• Home
  • »
  • News
  • »
  • entertainment
  • »
  • Krishna Ajay Rao: ಮತ್ತೆ ನಿರ್ಮಾಣಕ್ಕೆ ಕೈ ಹಾಕಿದ ಕೃಷ್ಣ ಅಜಯ್ ರಾವ್! ಹೀರೋಯಿನ್ ಯಾರು ಗೊತ್ತಾ?

Krishna Ajay Rao: ಮತ್ತೆ ನಿರ್ಮಾಣಕ್ಕೆ ಕೈ ಹಾಕಿದ ಕೃಷ್ಣ ಅಜಯ್ ರಾವ್! ಹೀರೋಯಿನ್ ಯಾರು ಗೊತ್ತಾ?

ಮತ್ತೆ ಚಿತ್ರ ನಿರ್ಮಾಣಕ್ಕಿಳಿದ ಕೃಷ್ಣ ಅಜಯ್ ರಾವ್

ಮತ್ತೆ ಚಿತ್ರ ನಿರ್ಮಾಣಕ್ಕಿಳಿದ ಕೃಷ್ಣ ಅಜಯ್ ರಾವ್

ತಮ್ಮ ಬ್ಯಾನರ್​ ಅಡಿಯಲ್ಲಿಯೇ ಅಜಯ್ ರಾವ್ ಈಗ ಚಿತ್ರವನ್ನ ನಿರ್ಮಿಸೋಕೆ ಮುಂದಾಗಿದ್ದಾರೆ. ಈಗಾಗಲೇ ಈ ಬಗ್ಗೆ ಅಧಿಕೃತ ಮಾಹಿತಿ ಕೂಡ ಹೊರ ಬಿದ್ದಿದೆ. ಇದಕ್ಕೆ ನಾಯಕಿ ಯಾರು ಗೊತ್ತಾ?

  • Share this:

ಸ್ಯಾಂಡಲ್​ ವುಡ್​ ನ ಕೃಷ್ಟ ಖ್ಯಾತಿಯ ನಟ (Ajay Rao) ಅಜಯ್ ರಾವ್ ಸಿನಿಮಾ ಮಾಡಿ ತುಂಬಾ ದಿನಗಳೇ ಕಳೆದಿದೆ. ಆದರೆ ಈಗ ಇದೇ ಅಜಯ್ ರಾವ್ ತಮ್ಮ ಪ್ರೋಡಕ್ಷನ್ (Production House) ಹೌಸ್​ನಿಂದಲೇ ಒಂದು ಹೊಸ ಸಿನಿಮಾ ಮಾಡೋಕೆ ಮುಂದಾಗಿದ್ದಾರೆ. ನವ ನಿರ್ದೇಶಕರೊಬ್ಬರ ಕಥೆಯನ್ನ ಕೇಳಿ ತುಂಬಾ ಇಂಪ್ರೆಸ್ ಆಗಿರೋ ಅಜಯ್ ರಾವ್, ಅದಕ್ಕೆ ದುಡ್ಡು ಹಾಕಲು ರೆಡಿ ಆಗಿದ್ದಾರೆ. ಕಥೆ ಮೇಲೆ ತುಂಬಾ ನಂಬಿಕೆ ಇರೋ ಅಜಯ್ ರಾವ್ ನಾಯಕರಾಗಿಯೇ ಈಗ ಮತ್ತೊಮ್ಮೆ ಎಂಟ್ರಿ ಕೊಡ್ತಿದ್ದಾರೆ. ಅಜಯ್ ರಾವ್ ಅಭಿನಯದ ಈ ಚಿತ್ರದ ಕೆಲಸ ಆರಂಭಿಕ ಹಂತದಲ್ಲಿಯೇ ಇದೆ. ನಿರ್ದೇಶಕರು (Director) ಫೈನಲ್ ಆಗಿದ್ದಾರೆ. ನಾಯಕಿಯ ಹುಡುಕಾಟವನ್ನೂ ಅಜಯ್ ರಾವ್ ಟೀಮ್ ಶುರು ಮಾಡಿದೆ.


ಕೃಷ್ಣ ಅಜಯ್ ರಾವ್ ಹೊಸ ಸಿನಿಮಾ ಅನೌನ್ಸ್


ಹೌದು, ಅಜಯ್ ರಾವ್ ಅಭಿನಯದಲ್ಲಿ ಈ ಹಿಂದೆ ಸಾಕಷ್ಟು ಸಿನಿಮಾ ಬಂದಿವೆ. ಒಳ್ಳೆ ಚಿತ್ರಗಳನ್ನೆ ಮಾಡುತ್ತಲೇ ಬಂದ ಅಜಯ್ ರಾವ್ ತಮ್ಮದೇ ಒಂದು ನಿರ್ಮಾಣ ಸಂಸ್ಥೆಯನ್ನೂ ಹುಟ್ಟುಹಾಕಿದರು. ಆ ಮೂಲಕ ನಿರ್ಮಾಪಕರೂ ಆಗಿದ್ದಾರೆ.


ತಮ್ಮ ನಿರ್ಮಾಣ ಸಂಸ್ಥೆಯಾಗಿರೊ ಶ್ರೀಕೃಷ್ಣ ಆರ್ಟ್ಸ್ ಆ್ಯಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಹಿಂದೆ ಕೃಷ್ಣ ಲೀಲಾ ಚಿತ್ರ ಮಾಡಿದ್ದರು. ಲೀಲಾ ಪಾತ್ರದಲ್ಲಿ ನಟಿ ಮಯೂರಿ ಅಭಿನಯಿಸಿದ್ದರು. ಕೃಷ್ಣನ ಪಾತ್ರದಲ್ಲಿಯೇ ಅಜಯ್ ರಾವ್ ನಟಿಸಿ ಪ್ರೇಕ್ಷಕರನ್ನ ರಂಜಿಸಿದ್ದರು.


Kannada Actor Ajay Rao Going To Produce New Film Soon
ಅಜಯ್ ರಾವ್ ಹೊಸ ಸಿನಿಮಾದ ಕೆಲಸ ಶುರು


ಕೃಷ್ಣ ಲೀಲಾ ಆದ್ಮೇಲೆ ಅಜಯ್ ರಾವ್ ಬೇರೆ ಚಿತ್ರ ನಿರ್ಮಿಸಲೇ ಇಲ್ಲ


ಈ ಚಿತ್ರ ಚೆನ್ನಾಗಿಯೇ ಹೋಯಿತು. ಇದಾದ ಮೇಲೆ ಯಾವುದೇ ಸಿನಿಮಾವನ್ನ ಅಜಯ್ ರಾವ್ ನಿರ್ಮಿಸೋಕೆ ಮುಂದಾಗಿರಲಿಲ್ಲ. ಆದರೆ ನವ ನಿರ್ದೇಶಕ ಪವನ್ ಭಟ್ ಹೇಳಿರೋ ಕಥೆಗೆ ಅಜಯ್ ರಾವ್ ತುಂಬಾ ಇಂಪ್ರೆಸ್ ಆಗಿದ್ದಾರೆ.




ಇದನ್ನೂ ಓದಿ: Ramachari: ಇಂದೇ ರಾಮಾಚಾರಿ ಮದುವೆ! ಅಮ್ಮನ ಮಾತಿಗೆ ಕಟ್ಟು ಬಿದ್ದು ಅತ್ತೆ ಮಗಳಿಗೆ ತಾಳಿ ಕಟ್ತಾನಾ?


ಅದಕ್ಕೇನೆ ತಮ್ಮ ಬ್ಯಾನರ್​ ಅಡಿಯಲ್ಲಿಯೇ ಅಜಯ್ ಈ ಚಿತ್ರವನ್ನ ನಿರ್ಮಿಸೋಕೆ ಮುಂದಾಗಿದ್ದಾರೆ. ಈಗಾಗಲೇ ಈ ಬಗ್ಗೆ ಅಧಿಕೃತ ಮಾಹಿತಿ ಕೂಡ ಹೊರ ಬಿದ್ದಿದೆ. ನಾಯಕಿ ಹುಡುಕಾಟ ಹಾಗೂ ಚಿತ್ರಕ್ಕೆ ಬೇಕಾಗೋ ಇತರ ಕಲಾವಿದರ ಹುಡುಕಾಟವೂ ಆರಂಭಗೊಂಡಿದೆ.


ಕೃಷ್ಣ ಅಜಯ್ ರಾವ್ ಹೊಸ ಚಿತ್ರಕ್ಕೆ ಹೊಸ ಕಲಾವಿದರ ಹುಡುಕಾಟ ಶುರು


ಇದಲ್ಲದೇ ಸೋಷಿಯಲ್ ಮೀಡಿಯಾದಲ್ಲೂ ಇವರ ಈ ಹೊಸ ಸಿನಿಮಾಕ್ಕೆ ಕಲಾವಿದರು ಬೇಕಾಗಿದ್ದಾರೇ ಅನ್ನೋ ವಿಷಯವು ವೈರಲ್ ಆಗುತ್ತಿದೆ. ಹೀಗೆ ಅಜಯ್ ರಾವ್ ತಮ್ಮ ಈ ಹೊಸ ಪ್ರೋಜೆಕ್ಟ್ ಬಗ್ಗೆ ಈ ಹಿಂದೇನೆ ನಮ್ಮೊಟ್ಟಿಗೆ ಚಿಕ್ಕದಾಗಿಯೇ ಹೇಳಿಕೊಂಡಿದ್ದರು.
ಕೃಷ್ಣ ಲೀಲಾ ಆದ್ಮೇಲೆ ಯಾವುದೇ ಸಿನಿಮಾ ಮಾಡಿರಲಿಲ್ಲ. ಅತೀ ಶೀಘ್ರದಲ್ಲಿಯೇ ಒಂದು ಪ್ರೋಜೆಕ್ಟ್ ಮಾಡುತ್ತೇವೆ ಅಂತಲೇ ತಿಳಿಸಿದ್ದರು. ಆ ಪ್ರಕಾರ ಈಗ ಹೊಸ ಸಿನಿಮಾದ ಕೆಲಸ ಆರಂಭಗೊಂಡಿದೆ.


ಅಜಯ್ ರಾವ್ ನಾಯಕರಾಗಿರೋ ಚಿತ್ರಕ್ಕೆ ಪವನ್ ಭಟ್ ಡೈರೆಕ್ಷನ್


ಅಜಯ್ ರಾವ್ ಚಿತ್ರದ ಡೈರೆಕ್ಟರ್ ಪವನ್ ಭಟ್ ಯಾರು ಗೊತ್ತೇ?
ಅಂದ್ಹಾಗೆ ಅಜಯ್ ರಾವ್ ನಿರ್ಮಾಣದ ಈ ಚಿತ್ರದ ಡೈರೆಕ್ಟರ್ ಪವನ್ ಭಟ್ ಅಂತ ಈಗಾಗಲೇ ಹೇಳಿದ್ದೇವೆ. ಈ ಪವನ್ ಭಟ್ ಯಾರು ಗೊತ್ತೇ? ಹೌದು, ಕನ್ನಡದಲ್ಲಿ ಈ ಹಿಂದೆ ಬಂದಿದ್ದ ಕಟಿಂಗ್ ಶಾಪ್ ಚಿತ್ರದ ನಿರ್ದೇಶಕರೇ ಈ ಪವನ್ ಭಟ್,ಈಗ ಅಜಯ್ ರಾವ್ ನಿರ್ಮಾಣದಲ್ಲಿ ಬರ್ತಿರೋ ಚಿತ್ರಕ್ಕೆ ಡೈರೆಕ್ಟರ್ ಆಗಿದ್ದಾರೆ.


ಇದನ್ನೂ ಓದಿ: Dulquer Salmaan: ದುಲ್ಕರ್ ಸಲ್ಮಾನ್ ಪಡೆದ ಮೊದಲ ಸಂಭಾವನೆ ಎಷ್ಟು ಗೊತ್ತಾ? ಅದೇ ಬಿಗ್ ಗಿಫ್ಟ್ ಎಂದ ನಟ


ಇನ್ನೇನು ಕೆಲವೇ ದಿನಗಳಲ್ಲಿ ಅಜಯ್ ರಾವ್ ಆ್ಯಂಡ್ ಟೀಮ್ ತಮ್ಮ ಈ ಚಿತ್ರದ ಟೈಟಲ್ ಅನ್ನ ಕೂಡ ರಿವೀಲ್ ಮಾಡಲಿದೆ. ಚಿತ್ರದ ಇತರ ಮಾಹಿತಿಯನ್ನೂ ಕೊಡಲಿದೆ.

First published: