ರೆಬಲ್ ಸ್ಟಾರ್ ಅಂಬರೀಶ್ (Gandu Bherunda Movie) ಚಿತ್ರ ಜೀವನದಲ್ಲಿ ಅನೇಕ ಸಿನಿಮಾಗಳಿವೆ. ಅವುಗಳಲ್ಲಿ ಕೆಲವು ಸದಾ ಮೆಮೆರೇಬಲ್ ಸಿನಿಮಾಗಳೇ ಆಗಿವೆ. ರೆಬಲ್ ಸ್ಟಾರ್ ಅಂಬರೀಶ್ (Rebel Star Ambareesh) ಈ ಸಿನಿಮಾಗಳ ಟೈಮ್ನ ಒಂದಷ್ಟು ಇಂಟ್ರಸ್ಟಿಂಗ್ ಘಟನೆಗಳನ್ನ ಆಗಾಗ ನೆನಪಿಸಿಕೊಳ್ತಾನೇ ಇದ್ದರು. ಅದರಲ್ಲೂ ಆರಂಭದ ದಿನಗಳಲ್ಲಿ ಅಂದ್ರೆ, 1984 ರಲ್ಲಿ ತೆರೆಗೆ ಬಂದ ಗಂಡುಭೇರುಂಡ (Kannada Gandu Bherunda) ಸಿನಿಮಾದ ಚಿತ್ರೀಕರಣದ ಕಥೆಯಂತೂ ತುಂಬಾ ಹೇಳೋರು. ಅಂಬರೀಶ್ ತಮ್ಮ ಅಭಿನಯದ ಈ ಚಿತ್ರದಲ್ಲಿ ಒಂದು (Gandu Bherunda Film Tiger Fight) ಹುಲಿ ಫೈಟ್ ಕೂಡ ಹಾಕಿಸಿಕೊಂಡಿದ್ದರು. ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು ಅವರು ಬೇಡ್ವೋ ಅಂದ್ರೂ ಬೇಕು ಅಂತಲೇ ಹಟಕ್ಕೆ ಬಿದ್ದು ಹುಲಿ ಫೈಟ್ ಸೀನ್ಸ್ ಇಡಿಸಿದ್ದರು.
ಆದರೆ ಅದರ ಚಿತ್ರೀಕರಣದ ವೇಳೆ ಆಗಿರೋ ಘಟನೆ ಮತ್ತು ಭಯ ಎರಡನ್ನೂ ಅಂಬರೀಶ್ ಹೇಳಿಕೊಳ್ತಿದ್ದರು. ಅದನ್ನ ಇಲ್ಲಿ ಮತ್ತೆ ಅಕ್ಷರ ರೂಪದಲ್ಲಿ ನೆನಪಿಸಿಕೊಂಡಿದ್ದೇವೆ. ಅದು ಮುಂದಿದೆ ಓದಿ.
ಅಂಬರೀಶ್ ಆಗಾಗ ಹೇಳ್ತಿದ್ದರು ಹುಲಿ ಫೈಟ್ಸ್ನ ಆ ಕಥೆ
ರೆಬಲ್ ಸ್ಟಾರ್ ಅಂಬರೀಶ್ ಅವರು ಗಂಡುಭೇರುಂಡ ಸಿನಿಮಾ ಒಪ್ಪಿಕೊಂಡರು. ಅವರಿಗೆ ಅಂದು ಹಾಗೇಕೆ ಅನಿಸಿತೋ ಏನೋ. ಈ ಚಿತ್ರದಲ್ಲಿ ಒಂದು ಹುಲಿ ಫೈಟ್ಸ್ ಇಟ್ರೇ ಹೇಗೆ? ಈ ಯೋಚನೆ ಬಂದಿದ್ದೇ ತಡ, ಅದನ್ನ ಡೈರೆಕ್ಟರ್ಗೂ ಹೇಳಿದರು. ಆದರೆ ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು ಇದನ್ನ ಅಷ್ಟು ಸುಲಭಕ್ಕೆ ಒಪ್ಪಿಕೊಳ್ಳಲಿಲ್ಲ. ಬದಲಾಗಿ ಬೇಡ್ವೇ ಬೇಡ ಅಂದ್ರು.
ಆದರೆ ಅಂಬರೀಶ್ ಅವ್ರು ಬಿಡಲೇ ಇಲ್ಲ. ಹುಲಿ ಫೈಟ್ ಬೇಕೇಬೇಕು ಅಂತಲೂ ಹಟಕ್ಕೆ ಬಿದ್ದು, ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು ಅವರನ್ನ ಒಪ್ಪಿಸಿಯೇ ಬಿಟ್ಟರು. ಅದಕ್ಕೇನೆ ಈ ಚಿತ್ರದಲ್ಲಿ ಹುಲಿ ಫೈಟ್ಸ್ ಕೂಡ ಇದೆ. ಆದರೆ ಇದರ ಚಿತ್ರೀರಕಣ ನಿಜಕ್ಕೂ ರೋಚಕವಾಗಿಯೇ ಇತ್ತು.
ಚಿತ್ರದಲ್ಲಿ ಹುಲಿ ಫೈಟ್ ಬೇಕು ಅಂತ ಅಂಬಿ ಒಂದೇ ಹಠ
ಅಂಬರೀಶ್ ಅವರಿಗೆ ಸಣ್ಣದೊಂದು ಭಯ ಕೂಡ ಶುರು ಆಗಿತ್ತು. ಹುಲಿ ಫೈಟ್ ಸೀನ್ ತೆಗೆಯೋ ದಿನಗಳು ಹತ್ತಿರ ಬಂದಂತೆ ಆತಂಕವೂ ಹೆಚ್ಚಾಗುತ್ತಿತ್ತು. ಆದರೆ ಅದನ್ನ ತೋರಿಸೋ ಹಾಗಿಲ್ವೇ. ಹುಲಿ ಫೈಟ್ ಬೇಕು ಅಂತಲೇ ತಾವೇ ಹೇಳಿದ್ದಾರೆ. ಬೇಡ ಅಂದ್ರೆ ಹೇಗೆ?
ಕೊನೆಗೂ ಆ ದಿನ ಬಂದೇ ಬಿಡ್ತು. ಅಂಬರೀಶ್ ಹುಲಿ ಫೈಟ್ ಮಾಡೋಕೆ ಮಾನಸಿಕವಾಗಿಯೇ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಯಾವಾಗ ದೈತ್ಯ ಹುಲಿಗಳನ್ನ ನೋಡಿದ್ರೋ, ಅಲ್ಲಿಗೆ ಅಂಬರೀಶ್ ಅವರ ಧೈರ್ಯ ಮತ್ತಷ್ಟು ಕುಸಿದು ಹೋಯಿತು.
ಅಂಬರೀಶ್ ರಮ್ ಕುಡಿದು ಹುಲಿ ಫೈಟ್ ಮಾಡಿದ್ದರು!
ಹಾಗಾಗಿಯೇ ಅಂಬರೀಶ್ ಒಕ್ಕೂಟದ ಕೃಷ್ಣನ ಬಳಿ ರಮ್ ತರಿಸಿಕೊಂಡ್ರು. ಧೈರ್ಯಕ್ಕಾಗಿಯೇ ಅದನ್ನ ಕುಡಿದ್ರಾಯಿತು ಅಂತಲೇ ಐಡಿಯಾ ಮಾಡಿದ್ದರು. ಹಾಗೆ ರೂಮ್ ನಲ್ಲಿ ಎಲ್ಲ ರೆಡಿ ಮಾಡಿಕೊಂಡಿದ್ದ ಅಂಬರೀಶ್ ಅವರು ಆಗ ಪ್ರಣಯ ರಾಜ ಶ್ರೀನಾಥ್ ಬಂದ್ರು, ಅವರ ಹಿಂದೆ ಶ್ರೀನಾಥ್ ಪತ್ನಿ ಗೀತಾ ಅವರೂ ಇದ್ದರು.
ಅಷ್ಟೇ ನೋಡಿ, ಅದಕ್ಕೇನೆ ಶ್ರೀನಾಥ್ ಅವರು ಏನೂ ಹೇಳದೇ, ಏನೂ ಕೇಳದೇನೆ ಅಲ್ಲಿಂದ ಹೊರಟು ಬಿಟ್ಟರು. ಆದರೆ ಕೆಲವೇ ಕ್ಷಣದಲ್ಲಿಯೇ ವಾಪಾಸ್ ಆದ ಶ್ರೀನಾಥ್ ರಮ್ ಅನ್ನ ರಪ್ ಅಂತ ಕುಡಿದವ್ರೇ ಹೊರಟೇ ಬಿಟ್ಟರು. ಅಲ್ಲಿಗೆ ಅಂಬರೀಶ್ ಉಳಿದ ರಮ್ ಕುಡಿದು ಫೈಟ್ ಸೀನ್ಗೆ ರೆಡಿ ಆಗುತ್ತಿದ್ದರು.
ಹುಲಿ ಫೈಟ್-ಶ್ರೀನಾಥ್ ಆ್ಯಕ್ಟಿಂಗ್-ಅಂಬಿ ಶಾಕ್
ಆಗಲೇ ಹೊರಡಗೆಯಿಂದ ಚಪ್ಪಾಳೆ ಸದ್ದು ಕೇಳುತ್ತಿತ್ತು. ಅದನ್ನ ಕೇಳಿದ ಅಂಬಿ ಹೊರಗೆ ಬಂದು ನೋಡಿದರೆ, ಶ್ರೀನಾಥ್ ಅವರು ಹುಲಿ ಜೊತೆಗೆ ಸಖತ್ ಫೈಟ್ ಕೂಡ ಮಾಡ್ತಿದ್ದರು. ಅಲ್ಲಿದ್ದವರಿಂದ ಚಪ್ಪಾಳೆಯನ್ನ ಗಿಟ್ಟಿಸಿಕೊಳ್ಳುತ್ತಿದ್ದರು.
ನಾನೇನು ಕಮ್ಮಿ ಅಂತಲೇ ಅಂಬರೀಶ್ ಕೂಡ ಹುಲಿ ಜೊತೆಗೆ ಫೈಟ್ಸ್ ಮಾಡಿದರು. ಮೈ ಮೇಲೆ ದೇವರು ಬಂದ ಹಾಗೆ ಫೈಟ್ ಮಾಡಿ ಭೇಷ್ ಎನಿಸಿಕೊಂಡ್ರು. ಅಲ್ಲಿಗೆ ಚಿತ್ರೀಕರಣದ ಅನುಭವ ಮುಗಿದು ಹೋಯಿತು.
ಹುಲಿ ಫೈಟ್ಸ್ ರಷಸ್ ಕಂಡು ಬಿದ್ದು ಬಿದ್ದು ನಕ್ಕ ಅಂಬರೀಶ್
ಅಂಬರೀಶ್ ತಮ್ಮ ಕೋ ಸ್ಟಾರ್ ಶ್ರೀನಾಥ್ ಅವರಿಗೆ ಆಗ ಕೂಡಲೇ ಕೇಳಿದ್ರು. ಹುಲಿ ಫೈಟ್ಸ್ ಮಾಡೋವಾಗ ನನಗೆ ಹುಲಿ ಸಿಕ್ಕಾಪಟ್ಟೆ ಹೊಡೆಯಿತು. ನಿನಗೇನೂ ಆಗಲೇ ಇಲ್ವೇ ಅಂತಲೂ ಶ್ರೀನಾಥ್ ಅವರನ್ನ ಕೇಳಿದರು. ಆಗ ಶ್ರೀನಾಥ್ ಅವರು ಹಾಗೇನೂ ಇಲ್ಲ. ನಾನೇ ಹುಲಿ ಜೊತೆಗೆ ಫೈಟ್ ಮಾಡಿದೆ ಅಂತಲೇ ಹೇಳಿದರು.
ಚಿತ್ರೀರಕಣ ಎಲ್ಲ ಮುಗಿದ ಮೇಲೆ ಅಂಬರೀಶ್ ಸಿನಿಮಾದ ರಷಸ್ ನೋಡ್ತಾಯಿದ್ದರು. ಆಗ ಅಂಬರೀಶ್ ಅವರಿಗೆ ನಗು ತಡೆಯಲು ಆಗಲೇ ಇಲ್ಲ. ಕಾರಣ, ಅಂಬರೀಶ್ ಅವರಿಗಿಂತಲೂ ಶ್ರೀನಾಥ್ ಅವರಿಗೇನೆ ಹುಲಿ ಸರಿಯಾಗಿಯೇ ಹೊಡೆದಿತ್ತು. ಅದಕ್ಕೇನೆ ಅಂಬಿ ಅಂದು ರಷಸ್ ನೋಡಿ ಸಿಕ್ಕಾಪಟ್ಟೆ ನಕ್ಕು ಬಿಟ್ಟಿದ್ದರು.
ಇದನ್ನೂ ಓದಿ: Padavi Poorva: ‘ಪದವಿ ಪೂರ್ವ'ದಲ್ಲಿ ಹಾರ್ಟ್ ಟಚ್ಚಿಂಗ್ ಕಥೆ; ಟ್ರೈಲರ್ನಲ್ಲಿ ಎಲ್ಲವೂ ರಿವೀಲ್
ಶ್ರೀನಾಥ್ ಮತ್ತೊಮ್ಮೆ ಸಿಕ್ಕಾಗ ಅಂಬರೀಶ್ ಈ ವಿಷಯ ಪ್ರಸ್ತಾಪಿಸಿದರು. ಅಂದು ಹುಲಿ ನನಗೆ ಏನೂ ಹೊಡೆಲಿಲ್ಲ ಅಂತ ಹೇಳಿದೆ. ಆದರೆ ರಷಸ್ ಅಲ್ಲಿ ಹುಲಿ ನಿನ್ನ ಸರಿಯಾಗಿಯೇ ಹೊಡೆದೆ ಅಲ್ವೇ ಅಂತ ಕೇಳಿದರು.
ಚಿತ್ರದ ರಷಸ್ ನೋಡಿರೋ ಅಂಬಿಗೆ ಪ್ರಣಯ ರಾಜ ಹೇಳಿದ್ದೇನು?
ಹೌದು, ಹುಲಿ ನನಗೆ ಸರಿಯಾಗಿಯೇ ಹೊಡೆದಿದೆ. ಆದರೆ ನಾವು ಹೀರೋಗಳು ಅದನ್ನ ಮೆಂಟೇನ್ ಮಾಡಬೇಕು. ಎಲ್ಲವನ್ನೂ ಹೇಳೋ ಹಾಗಿಲ್ಲ. ಇಮೇಜ್ ಡ್ಯಾಮೇಜ್ ಆಗುತ್ತದೆ ಅಂತಲೇ ಹೇಳಿದ್ದರು.
ಈ ಒಂದು ಘಟನೆಯನ್ನ ಅಂಬರೀಶ್ ಪತ್ರಕರ್ತ ಸೇಹಿತರ ಮುಂದೆ ಆಗಾಗ ಹೇಳಿಕೊಳ್ಳುತ್ತಿದ್ದರು. ಚಿತ್ರೀಕರಣದ ಇಂಟ್ರಸ್ಟಿಂಗ್ ಕಥೆಗಳನ್ನ ಟೈಮ್ ಸಿಕ್ಕಾಗ ಇತರ ಆತ್ಮೀಯರ ಜೊತೆಗೂ ಶೇರ್ ಮಾಡಿಕೊಳ್ಳುತ್ತಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ