Daali Dhananjay: ದುಬೈಗೆ ಹಾರಿದ ಡಾನ್ ಡಾಲಿ! ಹೆಡ್ ಬುಷ್ ಪ್ರಚಾರದಲ್ಲಿ ನಟರಾಕ್ಷಸ ಫುಲ್ ಬ್ಯುಸಿ

ಧನಂಜಯ್ ವೈಟ್ ಆ್ಯಂಡ್ ವೈಟ್ ಬೆಲ್​ ಬಾಟಂ ಪ್ಯಾಂಟ್ ತೊಟ್ಟು ದುಬೈ ದೇಶಕ್ಕೆ ಇವತ್ತು ಪ್ರಯಾಣ ಬೆಳೆಸಿದ್ದಾರೆ. ಏರ್​ಪೋರ್ಟ್​ ನಲ್ಲಿ ದಾಲಿ ಧನಂಜಯ್ ತಮ್ಮ ಈ ಗೆಟಪ್​ ನಿಂದಲೇ ಭಾರೀ ಗಮನ ಸೆಳೆದಿದ್ದಾರೆ.

ರೆಟ್ರೋ ಲುಕ್​ ಅಲ್ಲಿ ದುಬೈಗೆ ಹಾರಿದ ಡಾಳಿ ಧನಂಜಯ್

ರೆಟ್ರೋ ಲುಕ್​ ಅಲ್ಲಿ ದುಬೈಗೆ ಹಾರಿದ ಡಾಳಿ ಧನಂಜಯ್

  • Share this:
ಕನ್ನಡ ಚಿತ್ರರಂಗದ ಕಲಾವಿದರೆಲ್ಲ ದುಬೈಗೆ (Dubai) ಹಾರುತ್ತಿದ್ದಾರೆ. ಇದೇ 24 ರಂದು ಶಾರ್ಜಾದಲ್ಲಿ (Sharjah) ನಡೆಯೋ ರಾಜ್ ಕಪ್​ಗಾಗಿಯೇ ಎಲ್ಲರೂ ಇಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ. ಕನ್ನಡ ಚಿತ್ರರಂಗದ (Kannada Industry) ಈ ವಿಶೇಷ ದಿನವನ್ನ ಅಷ್ಟೇ ವಿಶೇಷವಾಗಿಯೇ ಎಲ್ಲರು ಸೆಲೆಬ್ರೇಟ್ ಮಾಡುತ್ತಿದ್ದಾರೆ. ಆದರೆ ನಟರಾಕ್ಷಸ ಡಾಲಿ ಧನಂಜಯ್ ಒಂಚೂರು ವಿಭಿನ್ನವಾಗಿಯೇ ದುಬೈಗೆ ಹೊರಟು ಹೋಗಿದ್ದಾರೆ. ಧನಂಜಯ್ ವೈಟ್ ಆ್ಯಂಡ್ ವೈಟ್ ಬೆಲ್​ ಬಾಟಂ (Bell Bottom) ಪ್ಯಾಂಟ್ ತೊಟ್ಟು ದುಬೈ ದೇಶಕ್ಕೆ ಇವತ್ತು ಪ್ರಯಾಣ ಬೆಳೆಸಿದ್ದಾರೆ. ಏರ್​ಪೋರ್ಟ್​ ನಲ್ಲಿ ಡಾಲಿ ಧನಂಜಯ್ ತಮ್ಮ ಈ ಗೆಟಪ್​ನಿಂದಲೇ ಭಾರೀ ಗಮನ ಸೆಳೆದಿದ್ದು, ಹೆಡ್ ಬುಷ್​ ಚಿತ್ರದಲ್ಲಿ ಧನಂಜಯ್ ಇದೇ ಗೆಟಪ್ ಅಲ್ಲಿಯೇ ಡಾನ್ ಜಯರಾಜ್ ರೋಲ್​ ಅನ್ನೇ ನಿಭಾಯಿಸಿದ್ದಾರೆ.

ಡಾಲಿ ಧನಂಜಯ್ ರೆಟ್ರೋ ಲುಕ್ ಸಖತ್
ಕನ್ನಡದ ನಾಯಕ ನಟ ಡಾಲಿ ಧನಂಜಯ್ ಸದ್ಯದ ಬಹು ಬೇಡಿಕೆಯ ನಾಯಕ ನಟರೇ ಆಗಿದ್ದಾರೆ. ಕೈಯಲ್ಲಿ ಸುಮಾರು ಪ್ರೋಜೆಕ್ಟ್​ಗಳೂ ಇವೆ. ಸ್ವತಃ ನಿರ್ಮಾಣದಲ್ಲೂ ಒಂದಷ್ಟು ಸಿನಿಮಾ ಮಾಡೋಕೆ ಮುಂದಾಗಿದ್ದಾರೆ.

Actor Daali Dhananjaya Now Making Different Promotion to his New Movie Head Bush
ಹೆಡ್ ಬುಷ್ ಚಿತ್ರದ ಧನಂಜಯ್ ರೆಟ್ರೋ ಗೆಟಪ್


ಸಿನಿಮಾ ನಟನೆ ಮತ್ತು ನಿರ್ಮಾಣ ಎರಡನ್ನೂ ಮಾಡುತ್ತಲೇ ಧನಂಜಯ್ ಈಗ ಕನ್ನಡ ಪ್ರೇಕ್ಷಕರ ಹಾಟ್ ಫೇವರಿಟ್ ನಟರೇ ಆಗಿದ್ದಾರೆ. ಅತ್ಯುತ್ತಮ ಪಾತ್ರಗಳನ್ನೆ ಮಾಡುತ್ತಲೇ ಬಂದ ಧನಂಜಯ್, ಅಲ್ಲಮ ಪ್ರಭು ಪಾತ್ರದಲ್ಲೂ ಕಂಗೊಳಿಸಿದರು. ರಾಟೆ ಸಿನಿಮಾದಲ್ಲಿ ಭಿನ್ನವಾಗಿಯೇ ಕಾಣಿಸಿಕೊಂಡರು.

ಬೆಲ್ ಬಾಟಂ ಪ್ಯಾಂಟ್ ಧರಿಸಿ ಶಾರ್ಜಾಗೆ ಹಾರಿದ ಡಾಲಿ ಧನಂಜಯ್
ಆದರೆ ಧನಂಜಯ್ ಕೈ ಹಿಡಿದಿದ್ದು ಮಾತ್ರ ವಿಲನ್ ಪಾತ್ರಗಳೇ. ಅದಕ್ಕೆ ಸಾಕ್ಷಿ ಟಗರು ಸಿನಿಮಾನೇ ಆಗಿದೆ. ಈ ಚಿತ್ರ ಡಾಲಿ ಪಾತ್ರದ ಮೂಲಕ ಕನ್ನಡಿಗರ ಮನಸ್ಸನ್ನ ಕದ್ದ ಡಾಲಿ ಧನಂಜಯ್ ಈಗ ಡಾನ್ ಜಯರಾಜ್ ಜೀವನ ಆಧರಿಸಿದ ಹೆಟ್ ಬುಷ್ ಸಿನಿಮಾ ಮಾಡಿದ್ದಾರೆ.

ಇದನ್ನೂ ಓದಿ: Mummy Director: ಸೈತಾನ್ ಹಿಂದೆ ಬಿದ್ದ ಕನ್ನಡದ ಮಮ್ಮಿ ಡೈರೆಕ್ಟರ್; ದೆವ್ವದ ಕತೆಗೆ ದುಡ್ಡು ಹಾಕಿದ ಲೋಹಿತ್

ಇದು ಆ ದಿನಗಳ ಸ್ಟೋರಿ ಅಲ್ವೇ, ಅಂದಿನ ಉಡುಗೆ-ತೊಡುಗೆಯಲ್ಲಿಯೇ ಧನಂಜಯ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅದೇ ಚಿತ್ರದ ಬೆಲ್​ ಬಾಟಂ ಡ್ರೆಸ್ ಅನ್ನೇ ತೊಟ್ಟು ಈಗ ರಾಜ್ ಕಪ್ ಗಾಗಿಯೇ ದುಬೈ ಪ್ರಯಾಣ ಬೆಳೆಸಿದ್ದಾರೆ.

ಇದೇ 24ಕ್ಕೆ ಶಾರ್ಜಾದಲ್ಲಿ ರಾಜ್ ಕಪ್ ಸೀಸನ್-5
ದುಬೈನಲ್ಲಿ ಇದೇ 24 ರಂದು ರಾಜ್ ಕಪ್ ಪಂದ್ಯ ನಡೆಯಲಿದೆ. ಇಲ್ಲಿಯೇ ಧನಂಜಯ್ ರೆಟ್ರೋ ಬೆಲ್ ಬಾಟಂ ಲುಕ್​ ಅಲ್ಲಿಯೇ ಕಾಣಿಸಿಕೊಂಡು ಎಲ್ಲರ ಗಮನ ಸೆಳೆಯಲಿದ್ದಾರೆ.
ಈ ರೀತಿ ಉಡುಗೆಯನ್ನ ಸಹಜವಾಗಿಯೇ ಈಗ ಯಾರೂ ತೊಡೋದಿಲ್ಲ.

Actor Daali Dhananjaya Now Making Different Promotion to his New Movie Head Bush
ರಾಜ್ ಕಪ್ ಪಂದ್ಯಕ್ಕಾಗಿ ದುಬೈಗೆ ಹಾರಿದ ಧನಂಜಯ್


ಆದರೆ ಧನಂಜಯ್ ರಾಜ್ ಕಪ್ ಟೈಮ್​ನಲ್ಲಿ ಬೆಲ್​ ಬಾಟಂ ಪ್ಯಾಂಟ್ ತೊಟ್ಟು ಆಕರ್ಷಣೆಯ ಕೇಂದ್ರ ಬಿಂದು ಆಗಲಿದ್ದಾರೆ. ಅದರಂತೆ ಈಗಾಗಲೇ ಹೆಡ್ ಬುಷ್ ಚಿತ್ರದ ಪ್ರಮೋಷನ್ ಕೆಲಸವೂ ಶುರು ಆಗಿದೆ.

ಹೆಡ್ ಬುಷ್ ಚಿತ್ರದಲ್ಲಿ ಡಾಲಿ ಧನಂಜಯ್ ರೆಟ್ರೋ ಲುಕ್
ಇತ್ತೀಚಿಗೆ ಈ ಸಿನಿಮಾದ ಪ್ರೆಸ್ ಮೀಟ್ ಕೂಡ ನಡೆದಿದೆ. ಸಿನಿಮಾ ತಂಡ ಇಲ್ಲಿ ಎಲ್ಲ ಡಿಟೈಲ್ ಅನ್ನೂ ಹಂಚಿಕೊಂಡಿದೆ. ಡಾಲಿ ಧನಂಜಯ್ ತಮ್ಮದೇ ರೀತಿಯಲ್ಲಿ ಈಗ ಸಿನಿಮಾ ಪ್ರಚಾರವನ್ನೂ ಶುರು ಮಾಡಿದ್ದಾರೆ.

ಇದನ್ನೂ ಓದಿ: Samantha: ಟ್ರೀಟ್ಮೆಂಟ್​​ಗೆ ವಿದೇಶಕ್ಕೆ ಹೋದ ಸಮಂತಾ, ನಟಿಯ ಮ್ಯಾನೇಜರ್ ಹೇಳಿದ್ದಿಷ್ಟು

ಶಾರ್ಜಾದಲ್ಲಿ ನಡೆಯೋ ರಾಜ್ ಕಪ್ ಸೀಸನ್-5 ಪಂದ್ಯದ ವೇಳೆ ಡಾಲಿ ಧನಂಜಯ್ ರೆಟ್ರೋ ಲುಕ್ ಅಲ್ಲಿಯೇ ಕಂಗೊಳಿಸಲಿದ್ದಾರೆ. ಅಲ್ಲಿಗೆ ಹೋಗುವ ಮುಂಚೇನೆ ಏರ್​ಪೋರ್ಟ್​ ನಲ್ಲಿಯೇ ಬೆಲ್ ಬಾಟಂ ಪ್ಯಾಂಟ್ ಧರಿಸಿ ರೆಟ್ರೋ ಲುಕ್ ಅಲ್ಲಿಯೇ ಧನಂಜಯ್ ಎಲ್ಲರ ಗಮನ ಸೆಳೆದಿದ್ದಾರೆ.

ಅಕ್ಟೋಬರ್-21ಕ್ಕೆ ಹೆಡ್ ಬುಷ್ ಸಿನಿಮಾ ರಿಲೀಸ್
ಅಕ್ಟೋಬರ್-21 ರಂದು ಹೆಡ್ ಬುಷ್ ಸಿನಿಮಾ ಎಲ್ಲೆಡೆ ರಿಲೀಸ್ ಆಗುತ್ತಿದೆ. ಶೂನ್ಯ (Shoonya) ನಿರ್ದೇಶನಕ್ಕೆ ಅಗ್ನಿ ಶ್ರೀಧರ್ ಸ್ಕ್ರಿಪ್ಟ್ ಮಾಡಿದ್ದಾರೆ. ಡಾನ್ ಜಯರಾಜ್ ಜೀವನದ ರಿಯಲ್ ಕಥೆಯನ್ನೆ ಈ ಸಿನಿಮಾದಲ್ಲಿ ತೋರಲಾಗುತ್ತಿದೆ. ಈಗಲೇ ಈ ಸಿನಿಮಾ ಬಗ್ಗೆ ಒಂದು ಕುತೂಹಲ ಕೂಡ ಹುಟ್ಟಿಕೊಂಡಿದೆ.
First published: