• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Aniruddha Jatkar: ಬಿಗ್ ಬಿ ಚಿತ್ರದ ಆ ಫೇಮಸ್ ದೃಶ್ಯದಲ್ಲಿ ಅನಿರುದ್ಧ್! ಬಾಲಿವುಡ್​ಗೆ ಹೋಗ್ತಾರಾ ಜೊತೆ ಜೊತೆಯಲಿ ನಟ?

Aniruddha Jatkar: ಬಿಗ್ ಬಿ ಚಿತ್ರದ ಆ ಫೇಮಸ್ ದೃಶ್ಯದಲ್ಲಿ ಅನಿರುದ್ಧ್! ಬಾಲಿವುಡ್​ಗೆ ಹೋಗ್ತಾರಾ ಜೊತೆ ಜೊತೆಯಲಿ ನಟ?

ಮೈ ಆಜಾದ್ ಹೂಂ ಅಂತಿದ್ದಾರೆ ಅನಿರುದ್ಧ ಜಟ್ಕರ್

ಮೈ ಆಜಾದ್ ಹೂಂ ಅಂತಿದ್ದಾರೆ ಅನಿರುದ್ಧ ಜಟ್ಕರ್

ಸ್ಯಾಂಡಲ್‌ವುಡ್‌ನ ನಟ ಅನಿರುದ್ಧ ಜಟ್ಕರ್ ಬಾಲಿವುಡ್‌ಗೆ ಹೊರಟ್ರೆ? ಅಮಿತಾಭ್ ಬಚ್ಚನ್ ಚಿತ್ರದ ಆ ದೃಶ್ಯವನ್ನ ಈಗ ಅಭಿನಯಸಿದ್ಯಾಕೆ ? ಒಂದಷ್ಟು ಇಂಟ್ರಸ್ಟಿಂಗ್ ವಿವರ ಇಲ್ಲಿದೆ ಓದಿ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಸ್ಯಾಂಡಲ್‌ವುಡ್‌ನ ನಟ ಅನಿರುದ್ಧ ಜಟ್ಕರ್ ಒಳ್ಳೆ ನಟ (Aniruddha Jatkar Special Video) ಅಂತ ಎಲ್ಲಗೂ ಗೊತ್ತಿದೆ. ಹಿರಿ ತೆರೆಯಿಂದ ಕಿರುತೆರೆಗೆ ಬಂದಾಗಲೂ ಅಷ್ಟೆ. ಜೊತೆ ಜೊತೆಯಲಿ ಸೀರಿಯಲ್ ಮೂಲಕ ಹೊಸ ಅಲೆಯನ್ನೆ ಎಬ್ಬಿಸಿದ್ದರು. ಆದರೆ ಇದೀಗ ಅನಿರುದ್ಧ ಬಾಲಿವುಡ್‌ನ (Kannada Actor Aniruddha) ಒಂದು ಫೇಮಸ್ ಚಿತ್ರದ ಇಡೀ ದೃಶ್ಯವನ್ನ ಅಭಿನಯಿಸಿದ್ದಾರೆ. ಬಿಗ್ ಬಿ ಅಮಿತಾಭ್ ಬಚ್ಚನ್ ಈ ಒಂದು ದೃಶ್ಯಕ್ಕೆ ಸಾಕಷ್ಟು ಪ್ರಶಂಸಿಸಲ್ಪಟ್ಟಿದ್ರು. ಅದೇ ದೃಶ್ಯ ಅನಿರುದ್ಧ್ ಅವರಿಗೆ ತುಂಬಾನೇ ಇಷ್ಟ ಆಗುತ್ತದೆ. ಹಾಗಾಗಿಯೇ (Amitabh Bachchan Movie Scene) ಈ ಒಂದು ದೃಶ್ಯವನ್ನ ಅನಿರುದ್ಧ್ ಕ್ಯಾಮೆರಾ ಮುಂದೆ ಅಭಿನಯಿಸಿದ್ದಾರೆ. ಆ ವಿಡಿಯೋ ಇದೀಗ ಸಾಕಷ್ಟು ವೈರಲ್ ಆಗುತ್ತಿದೆ. ಅಭಿಮಾನಿಗಳು ಬಹುವಾಗಿಯೇ (Kannada Film Industry Updates) ಮೆಚ್ಚುಗೆ ಸೂಚಿಸಿದ್ದಾರೆ.


ಬಾಲಿವುಡ್‌ ಸಿನಿರಂಗಕ್ಕೆ ಹೊರಟ್ರೆ ಅನಿರುದ್ಧ ಜಟ್ಕರ್ ?


ಅನಿರುದ್ಧ ಜಟ್ಕರ್ ಅದ್ಭುತವಾಗಿಯೇ ಹಿಂದಿ ಮಾತನಾಡುತ್ತಾರೆ. ಹಿಂದಿ ಎಲ್ಲರೂ ಮಾತಾಡುತ್ತಾರೆ ಅಂತ ಹೇಳಿ ಬಿಡಬಹುದು. ಆದರೆ ಅದನ್ನ ಒಂದು ಅಭಿನಯದ ರೂಪದಲ್ಲಿ ಹೇಳೋದು ಕಷ್ಟವೇ ಸರಿ. ಅನಿರುದ್ಧ್ ಆ ಒಂದು ವಿಚಾರದಲ್ಲಿ ಇದೀಗ ಸ್ಪೆಷಲ್ ಅನಿಸುತ್ತಾರೆ. ತಮ್ಮ ಸಿನಿಮಾ ಜೀವನದಲ್ಲಿ ಎಂದೂ ಹಿಂದಿ ಚಿತ್ರದಲ್ಲಿ ಅಭಿನಯಿಸಿದ್ದು ಇಲ್ಲ. ಹಿಂದಿ ಡೈಲಾಗ್ ಕೂಡ ಹೇಳಿದಿಲ್ಲ ಅನಿಸುತ್ತದೆ.


Kannada Actor Aniruddha Jatkar Special Video on Amitabh Bachchan Movie Scene got viral
ಮೈ ಆಜಾದ್ ಹೂಂ ಚಿತ್ರದ ದೃಶ್ಯ ಈಗ ವೈರಲ್


ಆದರೆ ಹಿಂದಿ ಹಾಡುಗಳನ್ನ ಅಷ್ಟೇ ಅದ್ಭುತವಾಗಿಯೇ ಹಾಡಿದ್ದು ಇದೆ. ಆ ಹಾಡಿಗೆ ಮಕ್ಕಳ ಜೊತೆಗೆ ನೃತ್ಯ ಮಾಡಿದ್ದು ಇದೆ. ಈಗ ಒಂದು ಹೆಜ್ಜೆ ಮುಂದೆ ಹೋಗಿರೋ ಅನಿರುದ್ಧ್, ತಮಗೆ ಇಷ್ಟವಾದ ಒಂದು ಹಿಂದಿ ಸಿನಿಮಾದ ಕಂಪ್ಲೀಟ್ ದೃಶ್ಯವನ್ನ ಅಭಿನಯಿಸಿದ್ದಾರೆ.




ಅದ್ಭುತ ಅನಿಸೋ ಡೈಲಾಗ್ ಅನ್ನ ಹೇಳಿ ಎಲ್ಲರ ಪ್ರೀತಿಗೂ, ಪಶಂಸೆಗೂ ಪಾತ್ರ ಆಗಿದ್ದಾರೆ. ಹೌದು, ಅನಿರುದ್ಧ್ ಈಗ ಅಮಿತಾಭ್ ಬಚ್ಚನ್ ಅಭಿನಯದ ಮೈ ಆಜಾದ್ ಹೂ (Main Azaad Hoon) ಸಿನಿಮಾದ ದೃಶ್ಯವನ್ನ ಅಭಿನಯಿಸಿದ್ದಾರೆ. ಇಡೀ ದೃಶ್ಯದಲ್ಲಿ ಎಲ್ಲ ಭಾವನೆಗಳೂ ಇವೆ. ಅದನ್ನ ಅಷ್ಟೇ ಸಮರ್ಥವಾಗಿಯೇ ಮ್ಯಾನೇಜ್ ಮಾಡಿದ್ದಾರೆ.




ಅಮಿತಾಭ್ ಬಚ್ಚನ್ ಚಿತ್ರದ ದೃಶ್ಯ ಅಭಿನಯಿಸಿದ ಅನಿರುದ್ಧ್


ಅನಿರುದ್ಧ್ ಅಭಿನಯದ ಈ ದೃಶ್ಯ ಒಂದೇ ಟೇಕ್‌ ಅಲ್ಲಿಯೇ ಇದೆ. ಎಲ್ಲೂ ಕಟ್ ಮತ್ತು ಸ್ಟಾಪ್ ಇಲ್ವೇ ಇಲ್ಲ. ಅಮಿತಾಭ್ ಬಚ್ಚನ್ ಕೂಡ ಈ ದೃಶ್ಯವನ್ನ ಅಷ್ಟೇ ಅದ್ಭುತವಾಗಿಯೆ ಮಾಡಿದ್ದರು.. ಅದರಿಂದಲೇ ಸ್ಪೂರ್ತಿ ಪಡೆದಿರೋ ಅನಿರುದ್ಧ್ ಅವರಿಗೆ ಈ ದೃಶ್ಯ ಬಲು ಇಷ್ಟವಾಗಿದೆ. ಇದನ್ನ ಅಷ್ಟೆ ಡೇಡಿಕೇಟೆಡ್ ಆಗಿಯೇ ಇಲ್ಲಿ ಅನಿರುದ್ಧ್ ನಿರ್ವಹಿಸಿದ್ದಾರೆ.


ಈ ಒಂದು ಸ್ಪೆಷಲ್ ವಿಡಿಯೋವನ್ನ ನಟ ಅನಿರುದ್ಧ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. " ಹಾಗೆ ಈ ದೃಶ್ಯಕ್ಕೆ ಅಭಿನಯಿಸಬೇಕೆನಿಸಿತು. ತಮಗೆಲ್ಲ ಇಷ್ಟವಾಗುತ್ತೆ ಅನ್ನೋ ನಂಬಿಕೆ ನನಗಿದೆ. ದಯವಿಟ್ಟು ನೋಡಿ." ಅಂತಲೂ ಬರೆದುಕೊಂಡಿದ್ದಾರೆ.


Kannada Actor Aniruddha Jatkar Special Video on Amitabh Bachchan Movie Scene got viral
ಅಮಿತಾಭ್ ಬಚ್ಚನ್ ಚಿತ್ರದ ದೃಶ್ಯ ಅಭಿನಯಿಸಿದ ಅನಿರುದ್ಧ್


ಅನಿರುದ್ಧ್ ಅವರ ಈ ಒಂದು ವಿಡಿಯೊ ಇದೀಗ ಸಾಕಷ್ಟು ಗಮನ ಸೆಳೆಯುತ್ತಿದೆ. ಹಿಂದಿ ಬಲ್ಲ ಅಭಿಮಾನಿಗಳು ಹೆಚ್ಚು ಇಷಪಡ್ತಿದ್ದಾರೆ. ಅನಿರುದ್ಧ್ ಅಭಿನಯವನ್ನ ಕೂಡ ಕೊಂಡಾಡುತ್ತಿದ್ದಾರೆ.




ಮೈ ಆಜಾದ್ ಹೂಂ ಚಿತ್ರದ ದೃಶ್ಯ ಈಗ ವೈರಲ್


ಅಂದ್ಹಾಗೆ ಮೈ ಆಜಾದ್ ಹೂಂ ಸಿನಿಮಾದ ಈ ಒಂದು ಸಿನಿಮಾ 1989 ರಲ್ಲಿ ರಿಲೀಸ್ ಆಗಿತ್ತು. ಇದನ್ನ ಟೀನು ಆನಂದ್ ಡೈರೆಕ್ಟ್ ಮಾಡಿದ್ದರು. ಜಾವೇದ್ ಅಖ್ತರ್ ಬರೆದಿದ್ದರು. ಅಮಿತಾಭ್ ಬಚ್ಚನ್ ಜೊತೆಗೆ ಶಬಾನಾ ಆಜ್ಮಿ ಜೋಡಿ ಆಗಿದ್ದರು.


ಇದನ್ನೂ ಓದಿ: Radhika Narayan: ರಾಧಿಕಾ ನಾರಾಯಣ್‌ ಹೊಸ ಫೋಟೋ ನೋಡಿ ಸ್ಪೈಸಿ ಅಂತವ್ರೆ ಫ್ಯಾನ್ಸ್!


ಚಿತ್ರದಲ್ಲಿ ಒಂದೇ ಒಂದು ಹಾಡಿತ್ತು. ಇದನ್ನ ಶಬಾನಾ ಆಜ್ಮಿ ತಂದೆ ಕವಿ ಕೈಫಿ ಆಜ್ಮಿ ಬರೆದಿದ್ದರು. ಅಮರ್ ಬಿಸ್ವಾಸ್ ಸಂಗೀತದ ಈ ಹಾಡನ್ನ ಸ್ವತಃ ಅಮಿತಾಭ್ ಬಚ್ಚನ್ ಹಾಡಿದ್ದರು.


ಒಟ್ಟಾರೆ, 80 ರ ದಶಕದ ಈ ಒಂದು ಸಿನಿಮಾದ ದೃಶ್ಯವನ್ನ ಅಭಿನಯಸಿರೊ ನಟ ಅನಿರುದ್ಧ ಜಟ್ಕರ್ ಎಲ್ಲರ ಗಮನ ಸೆಳೆದಿದ್ದಾರೆ. ವಿಶೇಷವಾಗಿಯೇ ಪ್ರಶಂಸೆಯನ್ನೂ ಪಡೆದಿದ್ದಾರೆ ಅಂತಲೇ ಹೇಳಬಹುದು.

First published: