ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಆಪ್ತಮಿತ್ರರು (Firends) ಸುಮಾರು ಜನ ಇದ್ದಾರೆ. ಈ ಪೈಕಿ ಅಂಬಿ ಮತ್ತು ವಿಷ್ಣು ಹೆಸರು ಮೊದಲು ಬರುತ್ತದೆ. ಆಪ್ತತೆಯ ಉದಾಹರಣೆಗೆ ಇವರ ಹೆಸರನ್ನೆ ತೆಗೆದುಕೊಳ್ಳುತ್ತಾರೆ. ಇವರ ಹಾಗೆ ಇಲ್ಲಿ ಅನೇಕರಿದ್ದಾರೆ. ಆ ಲೆಕ್ಕದಲ್ಲಿ ಆಪ್ತಮಿತ್ರರು ಯಾರು ಗೊತ್ತೇ? ಅದು ಬೇರೆ ಯಾರೂ ಅಲ್ಲ, ಡಾಲಿ ಧನಂಜಯ್ (Daali Dhananjaya) ಮತ್ತು ವಸಿಷ್ಠ ಸಿಂಹ ಅವರೇ ಆಗಿದ್ದಾರೆ. ಈ ಮಿತ್ರರು ಒಟ್ಟಿಗೆ ಸಿನಿಮಾರಂಗದಲ್ಲಿ ಹೊಳೆಯುತ್ತಿದ್ದಾರೆ. ವಿಶೇಷವಾಗಿ ಇಬ್ಬರೂ (Cinema) ಸಿನಿಮಾಗೆ ಬರೋ ಮುಂಚೇನೆ ಸಾಫ್ಟ್ವೇರ್ ಫೀಲ್ಡ್ ನಲ್ಲಿಯೇ ಇದ್ದೋರು. ಹಂಗೆ ಟಗರು ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡು ತಮ್ಮ ಸ್ನೇಹದ ಆ ಗಟ್ಟಿತನಕ್ಕೆ ಸಾಕ್ಷಿಯಾದರು. ಇಬ್ಬರು ನಿಭಾಯಿಸಿದ್ದ ಪಾತ್ರಗಳೂ ಒಟ್ಟೊಟ್ಟಿಗೆ ಹಿಟ್ ಆದವು.
ಅದೇ ಈ ಆಪ್ತಮಿತ್ರರು ಇಲ್ಲಿವರೆಗೂ (Bachelor) ಬ್ಯಾಚುಲರ್ ಆಗಿಯೇ ಇದ್ದರು. ಆದರೆS ಈಗ ಈ ಮಿತ್ರರಲ್ಲಿ ವಸಿಷ್ಠ ಸಿಂಹ ಎಂಗೇಜ್ ಆಗಿದ್ದಾರೆ.
ಡಾಲಿ-ಚಿಟ್ಟೆ ಮಸ್ತ್ ದೋಸ್ತಿ-ಇಂಡಸ್ಟ್ರೀಯಲಿ ಇಬ್ಬರು ಹಿಟ್!
ಟಗರು ಚಿತ್ರದ ಮೂಲಕ ಈ ಗೆಳೆಯರು ಹೆಚ್ಚು ಗಮನ ಸೆಳೆದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಈ ಚಿತ್ರದಲ್ಲಿ ಡಾಲಿ ಮತ್ತು ಚಿಟ್ಟೆ ಅನ್ನೋ ಎರಡು ಪಾತ್ರವನ್ನ ಮಾಡಿದ್ದರು. ಒಟ್ಟೊಟ್ಟಿಗೇನೆ ಗೆದ್ದು ಬೀಗಿದರು. ಒಟ್ಟಿಗೇನೆ ಈ ಸ್ನೇಹಿತರು ಈಗ ಟಾಪ್ ಅಲ್ಲಿಯೇ ಇದ್ದಾರೆ. ಬೆಳೆಯುತ್ತಲೇ ಇದ್ದಾರೆ.
ಡಾಲಿ ಧನಂಜಯ್ ಸಿನಿಮಾ ನಿರ್ಮಾಣದತ್ತ ಕಾಲಿಟ್ಟಿದ್ದಾರೆ. ವಸಿಷ್ಠ ಸಿಂಹ ತಮ್ಮ ವಿಶೇಷ ಕಂಠಸಿರಿಯ ಮೂಲಕ ವಿಶೇಷ ಮ್ಯಾನರಿಸಂ ಮೂಲಕ ಹೊಸ ಹೊಸ ಪಾತ್ರಗಳಿಗೆ ಜೀವ ತುಂಬುತ್ತಲೇ ಇದ್ದಾರೆ. ಮೊನ್ನೆ ಮೊನ್ನೆ ಬಂದ ಹೆಡ್ ಬುಷ್ ಚಿತ್ರದಲ್ಲೂ ಕೋತ್ವಾಲ್ ರಾಮಚಂದ್ರ ಪಾತ್ರ ಮಾಡೋ ಮೂಲಕ ಎಲ್ಲರ ಗಮನ ಸೆಳೆದರು.
ಬ್ಯಾಚುಲರ್ ದೋಸ್ತಿಗಳಲ್ಲಿ ವಸಿಷ್ಠ ಸಿಂಹ ಎಂಗೇಜ್!
ವಸಿಷ್ಠ ಸಿಂಹ ಈಗ ಎಂಗೇಜ್ ಆಗಿದ್ದಾರೆ. ಬಹು ದಿನಗಳ ಗೆಳತಿ ನಟಿ ಹರಿಪ್ರಿಯಾ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮೊನ್ನೆಯಷ್ಟೆ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಸರಳವಾಗಿಯೇ ನಿಶ್ಚಿತಾರ್ಥ ಮುಗಿಸಿಕೊಂಡಿದ್ದಾರೆ.
ಅದನ್ನ ಈಗ ಮಾಧ್ಯಮದ ಮೂಲಕ ಎಲ್ಲರಿಗೂ ಹೇಳಿಕೊಂಡಿದ್ದಾರೆ. ಆದರೆ ಮದುವೆ ವಿಷಯವನ್ನ ಇನ್ನೂ ತಿಳಿಸಿಲ್ಲ. ಆದರೂ, ಮುಂದಿನ ವರ್ಷ ಫೆಬ್ರವರಿ ಇಲ್ಲವೇ ಮಾರ್ಚ್ ತಿಂಗಳಲ್ಲಿಯೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ ಅನ್ನೋ ಮಾಹಿತಿ ಇದೆ.
ನಮ್ಮ ದೋಸ್ತ್ ನಮ್ಮ ಕೈಗೆ ಸಿಗ್ತಿಲ್ಲ-ನಮಗೂ ಒಂಚೂರು ಬಿಟ್ಟುಕೊಡಿ. ಹೀಗೆ ಡಾಲಿ ಧನಂಜಯ್ ಹೇಳಿಕೊಂಡಿದ್ದಾರೆ. ನಿಜ, ಡಾಲಿ ಹೇಳುವಂತೆ, ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಅವರ ಎಂಗೇಜ್ಮೆಂಟ್ ಬಗ್ಗೆ ನನಗೆ ಗೊತ್ತೇ ಇರಲಿಲ್ಲ ಅಂತಲೇ ಡಾಲಿ ಹೇಳಿಕೊಂಡಿದ್ದಾರೆ.
"Congrats dosta, ನೂರು ಕಾಲ ಚೆನ್ನಾಗಿ ಬಾಳಿ. ಅವನು ನಮ್ಮ ಕೈಗೆ ಸಿಕ್ತಾ ಇಲ್ಲ, ಅವಾಗವಾಗ ನಮಗು ಸ್ವಲ್ಪ ಬಿಟ್ಟು ಕೊಡಿ" ಎಂದು ಡಾಲಿ ಧನಂಜಯ್ ಟ್ವಿಟರ್ ಮೂಲಕ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಅವರಿಗೆ ಶುಭ ಹಾರೈಸಿದ್ದಾರೆ.
ದೋಸ್ತ ಎಂಗೇಜ್ ಆದ್ರು ಡಾಲಿ ನಿಮ್ಮದು ಯಾವಾಗ?
ವಸಿಷ್ಠ ಸಿಂಹ ನಟಿ ಹರಿಪ್ರಿಯಾ ಜೊತೆಗೆ ಎಂಗೇಜ್ ಆಗಿದ್ದೇ ತಡ, ಡಾಲಿ ಧನಂಜಯ್ಗೂ ಈಗ ಹಲವು ಪ್ರಶ್ನೆಗಳು ಎದುರಾಗುತ್ತಿವೆ. ನಿಮ್ಮ ದೋಸ್ತ್ ಮದ್ವೆ ಆಗುತ್ತಿದ್ದಾರೆ. ನಿಮ್ಮ ಮದುವೆ ಯಾವಾಗ? ಹುಡುಗಿ ಯಾರು? ಹೀಗೆ ಹಲವು ಪ್ರಶ್ನೆಗಳು ಕೇಳಲಾಗುತ್ತಿದೆ.
ವಸಿಷ್ಠ ಸಿಂಹ ಎಂಗೇಜ್ ಆದ ಸುದ್ದಿ ಹೊರ ಬಿದ್ಮೇಲೆ ನಾನು ಇಂತಹ ಪ್ರಶ್ನೆಗಳನ್ನ ಹೆಚ್ಚು ಕೇಳಲ್ಪಡುತ್ತಿದ್ದೇನೆ ಎಂದು ಡಾಲಿ ಧನಂಜಯ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Ambareesh's Favorite Biryani: ಅಂಬಿಗೆ ಮೈಸೂರಿನ ಆ ಹೋಟೆಲ್ ಬಿರಿಯಾನಿ ಬಲು ಇಷ್ಟ! ನೀವೂ ಇಲ್ಲಿ ಟ್ರೈ ಮಾಡಿದ್ದೀರಾ?
ಡಾಲಿ ಧನಂಜಯ್ ಮತ್ತು ವಸಿಷ್ಠ ಸಿಂಹ ಅವರ ದೋಸ್ತಿ ಗಟ್ಟಿಯಾಗಿಯೇ ಇದೆ. ಗೆಳೆಯ ಸಿಂಹನಿಗೆ ಪ್ರೀತಿಯಿಂದಲೇ ಡಾಲಿ ಶುಭ ಹಾರೈಸಿದ್ದಾರೆ. ಗೆಳೆಯ ಅಂದ್ಮೇಲೆ ಸಣ್ಣ ಪುಟ್ಟ ಮುನಿಸು ಇರುತ್ತದೆ. ಅದಕ್ಕೇನೆ ನಮ್ಮ ದೋಸ್ತ ನಮ್ಮ ಕೈಗೆ ಸಿಗ್ತಿಲ್ಲ. ನಮಗೂ ಸ್ವಲ್ಪ ಆಗಾಗ ಬಿಟ್ಟು ಕೊಡಿ ಅಂತಲೇ ತಮಾಷೆಯಾಗಿಯೇ ಹರಿಪ್ರಿಯಾ ಅವರಿಗೆ ಡಾಲಿ ಕೇಳಿಕೊಂಡಿದ್ದಾರೆ ಅಷ್ಟೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ