• Home
 • »
 • News
 • »
 • entertainment
 • »
 • Aniruddha Jatkar: ಕನ್ನಡದ ಕಿರುತೆರೆಗೆ ವಾಪಾಸ್ ಆದ ಜೊತೆ ಜೊತೆಯಲಿ ಆರ್ಯವರ್ಧನ್!

Aniruddha Jatkar: ಕನ್ನಡದ ಕಿರುತೆರೆಗೆ ವಾಪಾಸ್ ಆದ ಜೊತೆ ಜೊತೆಯಲಿ ಆರ್ಯವರ್ಧನ್!

ಕನ್ನಡದ ಕಿರುತೆರೆ ಸ್ಟಾರ್ ಮತ್ತೆ ಪುಟ್ಟ ಪರದೆಗೆ ವಾಪಸ್!

ಕನ್ನಡದ ಕಿರುತೆರೆ ಸ್ಟಾರ್ ಮತ್ತೆ ಪುಟ್ಟ ಪರದೆಗೆ ವಾಪಸ್!

ಕಲಾ ಸಾಮ್ರಾಟ್ ಎಸ್. ನಾರಾಯಣ್ ಸರ್ ರವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ ‘ಸೂರ್ಯವಂಶ’ ದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಾ ಇದ್ದೇನೆ. ಇದು ತಮ್ಮೆಲ್ಲರ ಹಾರೈಕೆ, ಆಶೀರ್ವಾದಗಳ ಫಲ. ತಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಮೇಲೆ ಸದಾ ಇರುತ್ತೆ ಅನ್ನೋ ಭರವಸೆ ನನಗಿದೆ" -ಅನಿರುದ್ಧ ಜತ್ಕರ್, ನಟ

ಮುಂದೆ ಓದಿ ...
 • News18 Kannada
 • 2-MIN READ
 • Last Updated :
 • Bangalore [Bangalore], India
 • Share this:

ಕನ್ನಡದಲ್ಲಿ ಒಂದು ಸೀರಿಯಲ್ (Serial) ಬಂದಿತ್ತು. ಇದರಲ್ಲಿ ನಾಯಕನಿಗೆ ಮಧ್ಯ ವಯಸ್ಸು. ನಾಯಕಿ ಚಿಕ್ಕ ವಯಸ್ಸಿನ ಚೆಲುವೆ. ಇವರ ಮಧ್ಯ ಲವ್ ಆಗುತ್ತದೆ ಅನ್ನೋದೇ ಒಟ್ಟು ಕಥೆ. ಕನ್ನಡದಲ್ಲಿ ಇದು ಸೂಪರ್ (Super Hit) ಹಿಟ್ ಆಯಿತು. ಆಗಲೇ ಕನ್ನಡದ ಸೂಪರ್ ಸ್ಟಾರ್ ಆಗಿ ಹೊರ ಹೊಮ್ಮಿದರು. ಅವರೇ ಡಾಕ್ಟರ್ ವಿಷ್ಣುವರ್ಧನ್ ಅಳಿಯ (Aniruddha Jatkar) ಅನಿರುದ್ಧ ಜತ್ಕರ್. ಹೌದು, ಜೊತೆ ಜೊತೆಯಲಿ ಸೀರಿಯಲ್ ಮೂಲಕ ಮನೆ ಮಾತಾಗಿದ್ದ ನಟ ಅನಿರುದ್ಧ ಬೇರೆ ಬೇರೆ ಕಾರಣದಿಂದಲೇ ಈ ಸೀರಿಯಲ್ ದಿಂದ ಹೊರ ಬಂದೇ ಬಿಟ್ಟರು. ಇದಾದ್ಮೇಲೆ ಮುಂದೇನು ಅಂತಲೇ (Smal Screen) ಕಿರುತೆರೆ ಲೋಕದಲ್ಲಿ ಟಾಕ್ ಶುರು ಆಗಿತ್ತು. ಆದರೆ ಈಗ ಅನಿರುದ್ಧ ಹೊಸ ಸುದ್ದಿಯೊಂದನ್ನ ಕೊಟ್ಟಿದ್ದಾರೆ. ಅದು ಕಿರುತೆರೆಗೆ ವಾಪಸ್ ಆಗೋ ಸುದ್ದಿ. ಇದರ ಡಿಟೈಲ್ಸ್ ಇಲ್ಲಿದೆ ಓದಿ.


ಕನ್ನಡದ ಕಿರುತೆರೆ ಸ್ಟಾರ್ ಮತ್ತೆ ಪುಟ್ಟ ಪರದೆಗೆ ವಾಪಸ್!
ಅನಿರುದ್ಧ ಯಾರಿಗೆ ಗೊತ್ತಿಲ್ಲ ಹೇಳಿ.? ಜೊತೆ ಜೊತೆಯಲಿ ಸೀರಿಯಲ್ ಮೂಲಕ ಕನ್ನಡಿಗರ ಮನೆ ಮಾತಾಗಿದ್ದವರು. ಸೀರಿಯಲ್ ನಲ್ಲಿ ಮಧ್ಯ ವಯಸ್ಸಿನ ಪ್ರೇಮಿಯಾಗಿ ಕಾಣಿಸಿಕೊಂಡು ಕನ್ನಡ ಸೀರಿಯಲ್ ಪ್ರಿಯರ ದಿಲ್ ಕದ್ದರು. ಆದರೆ ಬೇರೆ ಬೇರೆ ಕಾರಣದಿಂದ ಅನಿರುದ್ಧ ಹೊರಗೆ ಬಂದಿರೋದು ಗೊತ್ತೇ ಇದೆ.


Kannada Actor Aniruddha Jatkar back to Serial again. but not the same serial
ಕನ್ನಡದ ಕಿರುತೆರೆಗೆ ವಾಪಾಸ್ ಆದ ಜೊತೆ ಜೊತೆಯಲಿ ಆರ್ಯವರ್ಧನ್!


ಹೌದು, ಇದು ಹಳೆ ಕಥೆ. ಇದರ ಬಗ್ಗೆ ಈಗ ಹೇಳಿದ್ರೆ ಏನೂ ಇಲ್ಲ ಬಿಡಿ. ಯಾಕೆಂದ್ರೆ, ಅನಿರುದ್ಧ ಜಾಗಕ್ಕೆ ನಟ ಹರೀಶ್ ರಾಜ್ ಬಂದಾಗಿದೆ. ಸೀರಿಯಲ್ ತನ್ನದೇ ದಾಟಿಯಲ್ಲಿ ಹೋಗ್ತಾನೇ ಇದೆ. ಆದರೆ ಅನಿರುದ್ಧ ವಾಪಸ್ ಜೊತೆ ಜೊತೆಯಲಿ ಸೀರಿಯಲ್​ಗೆ ಬರ್ತಾಯಿಲ್ಲ. ಇಲ್ಲಿ ಬೇರೆ ಕಥೆನೆ ಇದೆ.
ಅನಿರುದ್ಧ ಮತ್ತೆ ಜೊತೆ ಜೊತೆಯಲಿ ಸೀರಿಯಲ್​ಗೆ ಬರ್ತಾರಾ?
ಅನಿರುದ್ಧ ಯಾವ ಸೀರಿಯಲ್ ಮೂಲಕ ವಾಪಸ್ ಆಗುತ್ತಿದ್ದಾರೆ. ಮತ್ತೆ ಜೊತೆ ಜೊತೆಯಲಿ ಸೀರಿಯಲ್​ಗೇನೆ ಬರ್ತಿದ್ದಾರಾ? ಇಲ್ಲವೇ ಬೇರೆ ಸೀರಿಯಲ್​ ಅನ್ನೇ ಇವರು ಮಾಡ್ತಿದ್ದಾರಾ? ಈ ಒಂದು ಕುತೂಹದ ಪ್ರಶ್ನೆಗೆ ಸ್ವತಃ ಅನಿರುದ್ಧ ಉತ್ತರ ಕೊಟ್ಟಿದ್ದಾರೆ. ಅದು ಹಿಂಗಿದೆ ಓದಿ.


"ಅತ್ಯಂತ ಸಂತೋಷದಿಂದ ತಮ್ಮೆಲ್ಲರ ಜೊತೆ ಒಂದು ಸಿಹಿ ಸುದ್ದಿ ಹಂಚಿಕೊಳ್ಳುತ್ತಾ ಇದ್ದೇನೆ.


ನಮ್ಮೆಲ್ಲರ ನೆಚ್ಚಿನ ಉದಯ ವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ಪ್ರಸಾರವಾಗಲಿರುವ ಕಲಾ ಸಾಮ್ರಾಟ್ ಎಸ್. ನಾರಾಯಣ್ ಸರ್ ರವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ ‘ಸೂರ್ಯವಂಶ’ ದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಾ ಇದ್ದೇನೆ. ಇದು ತಮ್ಮೆಲ್ಲರ ಹಾರೈಕೆ, ಆಶೀರ್ವಾದಗಳ ಫಲ. ತಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಮೇಲೆ ಸದಾ ಇರುತ್ತೆ ಅನ್ನೋ ಭರವಸೆ ನನಗಿದೆ"
-ಅನಿರುದ್ಧ, ನಟ

ಕಲಾ ಸಾಮ್ರಾಟ್ ಎಸ್​ ನಾರಾಯಣ್​ ಸೀರಿಯಲ್ ಡೈರೆಕ್ಟರ್
ಹೌದು, ಅನಿರುದ್ಧ ಸೂರ್ಯವಂಶ ಸೀರಿಯಲ್ ಮೂಲಕ ಕನ್ನಡದ ಪುಟ್ಟ ಪರದೆಗೆ ವಾಪಸ್ ಆಗುತ್ತಿದ್ದಾರೆ. ಈ ಹಿಂದೆ ಜೊತೆ ಜೊತೆಯಲಿ ಸೀರಿಯಲ್ ಮೂಲಕ ಕನ್ನಡಿಗರ ಹೃದಯ ಗೆದ್ದ ಅನಿರುದ್ಧ ಹೊಸ ಧಾರವಾಹಿ ಹೊಸ ಕಥೆ ಮೂಲಕ ಮತ್ತೊಮ್ಮೆ ಕನ್ನಡ ಸೀರಿಯಲ್ ಪ್ರಿಯರ ರಂಜಿಸಲು ಬರ್ತಿದ್ದಾರೆ.


Kannada Actor Aniruddha Jatkar back to Serial again. but not the same serial
ಕಲಾ ಸಾಮ್ರಾಟ್ ಎಸ್​ ನಾರಾಯಣ್​ ಸೀರಿಯಲ್ ಡೈರೆಕ್ಟರ್


ಸೂರ್ಯವಂಶ ಸೀರಿಯಲ್​ನಲ್ಲಿ ಅನಿರುದ್ಧ ಅಭಿನಯ
"ಸೂರ್ಯವಂಶ" ಕಲಾ ಸಾಮ್ರಾಟ್ ಎಸ್.ನಾರಾಯಣ್ ರಚನೆ ಮತ್ತು ನಿರ್ದೇಶನದ ಸೀರಿಯಲ್ ನಲ್ಲಿಯೇ ಅನಿರುದ್ಧ ಈಗ ಅಭಿನಯಿಸುತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿಯೇ ಅಭಿನಯಿಸುತ್ತಿದ್ದಾರೆ. ಈ ಸೀರಿಯಲ್ ಹೇಗಿರುತ್ತದೆ? ಅನಿರುದ್ಧ ಇಲ್ಲಿ ಯಾವ ರೀತಿ ಕಾಣಿಸಿಕೊಳ್ಳುತ್ತಾರೆ? ಈ ಎಲ್ಲ ಪ್ರಶ್ನೆಗಳೂ ಈಗ ಹುಟ್ಟುಕೊಂಡಿವೆ.


ಇದನ್ನೂ ಓದಿ: Casting Couch: ಟಾಲಿವುಡ್​ ಮಹಾನಟಿಗೂ ಕಾಸ್ಟಿಂಗ್​ ಕೌಚ್ ಕಾಟ? ಮೊದಲ ಬಾರಿಗೆ ತುಟ್ಟಿ ಬಿಚ್ಚಿದ ಕೀರ್ತಿ ಸುರೇಶ್​!


ಆದರೆ ಸದ್ಯಕ್ಕೆ ಸೀರಿಯಲ್ ಮಾಹಿತಿ ಇಷ್ಟೆ ಇದೆ. ಇನ್ನುಳಿದ ಮಾಹಿತಿಯನ್ನ ಅಧಿಕೃತವಾಗಿಯೇ ಸೀರಿಯಲ್ ಟೀಮ್ ಹಂಚಿಕೊಳ್ಳುತ್ತದೆ. ಇದರ ಬಗ್ಗೆ ಇನ್ನಷ್ಟು ಮತ್ತಷ್ಟು ಮಾಹಿತಿ ಕೊಡ್ತೀವಿ ವೇಟ್ ಮಾಡಿ.

First published: