ಕನ್ನಡದ ನಾಯಕ ನಟ ಒಂದೇ ಚಿತ್ರಕ್ಕೆ 8 ಹಾಡುಗಳನ್ನ ಬರೆದಿದ್ದಾರೆ. ನಾಯಕ ನಟರು ಹೊಸ ಹೊಸ (Actor Daali Dhananjaya) ಹಾಡುಗಳಿಗೆ ಡ್ಯಾನ್ಸ್ ಮಾಡೋದು ಗೊತ್ತಿದೆ. ಅಭಿಮಾನಿಗಳ ಅಪೇಕ್ಷೆ ಮೇರೆಗೆ ಸ್ಟೇಜ್ ಮೇಲೆ ಹಾಡುಗಳನ್ನ ಹಾಡೋದು ಇದೆ. ಆದರೆ (Daali Dhananjaya) ಹಾಡುಗಳನ್ನ ಬರೆಯೋಕೆ ಸ್ಟಾರ್ಗಳಿಗೆ ಅಷ್ಟೊಂದು ಟೈಮ್ ಎಲ್ಲಿ ಇರುತ್ತದೆಯೇ ಹೇಳಿ.? ಈ ಮಾತೇನೋ ನಿಜ, ಆದರೆ ಕನ್ನಡದ (Special Subject Movie) ನಾಯಕ ನಟರೊಬ್ಬರು 8 ಹಾಡುಗಳನ್ನ ಬರೆದಿರೋದಂತೂ ಸತ್ಯ. ಗಾಂಧಿನಗರದಲ್ಲಿ ಸದ್ಯಕ್ಕೆ ಇದೇ (Real Life incident) ಟಾಕ್ ಇದೆ. ಇಷ್ಟೊಂದು ಹಾಡುಗಳು ಇರೋ ಈ ಸಿನಿಮಾ ಸಂಗೀತಮಯವಾಗಿಯೇ ಇದೆ. ಹಾಗೇನೆ ಈಗ ರಿಲೀಸ್ಗೂ ರೆಡಿ ಇದೆ. ಈ ಸಿನಿಮಾ ಬಗೆಗಿನ ಇನ್ನಷ್ಟು ಇಂಟ್ರಸ್ಟಿಂಗ್ ಮ್ಯಾಟರ್ ಇಲ್ಲಿದೆ ಓದಿ.
ಒಂದೇ ಚಿತ್ರ ಬರೋಬ್ಬರಿ 8 ಹಾಡು-ಬರೆದವರಾರು ಗೊತ್ತೇ?
ಕನ್ನಡದಲ್ಲಿ ಒಂದು ಸಿನಿಮಾ ಬರ್ತಿದೆ. ಇದು ಆರ್ಕೆಸ್ಟ್ರಾ ಅನ್ನೇ ಆಧರಿಸಿದೆ. ರಿಯಲ್ ಘಟನೆಗಳೇ ಇಡೀ ಚಿತ್ರಕ್ಕೆ ಜೀವಾಳ. ಎಲ್ಲವನ್ನೂ ಸೇರಿಸಿಕೊಂಡೇ ಈ ಚಿತ್ರವನ್ನ ಮೈಸೂರಿನ ಗೆಳೆಯರು ಚಿತ್ರ ಮಾಡಿದ್ದಾರೆ. ಸದ್ಯಕ್ಕೆ ಈ ಚಿತ್ರ ತನ್ನ ವಿಶೇಷ ಕಂಟೆಂಟ್ ನಿಂದಲೇ ಗಮನ ಸೆಳೆಯಲು ಆರಂಭಿಸಿದೆ.
ಕನ್ನಡದಲ್ಲಿ ಇಲ್ಲಿವರೆಗೂ ಈ ಒಂದು ವಿಷಯದ ಮೇಲೆ ಸಿನಿಮಾ ಬಂದಿಲ್ಲ. ರಿಯಲ್ ಲೈಫ್ ನಲ್ಲಿ ಇಲ್ಲಿಂದಲೇ ಅದೆಷ್ಟೋ ಕನ್ನಡದ ಸಂಗೀತ ನಿರ್ದೇಶಕರು, ಗಾಯಕರು, ಮ್ಯೂಜಿಸಿಯನ್ಸ್ ಬಂದಿದ್ದಾರೆ. ಆದರೆ ಯಾರೂ ಈ ಒಂದು ವಿಷಯದ ಮೇಲೆ ಚಿತ್ರ ಮಾಡೋಕೆ ಧೈರ್ಯ ಮಾಡಿರಲಿಲ್ಲ.
ಆರ್ಕೆಸ್ಟ್ರಾ ಗಾಯಕನ ಮೇಲೆ ಕನ್ನಡ ಸಿನಿಮಾ
ಕನ್ನಡದ ಆರ್ಕೆಸ್ಟ್ರಾ ಮೈಸೂರು ಸಿನಿಮಾ ಹೆಚ್ಚು ಗಮನ ಸೆಳೆಯುತ್ತಿದೆ. ಈ ಚಿತ್ರದಲ್ಲಿ ಹೊಸಬರೇ ಇರೋದು. ನುರಿತ ಕಲಾವಿದರೂ ಇದ್ದಾರೆ. ರಘು ದೀಕ್ಷಿತ್ ಇಡೀ ಚಿತ್ರಕ್ಕೆ ಅದ್ಭುತವಾದ ಸಂಗೀತ ಕೊಟ್ಟಿದ್ದಾರೆ. ಇಂತಹ ಈ ಚಿತ್ರದ ಕಥೆ ವಿಶೇಷವಾಗಿಯೇ ಇದೆ.
ಆರ್ಕೆಸ್ಟ್ರಾ ಮೈಸೂರು ಒಂದು ವಿಶೇಷ ಚಿತ್ರವೇ ಆಗಿದೆ. ಇಲ್ಲಿ ಆರ್ಕೆಸ್ಟ್ರಾದಲ್ಲಿ ಹಾಡಲು ಒಂದು ಅವಕಾಶಕ್ಕಾಗಿ ಪರದಾಡೋ ಯುವಕನ ಕಥೆ ಇದೆ. ತನ್ನದೇ ಒಂದು ಆರ್ಕೆಸ್ಟ್ರಾ ಟೀಮ್ ಕಟ್ಟೋಕೆ ನಡೆಸೋ ಹೋರಾಟ ಇದೆ. ಹೀಗೆ ಹತ್ತು ಹಲವು ವಿಷಯಗಳು ಈ ಒಂದು ಚಿತ್ರದಲ್ಲಿವೆ.
ಆರ್ಕೆಸ್ಟ್ರಾ ಮೈಸೂರು ರಿಯಲ್ ಘಟನೆಗಳ ಸಿನಿಮಾ
ಸುನಿಲ್ ಮೈಸೂರು ಈ ಒಂದು ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ. ಈ ಮೂಲಕ ತಮ್ಮಲ್ಲಿದ್ದ ಪ್ರತಿಭೆಯನ್ನೂ ಇವರು ಇಲ್ಲಿ ತೋರಿದ್ದಾರೆ. ಆದರೆ ಈ ಚಿತ್ರದಲ್ಲಿರೋ ಹಾಡುಗಳನ್ನ ಬರೆದವ್ರು ವಿಶೇಷ ವ್ಯಕ್ತಿನೇ ಆಗಿದ್ದಾರೆ.
ಈ ಚಿತ್ರದಲ್ಲಿ ಇರೋ ಅಷ್ಟೂ ಹಾಡುಗಳನ್ನ ಒಬ್ಬರೇ ಬರೆದಿದ್ದಾರೆ. ಈಗಾಗಲೇ ಒಂದು ಹಾಡು ಜನರ ಮನಸಿನಲ್ಲಿ ಜಾಗ ಮಾಡಿಕೊಂಡಿದೆ. ಅದನ್ನ ಕೇಳಿದವ್ರು ವಾರೆ ವ್ಹಾ ಅಂತಲೂ ಹೇಳುತ್ತಿದ್ದಾರೆ. ಅದ್ಹಾಗೆ ಆ ಗೀತ ಬರೆದವ್ರು ಯಾರು? ಇಲ್ಲಿದೆ ಓದಿ.
ಡಾಲಿ ಧನಂಜಯ್ 8 ಹಾಡುಗಳನ್ನ ಬರೆದ ಕನ್ನಡದ ಹೀರೋ
ಡಾಲಿ ಧನಂಜಯ್ ಒಳ್ಳೆ ಹಾಡುಗಳನ್ನ ಬರೆದಿದ್ದಾರೆ. ಈ ಚಿತ್ರದ ಹಾಡುಗಳನ್ನ ಬರೆಯೋಕೆ ಇಷ್ಟೊಂದು ಟೈಮ್ ಡಾಲಿಗೆ ಯಾವಾಗ ಸಿಕ್ತು ಅಂತ ಕಳಬೇಡಿ, ಈ ಹಾಡುಗಳನ್ನ ಧನಂಜಯ್ ಡಾಲಿ ಆಗೋ ಮುಂಚೇನೆ ಬರೆದಿದ್ದರು. ಅದು ಈಗ ಹಾಡಿನ ರೂಪ ಪಡೆದಿದೆ.
ಧನಂಜಯ್ ಇವುಗಳಲ್ಲಿ ಹೆಚ್ಚು ಕಡಿಮೆ 7 ಹಾಡುಗಳನ್ನ ಮೊದಲೇ ಬರೆದಿದ್ರು. ಆದರೆ ಇದರಲ್ಲಿ ಬರೋ ಗೆಲುವನ್ನ ಸಂಭ್ರಮಿಸೋ ಹಾಡನ್ನ ಪಾತ್ರ ಬರೆದಿರಲಿಲ್ಲ. ಕಾರಣ, ಧನಂಜಯ್ ಈ ಹಾಡುಗಳನ್ನ ಬರೆಯೋ ಟೈಮ್ ಅಲ್ಲಿ ಗೆಲುವ ಸಿಕ್ಕಿರಲಿಲ್ಲ. ಗೆಲುವಿನ ಬಗ್ಗೆ ರಿಯಲ್ ಫೀಲ್ ಕೂಡ ಇರಲಿಲ್ಲ.
ಟಗರು ಸಕ್ಸಸ್ ಬಳಿಕವೇ ಗೆಲುವು ಸಂಭ್ರಮಿಸೋ ಹಾಡು ರೆಡಿ
ಧನಂಜಯ್ ಗೆಲುವಿಗಿಂತಲೂ ಸೋಲನ್ನೆ ಹೆಚ್ಚು ನೋಡಿದ್ದಾರೆ. ಆದರೆ ಟಗರು ಚಿತ್ರ ಈ ವಿಷಯದಲ್ಲಿ ಮೋಸ ಮಾಡಲಿಲ್ಲ. ಡಾಲಿ ಅನ್ನೋ ಪಾತ್ರದ ಮೂಲಕ ಧನಂಜಯ್ ಇಡೀ ನಾಡಿಗೆ ಪರಿಚಯ ಆದ್ರು. ಗೆಲುವು ಅಂತ ಈ ಒಂದು ಚಿತ್ರದಲ್ಲಿ ಡಾಲಿ ಧನಂಜಯ್ ನೋಡಿದರು.
ಟಗರು ಸಿನಿಮಾ ಕೊಟ್ಟ ಸಕ್ಸಸ್ ರುಚಿ ಧನಂಜಯ್ಗೆ ರಿಯಲ್ ಗೆಲುವಿನ ಫೀಲ್ ಕೊಟ್ಟಿತ್ತು. ಆ ಕೂಡಲೇ ಧನಂಜಯ್ ಅದನ್ನ ಎಂಜಾಯ್ ಮಾಡಿದರು. ಆರ್ಕೆಸ್ಟ್ರಾ ಮೈಸೂರು ಚಿತ್ರದ ಗೆಲುವಿನ ಸಂಭ್ರಮದ ಹಾಡನ್ನೂ ಬರೆದುಕೊಟ್ಟೇ ಬಿಟ್ಟರು.
ಇದನ್ನೂ ಓದಿ: Shrirasthu Shubhamasthu: ಸೊಸೆ ಪ್ರಾಣ ಉಳಿಸುವ ಜವಾಬ್ದಾರಿ ಮಾಧವನ ಮೇಲೆ, ಅವಿನಾಶ್ ಕೆಂಡಾಮಂಡಲ!
ಡಾಲಿ ಧನಂಜಯ 8 ಹಾಡುಗಳನ್ನ ಬರೆದ ಈ ಸಿನಿಮಾ ಇದೇ ತಿಂಗಳು 12 ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದ ವಿಷಯದಲ್ಲಿ ಕೊಂಚ ಜಾಸ್ತಿನೇ ಪ್ರೀತಿ ಇಟ್ಟುಕೊಂಡಿರೋ ಡಾಲಿ ಧನಂಜಯ್, ಈ ಚಿತ್ರವನ್ನ ತಮ್ಮದೇ ರೀತಿಯಲ್ಲಿಯೇ ಪ್ರಮೋಟ್ ಕೂಡ ಮಾಡುತ್ತಿದ್ದಾರೆ.
ಇನ್ನುಳಿದಂತೆ ಈ ಸಿನಿಮಾದಲ್ಲಿ ಡಾಲಿ ಸ್ನೇಹಿತ ಪೂರ್ಣಚಂದ್ರ ಅಭಿನಯಿಸಿದ್ದಾರೆ. ಡೈರೆಕ್ಟರ್ ಸುನಿಲ್ ಮೈಸೂರು ಕೂಡ ಡಾಲಿಯ ಸ್ನೇಹತರಲ್ಲಿ ಒಬ್ಬರಾಗಿದ್ದಾರೆ. ಹೀಗೆ ಎಲ್ಲರೂ ಸೇರಿ ಮಾಡಿರೋ ಈ ಚಿತ್ರ ಗೆಲುವಿನ ಭರವಸೆಯೊಂದಿಗೆ ಬೆಳ್ಳಿ ತೆರೆಗೆ ಬರಲು ರೆಡಿ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ