• Home
  • »
  • News
  • »
  • entertainment
  • »
  • Kantara-Actor Chetan: ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ ಎಂದ ನಟ ಚೇತನ್! ರಿಷಬ್ ಶೆಟ್ಟಿ ಹೇಳಿದ್ದೇನು?

Kantara-Actor Chetan: ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ ಎಂದ ನಟ ಚೇತನ್! ರಿಷಬ್ ಶೆಟ್ಟಿ ಹೇಳಿದ್ದೇನು?

ರಿಷಬ್ ಶೆಟ್ಟಿ ಹೇಳಿರೋದು ಸುಳ್ಳೇ?

ರಿಷಬ್ ಶೆಟ್ಟಿ ಹೇಳಿರೋದು ಸುಳ್ಳೇ?

ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ /ನಲಿಕೆ/ ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡ ಚಿತ್ರರಂಗದ (Kantara) ಕಾಂತಾರ ರಾಜ್ಯ-ರಾಷ್ಟ್ರಮಟದಲ್ಲಿ ಹೊಳೆಯುತ್ತಿದೆ. ತುಳುನಾಡಿನ (Culture) ಸಂಸ್ಕೃತಿಯನ್ನ ಇದು ಎಲ್ಲೆಡೆ ಪಸರಿಸುತ್ತಿದೆ. ಭೂತಕೋಲದಂತಹ (Bhoota Kola) ಆಚರಣೆ ಬಗ್ಗೆನೂ ಈ ಸಿನಿಮಾ ಹೇಳುತ್ತದೆ. ಒಂದು ಸಂಸ್ಕೃತಿಯನ್ನ ಒಂದು ಸಿನಿಮಾದಲ್ಲಿ ತರೋದು ಅಷ್ಟು ಸುಲಭವಲ್ಲ. ಅದನ್ನ ಎಲ್ಲೆಡೆ ತೆಗೆದುಕೊಂಡು ಹೋಗುವುದು ಇನ್ನೂ ಒಂದು ಚಾಲೆಂಜ್. ಆದರೂ ರಿಷಬ್ ಶೆಟ್ಟಿ (Director Rishab Shetty) ಆ ಒಂದು ಸಾಹಸಕ್ಕೆ ಕೈ ಹಾಕಿ ಗೆದಿದ್ದಾರೆ. ಎಲ್ಲರ ಪ್ರಶಂಸೆಗೂ ಪಾತ್ರರಾಗಿದ್ದಾರೆ. ಆದರೆ ಇಲ್ಲಿವರೆಗೂ ಸಿನಿಮಾದ ಬಗ್ಗೆ ಯಾವುದೇ ಪ್ರಶ್ನೆಗಳು ಎದ್ದಿರಲಿಲ್ಲ. ಆ ಒಂದು ಪ್ರಶ್ನೆಯನ್ನ ಹೋರಾಟಗಾರ ನಟ ಆ ದಿನಗಳು ಚೇತನ್ ಈಗ ಎತ್ತಿದ್ದಾರೆ. ಈ ಪ್ರಶ್ನೆಗೆ ರಿಷಬ್ ಇನ್ನೂ ಉತ್ತರ ಕೊಟ್ಟಿಲ್ಲ. ಆದರೆ ಚೇತನ್ ಕೇಳಿದ ಪ್ರಶ್ನೆ ಅತಿ ಹೆಚ್ಚು ವೈರಲ್ ಆಗುತ್ತಿದೆ.


ಕನ್ನಡದ ಕಾಂತಾರ ಸಿನಿಮಾದ ಹೊಸ ವಿವಾದ ?
ಆ ದಿನಗಳು ಚಿತ್ರ ಖ್ಯಾತಿಯ ನಟ ಚೇತನ್ ವಿಭಿನ್ನ ದೃಷ್ಟಿಕೋನದ ವ್ಯಕ್ತಿ. ತಮ್ಮ ಚಿತ್ರ ಜೀವನದಲ್ಲೂ ಅಂತಹದ್ದೇ ವಿಭಿನ್ನತೆಯನ್ನ ಉಳಿಸಿಕೊಂಡು ಬಂದಿದ್ದಾರೆ. ಸಿನಿಮಾ ಪ್ರೀತಿಯ ಜೊತೆಗೆ ಹೋರಾಟದ ಮನೋಭಾವವನ್ನೂ ಬೆಳೆಸಿಕೊಂಡು ಬಂದಿದ್ದಾರೆ.


Kannada Actor Chetan Comment on Kantara Rishab Shetty statement on Bhoota Kola tradition
ಆ ದಿನಗಳು ಚೇತನ್ ಅಸಲಿ ಸತ್ಯ ಹೇಳ್ತಿದ್ದಾರೆ


ಚೇತನ್ ತಮ್ಮ ಅಭಿಪ್ರಾಯವನ್ನ ಯಾವುದೇ ಭಯವಿಲ್ಲದೇ ಹೇಳಿಕೊಳ್ಳುತ್ತಾರೆ. ತಪ್ಪು ಅನಿಸಿದ್ರೇ ಬಿಡೋದೇ ಇಲ್ಲ. ರಸ್ತೆಗಳಿದು ಹೋರಾಟ ಮಾಡಿಯೇ ಬಿಡ್ತಾರೆ. ಅಷ್ಟೇ ಗಟ್ಟಿ ಧ್ವನಿಯಲ್ಲಿಯೇ ತಮ್ಮ ಅಭಿಪ್ರಾಯವನ್ನೂ ಮಂಡಿಸಿ ಬಿಡ್ತಾರೆ.


ರಿಷಬ್ ಹೇಳಿಕೆ ಪ್ರಶ್ನೆ ಮಾಡಿದ ನಟ ಆ ದಿನಗಳು ಚೇತನ್
ಚೇತನ್ ಅಭಿಪ್ರಾಯದಂತೆ ಆಲೋಚನಾ ಲಹರಿನೂ ವಿಭಿನ್ನವಾಗಿಯೇ ಇದೆ. ಎಲ್ಲರೂ ನೋಡುವ ಹಾಗೆ ಸಮಾಜವನ್ನ ನಟ ಚೇತನ್ ನೋಡೋದೇ ಇಲ್ಲ. ಅವರ ದೃಷ್ಟಿಕೋನವೇ ಬೇರೆ ಇರುತ್ತದೆ.


ಇದನ್ನೂ ಓದಿ: Anchor Anasuya: ವಿಮಾನದಲ್ಲಿ ಹರಿದೋಯ್ತು ಪುಷ್ಪಾ ನಟಿಯ ಶರ್ಟ್! ಆಗಿದ್ದೇನು?


ಇಂತಹ ಈ ನಾಯಕ ನಟ ಈಗ ಒಂದು ಪ್ರಶ್ನೆ ಎತ್ತಿದ್ದಾರೆ. ಈ ಪ್ರಶ್ನೆ ಎಷ್ಟು ಸರಿ? ಎಷ್ಟು ತಪ್ಪು ? ಇದೆಲ್ಲ ನಂತರದ ಮಾತು. ಆದರೆ ರಾಷ್ಟ್ರಮಟ್ಟದಲ್ಲಿ ಹೊಳೆಯುತ್ತಿರೋ ಕಾಂತಾರ ಸಿನಿಮಾದ ಡೈರೆಕ್ಟರ್ ನೀಡಿದ್ದ ಆ ಒಂದು ಹೇಳಿಕೆ ಬಗ್ಗೇನೆ ಈಗ ಆ ದಿನಗಳು ಚೇತನ್ ಪ್ರಶ್ನೆ ಮಾಡಿದ್ದಾರೆ.


ರಿಷಬ್ ಹೇಳಿಕೆಯನ್ನ ಚೇತನ್ ಪ್ರಶ್ನೆ ಮಾಡಿದ್ಯಾಕೆ?
ಹೌದು, ಆ ದಿನಗಳು ಚೇತನ್ ಕೇಳಿದ ಪ್ರಶ್ನೆ ಈಗ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿದೆ. ಈ ಪ್ರಶ್ನೆ ಸುತ್ತವೇ ಆ ದಿನಗಳು ಚೇತನ್ ಸಾಮಾಜಿಕ ತಾಣದಲ್ಲೂ ಬರೆದು ಕೊಂಡಿದ್ದಾರೆ. ಅದು ಇಂತಿದೆ.


"ನಮ್ಮ ಕನ್ನಡದ ಚಲನಚಿತ್ರ 'ಕಾಂತಾರ'ವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ.
ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ.
ಇದು ನಿಜವಲ್ಲ.
ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು.


ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ."


ಕಾಂತಾರ ಚಿತ್ರದಲ್ಲಿ ಭೂತಕೋಲ ಆಚರಣೆನೂ ಇದೆ. ಇದು ನಮ್ಮ ಹಿಂದೂ ಸಂಸ್ಕೃತಿಯ ಭಾಗವೇ ಆಗಿದೆ ಅಂತಲೇ ರಿಷಬ್ ಶೆಟ್ಟಿ ಹೇಳಿದ್ದಾರೆ. ಈ ಒಂದು ಹೇಳಿಕೆಯನ್ನೆ ಚೇತನ್ ಈಗ ಅಲ್ಲಗಳೆದಿದ್ದಾರೆ.


Kannada Actor Chetan Comment on Kantara Rishab Shetty statement on Bhoota Kola tradition
ಭೂತಕೋಲ ನಮ್ಮ ಹಿಂದೂ ಸಂಸ್ಕೃತಿ ಅಲ್ವಾ ?


ನಮ್ಮ ಮೂಲನಿವಾಸಿ ಸಂಸ್ಕೃತಿಗಳು ಹಿಂದೂ ಸಂಸ್ಕೃತಿ ಅಲ್ಲವೇ ಅಲ್ಲ. ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮ ಬರೋಕು ಮುಂಚೇನೆ ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು ಇದ್ದವು ಅಂತಲೇ ತಮ್ಮ ಅಭಿಪ್ರಾಯವನ್ನ ಚೇತನ್ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Vaishali Takkar: ಕಿರುತೆರೆ ನಟಿಯ ಡೆತ್‌ನೋಟ್‌ನಲ್ಲಿದೆ ಆತನ ಹೆಸರು! ಏನಾಗಿತ್ತು ಗೊತ್ತಾ ಆಕೆ ಕೊನೆ ಆಸೆ?


ಉಳಿದಂತೆ ಈ ಬಗ್ಗೆ ರಿಷಬ್ ಶೆಟ್ಟಿ  ರಿಯಾಕ್ಟ್ ಮಾಡಲು "NO" ಅಂತಲೇ ಹೇಳಿದ್ದಾರೆ.  ಚೇತನ್ ತಮ್ಮ ಅಭಿಪ್ರಾಯವನ್ನ ತಮ್ಮ ವಿರೋಧವನ್ನ ಫೇಸ್ ಬುಕ್ ನಲ್ಲಿ ಬರೆದುಕೊಂಡು ಇರೋ ಸತ್ಯದ ಮೇಲೆ ಬೆಳಕು ಚೆಲ್ಲೋ ಕೆಲಸ ಮಾಡಿದ್ದಾರೆ.

First published: