾ ಮೇಲೆನೆ ಇದ್ದಂತಿದೆ. ಇದರಲ್ಲಿ ಒಳ್ಳೆ ಹಾಡುಗಳನ್ನ ಬರೆದೆಯಿದ್ದರೇ, ಕಂಪೋಜ್ ಮಾಡದೇ ಇದ್ರೇ ಹೇಗೆ? ಹೌದು, ಆರ್ಕೆಸ್ಟ್ರಾ ಮೈಸೂರು ಚಿತ್ರದಲ್ಲಿ ಅತ್ಯುತ್ತಮ ಅನಿಸಬಹುದಾದ ಗೀತೆಯನ್ನ ನೋಡಬಹುದು ಅನ್ನೋ ಭರವಸೆ ಈಗಲೇ ಮೂಡಿದೆ.
ಹೃದಯದ ಪ್ರೀತಿಯು ಕವಿತೆಯಾಗಿ ಹೊರ ಹೊಮ್ಮಿದಂತಿದೆ
ಆರ್ಕೆಸ್ಟ್ರಾ ಮೈಸೂರು ಚಿತ್ರದ ನದಿಯೊಂದು ಹಾಡು ಎಲ್ಲ ಪ್ರೇಮಿಗಳಿಗೂ ಒಂದ್ ಒಳ್ಳೆ ಗೀತೆ ಆಗೋ ಹಾಗೆ ಕಾಣುತ್ತಿದೆ. ಹಾಡಿನಲ್ಲಿ ಒಳ್ಳೆ ಸಾಲುಗಳು ಇರೋದು ಖುಷಿ ಕೊಡುತ್ತದೆ. ಒಮ್ಮೆ ಇದನ್ನ ಕೇಳಿದ್ರೆ, ಮತ್ತೆ ಮತ್ತೆ ಕೇಳುವ ಹಾಗೇನೆ ಕಂಪೋಸ್ ಮಾಡಲಾಗಿದೆ.
ಮೆಲೋಡಿ ಗೀತೆಗಳಿಗೆ ಹೆಸರಾದ ರಘು ದೀಕ್ಷಿತ್ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಇವರ ಸಂಗೀತದಲ್ಲಿ ನದಿಯೊಂದು ಹಾಡು ವಿಶೇಷವಾಗಿಯೇ ಕಾಣುತ್ತಿದೆ. ಚಿತ್ರದ ಪ್ರಮುಖ ಘಟನೆಯನ್ನೇ ಇದು ತಿಳಿಸುವಂತೇನೂ ಇದರ ಚಿತ್ರೀಕರಣ ಆಗಿದೆ ಅನಿಸುತ್ತಿದೆ.
ಪೂರ್ಣಚಂದ್ರ ಅಭಿನಯದ ರಘು ದೀಕ್ಷಿತ್ ಸಂಗೀತ
ಆರ್ಕೆಸ್ಟ್ರಾ ಮೈಸೂರು ಚಿತ್ರದಲ್ಲಿ ಡಾಲಿ ಧನಂಜಯ್ ಗೆಳೆಯ ಪೂರ್ಣಚಂದ್ರ ಅಭಿನಯಿಸಿದ್ದಾರೆ. ಡಾಲಿಯ ಸಿನಿಮಾಗಳಲ್ಲಿ ಪೂರ್ಣ ಇದ್ದೇ ಇರುತ್ತಾರೆ. ಅದರಲ್ಲೂ ಈ ಸಿನಿಮಾದ ಹಿಂದೆ ಇನ್ನೂ ಒಂದು ವಿಶೇಷವೇ ಇದೆ. ಅದರ ಬಗ್ಗೆ ಹೇಳೋದಾದ್ರೆ, ನಟ ಡಾಲಿ ಧನಂಜಯ್ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ.
ಆರ್ಕೆಸ್ಟ್ರಾ ಮೈಸೂರು ಹೆಸರಿನ ಈ ಚಿತ್ರದಲ್ಲಿ ಈಗಾಗಲೇ ಮಾದಪ್ಪ ಅನ್ನೋ ಹಾಡು ಬಲು ಜೋರಾಗಿಯೇ ಸದ್ದು ಮಾಡಿದೆ. ರಘು ದೀಕ್ಷಿತ್, ನವೀನ್ ಸಜ್ಜು ಮತ್ತು ಡಾಲಿ ಧನಂಜಯ್ ಕೂಡ ಈ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಮಾದಪ್ಪ ಹಾಡಿನ ಬಳಿಕ ನದಿಯೊಂದು ಗೀತೆ ವೈಬ್ರೇಷನ್
ಆರ್ಕೆಸ್ಟ್ರಾ ಮೈಸೂರು ಚಿತ್ರದಲ್ಲಿ ಒಳ್ಳೆ ಒಳ್ಳೆ ಗೀತೆಗಳೆ ಇರೋವಂತೆ ಕಾಣುತ್ತಿದೆ. ಮಾದಪ್ಪ ಅನ್ನೋ ಹಾಡು ಈಗಾಗಲೇ ಹಿಟ್ ಆಗಿದೆ. ಈಗ ನದಿಯೊಂದು ಓಡಿ ಹೆಚ್ಚು ಗಮನ ಸೆಳೆಯುತ್ತಿದೆ. ಹಾಡಿನ ಮೂಲಕವೇ ಚಿತ್ರ ಪ್ರಚಾರನ್ನೂ ಸಿನಿಮಾ ಟೀಮ್ ಮಾಡುತ್ತಿದೆ.
ಈ ಹಿಂದೆ ಡಾಲಿ ಧನಂಜಯ್ ಚಿತ್ರದ ರಿಲೀಸ್ ಡೇಟ್ 12-01=23 ಅಂತಲೇ ಹೇಳಿ ಎಲ್ಲರ ತಲೆಯಲ್ಲಿ ಹುಳ ಬಿಟ್ಟಿದ್ದರು. ಒಂದ್ ಸ್ಕಿಟ್ ಅನ್ನೂ ಮಾಡಿದ್ದರು. ಅದು ಕೂಡ ಭಾರೀ ವೈರಲ್ ಆಗಿತ್ತು. ಅದೇ ರೀತಿ ನದಿಯೊಂದು ಓಡಿ ಹಾಡಿನ ಬಗ್ಗೆ ಹೇಳಲು, ನಟ ಪೂರ್ಣಚಂದ್ರ ಮತ್ತು ರಘು ದೀಕ್ಷಿತ್, ಗಿಟಾರ್ ಕಳೆದು ಹೋದ ಸ್ಕಿಟ್ ಮಾಡಿದ್ದರು.
ಮದುವೆ ಮನೆಯಲ್ಲಿ ಗೆಳೆಯ ಪೂರ್ಣ ಹಾಡಿದರು ಡಾಲಿ ಗೀತೆ
ಅದೇ ಹಾಡು ಈಗ ರಿಲೀಸ್ ಆಗಿದೆ. ಡಾಲಿ ಸಾಹಿತ್ಯ, ರಘು ದೀಕ್ಷಿತ್ ಸಂಗೀತ, ಸಿದ್ಧಾರ್ಥ ಬೆಲ್ಮನ್ನು ಹಾಡಿದ್ದಾರೆ. ನಾಯಕ ನಟ ಪೂರ್ಣಚಂದ್ರ ಮತ್ತು ನಾಯಕಿ ರಾಜ್ಲಕ್ಷ್ಮಿ ಮೇಲೆ ಈ ಹಾಡನ್ನ ಚಿತ್ರೀಕರಿಸಲಾಗಿದೆ. ಮದುವೆ ಮನೆಯಲ್ಲಿಯೇ ಚಿತ್ರದ ನಾಯಕ ಪೂರ್ಣಚಂದ್ರ ಈ ಗೀತೆಯನ್ನ ಹಾಡಿದ್ದಾರೆ. ಈ ಹಾಡಿನ ಸಾಲುಗಳು ಹಿಂಗಿವೆ. ಓದಿ, ನೋಡಿ, ಹಾಡಿ.
ನದಿಯೊಂದು ಓಡಿ ಸೇರಿ ತಾ ಸಾಗರ
ಅಲೆಯೊಂದು ಮೂಡಿ ಸೇರಿ ತಾ ತೀರವ
ಬೆಸೆದ ಸಾರ್ಥತೆಯ ಬಂಧ ಅನುರಾಗವು
ಹೊಸೆದ ಸಂಬಂಧ ಸುಧೆಯ ಬಂಧ ಅನುರಾಗವು
ನದಿಯೊಂದು ಓಡಿ ಸೇರಿ ತಾ ಸಾಗರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ