ಸ್ಯಾಂಡಲ್ವುಡ್ ನಲ್ಲಿ ನಿಜಕ್ಕೂ (Nepotism) ನೆಪೋಟಿಸಂ ಇದೀಯಾ? ಹಾಗೆ ಅದಕ್ಕೆ ವಿರೋಧ ಆಗಿದ್ದರೇ, ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್, ಹೀಗ ಇನ್ನೂ ಅನೇಕ ಸ್ಟಾರ್ (Star Actor) ನಟರು ಕನ್ನಡಕ್ಕೆ ಬರ್ತಾ ಇದ್ರಾ? ನಟಿ ಶೃತಿ ಕೂಡ ಸಿನಿಮಾರಂಗಕ್ಕೆ ಕಾಲಿಡ್ತಾ ಇದ್ರಾ? "ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ" ಎಂದು ಡೈಲಾಗ್ (Dialogue) ಹೇಳಿದ ಡಾಲಿ (Dhananjaya) ಧನಂಜಯ್ ಬಡ ಕುಟುಂಬದಿಂದಲೇ ಬಂದವ್ರು. ಸಿನಿಮಾ ಹಿನ್ನೆಲೆ ಇಲ್ಲದೇ ಬೆಳೆದವ್ರು. ತಮ್ಮ ನಿರ್ಮಾಣ ಸಂಸ್ಥೆ ಮೂಲಕ ಹೊಸಬರಿಗೆ ಅವಕಾಶ ಕೊಟ್ಟೋರು. ಆದರೆ ಈಗ ಇದೇ ಒಂದ್ ಮನಸ್ಥಿತಿನೇ ಹಲವು ಪ್ರಶ್ನೆಗಳನ್ನ ಕೇಳುವಂತೆ ಮಾಡಿದೆ. ಬಡವರ ಮಕ್ಕಳು ಬೆಳೆಯ ಬೇಕು ಕಣ್ರಯ್ಯ ಎಂದು ಹೇಳಿದ ಡಾಲಿ ಸ್ಟಾರ್ ಮಕ್ಕಳಿಗೆ ಅವಕಾಶ ಕೊಟ್ಟಿರೋದ್ಯಾಕೆ? ಗುರು ಶಿಷ್ಯರಲ್ಲಿ ಇದೇ ಆಗಿದ್ದು ಅಲ್ವೇ? ಇದರ ಸುತ್ತದ ಇನ್ನಷ್ಟು ಮಾಹಿತಿ ಇಲ್ಲಿದೆ.
ನೆಪೋಟಿಸಂ ವರ್ಕೌಟ್ ಆಗುತ್ತಾ ಅದೃಷ್ಟ ಕೈ ಹಿಡಿಯುತ್ತಾ?
ಬಣ್ಣದ ಲೋಕ ನಾವು ಅಂದುಕೊಂಡಂತೆ ಅಷ್ಟು ಸುಲಭ ಅಲ್ವೇ ಅಲ್ಲ. ಇಲ್ಲಿ ಎಲ್ಲವೂ ಇರಬೇಕು. ಎಲ್ಲ ಇದ್ಮೇಲೂ "ಅದೃಷ್ಟ" ಅನ್ನೋದು ಇರಲೇಬೇಕು. ಅದು ಇಲ್ಲ ಅಂದ್ರೆ, ಏನಂದ್ರೆ ಏನೂ ಆಗೋದಿಲ್ಲ. ಯಾವುದೇ ದೊಡ್ಡ ಸಿನಿಮಾ ಫ್ಯಾಮಿಲಿಯಿಂದ ಬಂದಿದ್ರೂ ಅಷ್ಟೆ. ಸಿನಿ ಲೈಫ್ ಲಗಾಟಿ ಹೊಡೆಯುತ್ತದೆ.
ಅದೃಷ್ಟ ಅಂದ್ರೆ ಇಲ್ಲಿ ನಾವು ಅದನ್ನ ಜನ ಅಂತಲೇ ಕರೆಯಬಹುದು. ದುಡ್ಡು ಕೊಟ್ಟು ಸಿನಿಮಾ ನೋಡುವ ಜನ, ಥಿಯೇಟರ್ ಗೆ ಬರಬೇಕು.ಅವರೇ ಆಯಾ ನಟರನ್ನ ಸ್ಟಾರ್ ಮಾಡಬೇಕು. ಅವರು ಮನಸು ಮಾಡದೇ ಇದ್ರೆ, ಮುಗೀತು ಕಥೆ. ಅಲ್ಲಿಗೆ ಏನೂ ನಡೆಯೋದಿಲ್ಲ. ನೆಪೋಟಿಸಂ ಅನ್ನೋದು ಕೂಡ ಮಕಾಡೆ ಮಲಗುತ್ತದೆ.
ಡಾಲಿ ಧನಂಜಯ್ ಮೇಲೆ ನೆಪೋಟಿಸಂ ಆರೋಪ-ಇದು ಸರೀನಾ?
ಹೌದು, ಇಂತಹ ಒಂದು ಆರೋಪದ ಸುದ್ದಿ ವೈರಲ್ ಆಗಿದೆ. ಅದ್ಯಾರ ಯಾವಾಗ ಹೇಳಿದ್ರೋ ಏನೋ. ಎಲ್ಲೆಡೆ ಈ ಒಂದು ಸುದ್ದಿ ಹರಿದಾಡುತ್ತಿದೆ. ನೆಟ್ಟಿಗರ ಸಿಟ್ಟು ನೆತ್ತಿಗೇರಿದೆ. ಬಡವರ ಮಕ್ಕಳು ಬೆಳೆಯ ಬೇಕು ಕಣ್ರಯ್ಯ ಅಂತಲೇ ಡೈಲಾಗ್ ಹೊಡೆದ ಡಾಲಿ ಈಗ ನೋಡಿದ್ರೆ ಹಿಂಗಾ ಮಾಡೋದು ಅಂತಲೇ ದೂರತವ್ರಂತೆ.
ಇದು ಎಷ್ಟು ನಿಜವೋ ಏನೋ? ಡಾಲಿ ಧನಂಜಯ್ ತಮ್ಮ ನಿರ್ಮಾಣ ಸಂಸ್ಥೆಯಿಂದಲೇ ಚಿತ್ರ ನಿರ್ಮಿಸುತ್ತಿದ್ದಾರೆ. ಈಗಾಗಲೇ ಎರಡು ಚಿತ್ರಗಳನ್ನ ಮಾಡಿದ್ದಾರೆ. ಒಂದ್ ಹಂತಕ್ಕೆ ಮೂರನೇ ಚಿತ್ರ ಮಾಡೋಕೆ ಶಕ್ತಿ ಪಡೆದಿದ್ದಾರೆ. ಅದೇ ಹಿನ್ನೆಲೆಯಲ್ಲಿಯೇ "ಟಗರು ಪಲ್ಯ" ಅನ್ನೋ ಸಿನಿಮಾ ಕೂಡ ಮಾಡ್ತಿದ್ದಾರೆ.
ಟಗರು ಪಲ್ಯ ಚಿತ್ರದ ನಿರ್ಮಾಪಕ ಧನಂಜಯ್ ನೆಪೋಟಿಸಂ ಮಾಡಿದ್ರೇ?
ಟಗರು ಪಲ್ಯ ಚಿತ್ರಕ್ಕೆ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತಾ ನಾಯಕಿ ಆಗಿದ್ದಾರೆ. ಇದೇ ನೋಡಿ ಈಗ ಎಲ್ಲರ ಕೆಂಗಣ್ಣಿಗೆ ಗುರಿ ಆಗಿರೋದು. ಹೌದು ರೀ ಒಳ್ಳೆ ಕಥೆ ಇದೆ. ಕಥೆಗೆ ಸೂಟ್ ಆಗ್ತಾರೆ ಅಂತಲೇ ಅಮೃತಾ ಪ್ರೇಮ್ ಅವರನ್ನ ಆಯ್ಕೆ ಮಾಡಿಕೊಂಡಿದ್ದಾರೆ ಅಷ್ಟೆ.
ಕಥೆ ಚೆನ್ನಾಗಿದೆ ಅಂತಲೇ ಅಮೃತಾ ಪ್ರೇಮ್ ಹಾಗೂ ನೆನಪಿರಲಿ ಪ್ರೇಮ್ ಸಿನಿಮಾ ಮಾಡೋಕೆ ಗ್ರೀನ್ ಸಿಗ್ನಲ್ ತೋರಿದ್ದಾರೆ. ಇಲ್ಲಿ ನೆಪೋಟಿಸಂ ಪಾಯಿಂಟ್ ಬರೋದೇ ಇಲ್ವಲ್ಲ ಅಂತಲೇ ನಿಮಗೂ ಅನಿಸುತ್ತದೆ.
ಬಡವ್ರ ಮಕ್ಕಳು ಬೆಳಿಬೇಕು ಕಣ್ರಯ್ಯ ಎಂದ ಡಾಲಿ ಹಿಂಗ್ಯಾಕ್ ಮಾಡಿದ್ರು?
ಆದರೆ ಇಲ್ಲಿ ಪಾಯಿಂಟ್ ಇರೋದು, ಸಮಸ್ಯೆ ಅನಿಸೋದು ಅದ್ಯಾರಿಗೋ ಏನೋ. ಬಡವ್ರ ಮಕ್ಕಳನ್ನ ಬೆಳಸಬೇಕು ಅನ್ನೋ ಡಾಲಿ ಸ್ಟಾರ್ ನಟನ ಮಗಳನ್ನ ಯಾಕೆ ಚಿತ್ರಕ್ಕೆ ಹಾಕಿಕೊಂಡ್ರು ಅನ್ನೋದೇ ಈಗ ಚರ್ಚಿತ ವಿಷಯ ಅನಿಸುತ್ತಿದೆ.
ಪ್ರೇಮ್ ಪುತ್ರಿ ಒಬ್ಬರೇ ಇಲ್ಲಿ ಇಲ್ಲ, ಡೈರೆಕ್ಟರ್, ಆಕ್ಟರ್ ಇವರೂ ಇದ್ದಾರೆ. ಟಗರು ಪಲ್ಯ ಚಿತ್ರದ ನಾಯಕ ನಾಗಭೂಷಣ ಸಿನಿಮಾ ಹಿನ್ನೆಲೆಯಿಂದ ಬಂದ ನಟ ಅಲ್ವೇ ಅಲ್ಲ. ಡೈರೆಕ್ಟರ್ ಉಮೇಶ್ ಕೆ. ಕೃಪಾ ಕೂಡ ಸಿನಿಮಾ ಫ್ಯಾಮಿಲಿಯಿಂದ ಬಂದವ್ರಲ್ಲ ಅನ್ನೋದು ಇದೆ.
ಆದರೂ ಡಾಲಿ ಧನಂಜಯ್ ನೆಪೋಟಿಸಂ ವಿಷಯವಾಗಿಯೇ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗೆ ಗುರಿ ಆಗುತ್ತಿದ್ದಾರೆ. ಈ ಬಗ್ಗೆ ಡಾಲಿ ಧನಂಜಯ್ ಎಲ್ಲೂ ರಿಯಾಕ್ಟ್ ಮಾಡಿಲ್ಲ. ಆದರೂ ಸುದ್ದಿ ವೈರಲ್ ಆಗ್ತಾನೇ ಇದೆ.
"ಗುರು ಶಿಷ್ಯರು" ಟೈಮ್ ನಲ್ಲೂ ನೆಪೋಟಿಸಂ ಮಾತು ಕೇಳಿ ಬಂದಿತ್ತು!
ಗುರು ಶಿಷ್ಯರು ಟೈಮ್ ನಲ್ಲೂ ಈ ಒಂದು ಸಮಸ್ಯೆ ಎದುರಾಗಿತ್ತು. ಗುರು ಶಿಷ್ಯರು ಚಿತ್ರದಲ್ಲಿ ಕಂಪ್ಲೀಟ್ ಸಿನಿಮಾ ಫ್ಯಾಮಿಲಿಯ ಹುಡುಗರೇ ಇದ್ದರು. ನೆನಪಿರಲಿ ಪ್ರೇಮ್ ಪುತ್ರ ಏಕಾಂತ್ ಸೇರಿದಂತೆ ಶರಣ್ ಪುತ್ರ, ರವಿಶಂಕರ್ ಪುತ್ರ, ನವೀನ್ ಕೃಷ್ಣ ಪುತ್ರ, ಬುಲೆಟ್ ಪ್ರಕಾಶ್ ಪುತ್ರ, ಹೀಗೆ ಎಲ್ಲರೂ ಇದ್ದರು.
ಇದನ್ನೂ ಓದಿ: Rashmika Mandanna: ಕಿರಿಕ್ ರಶ್ಮಿಕಾ ಮಂದಣ್ಣ ಈಗ ಆ ವಿಷಯದಲ್ಲಿ ಟಾಪ್, ವಿಚಾರ ಗೊತ್ತಾದ್ರೆ ಶಾಕ್ ಆಗ್ತೀರಾ!
ಆಗಲೂ ಈ ಒಂದು ಪ್ರಶ್ನೆ ಎದ್ದಿತ್ತು. ಅದಕ್ಕೆ ನಟಿ ಶೃತಿ ಸರಿಯಾಗಿಯೇ ಉತ್ತರ ಕೊಟ್ಟಿದ್ದರು. ನೆಪೋಟಿಸಂ ಅಂತ ಇದ್ದಿದ್ದರೇ, ನಾವು ನೋಡಿರೋ ಈಗೀನ ಸ್ಟಾರ್ ನಟರು ಬರ್ತಾ ಇದ್ರಾ? ಅಂತಲೇ ಶೃತಿ ಪ್ರಶ್ನೆ ಕೇಳಿದ್ದರು.
ನೆಪೋಟಿಸಂ ಏನೂ ಇಲ್ಲ-ಜನ ಗೆಲ್ಲಿಸಬೇಕು ಅಷ್ಟೆ!
ಅಲ್ಲಿಗೆ ಆ ಮಾತು ಮುಗಿದು ಹೋಗಿತ್ತು. ಆದರೆ ಈಗ ಅದೇ ಪ್ರಶ್ನೆ ನೆಟ್ಟಿಗರ ಮೂಲಕ ಇಂಡಸ್ಟ್ರೀಯಲ್ಲಿ ಮತ್ತೆ ಮತ್ತೆ ಕೇಳಿ ಬರುತ್ತಿದೆ. ಆದರೆ ಇದರಿಂದ ಏನ್ ಆಗ್ತದೋ ಏನೋ.
ಸಿನಿಮಾಗಳು ಬರ್ತಾ ಇವೆ. ಸ್ಟಾರ್ ನಟರ ಮಕ್ಕಳು ತಮ್ಮ ಅದೃಷ್ಟ ಪರೀಕ್ಷೆಯನ್ನೂ ಮಾಡ್ತಾಯಿದ್ದಾರೆ. ಯಾರಿಗೆ ಲಕ್ ಇದಿಯೋ ಅವರು ನಿಲ್ತಾರೆ. ಇಲ್ಲದವ್ರು ಸೈಡ್ಗೆ ಹೋಗ್ತಾರೆ ಅಷ್ಟೆ. ಅದಕ್ಕಾಗೆ ನೆಪೋಟಿಸಂ ಬಣ್ಣ ಬಳಿಬೇಕು ಅನ್ನೋದೇ ಸಿಂಪಲ್ ಕ್ವಶ್ಚನ್ ಅಲ್ವೇ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ