• Home
  • »
  • News
  • »
  • entertainment
  • »
  • Daali Dhananjaya Lucky Month: ಡಾಲಿ ಧನಂಜಯ್​ಗೆ ಡಿಸೆಂಬರ್ ತಿಂಗಳು ಲಕ್ಕಿನಾ? ಅನ್​ಲಕ್ಕಿನಾ?

Daali Dhananjaya Lucky Month: ಡಾಲಿ ಧನಂಜಯ್​ಗೆ ಡಿಸೆಂಬರ್ ತಿಂಗಳು ಲಕ್ಕಿನಾ? ಅನ್​ಲಕ್ಕಿನಾ?

ಹೆಡ್​ ಬುಷ್ ಆದ್ಮೇಲೆ ಡಾಲಿ ಹೊಸ ರೂಪ

ಹೆಡ್​ ಬುಷ್ ಆದ್ಮೇಲೆ ಡಾಲಿ ಹೊಸ ರೂಪ

ಡಾಲಿ ಧನಂಜಯ್ ಸಿನಿಮಾ ಜರ್ನಿಯಲ್ಲಿ ಅನೇಕ ಚಿತ್ರಗಳು ಬಂದಿದೆ. ಆ ಲೆಕ್ಕದಲ್ಲಿ ಒನ್ಸ್‌ ಅಪಾನ್‌ ಏ ಟೈಮ್‌ ಇನ್‌ ಜಮಾಲಿಗುಡ್ಡ ಚಿತ್ರವೂ ಇದೆ. ಈ ಚಿತ್ರದ ರಿಲೀಸ್ ಡೇಟ್ ವಿಶೇಷವಾಗಿಯೇ ಇದೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡ ಇಂಡಸ್ಟ್ರೀಯಲ್ಲಿ (Kannada Film Industry) ಒಂದು ನಂಬಿಕೆ ಇದೆ. ವರ್ಷದ ಕೊನೆ ತಿಂಗಳು ಡಿಸೆಂಬರ್​ ಲಕ್ಕಿ ಅಂತಲೇ ಹೇಳಲಾಗುತ್ತಿದೆ. ಈ ತಿಂಗಳಲ್ಲಿ ಬಂದ ಸಿನಿಮಾಗಳು ಹಿಟ್ ಅನ್ನೋ ಬಲವಾದ ನಂಬಿಕೆನೆ ಅದಾಗಿದೆ. ಡಾಲಿ ಧನಂಜಯ್ ಕೂಡ ಈ ತಿಂಗಳಲ್ಲಿಯೇ ತಮ್ಮ ಇನ್ನೂ ಒಂದು ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. ಹೆಡ್ (Head Bush) ಬುಷ್ ಆದ್ಮೇಲೆ ಡಾಲಿ ಧನಂಜಯ್ ಯಾವ ಸಿನಿಮಾ ರಿಲೀಸ್ ಆಗುತ್ತದೆ ಎಂದು ಪ್ರಶ್ನೆ ಇತ್ತು. ಆ ಪ್ರಶ್ನೆಗೆ ಜಮಾಲಿಗುಡ್ಡ (Jamaligudda) ಚಿತ್ರದ ರೂಪದಲ್ಲಿಯೇ ಉತ್ತರ ಸಿಕ್ಕಿದೆ. ಜಮಾಲಿಗುಡ್ಡ ಸಿನಿಮಾದಲ್ಲಿ ಧನಂಜಯ್ ಲುಕ್ ಬದಲಾಗಿದೆ. ಕರ್ಲಿ ಹೇರ್​ ಲುಕ್​​ ನಲ್ಲಿ ಧನಂಜಯ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


ಹೆಡ್​ ಬುಷ್ ಆದ್ಮೇಲೆ ಡಾಲಿ ಹೊಸ ರೂಪ
ಡಾಲಿ ಧನಂಜಯ್ ಕನ್ನಡದ ಸದ್ಯದ ಬ್ಯುಸಿಯೆಸ್ಟ್ ನಾಯಕ ನಟರೇ ಆಗಿದ್ದಾರೆ. ಹೆಡ್ ಬುಷ್ ಸಿನಿಮಾ ಮೂಲಕ ಡಾನ್ ಆಗಿಯೇ ಧನಂಜಯ್ ಮಿಂಚಿದರು. ಬೆಂಗಳೂರು ಡಾನ್ ಜಯರಾಜ್ ಪಾತ್ರದಲ್ಲಿ ಎಲ್ಲರ ಗಮನ ಸೆಳೆದರು.


ಹೆಡ್ ಬುಷ್ ಸಿನಿಮಾದ ಮೂಲಕ ಒಂದಷ್ಟು ವಿವಾದಗಳನ್ನೂ ಎದುರಿಸಿದರು. ಆದರೂ ಎಲ್ಲವನ್ನೂ ಎದುರಿಸಿಕೊಂಡು ಈಗ ಮತ್ತೆ ತಮ್ಮ ಸಿನಿಮಾದ ಶೂಟಿಂಗ್​​ನಲ್ಲಿ ಸದ್ಯಕ್ಕೆ ಬ್ಯುಸಿಯಾಗಿದ್ದಾರೆ.


ಜಮಾಲಿಗುಡ್ಡದತ್ತ ಹೊರಟ ಡಾಲಿ ಧನಂಜಯ್
ಡಾಲಿ ಧನಂಜಯ್ ಚಿತ್ರ ನಿರ್ಮಾಣದ ಹಂತಕ್ಕೂ ಈಗ ತಲುಪಿದ್ದಾರೆ. ಇಂತಹ ನಾಯಕ-ನಿರ್ಮಾಪಕ ಡಾಲಿ ಧನಂಜಯ್ ತಮ್ಮ ಚಿತ್ರ ಜೀವನದಲ್ಲಿ, ಒನ್ಸ್‌ ಅಪಾನ್‌ ಏ ಟೈಮ್‌ ಇನ್‌ ಜಮಾಲಿಗುಡ್ಡ ಹೆಸರಿನ ಚಿತ್ರವನ್ನ ಕೂಡ ಮಾಡಿದ್ದಾರೆ.


Kannada Actor Daali Dhananjaya New Film is going to Release on December-30
ಜಮಾಲಿಗುಡ್ಡದತ್ತ ಹೊರಟ ಡಾಲಿ ಧನಂಜಯ್


ಜಮಾಲಿಗುಡ್ಡ ಸಿನಿಮಾ ಚಿತ್ರದ ಶೀರ್ಷಿಕೆನೆ ವಿಶೇಷವಾಗಿದೆ. ಇನ್ನು ಇಡೀ ಚಿತ್ರದಲ್ಲಿ ಡಾಲಿ ಧನಂಜಯ್ ಲುಕ್ ಕೂಡ ಸ್ಪೆಷಲ್ ಆಗಿಯೇ ಇದೆ. ಇಲ್ಲಿವರೆಗಿನ ಸಿನಿಮಾಗಳಲ್ಲಿ ಧನಂಜಯ್ ಈ ರೀತಿ ಕಾಣಿಸಿಕೊಂಡಿರಲಿಲ್ಲ. ಆದರೆ ಜಮಾಲಿಗುಡ್ಡದಲ್ಲಿ ಧನಂಜಯ್ ಬೇರೆ ರೀತಿಯ ಪಾತ್ರವನ್ನೆ ಮಾಡಿದ್ದಾರೆ.




ಡಿಸೆಂಬರ್​ ತಿಂಗಳು ಧನಂಜಯ್​ಗೆ ಲಕ್ಕಿ ತಿಂಗಳೇ?
ಹೌದು, ಡಾಲಿ ಧನಂಜಯ್ ಸಿನಿಮಾ ಜರ್ನಿಯಲ್ಲಿ ಅನೇಕ ಚಿತ್ರಗಳು ಬಂದಿದೆ. ಆ ಲೆಕ್ಕದಲ್ಲಿ ಒನ್ಸ್‌ ಅಪಾನ್‌ ಏ ಟೈಮ್‌ ಇನ್‌ ಜಮಾಲಿಗುಡ್ಡ ಚಿತ್ರವೂ ಇದೆ. ಈ ಚಿತ್ರದ ರಿಲೀಸ್ ಡೇಟ್ ವಿಶೇಷವಾಗಿಯೇ ಇದೆ.


ಡಿಸೆಂಬರ್-30 ರಂದು ಜಮಾಲಿಗುಡ್ಡ ರಿಲೀಸ್
2022 ರ ಡಿಸೆಂಬರ್ ತಿಂಗಳ ಕಟ್ಟ ಕಡೆ ವಾರದ 30 ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಡಿಸೆಂಬರ್​ ತಿಂಗಳ ಕಡೆಯಲ್ಲಿ ಬಂದ ಚಿತ್ರಗಳು ಹಿಟ್ ಆಗುತ್ತವೆ ಅನ್ನೊ ನಂಬಿಕೆ ಇದೆ. ಆ ನಂಬಿಕೆ ನಿಜವಾಗುತ್ತದೆಯೋ ಸುಳ್ಳಾಗುತ್ತದೆಯೋ ಗೊತ್ತಿಲ್ಲ. ಆದರೆ ಸಿನಿಮಾ ತನ್ನ ಟೈಟಲ್​ ನಿಂದಲೇ ಈಗ ಭಾರೀ ಗಮನ ಸೆಳೆಯುತ್ತಿದೆ.


Kannada Actor Daali Dhananjaya New Film is going to Release on December-30
ಡಿಸೆಂಬರ್​ ತಿಂಗಳು ಧನಂಜಯ್​ಗೆ ಲಕ್ಕಿ ತಿಂಗಳೇ?


ಹೆಡ್ ಬುಷ್ ಆದ್ಮೇಲೆ ಜಮಾಲಿಗುಡ್ಡದಲ್ಲಿ ಡಾಲಿ ಧನಂಜಯ್
ಡಾಲಿ ಧನಂಜಯ್ ಅಭಿನಯದ ಜಾಮಲಿಗುಡ್ಡ ಸಿನಿಮಾ ವಿಶೇಷ ಕಂಟೆಂಟ್ ಹೊಂದಿದೆ. ಕುಶಾಲ್ ಗೌಡ ನಿರ್ದೇಶನದ ಈ ಚಿತ್ರದಲ್ಲಿ ವಿಶೇಷ ಜರ್ನಿ ಇದ್ದಂತೆ ಕಾಣುತ್ತಿದೆ.
ಚಿತ್ರದ ಪೋಸ್ಟರ್ ಒಂದು ಕಥೆ ಹೇಳಿದ್ರೆ,


ಅರ್ಜುನ್ ಜನ್ಯ ಸಂಗೀತದ ಹಾಡುಗಳು ತಮ್ಮದೇ ರೀತಿಯಲ್ಲಿ ಗಮನ ಸೆಳೆಯುತ್ತಿವೆ. ಅದಿತಿ ಪ್ರಭುದೇವಾ ಇಲ್ಲಿ ಡಾಲಿ ಧನಂಜಯ್​​​ಗೆ ಜೋಡಿ ಆಗಿದ್ದಾರೆ. ಬಾಲ ನಟಿ ಪ್ರಾಣ್ಯ ರಾವ್ ಕೂಡ ಅಭಿನಯಿಸಿದ್ದಾರೆ.


ಇದನ್ನೂ ಓದಿ: Kannadathi: ಮನೆಮಂದಿಯನ್ನು ಸೇರಿಸಿದ ಹರ್ಷ, ಏನ್ ಮಾತನಾಡಬಹುದು ಎಂಬ ಕುತೂಹಲ!


ಧನಂಜಯ್ ಈ ಮೂಲಕ ತಮ್ಮ ಅಭಿಮಾನಿಗಳಿಗೆ ಹೊಸ ರೀತಿಯ ಕಥೆಯನ್ನ ಹೇಳೋಕೆ ಬರ್ತಿದ್ದಾರೆ. ಇನ್ನೊಂದು ಕಡೆಗೆ ಹೊಯ್ಸಳ ಸಿನಿಮಾದ ಚಿತ್ರೀಕರಣದಲ್ಲೂ ಡಾಲಿ ಧನಂಜಯ್ ಬ್ಯುಸಿಯಾಗಿದ್ದಾರೆ.

First published: