Sandalwood: ನಟ ಅನಂತನಾಗ್ ಸಾಲು ಸಾಲು ಚಿತ್ರಗಳನ್ನು ಒಪ್ಪಿಗೊಂಡು ಬ್ಯೂಸಿಯಾಗಿದ್ದಾರೆ. ಒಂದರ ಮೇಲೊಂದರಂತೆ ಚಿತ್ರಗಳನ್ನು ಒಪ್ಪಿಕೊಂಡಿರುವ ಅವರು ಹೊಸ ನಿರ್ದೇಶಕ ಶಿಶಿರ್ ರಾಜ್ ನಿರ್ದೇಶನದ ಮೊದಲ ಚಿತ್ರದಲ್ಲಿ ನಟಿಸಲು ಸಿದ್ಧರಾಗುತ್ತಿದ್ದಾರೆ. ಇನ್ನು ಚಿತ್ರಕ್ಕೆ 'ಆಬ್ರಕಡಾಬ್ರ' ಎಂಬ ವಿಭಿನ್ನ ಹೆಸರನ್ನಿಡಲಾಗಿದ್ದು, ಕುತೂಹಲ ಕೆರಳಿಸಿದ್ದ ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ.
ಇನ್ನು ಈ ಚಿತ್ರವನ್ನು ನಟ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡುತ್ತಿದ್ದು, ಚಿತ್ರದಲ್ಲಿ ವಿಭಿನ್ನ ಕಥೆಯಿದ್ದು ನನ್ನ ಪಾತ್ರ ಕೂಡ ಪ್ರಮುಖವಾಗಿದೆ ಎಂದು ಅನಂತನಾಗ್ ಹೇಳಿದ್ದಾರೆ. ನನ್ನ ಪಾತ್ರ ಮತ್ತು ಕಥೆ ಬಗ್ಗೆ ಮಾತನಾಡಬಾರದು, ಆದರೆ ನನ್ನ ಬಾಲ್ಯದಲ್ಲಿ ಎರಡು ವರ್ಷ ಉಡುಪಿಯಲ್ಲಿಇದ್ದೆ. ನನ್ನ ತಮ್ಮ ಶಂಕರ್ ನಾಗ್ ಅಲ್ಲಿಯೇ ಹುಟ್ಟಿದು. ಹೀಗಾಗಿ ಅಲ್ಲಿ ಮಾಡುತ್ತಿರುವ ಚಿತ್ರವಾದ್ದರಿಂದ ಈ ಚಿತ್ರವನ್ನು ಬಹಳ ಖುಷಿಯಿಂದ ಒಪ್ಪಿಕೊಂಡೆ ಎಂದಿದ್ದಾರೆ.
ಅಲ್ಲದೆ, ನಾನು ಹೆಚ್ಚಾಗಿ ಹೊಸಬರ ಸಿನಿಮಾಗಳನ್ನೇ ಒಪ್ಪಿಕೊಳ್ಳೋದು. ಅವರು ವಿಭಿನ್ನವಾದ ಕಥೆ ತರುತ್ತಿದ್ದಾರೆ. ನಾನು ಅಭಿನಯಿಸುತ್ತಿರುವ ಇನ್ನೊಂದು ಚಿತ್ರ 'ಮೇಡ್ ಇನ್ ಬೆಂಗಳೂರು' ಸಿನಿಮಾ ಕೂಡ ಹೊಸ ನಿರ್ದೇಶಕರದ್ದು ಎಂದು ಹೇಳಿದ್ದಾರೆ. ಇನ್ನು ನನಗೆ ಬೇರೆ ಭಾಷೆಗಳಿಂದ ಸಹ ನಟನೆಗೆ ಆಫರ್ ಬರುತ್ತಿದೆ, ಆದರೆ ನಾನು ಹೋಗುವುದಿಲ್ಲ, ನಾನು ಕನ್ನಡದಲ್ಲೇ ಕಂಫರ್ಟಬಲ್ ಆಗಿದ್ದೇನೆ. ಒಟಿಟಿಗಳಲ್ಲಿ ನಾಲ್ಕೈದು ಹಿಂದಿ ಸಿನಿಮಾಗಳಿಗೆ ಆಫರ್ ಬಂದಿತ್ತು. ಒಪ್ಪಿಕೊಂಡಿಲ್ಲ, ಆದರೆ ಹೊಸಬರ ಇನ್ನು 3 ಚಿತ್ರಗಳನ್ನು ಒಪ್ಪಿಕೊಂಡಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: ಕಿಚ್ಚನ ಮುಂದಿನ ಚಿತ್ರಕ್ಕೆ ತಮಿಳು ನಿರ್ದೇಶಕರ ಆ್ಯಕ್ಷನ್ ಕಟ್
ಏನಿದು ಅಬ್ರಕಡಾಬ್ರ ಕಥೆ?
ಇನ್ನು ಈ ಚಿತ್ರದ ಬಗ್ಗೆ ಮಾತನಾಡಿರುವ ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ, ಈ ಕಥೆ ಕಿರುಚಿತ್ರವಾಗಬೆಕಿತ್ತು, ಆದರೆ ಅದನ್ನು ಸಿನೆಮಾ ಮಾಡಲಾಗುತ್ತಿದೆ. ನಿರ್ದೇಶಕ ಶಿಶಿರ್ ಹಲವಾರು ವರ್ಷಗಳಿಂದ ನನ್ನ ಜೊತೆ ಕೆಲಸ ಮಾಡಿದ್ದಾರೆ, ಕಥೆ ಚನ್ನಾಗಿದೆ ಎಂದಿದ್ದಾರೆ.
ಈ ಚಿತ್ರಕ್ಕೆ ವಿಭಿನ್ನ ಎನಿಸುವ 'ಆಬ್ರಕಡಾಬ್ರ' ಎಂಬ ಹೆಸರಿಡಲು ಕಾರಣ ಇದೆ. 'ಇದು ಡ್ರಾಮಾ ಸಿನಿಮಾ. ಟೈಟಲ್ ಹೇಳುವಂತೆ ಚಿತ್ರದಲ್ಲೂ ಜಾದೂಗಾರನಿರುತ್ತಾನೆ. ಇನ್ನು ಮೆಜಿಷಿಯನ್ ಪಾತ್ರವನ್ನು ಶೃಂಗ ಬಿ.ವಿ. ಮಾಡುತ್ತಿದ್ದಾರೆ. ಅಲ್ಲದೇ ಈ ಚಿತ್ರದಲ್ಲಿ ಮನುಷ್ಯನ ಭಾವನೆಗಳು, ಐಡೆಂಟಿಟಿ, ಸರಿ ತಪ್ಪುಗಳು, ಎಲ್ಲಾ ಪಾತ್ರಗಳ ಹುಡುಕಾಟಗಳು, ಬಯಕೆಗಳ ಪಯಣವನ್ನು ಎಕ್ಸ್ಪ್ಲೋರ್ ಮಾಡಲಿದ್ದೇವೆ ಎಂದು ನಿರ್ದೇಶಕ ಶಿಶಿರ್ ರಾಜ್ ತಿಳಿಸಿದ್ದಾರೆ.
ಈ ಚಿತ್ರದಲ್ಲಿ ಅನಂತ್ ನಾಗ್ ಅವರ ಪಾತ್ರವೂ ವಿಶೇಷವಾಗಿದೆ. ಅವರು. 'ಜೀವನದಲ್ಲಿ ವಿಭಿನ್ನವಾದ ಚಿಂತನೆಯನ್ನು ಹೊಂದಿರುವ ಪಾತ್ರವನ್ನು ಮಾಡುತ್ತಿದ್ದಾರೆ. ಇಂತಹ ಪಾತ್ರಕ್ಕೆ ಅನಂತ್ ಸರ್ ಅವರೇ ಮೊದಲು ತಲೆಗೆ ಬರೋದು. ಅವರು ನಟಿಸಿದರೆ ಪಾತ್ರಕ್ಕೆ ವಿಶೇಷವಾದ ಅರ್ಥ ಬರುತ್ತದೆ ಎಂದು ಶಿಶಿರ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ