ಮೀರಾ ಅರುಣ್ ಸಾಗರ್ ನಟಿ ಅಲ್ಲ. ಕಾಸ್ಟೂಮ್ (Meera Arun Sagar New Look) ಡಿಸೈನರ್ ಕೂಡ ಅಲ್ಲ. ವರ್ಕಿಂಗ್ ವಿಮೆನ್ ಮೊದಲೇ ಅಲ್ಲ. ಅರುಣ್ ಸಾಗರ್ ಲೈಫ್‌ನ ಆರ್ಟ್ ಡೈರೆಕ್ಟರ್ ಅಂದ್ರೆ ತಪ್ಪೇ ಇಲ್ಲ. ಅರುಣ್ ಸಾಗರ್ ಒಬ್ಬ ಕಲಾ ನಿರ್ದೇಶಕ ಅನ್ನೋದು (Arun Sagar Wife Meera) ಗೊತ್ತೇ ಇದೆ. ಈ ನಟ ಪ್ರತಿ ಹೆಜ್ಜೆಯಲ್ಲೂ ಸಾಥ್ ಕೊಡುವ ಮೀರಾ ಅರುಣ್ ಸಾಗರ್ ಕೂಡ ಒಬ್ಬ ಆರ್ಟ್ ಡೈರೆಕ್ಟರ್ ಆಗಿದ್ದಾರೆ. ಆದರೆ ಇವರ ಲಿವಿಂಗ್ ಸ್ಟೈಲ್ ಬೇರೆ ಇದೆ. ಲುಕ್ ಮತ್ತು ಫೀಲ್ ಕೂಡ (Meera Sagar Updates) ವಿಭಿನ್ನವೇ ಆಗಿರುತ್ತದೆ. ಒಂದು ರೀತಿ ಮೇಡ್ ಫಾರ್ ಈಚ್ ಅದರ್ ಅನ್ನುವ ಹಾಗೆ ಅರುಣ್ ಸಾಗರ್ ಮತ್ತು ಮೀರಾ ಇದ್ದಾರೆ.
ಕಾಂಪಿಟೇಷನ್ ಅನ್ನುವ ಹಾಗೆ ಇಬ್ಬರು ತಮ್ಮ ಲುಕ್ ಆ್ಯಂಡ್ ಫೀಲ್ (Arun Sagar New Updates) ಬದಲಿಸ್ತಾನೇ ಇರ್ತಾರೆ. ಈಗ ಮೀರಾ ಸರದಿ ಬಂದಿದೆ.
ಮೀರಾ ಅರುಣ್ ಸಾಗರ್ ಹೊಸ ಲುಕ್ ಶೂಟ್ ಮಾಡಿದ್ದ್ಯಾರು ?
ಮೀರಾ ಅರುಣ್ ಸಾಗರ್ ತಮ್ಮ ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್ ಅಲ್ಲಿ ಕಂಗೊಳಿಸುತ್ತಿದ್ದಾರೆ. ಲಾಂಗ್ ಹೇರ್ ಕಟ್ ಮಾಡಿಸಿ, ಶಾರ್ಟ್ ಹೇರ್ ಮಾಡಿಸಿದ್ದಾರೆ. ಈ ಲುಕ್ ಅಲ್ಲಿ ಸುಮಾರು ದಿನಗಳಿಂದಲೂ ಮೀರಾ ಹೊಳೆಯುತ್ತಲೇ ಇದ್ದಾರೆ.
ಆದರೆ ಈಗ ಅದೇ ಲುಕ್‌ಗೆ ಹೊಸ ಸ್ಪರ್ಶ ಬಂದಿದೆ. ಪತ್ನಿ ಮೀರಾ ಮೇಕ್ ಓವರ್‌ನ ಕ್ಷಣವನ್ನ ಸ್ವತಃ ಅರುಣ್ ಸಾಗರ್ ಫೋನ್‌ನಲ್ಲಿ ಚಿತ್ರೀಕರಿಸಿದ್ದಾರೆ. ತಾವೇ ಅದನ್ನ ಸುಂದರವಾಗಿಯ ಎಡಿಟ್ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಮೀರಾ ಅರುಣ್ ಸಾಗರ್ ವಿಡಿಯೋ ವೈರಲ್
ಸೋಷಿಯಲ್ ಮೀಡಿಯಾದ ತಮ್ಮ ಪೇಜ್ ಅಲ್ಲಿ ಆ ವಿಡಿಯೋ ಶೇರ್ ಮಾಡಿದ್ದಾರೆ. ಅದಕ್ಕೊಂದು ಲೈನ್ ಕೂಡ ಬರೆದುಕೊಂಡಿದ್ದಾರೆ. ಹಾಗೆ ಸುಮ್ಮನೆ ಅನ್ನೋದೇ ಈ ಲೈನ್ ಆಗಿದೆ.
ಈ ಒಂದು ವಿಡಿಯೋ ನೋಡಿದ ಅರುಣ್ ಸಾಗರ್ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಮೀರಾ ಅರುಣ್ ಸಾಗರ್ ಅವರ ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್ ಸೂಪರ್ ಅಂತಲೇ ಹೇಳಿದ್ದಾರೆ.
ಮೀರಾ ಅರುಣ್ ಸಾಗರ್ ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್ ಸೂಪರ್
ಇನ್ನೂ ಕೆಲವರಂತೂ ಏಜ್ ಲೆಕ್ಕವನ್ನೂ ಇಲ್ಲಿ ಹೇಳಿಕೊಂಡಿದ್ದಾರೆ. ಏಜ್ ಆದರೂ ಸೂಪರ್ ಆಗಿಯೇ ಕಾಣಿಸುತ್ತಿದ್ದಾರೆ. ಹೆಣ್ಣು ಮಕ್ಕಳು ಇದನ್ನ ಫಾಲೋ ಮಾಡಬಹುದು ಅಂತಲೇ ಹೇಳಿಕೊಂಡಿದ್ದಾರೆ.
ನಿಜ, ಏಜ್ ಅನ್ನೋದು ಕೇವಲ ನಂಬರ್ ಅಷ್ಟೇ ಅಂತಲೇ ಹೇಳಬಹುದು. ಅದು ಅರುಣ್ ಸಾಗರ್ ಮತ್ತು ಮೀರಾ ಅರುಣ್ ಸಾಗರ್ ವಿಚಾರದಲ್ಲಿ ನಿಜ ಅನಿಸುತ್ತದೆ.
ಮೀರಾ ಅರುಣ್ ಸಾಗರ್ ಸಖತ್ ಸ್ಟೈಲಿಶ್
ಅರುಣ್ ಸಾಗರ್ ಬೆನ್ನೆಲುಬಾಗಿಯೇ ಮೀರಾ ಅರುಣ್ ಸಾಗರ್ ಇರುತ್ತಾರೆ. ಅದೇ ರೀತಿ ಮೀರಾ ಅವರ ಪ್ರತಿ ನಿರ್ಧಾರದ ಜೊತೆಗೆ ಅರುಣ್ ಸಾಗರ್ ಇರುತ್ತಾರೆ.
ಅರುಣ್ ಸಾಗರ್ ವೈಫ್ ಸೂಪರ್ ಮಾಡೆಲ್ ?
ಸ್ಟೈಲಿಶ್ ಲುಕ್ ಅಲ್ಲಿಯೇ ಮೀರಾ ಅರುಣ್ ಸಾಗರ್ ಕಾಣಿಸುತ್ತಿದ್ದಾರೆ. ಇದನ್ನ ನೋಡಿದ ಜನ ಕೂಡ ಖುಷಿಪಟ್ಟಿದ್ದಾರೆ.
ಇದನ್ನೂ ಓದಿ: Actress Sreeleela: ಬ್ಲ್ಯಾಕ್ ಡ್ರೆಸ್ ನಲ್ಲಿ ಮಿಂಚಿದ ಶ್ರೀಲೀಲಾ, ಧಮಾಕಾ ಬೆಡಗಿ ಫುಲ್ ಜೋರು!
ಈ ಒಂದು ಲುಕ್ ಅಲ್ಲಿ ಮೀರಾ ಮಾಡೆಲ್ ರೀತಿಯಲ್ಲಿಯೇ ಕಾಣಿಸುತ್ತಿದ್ದಾರೆ. ಇನ್ನುಳಿದಂತೆ ಈ ಒಂದು ವಿಡಿಯೋ ಈಗ ಹಚ್ಚು ಗಮನ ಸೆಳೆಯತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ