ಡಾಲಿ ಧನಂಜಯ್ (Daali Dhananjaya) ಈಗ ಎಲ್ಲರ ತಲೆಯಲ್ಲಿ ಹುಳ ಬಿಟ್ರಾ? ಹೌದು, ಈ ಒಂದು ಪ್ರಶ್ನೆ ಹೆಚ್ಚು ಚರ್ಚೆ ಆಗುತ್ತಿದೆ. ಯಾಕೆ? ಏನೂ? ಈ ಪ್ರಶ್ನೆಗೆ ಉತ್ತರವೇ ಇಲ್ಲ. ಆದರೂ ಡಾಲಿ ಧನಂಜಯ್ ವೀಡಿಯೋವೊಂದರಲ್ಲಿ ಕಾಣಿಸಿಕೊಂಡು ಎಲ್ಲರಿಗೂ ಕುತೂಹಲ ಮೂಡಿಸಿದ್ದಾರೆ. ಈ ವೀಡಿಯೋ (Daali Dhananjaya viral video) ಯಾಕೆ ಬಿಟ್ಟಿರೋದು.? ಗೊತ್ತಿಲ್ಲ. ಏನ್ ಇದರ ಹಿಂದಿನ ರಹಸ್ಯ.? ಇದೂ ಗೊತ್ತಿಲ್ಲ. ವೀಡಿಯೋದಲ್ಲಿ ಕಾಣೊವಂತೆ (daali dhananjaya viral video twitter) ಧನಂಜಯ್ ಏನೋ ಯೋಚನೆ ಮಾಡ್ತಿದ್ದಾರೆ? ಇನ್ನೇನೋ ಲೆಕ್ಕ ಹಾಕುತ್ತಿದ್ದಾರೆ. ಒಂದಷ್ಟು (Dhananjaya family) ನಂಬರ್ಗಳನ್ನ ಬರೆಯುತ್ತಾರೆ. ಮತ್ತೆ ಯೋಚ್ನೆ ಮಾಡ್ತಾರೆ. ಆದರೆ ಈ ವೀಡಿಯೋದ ಹಿಂದಿನ ರಹಸ್ಯ ಏನೂ ಅನ್ನೋದೇ ಈಗ ಕ್ಯೂರಿಯೆಸ್ ಕ್ವಶ್ಚನ್ ಆಗಿಬಿಟ್ಟಿದೆ.
ಡಾಲಿ ಧನಂಜಯ್ ಆ ಒಂದು ವೀಡಿಯೋ ವೈರಲ್!
ನಟ ರಾಕ್ಷಸ ಡಾಲಿ ಧನಂಜಯ್ ಸದಾ ಆಕ್ಟೀವ್ ಆಗಿರ್ತಾರೆ. ಸಿನಿಮಾ ನಿರ್ಮಾಣದಲ್ಲೂ ಮುಂದಾಗಿದ್ದಾರೆ. ಪ್ರಚಾರ ಅಂತ ಬಂದ್ರೆ ಅದನ್ನೂ ಬಿಡೋದಿಲ್ಲ. ಅಲ್ಲೂ ಬ್ಯುಸಿ ಆಗಿರ್ತಾರೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲೂ ಡಾಲಿ ರನ್ನಿಂಗ್ ಸಕ್ಸಸ್ಫುಲಿ.
ಹೌದು, ಧನಂಜಯ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ಟೀವ್ ಆಗಿದ್ದಾರೆ. ತಮ್ಮ ಸಿನಿಮಾ ಪ್ರಚಾರದ ಅಷ್ಟೂ ವಿಷಯಗಳನ್ನ ಹಂಚಿಕೊಂಡಿರುತ್ತಾರೆ. ತಮ್ಮ ಅಧಿಕೃತ ಪೇಜ್ ಮೂಲಕವೇ ಎಲ್ಲರಿಗೂ ಅದನ್ನ ತಿಳಿಸೋ ಕೆಲಸ ಮಾಡ್ತಾರೆ.
ಏನ್ ಇರ್ಬೋದು? 🤔 🧐 pic.twitter.com/RSZU9gm9Ef
— Dhananjaya (@Dhananjayaka) December 14, 2022
ಧನಂಜಯ್ ಸಿನಿಮಾ ಪ್ರಚಾರಕ್ಕೆ ಹೊಸ ಐಡಿಯಾ ಮಾಡಿದ್ರಾ? ಗೊತ್ತಿಲ್ಲ ಬಿಡಿ. ಈಗ ಬಿಟ್ಟಿರೋ ಒಂದು ವೀಡಿಯೋ ಎಲ್ಲರೂ ತೆಲೆಕೆರೆದುಕೊಳ್ಳುವಂತೆ ಮಾಡಿದೆ. ಏನಿರಬಹುದು ಅಂತಲೂ ಎಲ್ಲರೂ ಯೋಚ್ನೆ ಮಾಡ್ತಿದ್ದಾರೆ. ಹೀಗೆ ಅಂದುಕೊಳ್ಳುವಂತನೇ ಧನಂಜಯ್ ಈ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
ಡಾಲಿ ಧನಂಜಯ್ ಏನ್ ಯೋಚನೆ ಮಾಡ್ತಿರೋದು?
ಡಾಲಿ ಧನಂಜಯ್ ಏನ್ ಯೋಚನೆ ಮಾಡ್ತಿದ್ದಾರೋ ಏನೋ. ಜೊತೆಗಿರೋ ಫ್ರೆಂಡ್ಸ್ ಆಶ್ಚರ್ಯದಿಂದಲೇ ನೋಡ್ತಿದ್ದಾರೆ. ಏನ್ ಲೆಕ್ಕ ಹಾಕ್ತಿದ್ದಾರೋ ಏನೋ. ಎಲ್ಲವೂ ಬುಡಮೇಲು ಅನ್ನೋ ಹಾಗೇನೆ ಇದೆ. ಆದರೆ ಡಾಲಿ ಬರೆದ ನಂಬರ್ ನೋಡಿದ್ರೆ ತಲೆ ತಿರ್ಗೋದು ಗ್ಯಾರಂಟಿ.
12 -1 = 23 ಅಂತಲೇ ಡಾಲಿ ತಲೆಕರೆದುಕೊಂಡು ಬರೆದಿರೊದು?
12-1 = 23 ಅಂದ್ರೇನೂ? ಇದನ್ನ ಡಾಲಿ ಧನಂಜಯ್ ಅವರೇ ಹೇಳಬೇಕು. ಈಗಾಗಲೇ ಇವರ ನಿರ್ಮಾಣದ ಸಿನಿಮಾ ಸೆಟ್ಟೇರಿದೆ. ಅದರ ಕೆಲಸ ಕೂಡ ನಡೆಯುತ್ತಿದೆ. ಇನ್ನು ಡಾಲಿ ಧನಂಜಯ್ ಅಭಿನಯದ ಜಮಾಲಿಗುಡ್ಡ ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಅದು ಇದೇ 30 ಅನ್ನೋದು ಕೂಡ ಗೊತ್ತಿದೆ. ಹಾಗಿದ್ರೆ ಈ ನಂಬರ್ ಏನೂ?
ಡಾಲಿ ಮದುವೆ ಡೇಟ್ ಹಿಂಗೆ ಬರೆದ್ರಾ?
ಇದನ್ನೂ ಓದಿ: Shivarajkumar: ಹುಬ್ಬಳ್ಳಿಗೆ ಬಂದ್ರೆ ಶಿವರಾಜ್ಕುಮಾರ್ ಸಿದ್ದಾರೂಢಮಠಕ್ಕೆ ಯಾಕೆ ಹೋಗ್ತಾರೆ?
ಉತ್ತರಕಾಂಡ ಸಿನಿಮಾದ ನಾಯಕಿ ರಮ್ಯ ಕೂಡ ಇದಕ್ಕೆ ರಿಯಾಕ್ಟ್ ಮಾಡಿದ್ದಾರೆ. ಇದು ನಿಮ್ಮ ಮದುವೆ ಡೇಟಾ ಅಂತಲೂ ಪ್ರಶ್ನೆ ಮಾಡಿದ್ದಾರೆ. ಆದರೆ ಇದು ಹಾಗೆ ಕಾಣೋದಿಲ್ಲ ಬಿಡಿ. ಯಾಕೆಂದ್ರೆ, ಧನಂಜಯ್ ತಮ್ಮ ಬಡವ ರಾಸ್ಕಲ್ ಚಿತ್ರದ 50 ದಿನದ ಶೀಲ್ಡ್ ನೋಡಿಯೇ ಯೋಚ್ನೆ ಕೂಡ ಮಾಡ್ತಾರಾ. ಹಾಗಾಗಿಯೇ ಅದಕ್ಕೇನಾದ್ರೂ ಈ ನಂಬರ್ ರಿಲೇಟ್ ಆಗಿದಿಯಾ ಅನ್ನೋ ಡೌಟ್ ಕೂಡ ಇದೆ.
ಡಾಲಿಯ ಈ ನಂಬರ್ ಲೆಕ್ಕಾಚಾರ ಎಲ್ಲರಿಗೂ ಒಂದು ಕುತೂಹಲ ಮೂಡಿಸಿದೆ. ಇದರ ಹಿಂದೆ ಬಿದ್ರೆ ತಲೆಕೆಡೋದು ಪಕ್ಕಾ. ಆದರೂ ಡಾಲಿ ಧನಂಜಯ್ ಈ ನಂಬರ್ ಯಾಕೆ ಬರೆದ್ರು ಅನ್ನೋದೇ ಈಗೀನ ಕುತೂಹಲ. ಯಾವುದಕ್ಕೂ ವೇಟ್ ಮಾಡಿ ಡಾಲಿನೇ ರಿವೀಲ್ ಮಾಡ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ