• Home
  • »
  • News
  • »
  • entertainment
  • »
  • Chetan: ಚೇತನ್​ಗೆ ಬರ್ತಿದ್ಯಂತೆ ಜೀವ ಬೆದರಿಕೆ ಕರೆ.. ಗನ್​ ಮ್ಯಾನ್​ ಕೊಡಿ ಎಂದು ಗೃಹ ಮಂತ್ರಿಗೆ ನಟ ಮನವಿ!

Chetan: ಚೇತನ್​ಗೆ ಬರ್ತಿದ್ಯಂತೆ ಜೀವ ಬೆದರಿಕೆ ಕರೆ.. ಗನ್​ ಮ್ಯಾನ್​ ಕೊಡಿ ಎಂದು ಗೃಹ ಮಂತ್ರಿಗೆ ನಟ ಮನವಿ!

ನಟ ಚೇತನ್​

ನಟ ಚೇತನ್​

ಮೊನ್ನೆ ಮೊನ್ನೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ನಟ ಚೇತನ್​ಗೆ ಪ್ರಾಣ ಬೆದರಿಕೆ ಇದೆಯಂತೆ. ಹೀಗಂತ ಸ್ವತಃ ಚೇತನ್​ ಮಾಹಿತಿ ನೀಡಿದ್ದಾರೆ.ಜೀವ ಬೆದರಿಕೆ, ಅಭದ್ರತೆ ಇರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಗನ್‌ಮ್ಯಾನ್ ನೀಡಲು ಗೃಹ ಸಚಿವ ಆರಗ ಜ್ಞಾನೇಂದ್ರಗೆ (Araga Jnanendra) ನಟ ಚೇತನ್ ಅಹಿಂಸಾ ಮನವಿ ಮಾಡಿದ್ದಾರೆ.

ಮುಂದೆ ಓದಿ ...
  • Share this:

ಮೊನ್ನೆ ಮೊನ್ನೆಯಷ್ಟೇ ಜೈಲಿ(Jail)ನಿಂದ ಬಿಡುಗಡೆಯಾಗಿದ್ದ ನಟ ಚೇತನ್(Chetan)​ಗೆ ಪ್ರಾಣ ಬೆದರಿಕೆ ಇದೆಯಂತೆ. ಹೀಗಂತ ಸ್ವತಃ ಚೇತನ್​ ಮಾಹಿತಿ ನೀಡಿದ್ದಾರೆ. ಜೀವ ಬೆದರಿಕೆ, ಅಭದ್ರತೆ ಇರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಗನ್‌ಮ್ಯಾನ್ (Gun Man) ನೀಡಲು ಗೃಹ ಸಚಿವ (Home Minister) ಆರಗ ಜ್ಞಾನೇಂದ್ರಗೆ (Araga Jnanendra) ನಟ ಚೇತನ್ ಅಹಿಂಸಾ ಮನವಿ ಮಾಡಿದ್ದಾರೆ. ನಂತರ ಮಾತನಾಡಿದ ಚೇತನ್, ‘‘ಗೌರಿ ಲಂಕೇಶ್ (Gauri Lankesh) ಹತ್ಯೆಯಾದ ಬಳಿಕ ನನಗೆ ನಾಲ್ಕು ವರ್ಷದಿಂದ ಗನ್ ಮ್ಯಾನ್ ಕೊಟ್ಟಿದ್ದರು. ಆದರೆ ಮೊನ್ನೆ ಜೈಲಿಗೆ ಹೋದ ಬಳಿಕ ವಾಪಸ್ ಪಡೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಬರುತ್ತಲೇ ಇದೆ. ಕೋಮುವಾದದ ಪರ ಮಾತನಾಡುವ ಜನಪ್ರತಿನಿಧಿಗಳಿಗೆ ಗನ್ ಮ್ಯಾನ್ ಪ್ರೊಟೆಕ್ಷನ್ (Protection) ಕೊಡುತ್ತಾರೆ. ಆದರೆ ಸತ್ಯ ವಾಸ್ತವ ಹೇಳುವ ನಮಗೆ ಗನ್ ಮ್ಯಾನ್ ಪ್ರೊಟೆಕ್ಷನ್ ಇಲ್ಲ. ಹೀಗಾಗಿ ಗೃಹ ಸಚಿವರಿಗೆ ಮನವಿ ಮಾಡಿಕೊಂಡಿದ್ದೇನೆ’’ ಎಂದು ಚೇತನ್​ ಹೇಳಿದ್ದಾರೆ.


ಮೊನ್ನೆಯಷ್ಟೇ ಜೈಲಿನಿಂದ ಹೊರ ಬಂದಿದ್ದ ನಟ!


ಇತ್ತೀಚೆಗೆ ಅವರು ಮಾಡಿದ್ದ ಟ್ವೀಟ್​ವೊಂದು ವಿವಾದಕ್ಕೆ ಎಡೆಮಾಟಿಕೊಟ್ಟಿತ್ತು. ನ್ಯಾಯಾಧೀಶರನ್ನು ನಿಂದಿಸಿ ಟ್ವೀಟ್ (Tweet) ಮಾಡಿದ ಆರೋಪದಡಿ ಬಂಧನಕ್ಕೊಳಗಾಗಿದ್ದ ನಟ ಚೇತನ್​​ಗೆ (Actor Chetan) ಫೆಬ್ರವರಿ 28ರಂದು ಪರಪ್ಪನ ಅಗ್ರಹಾರದಿಂದ ಹೊರ ಬಂದಿದ್ದರು. ನಟ ಚೇತನ್​ ಮಾಡಿದ್ದ ಟ್ವೀಟ್‌ನಲ್ಲಿ ಆಕ್ಷೇಪಾರ್ಹ ಅಂಶಗಳು ಇದೆ ಎನ್ನುವ ಆರೋಪದ ಮೇಲೆ ಚೇತನ್ ಬಂಧನಕ್ಕೆ ಒಳಗಾಗಿದ್ದರು. ನಂತರ ಚೇತನ್ ಅವರ ಪತ್ನಿ ಮೇಘಾ ಫೇಸ್ ಬುಕ್ ಲೈವ್ ಬಂದು, ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಯಾವುದೇ ಮಾಹಿತಿ ನೀಡದೆ, ಅಪಹರಣದ ರೀತಿಯಲ್ಲಿ ಪತಿಯನ್ನು ಕರೆದೊಯ್ಯಲಾಗಿದೆ ಎಂದು ಆರೋಪಿಸಿದ್ದರು.


ಅನಾಮಧೇಯರಿಂದ ಬೆದರಿಕೆ ಕರೆ ಬರ್ತಿದೆ ಎಂದ ಚೇತನ್​!


ಹೌದು, ಗೃಹ ಮಂತ್ರಿಗೆ ಮನವಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ನಟ ಚೇತನ್​ ಮಾತನಾಡಿದ್ದಾರೆ. ನನಗೆ ಕಳೆದ ಕೆಲ ವರ್ಷಗಳಿಂದ ಬೆದರಿಕೆ ಕರೆಗಳು ಬರುತ್ತಲೆ ಇದೆ. ಇವಾಗ ಅದು ಹೆಚ್ಚಾಗಿದೆ. ‘ಯಾರಿಂದ ಈ ಕರೆಗಳು ಬರಿತ್ತಿದೆ ಎಂದು ಗೊತ್ತಾಗುತ್ತಿಲ್ಲ. ಇಂಥದ್ದೇ ಮೂಲದಿಂದ ಎನ್ನಲಾಗುವುದಿಲ್ಲ. ಸಾಮಾಜಿಕ ಜಾಲತಾಣಗಳಿಂದ ಸೇರಿದಂತೆ ಹಲವೆಡೆಯಿಂದ ಬರುತ್ತದೆ. ಇದರ ಒಂದು ಪಟ್ಟಿಯನ್ನು ನೀಡಿದ್ದೇನೆ’ ಎಂದಿದ್ದಾರೆ ಚೇತನ್.


ಇದನ್ನೂ ಓದಿ: ಜಾಮೀನು ಸಿಕ್ಕರೂ ಚೇತನ್​ಗೆ ಇನ್ನೂ 2 ದಿನ ಜೈಲುವಾಸ!


ಹಲವು ಹೋರಾಟಗಳಲ್ಲಿ ಕಾಣಿಸಿಕೊಂಡಿದ್ದ ಚೇತನ್​!


ನಟನೆಯ ಜೊತೆಗೆ ನಟ ಚೇತನ್​​ಹಲವು ಹೋರಾಟಗಳಲ್ಲಿ ಕಾಣಿಸಿಕೊಂಡಿದ್ದರು. ಹಿಜಾಬ್​ಪ್ರಕರಣದ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್​ನ್ಯಾಯಮೂರ್ತಿಗಳ ಹಳೆಯ ಹೇಳಿಕೆಯೊಂದನ್ನು ಉಲ್ಲೇಖಿಸಿ ಮಾಡಿದ್ದ ಟ್ವೀಟ್​​ವಿವಾದಕ್ಕೊಳಗಾಗಿದೆ.


ಚೇತನ್ ಪರ ಬ್ಯಾಟ್​  ಬೀಸಿದ್ದ ರಮ್ಯಾ!


ನಟಿ ರಮ್ಯಾ ಈ ವಿಚಾರವಾಗಿ ದನಿ ಎತ್ತಿದ್ದಾರೆ. ನಟ ಚೇತನ್ ಮಾಡಿರುವ ಅಪರಾಧವಾದರೂ ಏನು? ಅವರು ಮಾಡಿರುವ ಟ್ವೀಟ್‌ನಲ್ಲಿ ಏನಿದೆ ಎಂದು ಪ್ರಶ್ನೆ ಮಾಡಿದ್ದರು. ಚೇತನ್ ಬಂಧನಕ್ಕೆ ಕಾರಣ ಆಗಿರುವ ಟ್ವೀಟ್‌ಗಳನ್ನು ಪೋಸ್ಟ್ ಮಾಡಿ, ‘ಪೊಲೀಸರು ಚೇತನ್ ಅವರನ್ನು ಬಂಧಿಸುವಂತಹ ದೋಷ ಈ ಟ್ವೀಟ್‌ನಲ್ಲಿ ಏನಿದೆ?’ ಎಂದು ರಮ್ಯಾ ಟ್ವೀಟ್ ಮಾಡುವ ಮೂಲಕ ಪ್ರಶ್ನೆ ಮಾಡಿದ್ದರು. ಈ ಮೂಲಕ ಅವರು ಚೇತನ್ ಅವರ ಟ್ವೀಟ್‌ನಲ್ಲಿ ತಪ್ಪಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದರು.


ಇದನ್ನೂ ಓದಿ: ಧಿಡೀರ್​​ ಅಮೇಜಾನ್​ ಪ್ರೈಮ್​ಗೆ ಬಂದ ಲವ್​ ಮಾಕ್​ಟೈಲ್​ 2, ಇದು ಕೇವಲ ಸಿನಿಮಾವಲ್ಲ, ಪ್ರೇಮಿಗಳಿಗೆ ಪಾಠ!

ಒಟ್ಟಿನಲ್ಲಿ ನಟ ಚೇತನ್​ಗೆ ಪ್ರಾಣ ಬೆದರಿಕೆ ಕರೆಗಳು ಬರುತ್ತಿದೆ ಎಂದು ಅವರೇ ಹೇಳಿದ್ದಾರೆ. ನಟ ಚೇತನ್​ ಮನವಿಯನ್ನು ಸ್ವೀಕರಿಸಿರುವ ಗೃಹ ಮಂತ್ರಿಗಳು ಮುಂದೆ ಏನು ಮಾಡುತ್ತಾರೆ ಅಂತ ಕಾದು ನೋಡಬೇಕಿದೆ.

Published by:ವಾಸುದೇವ್ ಎಂ
First published: