Chetan Chandra: ಕನ್ನಡದ 8 ಪ್ಯಾಕ್ ಹೀರೋ ಚೇತನ್ ಚಂದ್ರ ರಾಜಕೀಯಕ್ಕೆ ಬರ್ತಾರಾ?

ಚೇತನ್ ಚಂದ್ರ ರಾಜಕೀಯಕ್ಕೆ ಬರೋದು ಪಕ್ಕಾನಾ?

ಚೇತನ್ ಚಂದ್ರ ರಾಜಕೀಯಕ್ಕೆ ಬರೋದು ಪಕ್ಕಾನಾ?

ಚೇತನ್ ಚಂದ್ರ ಈ ಬಗ್ಗೆ ನ್ಯೂಸ್-18 ಕನ್ನಡ ಡಿಜಿಟಲ್‌ ರಿಯಾಕ್ಟ್ ಮಾಡಿದ್ದಾರೆ. ಸದ್ಯದ ಸುದ್ದಿ ಸುಳ್ಳು ಅಂತಲೂ ಹೇಳಲಿಲ್ಲ. ನಿಜ ಅಂತಲೂ ಹೇಳಿಲ್ಲ. ಆದರೆ ರಾಜಕೀಯ ಆಧರಿಸಿದ ಚಿತ್ರ ಪ್ರಭುತ್ವ ಚೆನ್ನಾಗಿಯೇ ಬಂದಿದೆ ಅಂತಲೇ ಹೇಳುತ್ತಾರೆ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:
  • published by :

ಕನ್ನಡ ಯುವ ನಾಯಕ ನಟ ಚೇತನ್ ಚಂದ್ರ (Chetan Chandra Movie) ವೆಲ್ ಬಿಲ್ಡ್ ಹೀರೋ ಅಂತ ಎಲ್ಲರಿಗೂ ಗೊತ್ತಿದೆ. ದುನಿಯಾ ವಿಜಯ್ ಆದ್ಮೇಲೆ 8 ಪ್ಯಾಕ್ ಮಾಡಿದ ಎರಡನೇ ಹೀರೋ ಅನ್ನುವ ಹೆಗ್ಗಳಿಕೆಗೂ (Chetan Political Entry) ಪಾತ್ರರಾಗಿದ್ದಾರೆ. ಸೀರಿಯಲ್ ಮೂಲಕ ಪುಟ್ಟ ಪರದೆ ಮೇಲೂ ಮಿಂಚಿದ್ದಾರೆ. ಆದರೆ ಈಗ ಹೊಸದೊಂದು ಸುದ್ದಿ ಹರಿದಾಡುತ್ತಿದೆ. ಮುಂಬರುವ ಎಲೆಕ್ಷನ್‌ನಲ್ಲಿ ರಾಜರಾಜೇಶ್ವರಿ (Chetan Prabhutva Cinema) ನಗರದಿಂದಲೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಅನ್ನೋದೇ ಆ ಸುದ್ದಿಯ ಒಟ್ಟು ತಿರುಳಾಗಿದೆ. ಸಡನ್‌ ಆಗಿಯೇ ಈ ಒಂದು ಸುದ್ದಿ ಹರಿದಾಡಲು (Chetna Chandra Movie) ಒಂದು ಕಾರಣವೂ ಇದೆ. ಆ ಕಾರಣದ ಹೆಸರು ಪ್ರಭುತ್ವ ಅನ್ನುವ ಸಿನಿಮಾ ಆಗಿದೆ. ಅದ್ಹೇಗೆ ಅನ್ನೋದನ್ನ ಇಲ್ಲಿ ಹೇಳಿದ್ದೇವೆ ಓದಿ.


ಚೇತನ್ ಚಂದ್ರ ರಾಜಕೀಯಕ್ಕೆ ಬರೋದು ಪಕ್ಕಾನಾ?


ಕನ್ನಡದ ನಾಯಕ ನಟ ಚೇತನ್ ಚಂದ್ರ ಸ್ಪೆಷಲ್ ಆಗಿಯೇ ಇದ್ದಾರೆ. ಅಳೆದು-ತೂಗಿ ಪಾತ್ರಗಳನ್ನ ಒಪ್ಪುತ್ತಾರೆ. ಏನೋ ಹೊಸದನ್ನ ಮಾಡಬೇಕು ಅನ್ನುವ ಹಂಬಲವನ್ನ ಕೂಡ ಇಟ್ಟುಕೊಂಡಿದ್ದಾರೆ. ಆ ಒಂದು ನಿಟ್ಟಿನಲ್ಲಿಯೇ ರಾಜಕೀಯ ಅಂಶಗಳನ್ನ ಇಟ್ಟುಕೊಂಡಿರೋ ಪ್ರಭುತ್ವ ಅನ್ನುವ ಸಿನಿಮಾ ಕೂಡ ಮಾಡಿದ್ದಾರೆ.


Kannada Actor Chetan chandra Political Entry Latest Updates
ಪ್ರಭುತ್ವ ಚಿತ್ರಕ್ಕೂ ಚೇತನ್ ರಾಜಕೀಯ ಎಂಟ್ರಿಗೆ ಲಿಂಕ್ ಇದಿಯಾ?


ಏಪ್ರಿಲ್ ತಿಂಗಳಲ್ಲಿ ಈ ಚಿತ್ರವನ್ನ ರಿಲೀಸ್ ಮಾಡೋ ಪ್ಲಾನ್ ಕೂಡ ಇದೆ. ಇದರ ಬೆನ್ನಲ್ಲಿಯೇ ಚೇತನ್ ಚಂದ್ರ ರಾಜಕೀಯ ಎಂಟ್ರಿಯ ಸುದ್ದಿ ಬಲವಾಗಿಯೇ ಕೇಳಿ ಬರುತ್ತಿದೆ. ರಾಜರಾಜೇಶ್ವರಿ ನಗರದಿಂದಲೇ ಸ್ವತಂತ್ರ ಅಭ್ಯರ್ಥಿಯಾಗಿ ಚೇತನ್ ಎಲೆಕ್ಷನ್ ನಿಲ್ತಾರೆ ಅನ್ನೋದೇ ಈಗೀನ ಸುದ್ದಿ ಆಗಿದೆ.




ಪ್ರಭುತ್ವ ಚಿತ್ರಕ್ಕೂ ಚೇತನ್ ರಾಜಕೀಯ ಎಂಟ್ರಿಗೆ ಲಿಂಕ್ ಇದಿಯಾ?


ಆದರೆ ಚೇತನ್ ಚಂದ್ರ ಈ ಬಗ್ಗೆ ನ್ಯೂಸ್-18 ಕನ್ನಡ ಡಿಜಿಟಲ್‌ ರಿಯಾಕ್ಟ್ ಮಾಡಿದ್ದಾರೆ. ಸದ್ಯದ ಸುದ್ದಿ ಸುಳ್ಳು ಅಂತಲೂ ಹೇಳಲಿಲ್ಲ. ನಿಜ ಅಂತಲೂ ಹೇಳಿಲ್ಲ. ಆದರೆ ರಾಜಕೀಯ ಆಧರಿಸಿದ ಚಿತ್ರ ಪ್ರಭುತ್ವ ಚೆನ್ನಾಗಿಯೇ ಬಂದಿದೆ ಅಂತಲೇ ಹೇಳುತ್ತಾರೆ.


ಪ್ರಭುತ್ವ ಚಿತ್ರ ತುಂಬಾ ಚೆನ್ನಾಗಿ ಬಂದಿದೆ. ರಾಜಕೀಯಕ್ಕೆ ಸಂಬಂಧಿಸಿದಂತೆ ಇದು ಒಳ್ಳೆಯ ಸಿನಿಮಾನೇ ಆಗಿದೆ. ಇದರಲ್ಲಿ ಎಲ್ಲವೂ ಇದೆ ಅಂತ ಚೇನತ್ ಚಂದ್ರ ಹೇಳಿಕೊಂಡರು. ಸಿನಿಮಾವನ್ನ ಎಲೆಕ್ಷನ್ ಮುಂಚೇನೆ ರಿಲೀಸ್ ಮಾಡುತ್ತೇವೆ. ಜನ ಈ ಚಿತ್ರವನ್ನ ಒಪ್ಪಿಕೊಳ್ಳುತ್ತಾರೆ ಅನ್ನುವ ನಂಬಿಕೆ ಕೂಡ ಈಗಲೇ ಇವರಲ್ಲಿ ಮೂಡಿದA


ಚೇತನ್ ಚಂದ್ರ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ?


ಚೇತನ್ ಚಂದ್ರ ರಾಜಕೀಯ ಎಂಟ್ರಿ ಆಗೋ ವಿಚಾರ ಇಂದು ನಿನ್ನೆಯದಲ್ಲ. ಕಳೆದ ಐದು ವರ್ಷದಿಂದಲೂ ಕೇಳಿ ಬರುತ್ತಿದೆ. ಮಾತು ಕಥೆಗಳೂ ನಡೆಯುತ್ತಲೇ ಇವೆ. ಆದರೆ ಯಾವುದನ್ನೂ ಒಪ್ಪಿಕೊಂಡಿರಲಿಲ್ಲ. ಈಗಲೂ ಅದೇ ರೀತಿ ಮಾತು ಕಥೆ ನಡೆಯುತ್ತಿದೆ. ಹಾಗಂತ ಎಲ್ಲವನ್ನೂ ಈಗಲೇ ಹೇಳೋದು ಕಷ್ಟ ಅಂತ ಚೇತನ್ ಚಂದ್ರ ಹೇಳುತ್ತಾರೆ.


Kannada Actor Chetan chandra Political Entry Latest Updates
ಚೇತನ್ ಚಂದ್ರ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ?


ಈ ಹಿಂದೆ ಚೇತನ್ ಚಂದ್ರ ಅವರಿಗೆ ಕಾರ್ಪೋರೇಟರ್ ಎಲೆಕ್ಷನ್‌ಗೂ ಆಫರ್‌ ಬಂದಿತ್ತು. ಆದರೆ ಚೇತನ್ ಚಂದ್ರ ಅದನ್ನ ಒಪ್ಪಿಕೊಂಡಿರಲಿಲ್ಲ. ಹಾಗಾಗಿಯೇ ಚೇತನ್ ರಾಜಕೀಯ ಎಂಟ್ರಿ ಆಗ ಆಗಲೇ ಇಲ್ಲ. ಈಗ ಮತ್ತೊಮ್ಮೆ ಆ ಸುದ್ದಿ ಬಲು ಜೋರಾಗಿಯೇ ಇದೆ.


ಇದನ್ನೂ ಓದಿ: Tamannaah Bhatia: ಕೆಜಿಎಫ್ ಚೆಲುವೆಯ ಮದುವೆಗೆ ಮುಹೂರ್ತ ಫಿಕ್ಸ್, ತಮನ್ನಾ ವಯಸ್ಸೆಷ್ಟು?


ಚೇತನ್ ಚಂದ್ರ ಅಭಿನಯದ ಪ್ರಭುತ್ವ ರಿಲೀಸ್‌ಗೆ ರೆಡಿ ಆಗಿದೆ. ಸಿನಿಮಾದ ಟ್ರೈಲರ್ ಕೂಡ ಈಗಾಗಲೇ ರಿಲೀಸ್ ಆಗಿದೆ. ಆರ್‌. ರಂಗನಾಥ್ ಈ ಚಿತ್ರಕ್ಕೆ ಕಥೆ-ಚಿತ್ರಕಥೆಯನ್ನ ಬರೆದಿದ್ದಾರೆ. ಎಮಿಲ್ ಮೊಹ್ಮದ್ ಸಂಗೀತದ ಈ ಸಿನಿಮಾದಲ್ಲಿ ಚೇತನ್ ಚಂದ್ರ ಅವರಿಗೆ ಪಾವನಾ ಜೋಡಿ ಆಗಿದ್ದಾರೆ. ನಾಜರ್ ಹಾಗೂ ಆದಿ ಲೋಕೇಶ್ ಕೂಡ ಅಭಿನಯಿಸಿದ್ದಾರೆ.

top videos
    First published: