ನಟ ರಾಕ್ಷಸ ಡಾಲಿ (Daali Dhananjaya) ಧನಂಜಯ್ ನಿನ್ನೆಯಿಂದಲೇ ಎಲ್ಲರ ತಲೆಗೂ ಹುಳ ಬಿಟ್ಟಿದ್ದಾರೆ. 12-1 = 23 ಅಂತಲೇ ಹೇಳಿಕೊಂಡು ಒಂದು ವಿಡಿಯೋ ಮಾಡಿದ್ದಾರೆ. ಈ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದರೆ ಅಸಲಿಗೆ ಈ ವಿಡಿಯೋದ ಉದ್ದೇಶ ಮತ್ತು 12- 1 = 23 ಅಂದ್ರೆ ಏನೂ ಅನ್ನೋ (Dhananjay new movie trailer) ಕುತೂಹಲ ಹೆಚ್ಚಾಗಿದೆ. ಇದು ಒಂದು ವಿಶೇಷ ಡೇಟ್ ಅನ್ನೋದೇ ಈಗೀನ ವಿಚಾರ. ಅಂದ್ರೆ ಡಾಲಿ ಧನಂಜಯ್ ಮದುವೆ (marriage) ಡೇಟಾ? ಸಿನಿಮಾ ರಿಲೀಸ್ ಡೇಟಾ? ಇಲ್ವೇ ಹೊಸ ಸಿನಿಮಾ ಸೆಟ್ಟೇರ್ತಿರೋ ಡೇಟಾ? ಈ ಎಲ್ಲ ಕುತೂಹಲದ ಪ್ರಶ್ನೆಗೆ ನಮ್ಮ ಬಳಿ ಉತ್ತರ ಇದೆ. ಅದನ್ನ ಇಲ್ಲಿ ಬರೆದಿದ್ದೇವೆ ಓದಿ.
ಡಾಲಿ ಧನಂಜಯ್ 12-1=23 ಹಿಂದಿನ ರಹಸ್ಯ ಏನು?
ಡಾಲಿ ಧನಂಜಯ್ ತಲೆಕೆಡಿಸಿಕೊಂಡು ಈ ಲೆಕ್ಕ ಮಾಡಿದ್ದಾರೆ. ಮೇಲ್ನೋಟಕ್ಕೆ ಇದು ಉಲ್ಟಾ-ಪಲ್ಟಾ ಲೆಕ್ಕವೇ ಆಗಿದೆ. ಹೇಗೆ ಅಳೆದು ತೂಗಿ ಮಾಡಿದ್ರೂ ಅಷ್ಟೆ. 23 ಬರೋದೇ ಇಲ್ಲ. ಆದರೂ ಸಹ ಈ ಲೆಕ್ಕದ ವಿಡಿಯೋ ಮಾಡಿ ಡಾಲಿ ಧನಂಜಯ್ ತಮ್ಮ ಅಭಿಮಾನಿಗಳಿಗೆ ಒಂದು ಕುತೂಹಲ ಮೂಡಿಸಿದ್ದಾರೆ.
ಅಂದ್ಹಾಗೆ ಈ 12-1=23 ಅನ್ನೋದು ಏನೂ? ಇದರ ಹಿಂದೆ ಅಸಲಿಗೆ ಇರೋದ್ರಾದ್ರು ಏನೂ.? ಈ ಎಲ್ಲ ಲೆಕ್ಕದ ಹಿಂದಿದೆ ಒಂದು ಚಿತ್ರದ ಡೇಟ್. ಹೌದು, ಆ ಚಿತ್ರದ ಹೆಸರು ಏನೂ ಅನ್ನೋದನ್ನ ಹೇಳ್ತಿನಿ ನೋಡಿ.
12-1=23 ಅನ್ನೋದು ಒಂದು ಲೆಕ್ಕಾಚಾರದ ಪಕ್ಕಾ ಡೇಟ್!
ಹೌದು, ಡಾಲಿ ಧನಂಜಯ್ ಅಭಿನಯದ ಒಂದು ಚಿತ್ರ ಈಗಾಗಲೇ ಸೆಟ್ಟೇರಿದೆ. ಸುನಿಲ್ ಮೈಸೂರು ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ. ವಿಶೇಷವೆಂದ್ರೆ ಈ ಚಿತ್ರದಲ್ಲಿರೋ ಒಂದು ಹಾಡು ಹಿಟ್ ಆಗಿದೆ. ಮಾದಪ್ಪ ಅನ್ನೋ ಆ ಗೀತೆ ಸೂಪರ್ ಆಗಿಯೇ ಸೆಳೆಯುತ್ತಲೇ ಇದೆ.
ಮಾದಪ್ಪ ಹಾಡಿನಲ್ಲಿ ರಘು ದೀಕ್ಷಿತ್ ಅಭಿನಯ
ಮಾದಪ್ಪ ಹೆಸರಿನ ಈ ಗೀತೆಯಲ್ಲಿ ಸಂಗೀತ ನಿರ್ದೇಶಕರಾದ ರಘು ದೀಕ್ಷಿತ್, ನವೀನ್ ಸಜ್ಜು ಬಾದಲ್ ನಂಜುಂಡಸ್ವಾಮಿ ಇವರೆಲ್ಲ ಅಭಿನಯಿಸಿದ್ದಾರೆ.
ಡಾಲಿ ಧನಂಜಯ್ ನಿರ್ಮಾಣದ ಸಿನಿಮಾ ಪ್ರಮೋಷನ್
ಡಾಲಿ ಧನಂಜಯ್ ಅವರಿಗೆ ಚಿತ್ರ ಪ್ರಚಾರದ ಪಕ್ಕಾ ಐಡಿಯಾ ಸಿಕ್ಕಿದೆ. ತಮ್ಮ ಚಿತ್ರವನ್ನ ಹೇಗೆ ಪ್ರಮೋಟ್ ಮಾಡ್ಬೇಕು ಅನ್ನೋದು ಕೂಡ ತಿಳಿದಿದೆ. ಈ ಹಿನ್ನೆಲೆಯಲ್ಲಿಯೇ ಡಾಲಿ ಧನಂಜಯ್ ತಮ್ಮ ನಿರ್ಮಾಣದ ಆರ್ಕೆಸ್ಟ್ರಾ ಮೈಸೂರು ಚಿತ್ರದ ರಿಲೀಸ್ ದಿನವನ್ನ ಇಂಟ್ರಸ್ಟಿಂಗ್ ಆಗಿಯೇ ಪ್ರಮೋಟ್ ಮಾಡಿದ್ದಾರೆ.
12-01-2023 ಕ್ಕೆ ಆರ್ಕೆಸ್ಟ್ರಾ ಮೈಸೂರು ರಿಲೀಸ್
ಹೌದು, ಆರ್ಕೆಸ್ಟ್ರಾ ಮೈಸೂರು ಸಿನಿಮಾ ಇದೇ ದಿನ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಡಾಲಿ ಧನಂಜಯ್ ತಮ್ಮ ಚಿತ್ರದ ರಿಲೀಸ್ ದಿನವನ್ನ ಈ ರೀತಿ ವೀಡಿಯೋ ಮೂಲಕ ಸೀಕ್ರೆಟ್ ಆಗಿಯೇ ರಿಲೀಸ್ ಮಾಡಿದ್ದಾರೆ.
ಡಾಲಿಯ ಸಖತ್ ಪ್ರಚಾರ-ಸಖತ್ ಕ್ಯೂರಿಯೋಸಿಟಿ
ಇನ್ನುಳಿದಂತೆ ಸಿನಿಮಾದ ಇತರ ಕೆಲಸಗಳು ಮುಗಿದಿವೆ. ಹಾಗೇನೆ ಪ್ರಚಾರವನ್ನ ಡಾಲಿ ಧನಂಜಯ್ ಶುರು ಮಾಡಿದ್ದಾರೆ. ಒಂದೇ ವೀಡಿಯೋ ಮೂಲಕವೇ ಈಗ ಭಾರೀ ಕ್ಯೂರಿಯೋಸಿಟಿ ಕೂಡ ಹುಟ್ಟಿಕೊಂಡಿದೆ.
ಇದನ್ನೂ ಓದಿ: Priyanka Upendra: ರಾಜಕೀಯಕ್ಕೆ ಕಾಲಿಟ್ಟೇ ಬಿಟ್ರು ಪ್ರಿಯಾಂಕಾ ಉಪೇಂದ್ರ! ಯಾವ ಪಕ್ಷ ಗೊತ್ತೇ?
ಆರ್ಕೆಸ್ಟ್ರಾ ಮೈಸೂರು ಚಿತ್ರದಲ್ಲಿ ಡಾಲಿ ಪಾತ್ರವೇನು?
ಇನ್ನು ಡಾಲಿ ಧನಂಜಯ್ ತಮ್ಮ ಈ ಚಿತ್ರದ ಮಾದಪ್ಪ ಹಾಡಿನ ಮೂಲಕ ಈಗಾಗಲೇ ಗಮನ ಸೆಳೆದಿದ್ದಾರೆ. ಗಾಯಕರೆಲ್ಲ ಸೇರಿ ಅಭಿನಯಿಸಿದ್ದ ಈ ಗೀತೆ ಸಾಕಷ್ಟು ಗಮನ ಸೆಳೆದಿದೆ. ಚಿತ್ರದಲ್ಲಿ ಧನಂಜಯ್ ಮಾದಪ್ಪನ ಪಾತ್ರವನ್ನೆ ಮಾಡಿದ್ದಾರಾ ಅನ್ನೋ ಕುತೂಹಲದ ಪ್ರಶ್ನೆ ಕೂಡ ಮೂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ