ಕನ್ನಡದ ನಟ ರಾಕ್ಷಸ ಡಾಲಿ (Daali Dhananjaya New Poem) ಧನಂಜಯ್ ಒಳಗೊಬ್ಬ ಒಳ್ಳೆ ಕವಿ ಇದ್ದಾನೆ. ಆ ಕವಿ ಬರೆದ ಸಾಲುಗಳು ತುಂಬಾ ಚೆನ್ನಾಗಿಯೇ ಇರುತ್ತವೆ. ಇತ್ತೀಚಿಗೆ ಆ ಕವಿತೆಗಳು ವೈರಲ್ ಕೂಡ ಆಗುತ್ತವೆ. ಅದೇ ರೀತಿ ತಮ್ಮ (Daali Dhananjaya Wrote New Poem) ಚಿತ್ರಗಳಿಗೂ ಧನಂಜಯ್ ಗೀತೆಯನ್ನ ರಚಿಸುತ್ತಿದ್ದಾರೆ. ತಮ್ಮ ನಿರ್ಮಾಣದ ಆರ್ಕೆಸ್ಟ್ರಾ ಮೈಸೂರು ಚಿತ್ರದಲ್ಲೂ ಒಳ್ಳೆ ಹಾಡುಗಳನ್ನೆ ಬರೆದಿದ್ದಾರೆ. ಆದರೆ ಈಗ ಇದೇ ಡಾಲಿ (Daali Poem Getting Viral) ಧನಂಜಯ್ ಅದ್ಯಾರಿಗೋ ಧಮ್ ಇದ್ರೆ ಹೊಡಿ ನನ್ನ ಎಂದು ಬರೆದು ಹೇಳ್ತಿದ್ದಾರೆ. ಇದನ್ನ ಧನಂಜಯ್ ತಮ್ಮ ವಿಶೇಷ ಕಂಠಸಿರಿಯಿಂದಲೂ ಹೇಳಿಯೂ ಬಿಟ್ಟಿದ್ದಾರೆ. ಆ ವೀಡಿಯೋ (Daali New Poem Video) ಈಗ ಹೆಚ್ಚು ಗಮನ ಸೆಳೆಯುತ್ತಿದೆ.
ಧಮ್ ಇದ್ರೆ ಹೊಡಿ ನನ್ನ ಎಂದು ಡಾಲಿ ಹೇಳ್ತಿರೋದು ಯಾಕೆ?
ಡಾಲಿ ಧನಂಜಯ್ ಒಳ್ಳೆ ಸಾಹಿತ್ಯದ ಅಭಿರುಚಿ ಇರೋ ಕನ್ನಡದ ನಾಯಕ ನಟ. ಸಾಹಿತ್ಯದ ನಂಟು ಬೆಳಸಿಕೊಂಡೇ ಬಂದಿರೋ ಡಾಲಿ ಆಗಾಗ ಕವಿತೆಯನ್ನ ರಚಿಸುತ್ತಲೇ ಇರುತ್ತಾರೆ. ಡಾಲಿಯೊಳಗಿನ ಆ ಕವಿಯ ಬರೆದ ಸಾಲು ಈಗ ಸಿನಿಮಾ ಹಾಡುಗಳೂ ಆಗಿವೆ.
ಡಾಲಿ ಧನಂಜಯ್ ಇತ್ತೀಚಿಗೆ ಬಂದ ಹೆಡ್ ಬುಷ್ ಚಿತ್ರದಲ್ಲೂ ಒಂದು ಹಾಡು ಬರೆದಿದ್ದರು. ಹಬೀಬಿ ಅಂತಲೇ ಅದು ಕಿಚ್ಚು ಹಚ್ಚಿತ್ತು. ಅದೇ ರೀತಿ ಈಗ ತಮ್ಮದೇ ನಿರ್ಮಾಣದ ಆರ್ಕೆಸ್ಟ್ರಾ ಮೈಸೂರು ಚಿತ್ರದ ಬಹುತೇಕ ಹಾಡುಗಳನ್ನ ಇದೇ ಡಾಲಿ ಬರೆದುಕೊಟ್ಟಿದ್ದಾರೆ. ಆ ಗೀತೆಯಲ್ಲಿ "ನದಿಯೊಂದು ಓಡಿ ಸೇರಿ ತಾ ಸಾಗರ" ಜನರ ಮನಸನ್ನ ಕದಿಯುತ್ತಿದೆ.
ಧಮ್ ಇದ್ರೆ ಹೊಡಿ ನನ್ನ ಇದು ಡಾಲಿ ಬರೆದ ಕವಿತೇನಾ?
ಡಾಲಿ ಧನಂಜಯ್ ಎಲ್ಲವನ್ನೂ ನೋಡ್ತಾನೇ ಬಂದಿದ್ದಾರೆ. ಸೋಲು-ಗೆಲುವ ಏರಿಳಿತಗಳು ಹೀಗೆ ಇಂಡಸ್ಟ್ರೀಯಲ್ಲಿ ಎಲ್ಲವನ್ನೂ ನೋಡಿಕೊಂಡೇ ಬರ್ತಿದ್ದಾರೆ. ಆದರೆ ಈಗ ಅದ್ಯಾರಿಗೋ ನೇರವಾಗಿ ಧಮ್ ಇದ್ರೆ ಹೊಡಿ ನನ್ನ ಅಂತಲೇ ಡಾಲಿ ಅಕ್ಷರ ದಾಳಿ ಮಾಡಿದ್ದಾರೆ.
ಸುಟ್ಟು ಸುಟ್ಟು ಸುಟ್ಟಾಕು ನನ್ನ, ಸುಟ್ಟು ಬೆಳಕಾಗಿ ಉರಿವೆ!
ಡಾಲಿ ಧನಂಜಯ್ ಬರೆದ ಕವಿತೆಯಲ್ಲಿ ಕಿಚ್ಚಿದೆ. ಅದ್ಯಾರ ವಿರುದ್ಧ ಅನ್ನೋದು ಗೊತ್ತಿಲ್ಲ. ಆದರೆ ಡಾಲಿ ಧನಂಜಯ್ ಬರೆದ ಕವಿತೆಯಲ್ಲಿ ಒಂದು ಕಿಡಿ ಇದೆ. ಈ ಕಿಡಿ ಅಕ್ಷರ ರೂಪದಲ್ಲಿಯೇ ಈಗ ಜ್ವಾಲೆ ಆಗಿದೆ. ವಿವಿಧ ರೂಪದಲ್ಲಿ ಬೆಳಕಾಗಿ ಉರಿಯುತ್ತಿದೆ. ಅದು ಇಂತಿದೆ ನೀವೂ ಓದಿ.
ಸುಟ್ಟು ಸುಟ್ಟು ಸುಟ್ಟಾಕು ನನ್ನ
ಸುಟ್ಟು ಬೆಳಕಾಗಿ ಉರಿವೆ!
ಮುಚ್ಚಾಕು ಮಣ್ಣಲ್ಲೇ ನನ್ನ
ಮರವಾಗಿ ಬೆಳೆವೆ!
ಹಾರಾಡೋ ಹಕ್ಕಿಗೆ ಇಲ್ಲಿ
ಯಾವುದೇ ಗಡಿಯ ಹಂಗು!
ಹಸಿದಂತ ಮಂದಿಗೆ ಇಲ್ಲಿ
ಗೆಲ್ಲೋದೊಂದೇ ಗುಂಗು!
ಧಮ್ ಇದ್ರೆ ಹೊಡಿ ನನ್ನ
ದಿಲ್ ಇದ್ರೆ ತಡಿ ನನ್ನ!
-ಡಾಲಿ, ನಟ
ಡಾಲಿ ಧನಂಜಯ್ ಕವಿತೆ ಬರೆಯುತ್ತಲೇ ಬಂದವ್ರು. ಅವುಗಳನ್ನ ಅಷ್ಟೇ ಜತನದಿಂದಲೇ ಉಳಿಸಿಕೊಂಡು ಬಂದವ್ರು. ತಮ್ಮಲ್ಲಿ ಅಡಗಿದ ಕವಿಯನ್ನ ಈಗ ಎಲ್ಲರ ಮುಂದೆ ತೆರೆದಿಡುತ್ತಿದ್ದಾರೆ.
ಅದೇ ರೀತಿ ಈಗ ಬರೆದ ಕವಿತಯನ್ನೂ ವಿಶೇಷವಾಗಿಯೇ ಪ್ರೆಸೆಂಟ್ ಮಾಡಿದ್ದಾರೆ. ತಮ್ಮ ವಿಶೇಷ ಕಂಠಸಿರಿಯಲ್ಲಿ ಅದನ್ನ ಓದಿದ್ದಾರೆ. ಹಾಗೆ ಓದಿದ ಕವಿತೆಯ ವೀಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲಿ ಡಾಲಿ ಧನಂಜಯ್ ಶೇರ್ ಕೂಡ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Rocking Star Yash: 400 ಕೋಟಿಯಲ್ಲಿ ರೆಡಿಯಾಗುತ್ತಾ ಯಶ್ ಮುಂದಿನ ಸಿನಿಮಾ?
ಡಾಲಿ ಧನಂಜಯ್ ಬರೆದ ಕವಿತೆ ಯಾರಿಗಾಗಿ?
ಧನಂಜಯ್ ಒಳ್ಳೆ ಸಾಲುಗಳನ್ನೆ ಇಲ್ಲಿ ಬರೆದಿದ್ದಾರೆ. ಈ ಕವಿತೆ ಒಂದು ರೀತಿ ಸ್ಪೂರ್ತಿನೂ ನೀಡುತ್ತದೆ. ನೊಂದ ಹೃದಯದ ಕೆಚ್ಚೆದೆಯ ನಡೆಯನ್ನೂ ಇದು ಹೇಳುತ್ತದೆ. ಆದರೆ ಈ ಸಾಲುಗಳನ್ನ ಡಾಲಿ ಧನಂಜಯ್ ಯಾರಿಗಾಗಿ ಬರೆದರು. ಯಾತಕ್ಕಾಗಿ ಬರೆದರು ಅನ್ನೋದೇ ಈಗೀನ ಕುತೂಹಲ ಅಷ್ಟೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ