• Home
  • »
  • News
  • »
  • entertainment
  • »
  • BBK Arun Sagar-Nawaz: ಬಿಗ್ ಬಾಸ್ ಮನೆಯಲ್ಲಿ ಸೈಕ್ ನವಾಜ್ ಕಂಟ್ರೋಲ್ ಮಾಡ್ತಿದ್ದಾರಾ ಅರುಣ್ ಸಾಗರ್?

BBK Arun Sagar-Nawaz: ಬಿಗ್ ಬಾಸ್ ಮನೆಯಲ್ಲಿ ಸೈಕ್ ನವಾಜ್ ಕಂಟ್ರೋಲ್ ಮಾಡ್ತಿದ್ದಾರಾ ಅರುಣ್ ಸಾಗರ್?

ಅರುಣ್ ಸಾಗರ್-ಸೈಕ್ ನವಾಜ್ ಜೋಡಿ-ಮೋಡಿ

ಅರುಣ್ ಸಾಗರ್-ಸೈಕ್ ನವಾಜ್ ಜೋಡಿ-ಮೋಡಿ

ಸಮಾಧಾನದಿಂದಲೇ ಇರು, ಜಗಳ ಅಡೋದ್ಯಾಕೆ ಅಂತಲೇ ಬುದ್ದಿವಾದವನ್ನ ಸೈಕ್ ನವಾಜ್​ಗೆ ಇಲ್ಲಿ ಅರುಣ್ ಸಾಗರ್ ಹೇಳುತ್ತಿದ್ದಾರೆ. ಜಗಳ ಬೇಡ ಕೂಲ್ ಆಗಿಯೇ ಇರೋ, ಕೂಲ್ ಆಗಿಯೇ ಆಟವಾಡು ಅಂತಲೇ ಒತ್ತಿ ಒತ್ತಿ ಹೇಳುತ್ತಿದ್ದಾರೆ.

  • Share this:

ಬಿಗ್ ಬಾಸ್ (Big boss House) ಮನೆಯಲ್ಲಿ ಇನ್ನು ಆ ಮಟ್ಟಿನ ಸ್ಪರ್ಧೆ ಶುರು ಆಗಿಲ್ಲ. ಅಷ್ಟೇರಲ್ಲಿ ಎಲ್ಲರೂ ಈಗ ನಾನು ನೀನು ಒಂದೇ. ನಾವೆಲ್ಲ ಒಂದೇ ಅನ್ನೋ ಮನೋಭಾವನೆಯಲ್ಲಿಯೇ ಆಟ ಆಡುತ್ತಿದ್ದಾರೆ. ಆದರೆ ಅದ್ಯಾಕೋ ಸೈಕ್ ನವಾಜ್ (Saik Nawaz) ಇಲ್ಲಿ ಇನ್ನೂ ಅಡ್ಜೆಸ್ಟ್ ಆಗ್ತಾನೇ ಇಲ್ಲ. ತನಗೆ ಇಲ್ಲಿ ಯಾವುದೂ ಸರಿ ಹೋಗ್ತಿಲ್ಲ ಅಂತಲೇ ಸೈಕ್ ನವಾಜ್ ಗೋಳಾಡುತ್ತಿದ್ದಾನೆ. ಬಿಡೋದಿಲ್ಲ ಗ್ಯಾರಂಟಿ ಅವರ ಜೊತೆಗೆ ಜಗಳ ಆಡ್ತಿನಿ ಅಂತಲೇ ಸೈಕ್ ನವಾಜ್ ಹೇಳಿಕೊಡು ಓಡಾಡ್ತಿದ್ದಾನೆ. ಆದರೆ ಇಲ್ಲಿವರೆಗೂ ದೊಡ್ಡ ಧ್ವನಿಯಲ್ಲಿ ಯಾರ ಜೊತೆಗೂ ಜಗಳವಾಡಿರೋದು ಕಂಡು ಬಂದಿಲ್ಲ.


ಅದಕ್ಕೆ ಕಾರಣ ಏನೂ ಗೊತ್ತೇ? ಹೌದು, ಬಿಗ್ ಬಾಸ್ ಆಟದ ಬಗ್ಗೆ ಅನುಭವ ಇರೋ ನಟ-ಕಲಾ ನಿರ್ದೇಶಕ ಅರುಣ್ ಸಾಗರ್. ಅರುಣ್ ಸಾಗರ್ (Arun Sagar) ಇಲ್ಲಿ ಸೈಕ್ ನವಾಜ್ ನೆಗೆಟಿವ್ ಎನರ್ಜಿಯನ್ನ ಕಂಟ್ರೋಲ್ ಮಾಡುತ್ತಿದ್ದಾರೆ.


ಬಿಗ್ ಬಾಸ್ ಮನೆಯಲ್ಲಿ ಅರುಣ್ ಸಾಗರ್-ನವಾಜ್ ಜೋಡಿ ಹೆಂಗಿದೆ?
ಬಿಗ್ ಬಾಸ್ ಮನೆ ಇನ್ನೂ ರಣಾಂಗಣವಾಗಿಲ್ಲ. ನಿಧಾನಕ್ಕೆ ಅವೆಲ್ಲ ಇಲ್ಲಿ ಶುರು ಆಗುತ್ತಿವೆ. ದಿನಗಳದಂತೆ ಜಗಳಗಳು, ಏರು ಧ್ವನಿಯ ಕಿತ್ತಾಟಗಳು, ಇವೆಲ್ಲ ಇಲ್ಲಿ ಶುರು ಆಗುತ್ತವೆ. ಈಗಷ್ಟೇ ಬಿಗ್ ಬಾಸ್ ಶುರು ಆಗಿದೆ ಅಲ್ವೇ? ಅದಕ್ಕೇನೆ ಸದ್ಯ ಎಲ್ಲವೂ ಇಲ್ಲಿ ಕೂಡಿ ಬಾಳೋಣ, ಸೇರಿ ನಡೆಯೋಣ ಅನ್ನೋ ಸ್ಥಿತಿನೆ ಇಲ್ಲಿದೆ.


Kannada Actor Arun Sagar is it Controlling Co Contestant Saik Nawaz
ದೊಡ್ಮನೆಯಲ್ಲಿ ಸೈಕ್ ನವಾಜ್ ಸೈಲೆಂಟ್ ಆಗಿದ್ದೇಕೆ ?


ಆದರೂ, ಈ ಸ್ಥಿತಿಯಲ್ಲಿ ಪ್ರಶಾಂತ್ ಸಂಬರ್ಗಿ, ರೂಪೇಶ್ ರಾಜಣ್ಣರ ಬಾಯಿ ಮಾತಿನ ಕಿತ್ತಾಟ ಒಂದು ಕಡೆ ಇದ್ದೇ ಇದೆ. ಆದರೂ ಆ ಮಟ್ಟಿನ ಹೀಟ್ ಇನ್ನೂ ಇಲ್ಲಿ ಕ್ರಿಯೇಟ್ ಆಗಿಯೇ ಇಲ್ಲ ಅಂತಲೇ ಹೇಳಬಹುದು.


ಬಿಗ್ ಬಾಸ್ ಮನೆಯಲ್ಲಿ ಸೈಕ್ ನವಾಜ್ ಸೈಕ್​ಗಿರಿ ತೋರ್ತಿಲ್ಲ ಯಾಕೆ?
ಇಂತಹ ಸ್ಥಿತಿಯಲ್ಲಿ ಅದ್ಯಾಕೋ ಏನೋ, ಸೈಕ್ ನವಾಜ್ ಏನೋ ಮಾಡ್ತಿನಿ ಅಂತಲೇ ಓಡಾಡ್ತಿದ್ದಾರೆ. ನನಗೆ ಇಲ್ಲಿ ಯಾವುದೂ ಸರಿ ಹೋಗ್ತಿಲ್ಲ. ನಾನು ಅವರೊಟ್ಟಿಗೆ ಜಗಳ ಗ್ಯಾರಂಟಿ ಆಡ್ತೀನಿ ಅಂತಲೇ ನವಾಜ್ ಹೇಳುತ್ತಿದ್ದಾನೆ.


ಇದನ್ನೂ ಓದಿ: Kendasampige: ಸುಮನಾ ಮದುವೆಯನ್ನು ಕಾರ್ಪೊರೇಟರ್ ಮಾಡಿಸ್ತಾರಂತೆ! ಸಾಮೂಹಿಕ ವಿವಾಹದಲ್ಲೇ ಆಕೆಗೂ ಮುಹೂರ್ತ


ಆದರೆ ನವಾಜ್ ಯಾರ ಜೊತೆಗೆ ಜಗಳ ಆಡ್ತೀನಿ ಅನ್ನೋದನ್ನ ಇನ್ನೂ ಹೇಳಿಕೊಂಡಿಲ್ಲ. ಹಾಗಂತ ಹೋಗಪ್ಪ ಹೋಗು ಜಗಳವಾಡು ಅಂತ ಯಾರೂ ಇಲ್ಲಿ ಈ ಸೈಕ್ ನವಾಜ್​ಗೆ ಹೇಳುತ್ತಿಲ್ಲ. ಜೊತೆಗೆ ಇರೋ ಅರುಣ್ ಸಾಗರ್ ಕೂಡ ಅಷ್ಟೇ, ಕೂಲ್ ಕೂಲ್ ಅಂತಲೇ ಬುದ್ದಿ ಹೇಳುತ್ತಿದ್ದಾರೆ.


ಸೈಕ್ ನವಾಜ್​ಗೆ ಅರುಣ್ ಸಾಗರ್ ಬುದ್ದಿವಾದ ಹೇಳ್ತಿರೋದ್ಯಾಕೆ?
ಸಮಾಧಾನದಿಂದಲೇ ಇರು, ಜಗಳ ಅಡೋದ್ಯಾಕೆ ಅಂತಲೇ ಬುದ್ದಿವಾದವನ್ನ ಸೈಕ್ ನವಾಜ್​ಗೆ ಇಲ್ಲಿ ಅರುಣ್ ಸಾಗರ್ ಹೇಳುತ್ತಿದ್ದಾರೆ. ಜಗಳ ಬೇಡ ಕೂಲ್ ಆಗಿಯೇ ಇರೋ, ಕೂಲ್ ಆಗಿಯೇ ಆಟವಾಡು ಅಂತಲೇ ಒತ್ತಿ ಒತ್ತಿ ಹೇಳುತ್ತಿದ್ದಾರೆ.


Kannada Actor Arun Sagar is it Controlling Co Contestant Saik Nawaz
ಸೈಕ್ ನವಾಜ್​ನನ್ನ ಅರುಣ್ ಸಾಗರ್ ಕಂಟ್ರೋಲ್ ಮಾಡ್ತಿರೋದೇಕೆ?


ಮೊನ್ನೆ ಹೀಗೆ ಆಯಿತು, ಸೈಕ್ ನವಾಜ್ ಯೋಗ ಮಾಡುತ್ತಿದ್ದ ಸಂದರ್ಭ ಅದು. ಅಗಲೂ ಅದೇ ಕಿತ್ತಾಡೋ ಮೂಡ್​ನಲ್ಲಿಯೇ ಇದ್ದ ಸೈಕ್ ನವಾಜ್​ಗೆ ಅರುಣ್ ಸಾಗರ್ ಕೂಲ್ ಆಗಿಯೇ ಇರು ಅಂತಲೇ ಹೇಳಿದರು.


ಸೈಕ್ ನವಾಜ್ ನೆಗೆಟಿವ್ ಎನರ್ಜಿ ಕಂಟ್ರೋಲ್ ಮಾಡ್ತಿದ್ದಾರಾ?
ಅಲ್ಲಿಗೆ ಈ ಸೈಕ್ ನವಾಜ್ ತನ್ನ ಸೈಕ್​ಗಿರಿ ತೋರಲು ಹವಣಿಸಿದ್ರೂ ಬುದ್ದಿ ಹೇಳಿ ಬೇಡ್ವೋ ಬೇಡ ಅಂತಲೇ ಅರುಣ್ ಸಾಗರ್ ಇಲ್ಲಿ ಹೇಳುತ್ತಿದ್ದಾರೆ. ಹೀಗಿದ್ದರೂ ಕೂಡ ಯಾರ ಜೊತೆಗೂ ಕಿತ್ತಾಡದೇ ಇರೊ ಸೈಕ್ ನವಾಜ್ ತನ್ನ ಸೈಕ್​ಗಿರಿಯ ಖಾತೆ ಈಗಲೇ ತೆರೆಯುತ್ತಾನೋ ಇಲ್ಲವೋ ಗೊತ್ತಿಲ್ಲ.


ಇದನ್ನೂ ಓದಿ:BBK Season 9: ಬ್ಯಾಂಡ್​ ಕಟ್ಟಿ ಸಂಬಂಧವನ್ನು ಗಟ್ಟಿ ಮಾಡಿಕೊಳ್ತಿದ್ದಾರೆ ಬಿಗ್ ಬಾಸ್ ಸ್ಪರ್ಧಿಗಳು!


ಆದರೆ ಅರುಣ್ ಸಾಗರ್ ಜೊತೆಗೂಡಿ ಒಂದಷ್ಟು ಆಟಗಳನ್ನೂ ಆಡುತ್ತಿದ್ದಾನೆ. ಅರುಣ್ ಸಾಗರ್​ಗೆ ಸಿಕ್ಕಾಪಟ್ಟೆ ಹೊಂದಿಕೊಂಡಿದ್ದಾನೆ. ಇಬ್ಬರೂ ಸೇರಿ ಬಿಗ್ ಮನೆಯಲ್ಲಿ ತಮ್ಮದೇ ರೀತಿಯಲ್ಲಿ ಒಂದಷ್ಟು ಕಂಟೆಂಟ್ ಕೊಡೋಕೆ ಪ್ರಯತ್ನ ಮಾಡುತ್ತಿದ್ದಾರೆ. ಉಳಿದಂತೆ ಸೈಕ್ ನವಾಜ್​ ಎರ್ನಜಿಯನ್ನ ಅರುಣ್ ಸಾಗರ್ ಕಂಟ್ರೋಲ್ ಮಾಡುತ್ತಿದ್ದಂತೇನೂ ಈಗ ಕಾಣುತ್ತಿದೆ.

First published: