ಸ್ಯಾಂಡಲ್​ವುಡ್ ನಿರ್ದೇಶಕರಿಂದ ದರ್ಶನ್​ಗೆ ಸಿಕ್ತು ಹೊಸ ಬಿರುದು; ಸಿಟ್ಟಾಗ್ತಾರಾ ಪ್ರಭಾಸ್ ಅಭಿಮಾನಿಗಳು?

ಇತ್ತೀಚೆಗಷ್ಟೇ ದರ್ಶನ್​ ಅಭಿಮಾನಿಗಳು ಶತಕೋಟಿ ಸರದಾರ ಎಂಬ ಹೊಸ ಬಿರುದು ನೀಡಿ ಗೌರವಿಸಿದ್ದರು. ಈಗ ನಿರ್ದೇಶಕರೆಲ್ಲರೂ ಸೇರಿ ದರ್ಶನ್​ಗೆ ಮತ್ತೊಂದು ಟೈಟಲ್​ ನೀಡಿದ್ದಾರೆ!

Rajesh Duggumane | news18-kannada
Updated:September 14, 2019, 4:37 PM IST
ಸ್ಯಾಂಡಲ್​ವುಡ್ ನಿರ್ದೇಶಕರಿಂದ ದರ್ಶನ್​ಗೆ ಸಿಕ್ತು ಹೊಸ ಬಿರುದು; ಸಿಟ್ಟಾಗ್ತಾರಾ ಪ್ರಭಾಸ್ ಅಭಿಮಾನಿಗಳು?
ದರ್ಶನ್
Rajesh Duggumane | news18-kannada
Updated: September 14, 2019, 4:37 PM IST
ನಟ ದರ್ಶನ್​ಗೆ ಅವರ ಅಭಿಮಾನಿಗಳು ಪ್ರೀತಿಯಿಂದ ಡಿ ಬಾಸ್​, ಬಾಕ್ಸ್​ ಆಫೀಸ್​ ಸುಲ್ತಾನ್​ ಹೀಗೆ ನಾನಾ ಹೆಸರುಗಳಿಂದ ಕರೆಯುತ್ತಾರೆ. ಇತ್ತೀಚೆಗಷ್ಟೇ ದರ್ಶನ್​ ಅಭಿಮಾನಿಗಳು ಶತಕೋಟಿ ಸರದಾರ ಎಂಬ ಹೊಸ ಬಿರುದು ನೀಡಿ ಗೌರವಿಸಿದ್ದರು. ಈಗ ನಿರ್ದೇಶಕರೆಲ್ಲರೂ ಸೇರಿ ದರ್ಶನ್​ಗೆ ಮತ್ತೊಂದು ಟೈಟಲ್​ ನೀಡಿದ್ದಾರೆ!

ದರ್ಶನ್​ ಸಧ್ಯ ತರುಣ್​ ಸುಧೀರ್​ ನಿರ್ದೇಶನದ ‘ರಾಬರ್ಟ್​​’ ಸಿನಿಮಾ ಕೆಲಸಗಳಲ್ಲಿ ತೊಡಗಿದ್ದಾರೆ. ಈ ಚಿತ್ರದ ಶೂಟಿಂಗ್​ ಭರ್ಜರಿಯಾಗಿ ಸಾಗುತ್ತಿದೆ. ಇತ್ತೀಚೆಗೆ ‘ರಾಬರ್ಟ್’ ಸೆಟ್​ಗೆ ಮೂವರು ನಿರ್ದೇಶಕರು ಆಗಮಿಸಿದ್ದರು. ಈ ಫೋಟೋ ತೆಗೆದು ತರುಣ್​ ಸುಧೀರ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

‘ಅಲೆಮಾರಿ​​’, ‘ಕಾಲೇಜ್​ ಕುಮಾರ್​’ದಂತಹ ಸಿನಿಮಾಗಳನ್ನು ನೀಡಿದ ಹರಿ ಸಂತೋಷ್​, ‘ಅಯೋಗ್ಯ’ ಸಿನಿಮಾ ಖ್ಯಾತಿಯ ಮಹೇಶ್​ ಕುಮಾರ್​ ಹಾಗೂ ‘ಭರಾಟೆ ಸಿನಿಮಾ ನಿರ್ದೇಶಕ ಚೇತನ್​ ಕುಮಾರ್​ ‘ರಾಬರ್ಟ್​​’ ಸೆಟ್​ಗೆ ಆಗಮಿಸಿದ್ದರು. ನಾಲ್ಕು ನಿರ್ದೇಶಕರು ದರ್ಶನ್​ ಜೊತೆ ನಿಂತು ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಈ ಫೋಟೋಗೆ ತರುಣ್​ ‘ಡೈರೆಕ್ಟರ್ಸ್​​ ಡಾರ್ಲಿಂಗ್​’ ಎಂದು ಕ್ಯಾಪ್ಶನ್​ ಕೊಟ್ಟಿದ್ದಾರೆ. ಈ ಮೂಲಕ ಡಿ-ಬಾಸ್​ಗೆ ಹೊಸ ಬಿರುದು ಸಿಕ್ಕಂತಾಗಿದೆ.

ಇದನ್ನೂ ಓದಿ: ಟ್ವಿಟ್ಟರ್​ನಲ್ಲಿ ‘ಬಾಸ್’ ಬಿರುದಿಗಾಗಿ ಮತ್ತೆ ಕಿತ್ತಾಟ; ಸ್ಟಾರ್ ವಾರ್​ಗೆ ಕಾರಣವಾಗುತ್ತಾ ಯಶ್ ಟ್ವೀಟ್?

ಇದು ದರ್ಶನ್​ ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ. ಸಾಕಷ್ಟು ಟೈಟಲ್​ ಹೊಂದಿರುವ ದರ್ಶನ್​ಗೆ ಈಗ ಹೊಸ ಬಿರುದು ಸಿಕ್ಕಿರುವುದಕ್ಕೆ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ತೆಲುಗು ನಟ ಪ್ರಭಾಸ್​​ಗೆ ‘ಡಾರ್ಲಿಂಗ್​’ ಎಂದು ಕರೆಯಲಾಗುತ್ತದೆ. ಈಗ ದರ್ಶನ್​ಗೂ ಇದೇ ಬಿರುದು ನೀಡಿರುವುದಕ್ಕೆ ಅವರ ಅಭಿಮಾನಿಗಳು ಸಿಟ್ಟಾಗುವ ಸಾಧ್ಯತೆ ಇದೆ.

First published:September 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...