• Home
 • »
 • News
 • »
 • entertainment
 • »
 • Ambareesh: ಹೇರ್ ಸ್ಟೈಲ್ ಬದಲಾಯಿಸುತ್ತಿರಲಿಲ್ಲ ಅಂಬಿ! ರೀಸನ್ ಏನ್ ಗೊತ್ತಾ?

Ambareesh: ಹೇರ್ ಸ್ಟೈಲ್ ಬದಲಾಯಿಸುತ್ತಿರಲಿಲ್ಲ ಅಂಬಿ! ರೀಸನ್ ಏನ್ ಗೊತ್ತಾ?

70 ಚಿತ್ರಗಳಲ್ಲಿ ಅಂಬರೀಶ್ ಪೊಲೀಸ್ ಇನ್ಸಪೆಕ್ಟರ್!

70 ಚಿತ್ರಗಳಲ್ಲಿ ಅಂಬರೀಶ್ ಪೊಲೀಸ್ ಇನ್ಸಪೆಕ್ಟರ್!

ಅಂಬರೀಶ್ ಬೇರೆ ಬೇರೆ ಹೇರ್ ಸ್ಟೈಲ್ ಅನ್ನ ಮೆಂಟೇನ್ ಮಾಡ್ತಾನೇ ಇರಲಿಲ್ಲ. ಇದಕ್ಕೆ ಕಾರಣವೂ ಇದೆ. ಅದು ಬೇರೆ ಏನೋ ಅಲ್ಲ. ಅಂದಿನ ಟೈಮ್​ ನಲ್ಲಿ ಅಂಬರೀಶ್ ಒಂದೇ ರೀತಿಯ ಪಾತ್ರವನ್ನೆ ಮಾಡ್ತಾ ಇದ್ದರು. ಅದಕ್ಕೆ ಹೇರ್ ಸ್ಟೈಲ್ ಕೂಡ ಒಂದೇ ರೀತಿ ಮೆಂಟೇನ್​ ಮಾಡ್ತಾನೇ ಇದ್ದರು.

 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

ರೆಬಲ್ ಸ್ಟಾರ್ ಅಂಬರೀಶ್ (Rebel Star Ambareesh) ಎಲ್ಲ ರೀತಿಯ ಪಾತ್ರಗಳನ್ನ ಮಾಡಿದ್ದಾರೆ. ಪುಟ್ಟಣ್ಣನವರ ನಾಗರಹಾವು ಚಿತ್ರದಲ್ಲಿ ಜಲೀಲನಾಗಿ ಎಂಟ್ರಿ ಕೊಟ್ರು. ಅಂತ (Ambareesh Retro Story) ಚಿತ್ರದಲ್ಲಿ ಮಾಡಿರೋ ಪಾತ್ರ ಈಗಲೂ ಮೈಲುಗಲ್ಲೇ ಆಗಿದೆ. ಈ ಒಂದು ಪಾತ್ರವನ್ನ ಅನೇಕರು ಟ್ರೈ ಮಾಡಿದ್ರು ಕೂಡ ಅದು ಅಂಬಿ (Ambareesh Film Unknow Facts) ರೀತಿ ಬರೋದಿಲ್ಲ ಬಿಡಿ. ರಂಗನಾಯಕಿ ಚಿತ್ರದಲ್ಲಿ ಅಣ್ಣನಾಗಿಯೇ ಕಾಣಿಸಿಕೊಂಡಿರೋದು ಎಲ್ಲರಿಗೂ ಗೊತ್ತಿದೆ. ಪಡುವಾರಹಳ್ಳಿ ಪಾಂಡವರು ಚಿತ್ರದಲ್ಲಿ ವಿಶೇಷವಾಗಿಯೇ ಕಾಣಿಸಿಕೊಂಡ್ರು. ಆದರೂ ಅಂಬರೀಶ್ ಆ ಒಂದು (Ambareesh Movie Facts) ಪಾತ್ರವನ್ನ ಮತ್ತೆ ಮತ್ತೆ ಮಾಡಲೇಬೇಕಿತ್ತು. ಹಾಗೆ ಒಂದೇ ರೀತಿಯ ಪಾತ್ರವನ್ನ 70 ಬಾರಿ ಮಾಡಿದ್ದಾರೆ. ಆ ಪಾತ್ರ ಯಾವುದು? ಇಲ್ಲಿದೆ ಒಂದಷ್ಟು ಹಳೆ ಕಥೆ, ಓದಿ.


ರೆಬಲ್ ಸ್ಟಾರ್ ಹೇರ್ ಸ್ಟೈಲಿಸ್ಟ್ ಯಾರು ಗೊತ್ತೇ?
ರೆಬಲ್ ಸ್ಟಾರ್ ಅಂಬರೀಶ್ ಹೇರ್ ಸ್ಟೈಲ್ ವಿಶೇಷವಾಗಿಯೇ ಇತ್ತು. ಅದನ್ನ ಅಂಬರೀಶ್ ಚೆನ್ನಾಗಿಯೇ ಮೆಂಟೇನ್ ಮಾಡ್ತಾ ಇದ್ದರು. ಮೈಸೂರಿನ ಚಲಂ ಅನ್ನೋ ವ್ಯಕ್ತಿನೇ ಅಂಬರೀಶ್ ಹೇರ್ ಸ್ಟೈಲ್ ಮಾಡ್ತಿದ್ದರು.


Kannada Actor Ambareesh Acted in the same role in 70 movies
ರೆಬಲ್ ಸ್ಟಾರ್ ಹೇರ್ ಸ್ಟೈಲಿಸ್ಟ್ ಯಾರು ಗೊತ್ತೇ?


ಚಲಂ ಒಂದು ರೀತಿ ವಿಶೇಷ ವ್ಯಕ್ತಿನೇ ಆಗಿದ್ದರು. ಅಂಬರೀಶ್ ಸಲೂನ್​ಗೆ ಬಂದಾಗ ಅಣ್ಣ ಆ ಸ್ಟೈಲ್ ಮಾಡ್ಲಾ? ಈ ಸ್ಟೈಲ್ ಮಾಡ್ಲಾ? ಹೀಗೆ ಬೇರೆ ಬೇರೆ ಹೇರ್ ಸ್ಟೈಲ್ ಮಾಡ್ಲಾ ಅಂತಲೇ ಚಲಂ ಕೇಳ್ತಿದ್ದರು.
ಅಂಬಿ ಅಣ್ಣಾ "ದೇವಾನಂದ್" ಹೇರ್ ಸ್ಟೈಲ್ ಮಾಡ್ಲಾ!
ಬಾಲಿವುಡ್​​ನಲ್ಲಿ ಆಗೆಲ್ಲ ದೇವಾನಂದ್ ಫೇಮಸ್ ಆಗಿದ್ದರು. ಅವರ ಪ್ರತಿ ಸ್ಟೈಲ್ ಟ್ರೆಂಡ್ ಆಗುತ್ತಿದ್ದವು. ಹೇರ್ ಸ್ಟೈಲ್ ಅಂತೂ ವೇರಿ ಫೇಮಸ್ ಆಗಿರುತ್ತಿತ್ತು.


ಅದನ್ನ ಚಲಂ ಎಲ್ಲಿ ನೋಡಿದ್ರೋ ಏನೋ. ಆದರೆ ಅಂಬರೀಶ್ ಸಲೂನ್​ಗೆ ಬಂದಾಗ, ಚಲಂ ಕೇಳುತ್ತಿದದ್ದು ಒಂದೇ ಮಾತು, ಅಣ್ಣ ನಾನು ನಿಮಗೆ ದೇವಾನಂದ್ ಹೇರ್ ಸ್ಟೈಲ್ ಮಾಡ್ಲಾ ಅಂತಲೇ ಕೇಳ್ತಿದ್ರು. ಆದರೆ ಅಂಬಿ ಇದಕ್ಕೆ ಒಪ್ಪದೇ ಬೇಡ್ವೋ, ನನಗೆ ಆ ಹೇರ್ ಸ್ಟೈಲ್ ಬೇಡ ಅಂತಲೇ ತಮ್ಮದೇ ಶೈಲಿಯಲ್ಲಿ ತಳ್ಳಿಹಾಕಿ ಬಿಡುತ್ತಿದ್ದರು.


ಅಂಬಿ ಯಾಕೆ ದೇವಾನಂದ್ ಹೇರ್ ಸ್ಟೈಲ್ ಬೇಡ ಅಂತಿದ್ರು?
ಅಂಬರೀಶ್ ಬೇರೆ ಬೇರೆ ಹೇರ್ ಸ್ಟೈಲ್ ಅನ್ನ ಮೆಂಟೇನ್ ಮಾಡ್ತಾನೇ ಇರಲಿಲ್ಲ. ಇದಕ್ಕೆ ಕಾರಣವೂ ಇದೆ. ಅದು ಬೇರೆ ಏನೋ ಅಲ್ಲ. ಅಂದಿನ ಟೈಮ್​ ನಲ್ಲಿ ಅಂಬರೀಶ್ ಒಂದೇ ರೀತಿಯ ಪಾತ್ರವನ್ನೆ ಮಾಡ್ತಾ ಇದ್ದರು. ಅದಕ್ಕೆ ಹೇರ್ ಸ್ಟೈಲ್ ಕೂಡ ಒಂದೇ ರೀತಿ ಮೆಂಟೇನ್​ ಮಾಡ್ತಾನೇ ಇದ್ದರು.


70 ಚಿತ್ರಗಳಲ್ಲಿ ಅಂಬರೀಶ್ ಪೊಲೀಸ್ ಇನ್ಸಪೆಕ್ಟರ್!
ಅಂಬರೀಶ್ 70 ಚಿತ್ರಗಳಲ್ಲಿ ಪೊಲೀಸ್ ಇನ್ಸಪೆಕ್ಟರ್ ರೋಲ್ ಮಾಡಿದ್ದರು. ಈ ಒಂದು ಕಾರಣದಿಂದಲೇ ಅಂಬರೀಶ್ ಪೊಲೀಸ್ ಇನ್ಸಪೆಕ್ಟರ್ ಹೇರ್ ಸ್ಟೈಲ್ ಮೆಂಟೇನ್ ಮಾಡ್ತಾ ಇದ್ದರು.


Kannada Actor Ambareesh Acted in the same role in 70 movies
ಅಂಬಿ ಅಣ್ಣಾ "ದೇವಾನಂದ್" ಹೇರ್ ಸ್ಟೈಲ್ ಮಾಡ್ಲಾ!


ಒಂದೇ ರೀತಿಯ ಪಾತ್ರ ಮಾಡ್ತಿದ್ದೀನಿ ಅನ್ನೋ ಫೀಲ್ ಏನೂ ಅಂಬರೀಶ್ ಅವರಿಗೆ ಇರಲಿಲ್ಲ. ಹಾಗಾಗಿಯೇ ಅಂಬಿ ಒಂದೇ ರೀತಿ ಪಾತ್ರ ಮಾಡ್ತಾ ಹೋದ್ರು. ಅದರಿಂದ ಜನ ಕೂಡ ಅಂಬರೀಶ್ ಅಂದ್ರೆ ಪೊಲೀಸ್ ಅನ್ನೋ ಮಟ್ಟಿಗೆ ಕ್ರೇಜ್ ಕ್ರಿಯೇಟ್ ಮಾಡಿದ್ದರು.


ಅಂಬಿ ಬಳಿಕ ಪ್ರಭಾಕರ್ ಪೊಲೀಸ್ ಪಾತ್ರದಲ್ಲಿ ಮಿಂಚಿಂಗ್
ರೆಬಲ್ ಸ್ಟಾರ್ ಅಂಬರೀಶ್ ಆದ್ಮೇಲೆ ಟೈಗರ್ ಪ್ರಭಾಕರ್ ಪೊಲೀಸ್ ಪಾತ್ರ ಮಾಡ್ತಾ ಇದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಂಬರೀಶ್ ಬೇಸರ ಏನೂ ಮಾಡಿಕೊಳ್ಳಲಿಲ್ಲ. ಪ್ರಭಾಕರ್ ಅವರಿಗೆ ತಮ್ಮದೇ ರೀತಿಯಲ್ಲಿ ಸಪೋರ್ಟ್ ಮಾಡಿದ್ದರು.


ಇದನ್ನೂ ಓದಿ: Chandan Shetty: ಅಯ್ಯೋ ನಾನು ಅಪ್ಪ ಆಗ್ತಿಲ್ಲ, ಅದು ತಮಾಷೆಗೆ ಮಾಡಿದ ರೀಲ್ಸ್ ಎಂದ ಚಂದನ್ ಶೆಟ್ಟಿ!


ಟೈಗರ್ ಪ್ರಭಾಕರ್ ಒಳ್ಳೆ ವ್ಯಕ್ತಿನೇ ಆಗಿದ್ದರು. ಒಳ್ಳೆ ನಟ ಕೂಡ ಆಗಿದ್ದರು. ಅವರ ಮುಂದೆ ನಿಂತು ಅಭಿನಯಿಸೋದು ಅಂದ್ರೆ ಎಲ್ಲರಿಗೂ ಭಯ ಆಗುತ್ತಿತ್ತು. ಅಂತಹ ಹೈಟ್ ಮತ್ತು ಪರ್ಸನಾಲಿಟಿ ಇತ್ತು. ಅಂತಹ ಈ ನಟ ಅಂಬಿ ಬಳಿಕ ಪೊಲೀಸ್ ಪಾತ್ರದಲ್ಲಿ ಬೆಳ್ಳಿ ಪರದೆಯನ್ನ ಬೆಳಗಿದರು.

First published: