Life and Deathನಲ್ಲಿ ಆ ದಿನಗಳು ಚೇತನ್, ಅಭಿಮಾನಿಗಳ ಎದೆಬಡಿತ ಹೆಚ್ಚಳ

ಅಪ್ಪಟ ಕನ್ನಡ ಪ್ರೇಮಿ ಆ ದಿನಗಳು ಚೇತನ್​ ಹುಡುಕಿಕೊಂಡು ಪಕ್ಕದ ಟಾಲಿವುಡ್​ನಿಂದಲೂ ನಿರ್ದೇಶಕರು-ನಿರ್ಮಾಪಕರು ಬರುತ್ತಿದ್ದಾರೆ. ಹಾಗೆ ಬಂದ ಸಿನಿಮಾವೊಂದನ್ನ ಈಗಾಗಲೇ ಚೇತನ್ ಪೂರ್ಣ ಮಾಡಿದ್ದಾರೆ. ಈ ಚಿತ್ರ ಈಗ ರಿಲೀಸ್ ಹಂತಕ್ಕೂ ಬಂದಿದೆ.

ಆ ದಿನಗಳು ಚೇತನ್ ಹೊಸ ಚಿತ್ರ ಕನ್ನಡ-ತೆಲುಗು ರಿಲೀಸ್

ಆ ದಿನಗಳು ಚೇತನ್ ಹೊಸ ಚಿತ್ರ ಕನ್ನಡ-ತೆಲುಗು ರಿಲೀಸ್

  • Share this:
ಕನ್ನಡದ ಆ ದಿನಗಳು ಚೇತನ್ ಎಲ್ಲ (Chetan Ahimsa) ಸಿನಿಮಾಗಳನ್ನ ಮಾಡೋದಿಲ್ಲ. ಒಳ್ಳೆ ಕತೆ ಅಂತ ಅನಿಸಿದರೆ ಮಾತ್ರ ಮುಂದುವರೆಯುತ್ತಾರೆ. ಕನ್ನಡದಲ್ಲಿ ಇಲ್ಲಿವರೆಗೂ ಮಾಡಿದ ಸಿನಿಮಾಗಳು (Chetan New Movie) ಚೆನ್ನಾಗಿಯೇ ಇವೆ. ಆ ದಿನಗಳು, ಮೈನಾ, ಬಿರುಗಾಳಿ ಚಿತ್ರಗಳಲ್ಲಿ ಚೇತನ್ ಅಭಿನಯಿಸಿ ಕನ್ನಡಿಗರ ಹೃದಯ ಗೆದ್ದರು. ಅಪ್ಪಟ ಕನ್ನಡ ಪ್ರೇಮಿ ಚೇತನ್​ ಹುಡುಕಿಕೊಂಡು ಪಕ್ಕದ ಟಾಲಿವುಡ್​ನಿಂದಲೂ ನಿರ್ದೇಶಕರು-ನಿರ್ಮಾಪಕರು ಬರುತ್ತಿದ್ದಾರೆ. ಹಾಗೆ ಬಂದ ಸಿನಿಮಾವೊಂದನ್ನ ಈಗಾಗಲೇ ಚೇತನ್ ಪೂರ್ಣ ಮಾಡಿದ್ದಾರೆ. ಈ ಚಿತ್ರ ಈಗ ರಿಲೀಸ್ (Telugu Film Ready To Release) ಹಂತಕ್ಕೂ ಬಂದಿದೆ. ಇನ್ನಷ್ಟೇ ಚಿತ್ರದ ಟೈಟಲ್ ಕೂಡ ಅನೌನ್ಸ್ ಆಗಬೇಕಿದೆ. ಆ ದಿನಗಳು ಚೇತನ್ ಅಭಿನಯದ ಈ ಚಿತ್ರ ತೆಲುಗು ಸೇರಿದಂತೆ ಕನ್ನಡದಲ್ಲೂ ರಿಲೀಸ್ ಆಗುತ್ತದೆ. ತೆಲುಗು ಸಿನಿಮಾ ಕನ್ನಡದಲ್ಲಿ ರಿಲೀಸ್ ಆಗೋದೇ ಅಂತ ನೀವು ಕೇಳಿದ್ರೆ, ಅದಕ್ಕೆ ಕಾರಣ ಬೇರೆ ಯಾರೋ ಅಲ್ಲ. ಅದು ಆ ದಿನಗಳು ಚೇತನ್. ಹೇಗೆ ಅಂತ ನೀವೂ ತಿಳಿಯೋದಾದ್ರೆ, ಈ ಸ್ಟೋರಿ ಓದಿ.

ಆ ದಿನಗಳು ಚೇತನ್ ಪರಭಾಷೆ ಚಿತ್ರಗಳು ಕನ್ನಡದಲ್ಲೂ ರಿಲೀಸ್
ಹೌದು, ಆ ದಿನಗಳು ಚೇತನ್ ತಮ್ಮ ಸಿನಿಮಾ ಪ್ರೇಮಿಗಳಿಗಾಗಿಯೇ ಈ ನಿರ್ಧಾರ ಮಾಡಿದ್ದಾರೆ. ತಮ್ಮ ಬಳಿ ಬರೋ ತೆಲುಗು ನಿರ್ಮಾಪಕರಿಗೆ ತಮ್ಮ ಈ ಒಂದು ಮನವಿ ಮಾಡುತ್ತಿದ್ದಾರೆ. ತಮ್ಮ ಅಭಿನಯದ ಸಿನಿಮಾಗಳು ತೆಲುಗು ಹೊರತಾಗಿ ಕನ್ನಡದಲ್ಲೂ ಬರುವಂತೆ ನೋಡಿಕೊಳ್ಳಿ ಅಂತಲೇ ಹೇಳಿದ್ದಾರೆ.

Kannada Actor Chetan Ahimsa Untitled Telugu Cinema Ready To Release
ಆ ದಿನಗಳು ಚೇತನ್ ಹೊಸ ಸಿನಿಮಾ


ಈ ಹಿನ್ನೆಲೆಯಲ್ಲಿಯೇ ಟಾಲಿವುಡ್​ ನ ಎಸ್.ಎಸ್.ಬ್ಯಾನರ್​ ಅಡಿಯ ಸಿನಿಮಾ ತೆಲುಗು ಮತ್ತು ಕನ್ನಡದಲ್ಲೂ ರಿಲೀಸ್ ಆಗುತ್ತಿದೆ. ವಿಶೇಷ ವಿಷಯದ ಈ ಸಿನಿಮಾವನ್ನ ಟಾಲಿವುಡ್​ ನ ನಿರ್ದೇಶಕ ಅಭಿರಾಮ್ ಪಿಲ್ಲಾ ಡೈರೆಕ್ಟ್ ಮಾಡಿದ್ದಾರೆ. ಈಗಾಗಲೇ ಈ ಚಿತ್ರದ ಚಿತ್ರೀಕರಣದ ಕೆಲಸ ಪೂರ್ಣಗೊಂಡಿದೆ.

ಆ ದಿನಗಳು ಚೇತನ್ ಈ ತೆಲುಗು ಚಿತ್ರದ ಬಗ್ಗೆ ಹೇಳೋದೇನು?
ಆ ದಿನಗಳು, ಮೈನಾ, ಬಿರುಗಾಳಿ ನಾನು ಅಭಿನಯಿಸಿದ ಅತ್ಯುತ್ತಮ ಸಿನಿಮಾಗಳಾಗಿವೆ. ಅದೇ ರೀತಿ ಲೈಫ್ ಆ್ಯಂಡ್ ಡೆತ್ ವಿಷಯದ ಮೇಲಿನ ಈ ಸಿನಿಮಾನೂ ವಿಶೇಷವಾಗಿಯೇ ಇದೆ. ಇಲ್ಲಿ ಕಮರ್ಷಿಯಲ್ ಎಲಿಮೆಂಟ್ ಇವೆ. ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ ಇದಾಗಿದೆ ಅಂತಲೇ ಚೇತನ್ ಹೇಳಿದ್ದಾರೆ.

ಇದನ್ನೂ ಓದಿ: Comedy Actor Appanna: ಕರಗಿತು ಕೊಬ್ಬು ಒಲಿಯಿತು ಅದೃಷ್ಟ; ಅಪ್ಪಣ್ಣ ಈಗ Apple Cut ಚಿತ್ರದ ಸಿಕ್ಸ್ ಪ್ಯಾಕ್ ಸೆಕೆಂಡ್ ಹೀರೋ

ಸಿನಿಮಾದಲ್ಲಿ ನನ್ನ ಪಾತ್ರ ತುಂಬಾ ಚೆನ್ನಾಗಿಯೇ ಇದೆ. ಸಿನಿಮಾದಲ್ಲಿ ಶೇಕಡ 95 ರಷ್ಟು ಕಾಣಿಸಿಕೊಳ್ಳುತ್ತದೆ. ಒಳ್ಳೆ ಕತೆಗೆ ಕೆಲಸ ಮಾಡಿದ ಖುಷಿನೂ ಇದೆ ಅಂತಲೇ ಆ ದಿನಗಳು ಚೇತನ್ ಹೇಳಿದ್ದಾರೆ. ತಮ್ಮ ಅಭಿನಯದ ಈ ಸಿನಿಮಾದಲ್ಲಿ ಹಾಸ್ಯ ಕಲಾವಿದ ಸುನಿಲ್ ಕೂಡ ಇದ್ದಾರೆ. ಇವರ ಪಾತ್ರ ಇಲ್ಲಿ ಬೇರೆ ರೀತಿಯಲ್ಲಿಯೇ ಇದೆ ಅಂತಲೇ ಚೇತನ್ ಹೇಳೋಕೆ ಮರೆಯಲಿಲ್ಲ.

Kannada Actor Chetan Ahimsa Untitled Telugu Cinema Ready To Release
ಚೇತನ್ ತೆಲುಗು ಚಿತ್ರದಲ್ಲಿ ಹಾಸ್ಯ ನಟ ಸುನಿಲ್ ಅಭಿನಯ


ನನ್ನ ಜೊತೆ ಹೋರಾಟ ಮಾಡುವವರು, ನನ್ನ ಸಿನಿಮಾ ನೋಡಲು ಇಷ್ಟಪಡುತ್ತಾರೆ. ಅವರಿಗಾಗಿಯೇ ತೆಲುಗು ಸಿನಿಮಾ ಕನ್ನಡದಲ್ಲಿ ಬರುವಂತೆ ನೋಡಿಕೊಳ್ಳಿ ಅಂತಲೇ ನಿರ್ಮಾಪಕರಿಗೆ ಹೇಳಿದ್ದೇನೆ ಅಂತಲೂ ಚೇತನ್ ಇಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Actress Amulya: ನಟಿ ಅಮೂಲ್ಯ ಪತಿಗೆ ಇಂದೇ ವ್ಯಾಲೆಂಟೈನ್ಸ್ ಡೇ! ಪತ್ನಿಯ ಬರ್ತ್​ಡೇಗೆ ಕ್ಯೂಟ್ ವಿಶ್

ಟಾಲಿವುಡ್​ ನಿಂದಲೇ ನನ್ನ ಬಳಿ ಹೆಚ್ಚು ಕತೆಗಳು ಬರುತ್ತಿವೆ
ನಾಯಕ ನಟ ಚೇತನ್ ಅವರು ಈಗ ಅತಿ ಹೆಚ್ಚು ತೆಲುಗು ಕತೆಗಳನ್ನೆ ಕೇಳುತ್ತಿದ್ದಾರೆ. ಇಲ್ಲಿಯ ಯವ ನಿರ್ದೇಶಕರು ಒಳ್ಳೆ ಕಥೆಗಳನ್ನೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿಯೇ ಕಥೆಗಳನ್ನ ಕೇಳುತ್ತಿದ್ದೇನೆ ಎಂದು ಚೇತನ್ ತಿಳಿಸಿದ್ದಾರೆ.

ಕನ್ನಡದ ನಾಯಕ ನಟ ಚೇತನ್ ಬೇರೆ ಭಾಷೆಯಲ್ಲೂ ಸಿನಿಮಾ ಮಾಡುತ್ತಿದ್ದಾರೆ. ಕನ್ನಡದ ಪ್ರೀತಿಯನ್ನೂ ಉಳಿಸಿಕೊಂಡು ಬೇರೆ ಭಾಷೆ ಚಿತ್ರಗಳನ್ನೆ ಒಪ್ಪಿಕೊಳ್ಳಲು ಮುಂದಾಗಿದ್ದಾರೆ.
First published: