• Home
  • »
  • News
  • »
  • entertainment
  • »
  • Ajay Rao New Film Annoucen: ಭಾಗ್ಯಲಕ್ಷ್ಮಿ ಹಿಂದೆ ಬಿದ್ದ ಕೃಷ್ಣ ಅಜಯ್ ರಾವ್-ದೀಪಾವಳಿ ದಿನ ಹೊಸ ಸಿನಿಮಾ ಅನೌನ್ಸ್

Ajay Rao New Film Annoucen: ಭಾಗ್ಯಲಕ್ಷ್ಮಿ ಹಿಂದೆ ಬಿದ್ದ ಕೃಷ್ಣ ಅಜಯ್ ರಾವ್-ದೀಪಾವಳಿ ದಿನ ಹೊಸ ಸಿನಿಮಾ ಅನೌನ್ಸ್

ದೀಪಾವಳಿ ಹಬ್ಬದ ದಿನ ಹೊಸ ಸಿನಿಮಾ ಅನೌನ್ಸ್

ದೀಪಾವಳಿ ಹಬ್ಬದ ದಿನ ಹೊಸ ಸಿನಿಮಾ ಅನೌನ್ಸ್

ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಅನ್ನೋದು ಅಜಯ್ ರಾವ್ ಮುಂದಿನ ಚಿತ್ರದ ಶೀರ್ಷಿಕೆ ಆಗಿದೆ. ಇದರ ಫೊಸ್ಟರ್ ಗಮನಿಸಿದ್ರೆ, ಇಲ್ಲಿ ದುಡ್ಡಿನ ಸುರಿಮಳೆನೂ ಆಗಿದೆ. ಟೈಟಲ್​ಗೂ ಸಿನಿಮಾ ಕಂಟೆಂಟ್​ಗೂ ಸಖತ್ ಸಿಂಕ್ ಇದ್ದಂಗೆ ಕಾಣುತ್ತದೆ.

  • News18 Kannada
  • Last Updated :
  • Bangalore [Bangalore], India
  • Share this:

ಸ್ಯಾಂಡಲ್​ವುಡ್ ನ ಕೃಷ್ಣ ಅಜಯ್ (Ajai Rao) ರಾವ್ ಈಗಾಗಲೇ ತಮ್ಮ ಪ್ರೋಡಕ್ಷನ್ ನಿಂದಲೇ ಒಂದು ಸಿನಿಮಾ ಮಾಡೋಕೆ ಮುಂದಾಗಿದ್ದಾರೆ. ಅದಕ್ಕಾಗಿಯೇ ನಾಯಕಿಯ ಹುಡುಕಾಟವನ್ನೂ ಆರಂಭಿಸಿದ್ದಾರೆ. ಆದರೆ ಈಗ ಇದೇ ನಾಯಕ ನಟ ಅಜಯ್ ರಾವ್, ಹೊಸದೊಂದು (New Film) ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಚಿತ್ರದ ಟೈಟಲ್ ಕೂಡ ಅಷ್ಟೇ ಇಂಟ್ರಸ್ಟಿಂಗ್ ಆಗಿಯೇ ಇದೆ. ಬ್ಯಾಂಕ್ ಒಂದರ ದರೋಡೆ ಸುತ್ತ ಇದರ ಕಥೆ ಇದೆ. ಇದನ್ನ ನವ ನಿರ್ದೇಶಕ ಅಭಿಷೇಕ್. ಎಂ ಡೈರೆಕ್ಟ್ ಮಾಡುತ್ತಿದ್ದಾರೆ. ದೀಪಾವಳಿ ಹಬ್ಬದ ಈ ದಿನವೇ ಸಿನಿಮಾ (Title) ಟೈಟಲ್ ಕೂಡ ರಿವೀಲ್ ಆಗಿದೆ. ಈ ಚಿತ್ರದ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ.


ದೀಪಾವಳಿ ಹಬ್ಬಕ್ಕೆ ಕೃಷ್ಣ ಅಜಯ್ ರಾವ್ ಹೊಸ ಸಿನಿಮಾ


ಕೃಷ್ಣ ಅಜಯ್ ರಾವ್ ಹೊಸ ಸಿನಿಮಾ ಅನೌನ್ಸ್ ಆಗಿದೆ. ಹಬ್ಬಕ್ಕೆ ಈ ಚಿತ್ರದ ಮಾಹಿತಿ ಕೂಡ ಹೊರ ಬಿದ್ದಿದೆ. ಚಿತ್ರದ ಇಡೀ ಕಥೆಯ ಮೇಲೆ ಬೆಳಕು ಚೆಲ್ಲುವ ಒಂದು ಪೋಸ್ಟರ್ ಕೂಡ ಟೈಟಲ್ ಜೊತೆಗೇನೆ ರಿಲೀಸ್ ಆಗಿದೆ.


ಅಜಯ್ ರಾವ್ ಅಭಿನಯದ ಈ ಚಿತ್ರಕ್ಕೆ ಇನ್ನೂ ನಾಯಕಿಯ ಆಯ್ಕೆ ಆಗಿಲ್ಲ. ಆದರೆ ಸಿನಿಮಾದ ಇತರ ವಿಭಾಗದಲ್ಲಿ ಪ್ರತಿಭಾವಂತರೇ ಆಯ್ಕೆ ಆಗಿದ್ದಾರೆ. ನವ ನಿರ್ದೇಶಕ ಅಭಿಷೇಕ್ .ಎಂ ಈ ಮೂಲಕ ಸ್ವತಂತ್ರ ನಿರ್ದೇಶಕರೂ ಆಗಿದ್ದಾರೆ.


Kannada Actor Ajai Rao New Film Announce today
ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಎಂಬ ವಿಶೇಷ ಟೈಟಲ್ ರಿವೀಲ್


ಯಾರ್ ಈ ಅಭಿಷೇಕ್ ಎಂ-ಏನ್ ಹಿನ್ನೆಲೆ?
ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಸಿನಿಮಾದ ನಿರ್ದೇಶಕ ಅಭಿಷೇಕ್ ಎಂ ಈ ಹಿಂದೆ ಸಿನಿಮಾರಂಗದಲ್ಲಿ ಕೆಲಸ ಮಾಡಿದ್ದಾರೆ. ಸಿಂಪಲ್ ಸುನಿ ಜೊತೆಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ, ಬಹುಪರಾಕ್, ಆಪರೇಷನ್ ಅಲಮೇಲಮ್ಮ ಚಿತ್ರಕ್ಕೆ ಕೆಲಸ ಮಾಡಿರೋ ಅನುಭವ ಕೂಡ ಇದೆ.


ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಎಂಬ ವಿಶೇಷ ಟೈಟಲ್ ರಿವೀಲ್
ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಅನ್ನೋದು ಅಜಯ್ ರಾವ್ ಮುಂದಿನ ಚಿತ್ರದ ಶೀರ್ಷಿಕೆ ಆಗಿದೆ. ಇದರ ಫೊಸ್ಟರ್ ಗಮನಿಸಿದ್ರೆ, ಇಲ್ಲಿ ದುಡ್ಡಿನ ಸುರಿಮಳೆನೂ ಆಗಿದೆ. ಟೈಟಲ್​ಗೂ ಸಿನಿಮಾ ಕಂಟೆಂಟ್​ಗೂ ಸಖತ್ ಸಿಂಕ್ ಇದ್ದಂಗೆ ಕಾಣುತ್ತದೆ.


ಇದನ್ನೂ ಓದಿ: Kantara-Kishore: ಕಾಂತಾರ ಧರ್ಮದ ವಿವಾದ! ನಟ ಕಿಶೋರ್ ಹೇಳಿದ್ದಿಷ್ಟು


ಚಿತ್ರದಲ್ಲಿ ಬ್ಯಾಂಕ್ ದರೋಡೆಯ ಕಥೆ ಇದೆ. ಈ ಹಿನ್ನೆಲೆಯಲ್ಲಿಯೇ ಬ್ಯಾಂಕ್ ಅನ್ನೋ ಪದ ಟೈಟಲ್ ನಲ್ಲಿಯೇ ಇದೆ. ದುಡ್ಡನ್ನ ಭಾಗ್ಯಲಕ್ಷ್ಮಿಗೂ ಹೋಲಿಸುತ್ತೇವೆ. ಅದನ್ನೂ ಈ ಟೈಟಲ್ ನಲ್ಲಿ ಸಿಂಬಲಿಕ್ ಆಗಿಯೇ ನೋಡಬಹುದು.


ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಇತರ ಡಿಟೈಲ್ಸ್ ಏನು?
ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಸಿನಿಮಾವನ್ನ ರಂಗಿತರಂಗ ಚಿತ್ರದ ನಿರ್ಮಾಪಕ ಎಚ್.ಕೆ.ಪ್ರಕಾಶ್ ಈ ಚಿತ್ರವನ್ನ ನಿರ್ಮಿಸುತ್ತಿದ್ದಾರೆ. ಸದ್ಯಕ್ಕೆ ಸಿನಿಮಾದ ಪ್ರೀ ಪ್ರೋಡಕ್ಷನ್ ಕೆಲಸ ಶುರು ಆಗಿದೆ. ಚಿತ್ರದ ನಾಯಕಿಯ ಹುಡುಕಾಟ ನಡೀತಾ ಇದೆ.


Kannada Actor Ajai Rao New Film Announce today
ನಿರ್ದೇಶಕ ಅಭಿಷೇಕ್ ಎಂ -ನಿರ್ಮಾಪಕ ಎಚ್.ಕೆ.ಪ್ರಕಾಶ್


ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ಕೊಡುತ್ತಿದ್ದಾರೆ. ಅಭಿಷೇಕ್ ಜಿ. ಕ್ಯಾಮೆರಾವರ್ಕ್ ಮಾಡಲಿದ್ದಾರೆ. ರಾಘು ಕಲಾ ನಿರ್ದೇಶನಕ್ಕೆ ಒಪ್ಪಿಕೊಂಡಿದ್ದಾರೆ. ತೇಜಸ್ ಆರ್. ಸಿನಿಮಾ ಸಂಕಲನ ಮಾಡಲಿದ್ದಾರೆ.


ಜನವರಿ ತಿಂಗಳಲ್ಲಿ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಶುರು
ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಸಿನಿಮಾದ ಚಿತ್ರೀಕರಣ ಇನ್ನೂ ಆರಂಭಗೊಂಡಿಲ್ಲ. 2023 ರ ಜನವರಿ ತಿಂಗಳಲ್ಲಿ ಚಿತ್ರೀಕರಣ ಮಾಡೋ ಪ್ಲಾನಿಂಗ್ ಇದೆ. ಈಗಾಗಲೇ ಚಿತ್ರದ ಪ್ರೀ ಪ್ರೋಡಕ್ಷನ್ ಕೆಲಸ ಆರಂಭಗೊಂಡಿದೆ.


ಇದನ್ನೂ ಓದಿ: Bigg Boss Dosti: ರೂಪೇಶ್ ರಾಜಣ್ಣ ಮುಗ್ಧ, ಸಂಬರ್ಗಿ ಸುಳ್ಳುಗಾರ! ಎಷ್ಟೇ ಕಿತ್ತಾಡಿದ್ರೂ ದೋಸ್ತಿ ಬಿಡಲ್ಲ


ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿಯೇ ಹಬ್ಬದ ದಿನವೇ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಜನರ ಗಮನ ಸೆಳೆಯುವಂತೇನೂ ಇದೆ.

First published: