Dhananjay: ಲಕ್ ಚಿತ್ರದಲ್ಲಿ ನಟಿಸೋ ಲಕ್ ಡಾಲಿಗೆ ಇಲ್ವಾ? ಧನಂಜಯ್ ಹೇಳಿದ್ದೇನು?

ನಾನು ಲಕ್ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದೇನೆ!

ನಾನು ಲಕ್ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದೇನೆ!

Dhananjay: ಸಾಮಾನ್ಯವಾಗಿ ಡಾಲಿ ಧನಂಜಯ್ ಈ ರೀತಿ ಯಾರಿಗೂ ಹೇಳೋದಿಲ್ಲ. ಯಾರಿಗೂ ಹರ್ಟ್ ಕೂಡ ಮಾಡೋದಿಲ್ಲ. ಆದರೆ ಲಕ್ ಸಿನಿಮಾ ವಿಷಯದಲ್ಲಿ ಏನ್ ಆಗಿದೆ. ಒಂದಷ್ಟು ಡಿಟೈಲ್ಸ್ ಇಲ್ಲಿದೆ ನೋಡಿ.

  • Share this:

ಮೊನ್ನೆ ಕನ್ನಡದಲ್ಲಿ ಒಂದು ಸಿನಿಮಾದ (Dhananjay Luck Movie Issue) ಪೋಸ್ಟರ್ ರಿಲೀಸ್ ಆಯಿತು. ಆ ಚಿತ್ರಕ್ಕೆ ಲಕ್ ಅನ್ನುವ ಹೆಸರು ಇತ್ತು. ಡಾಲಿ ಧನಂಜಯ್ ಈ ಚಿತ್ರಕ್ಕೆ ತಮ್ಮದೇ ರೀತಿ ಸಪೊರ್ಟ್ ಮಾಡಿದರು. ಸಿನಿಮಾ (Actor Daali Dhananjay) ಪೋಸ್ಟರ್ ರಿಲೀಸ್ ಮಾಡಿಕೊಟ್ಟರು. ಆದರೆ ಆ ದಿನ ಸಿನಿಮಾ ತಂಡ ಇನ್ನೂ ಒಂದು ವಿಷಯ ಹೇಳಿಕೊಂಡಿತ್ತು. ಆ ಮಾತು ನಿಜಕ್ಕೂ ಒಂದು ರೀತಿ ಸಿನಿಮಾ ತಂಡಕ್ಕೆ ಒಂದ್ ಒಳ್ಳೆ (Luck Movie Latest Matter) ಬೂಸ್ಟ್ ಆಗಿತ್ತು. ಆದರೆ ಅದೆಲ್ಲವೂ ಈಗ ಕನಸಾಗಿಯೇ ಉಳಿದಿದೆ. ಲಕ್ ಹೊಡೆಯೋಕೆ ಕಾಯುತ್ತಿರೋ ಸಿನಿಮಾ ತಂಡಕ್ಕೆ ಆರಂಭದಲ್ಲಿಯೇ ಡಾಲಿ ಲಕ್ ಕೈ ಕೊಟ್ಟಂತಿದೆ. ಇದರ (Luck Cinema Matter) ಇತರ ವಿಷಯ ಇಲ್ಲಿದೆ ಒಮ್ಮೆ ಓದಿ.


ಲಕ್ ಚಿತ್ರಕ್ಕೆ ಡಾಲಿ ಲಕ್ ಹೊಡೆಯಲೇ ಇಲ್ಲ ಯಾಕೆ?


ಲಕ್ ಸಿನಿಮಾದ ಟೈಟಲ್‌ ಅಲ್ಲಿಯೇ ಲಕ್ ಇದೆ. ಈ ಲಕ್ ಚಿತ್ರದಲ್ಲಿ ಡಾಲಿ ಅಭಿನಯ ಕೂಡ ಮತ್ತೊಂದು ಲಕ್ ಕೊಡ್ತದೆ ಅನ್ನುವ ನಿರೀಕ್ಷೆ ಇತ್ತು. ಆದರೆ ಈಗ ಅದು ಸುಳ್ಳಾಗಿದೆ. ಸಿನಿಮಾ ತಂಡದ ಒಂದು ಕನಸು ನನಸಾಗದೇ ಉಳಿದಿದೆ.


Kannada Actor Daali Dhananjay Luck Movie Latest Matter
ಲಕ್ ಚಿತ್ರದ ನಟನೆ ಕುರಿತು ಡಾಲಿ ಸ್ಪಷ್ಟನೆ ಏನು?


ಲಕ್ ಚಿತ್ರದ ಆ ಅತಿಥಿ ಪಾತ್ರ ಯಾರ್ ಮಾಡ್ತಾರೆ?


ಆದರೆ ಸಿನಿಮಾ ತಂಡ ತಮ್ಮ ಈ ಚಿತ್ರದಲ್ಲಿ ಡಾಲಿ ಧನಂಜಯ್ ಅಭಿನಯಿಸುತ್ತಿದ್ದಾರೆ. ಸಿನಿಮಾದಲ್ಲಿ ಬರೋ ಒಂದು ಅತಿಥಿ ಪಾತ್ರಕ್ಕೆ ಇವರೇ ಅತಿಥಿ ಅಂತಲೇ ಹೇಳಿಕೊಂಡಿತ್ತು. ಮಾಧ್ಯಮ ಕೂಡ ಅದನ್ನ ನಂಬಿತ್ತು. ಆದರೆ ಸಿನಿಮಾ ತಂಡದ ಈ ಒಂದು ಸುದ್ದಿ ಇದೀಗ ಸುಳ್ಳಾಗಿದೆ.




ಸ್ಮೈಲ್ ಮಂಜು ಕನಸು ನುಚ್ಚು-ನೂರಾಯಿತೇ?


ಲಕ್ ಚಿತ್ರದ ನಾಯಕ ಮತ್ತು ನಿರ್ಮಾಪಕ ಸ್ಮೈಲ್ ಮಂಜು ದೊಡ್ಡ ಕನಸು ಕಂಡಿದ್ದರು. ತಮ್ಮ ಚಿತ್ರದಲ್ಲಿ ತಮ್ಮ ಆತ್ಮೀಯ ಡಾಲಿ ಧನಂಜಯ್ ನಟಿಸ್ತಾರೆ ಅನ್ನುವ ನಂಬಿಕೆ ಕೂಡ ಇತ್ತು. ಆದರೆ ಅದೆಲ್ಲವೂ ಈಗ ಸಾಧ್ಯ ಆಗ್ತಾನೇ ಇಲ್ಲ ಬಿಡಿ.


ನಾನು ಲಕ್ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದೇನೆ!


ಡಾಲಿ ಧನಂಜಯ್ ಈ ಕುರಿತು ಮಾತನಾಡಿದ್ದಾರೆ. ಲಕ್ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದೇನೆ. ಆದರೆ ಈ ಚಿತ್ರದಲ್ಲಿ ನಾನು ನಟಿಸುತ್ತಿಲ್ಲ. ಯಾವುದೇ ಅತಿಥಿ ಪಾತ್ರವನ್ನೂ ಮಾಡುತ್ತಿಲ್ಲ. ಕಾರಣಾಂತರದಿಂದ ಇದು ಸಾಧ್ಯವಾಗುತ್ತಿಲ್ಲ.


ಲಕ್ ಚಿತ್ರದ ನಟನೆ ಕುರಿತು ಡಾಲಿ ಸ್ಪಷ್ಟನೆ ಏನು?


ಈ ಒಂದು ವಿಷಯವನ್ನ ಸಿನಿಮಾ ತಂಡಕ್ಕೆ ಈಗಾಗಲೇ ಹೇಳಿದ್ದೇನೆ. ಮನವರಿಕೆ ಕೂಡ ಮಾಡಿದ್ದೇನೆ. ಹಾಗಾಗಿಯೇ ನಾನು ಲಕ್ ಸಿನಿಮಾದಲ್ಲಿ ನಟಿಸುತ್ತಿಲ್ಲ ಅಂತಲೇ ಸ್ಪಷ್ಟವಾಗಿಯೇ ಹೇಳಿದ್ದಾರೆ. ಅಲ್ಲಿಗೆ ಇಲ್ಲಿವರೆಗೂ ಇದ್ದ ಲಕ್ ಸಿನಿಮಾದಲ್ಲಿ ಡಾಲಿ ನಟಿಸ್ತಾರೆ ಅನ್ನುವ ಸುದ್ದಿಗೆ ಪೂರ್ಣ ವಿರಾಮ್ ಬಿದ್ದಿದೆ.


ಲಕ್ ಸಿನಿಮಾದ ಡೈರೆಕ್ಟರ್ ಯಾರು ಗೊತ್ತೆ?


ಲಕ್ ಚಿತ್ರವನ್ನ ಹರೀಶ ನಿರ್ದೇಶನ ಮಾಡುತ್ತಿದ್ದಾರೆ. ಸ್ಮೈಲ್ ಮಂಜು ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ. ವಿಜಯ್ ಹರಿತ್ಸ ಸಂಗೀತ ಕೊಟ್ಟಿದ್ದಾರೆ. ಇನ್ನುಳಿದಂತೆ ಲಕ್ ಚಿತ್ರದಲ್ಲಿ ಡಾಲಿ ನಟಿಸುತ್ತಿಲ್ಲ ಅನ್ನೋದು ಕ್ಲೀಯರ್ ಆಗಿದೆ.


Kannada Actor Daali Dhananjay Luck Movie Latest Matter
ಲಕ್ ಚಿತ್ರದ ಆ ಅತಿಥಿ ಪಾತ್ರ ಯಾರ್ ಮಾಡ್ತಾರೆ?


ಡಾಲಿ ಧನಂಜಯ್ ಯಾರಿಗೂ ಹರ್ಟ್ ಮಾಡೋರಲ್ಲ!


ಆದರೂ ಒಂದಷ್ಟು ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ. ಸಾಮಾನ್ಯವಾಗಿ ಡಾಲಿ ಧನಂಜಯ್ ಈ ರೀತಿ ಯಾರಿಗೂ ಹೇಳೋದಿಲ್ಲ. ಯಾರಿಗೂ ಹರ್ಟ್ ಕೂಡ ಮಾಡೋದಿಲ್ಲ. ಆದರೆ ಲಕ್ ಸಿನಿಮಾ ವಿಷಯದಲ್ಲಿ ಏನ್ ಆಗಿದೆ. ಕಾರಣಾಂತರದಿಂದಲೇ ಲಕ್ ಚಿತ್ರದ ಅತಿ ಪಾತ್ರ ಮಾಡೋದಿಲ್ಲ ಅಂತ ಹೇಳಿದ್ದಾರೆ.


ಲಕ್ ಸಿನಿಮಾ ತಂಡ ಏನಾದರೂ ಯಡವಟ್ಟು ಮಾಡಿದಿಯೇ?


ಹಾಗಿದ್ದರೂ ಸಿನಿಮಾ ತಂಡ ಡಾಲಿ ಧನಂಜಯ್ ಅವರಿಗೆ ಹೇಳದೇನೆ ಅನೌನ್ಸ್ ಮಾಡಿದ್ರೆ? ಡಾಲಿಗೆ ಕೇಳದೇನೆ ಈ ರೀತಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದರೇ? ಅಥವಾ ಪಾತ್ರವೇ ಸರಿ ಇರಲಿಲ್ಲವೇ? ಗೊತ್ತಿಲ್ಲ. ಆದರೆ ಡಾಲಿ ಧನಂಜಯ್ ಈ ಹಿಂದಿನ ವೀಕೆಂಡ್ ವಿಥ್ ರಮೇಶ್ ಶೋದಲ್ಲಿ ಒಂದು ಮಾತು ಹೇಳಿದ್ದರು.


ಇದನ್ನೂ ಓದಿ: Raai Laxmi: ಲಕ್ಷ್ಮಿ ಅಂತ ಹೆಸರಿಡ್ಕೊಂಡು ಹಿಂಗೆ ಡ್ರೆಸ್ ಮಾಡ್ತೀರಲ್ಲಾ ಮೇಡಂ! ರಾಯ್ ಲಕ್ಷ್ಮಿ ಟ್ರೋಲ್


ಪಾತ್ರಗಳ ಆಯ್ಕೆಯಲ್ಲಿ ಡಾಲಿ ಹುಷಾರ್ ಆಗಿದ್ದಾರಾ?

top videos


    ಇನ್ಮುಂದೆ ಪಾತ್ರಗಳ ಆಯ್ಕೆ ಚಿತ್ರಗಳ ಆಯ್ಕೆ ಮಾಡೋ ವಿಚಾರದಲ್ಲಿ ಒಂದಷ್ಟು ಜಾಗೃತಿವಹಿಸಬೇಕು ಅಂತಲೇ ಹೇಳಿದ್ದರು. ಅದು ಲಕ್ ಸಿನಿಮಾದಿಂದಲೇ ಶುರು ಆಯಿತೇ? ಅನ್ನುವ ಪ್ರಶ್ನೆ ಕೂಡ ಈಗ ಹುಟ್ಟಿಕೊಂಡಿದೆ.

    First published: