• Home
  • »
  • News
  • »
  • entertainment
  • »
  • Ajai Rao in Dil Pasand Cinema: ಒಂದೇ ಚಿತ್ರದಲ್ಲಿ ಇಬ್ಬರು ಕೃಷ್ಣರು- ಹೊರಬಿತ್ತು ದಿಲ್​ಪಸಂದ್ ಹೊಸ ಮ್ಯಾಟರ್

Ajai Rao in Dil Pasand Cinema: ಒಂದೇ ಚಿತ್ರದಲ್ಲಿ ಇಬ್ಬರು ಕೃಷ್ಣರು- ಹೊರಬಿತ್ತು ದಿಲ್​ಪಸಂದ್ ಹೊಸ ಮ್ಯಾಟರ್

ಹೊರಬಿತ್ತು ದಿಲ್​ಪಸಂದ್ ಹೊಸ ಮ್ಯಾಟರ್

ಹೊರಬಿತ್ತು ದಿಲ್​ಪಸಂದ್ ಹೊಸ ಮ್ಯಾಟರ್

"ನಮ್ಮ ಸಿನಿಮಾದಲ್ಲಿ ಅಜಯ್ ರಾವ್ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಅಜಯ್ ಒಂದು ಮಹತ್ವದ ರೋಲ್ ನಿಭಾಯಿಸುತ್ತಿದ್ದಾರೆ. ಇದು ಚಿತ್ರಕ್ಕೆ ತುಂಬಾ ಮಹತ್ವದ ರೋಲ್ ಕೂಡ ಆಗಿದೆ. ಒಬ್ಬ ಯಶಸ್ವಿ ಉದ್ಯಮಿಯಾಗಿಯೇ ಅಜಯ್ ರಾವ್ ಇಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ " ಎಂದು ನಿರ್ಮಾಪಕ ರಾಘವೇಂದ್ರ ರಿವೀಲ್ ಮಾಡಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದಲ್ಲಿ ಕೃಷ್ಣ (Ajai Rao) ಯಾರು? ಈ ಪ್ರಶ್ನೆಗೆ ಒಂದೇ ಉತ್ತರ ಇತ್ತು. ಅದು ಅಜಯ್ ರಾವ್ ಅನ್ನೋದೇ ಹೆಚ್ಚು. ಆದರೆ, ಡಾರ್ಲಿಂಗ್ ಕೃಷ್ಣ ಬಂದ್ಮೇಲೆ ಕನ್ನಡದಲ್ಲಿ ಇಬ್ಬರು ಕೃಷ್ಣರಾದರು. ಕೃಷ್ಣ ಅಜಯ್ ರಾವ್ ಒಬ್ಬರಾದರೆ, ಡಾರ್ಲಿಂಗ್ (Darling Krishna) ಕೃಷ್ಣ ಇನ್ನೊಬ್ಬರು. ಇವರು ಒಟ್ಟಿಗೆ ಇಲ್ಲಿವೆರೆಗೂ ನಟಿಸಿರಲಿಲ್ಲ. ಕನ್ನಡದ (Kannada Cinema) ಚಿತ್ರವೊಂದರಲ್ಲಿ ಇಬ್ಬರನ್ನೂ ಒಟ್ಟಿಗೆ ತರುವ ಕೆಲಸ ಆಗಿದೆ. ಒಂದೇ ಚಿತ್ರದಲ್ಲಿ ಇಬ್ಬರು ಕೃಷ್ಣ ಇರೋದೇ ವಿಶೇಷ. ಈ ಚಿತ್ರದ ಬಹುತೇಕ ಕೆಲಸ ಪೂರ್ಣಗೊಂಡಿದೆ. ಇನ್ನೇನೂ ಚಿತ್ರ ರಿಲೀಸ್​ಗೂ ರೆಡಿ ಆಗಿದೆ. ಮುಂದಿನ ತಿಂಗಳು ನವೆಂಬರ್-11 ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ. ಅದುವೇ ಈ (Dil Pasand) ದಿಲ್​​ಪಸಂದ್ ಸಿನಿಮಾ.


ಕನ್ನಡದ ದಿಲ್​ಪಸಂದ್ ಸಿನಿಮಾದಲ್ಲಿ ಕೃಷ್ಣ ಆ್ಯಂಡ್ ಕೃಷ್ಣ
ಕನ್ನಡದಲ್ಲಿ ಅಜಯ್ ರಾವ್ ಕೃಷ್ಣ ಅಂತಲೇ ವೇರಿ ಫೇಮಸ್ ಆಗಿದ್ದವ್ರು. ಇವರ ಸಿನಿಮಾಗಳಲ್ಲಿ ಡಬಲ್ ಟ್ರಿಪಲ್ ಹೀರೋಯಿನ್​ಗಳು ಇದ್ದದ್ದೇ ಇಲ್ಲ. ಹೆಸರು ಮಾತ್ರ ಕೃಷ್ಣ ಆಗಿತ್ತು. ಕೃಷ್ಣನ್ ಮ್ಯಾರೇಜ್ ಸ್ಟೋರಿ, ಕೃಷ್ಣನ್ ಲವ್ ಸ್ಟೋರಿ, ಕೃಷ್ಣ-ಲೀಲಾ ಇಂತಹ ಸಿನಿಮಾಗಳೇ ಹೆಚ್ಚು ಬಂದಿವೆ.


ಆದರೆ ಡಾರ್ಲಿಂಗ್ ಕೃಷ್ಣನ ಪಾತ್ರ ಹಾಗಲ್ಲ ಬಿಡಿ. ಡಾರ್ಲಿಂಗ್ ಕೃಷ್ಣ ನಿಜಕ್ಕೂ ಎಲ್ಲರ ಡಾರ್ಲಿಂಗ್ ಆಗಿದ್ದಾರೆ. ಲವ್ ಮಾಕ್​ಟೇಲ್​ ದಂತಹ ಸಿನಿಮಾದ ಮೂಲಕ ಎಲ್ಲರ ದಿಲ್ ಕದ್ದ ಡಾರ್ಲಿಂಗ್ ಕೃಷ್ಣ, ಎಲ್ಲರ ದಿಲ್​ ಪಸಂದ್ ಹೀರೋನೇ ಆಗಿದ್ದಾರೆ.


Kannada Actor Ajai Rao Acted in Dil pasad Film
ದಿಲ್​ಪಸಂದ್ ಸಿನಿಮಾದಲ್ಲಿ ಕೃಷ್ಣ ಆ್ಯಂಡ್ ಕೃಷ್ಣ ಮೀಟ್ ಆಗ್ತಾರಾ?


ಒಂದೇ ಚಿತ್ರದಲ್ಲಿ ಅಜಯ್ ರಾವ್-ಡಾರ್ಲಿಂಗ್ ಕೃಷ್ಣ
ದಿಲ್​​ಪಸಂದ್ ಸಿನಿಮಾದಲ್ಲಿ ಇಂತಹ ಒಂದು ಪ್ರಯೋಗ ಆಗಿದೆ. ಕನ್ನಡದ ಇಬ್ಬರು ಕೃಷ್ಣರನ್ನ ತೆರೆ ಮೇಲೆ ತಂದಿರೋದೇ ಈ ಪ್ರಯೋಗದ ವಿಶೇಷತೆ ಆಗಿದೆ. ಕನ್ನಡದ ಕೃಷ್ಣ ಅಜಯ್ ರಾವ್ ಜೊತೆಗೆ ಅಭಿನಯಿಸಿರೋದು ಖುಷಿ ಆಗಿದೆ ಅಂತಲೇ ಡಾರ್ಲಿಂಗ್ ಕೃಷ್ಣ ಬರೆದುಕೊಂಡು ಸಂತೋಷ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: Kantara-RX100 Bike: ಕಾಂತಾರ ಬೈಕ್​ನ ರಿಯಲ್ ಮಾಲೀಕ ಅದನ್ನು ಯಾರಿಗೂ ಕೊಡಲ್ಲ!


ಹೌದು, ದಿಲ್​ಪಸಂದ್ ರಿಲೀಸ್ ಹಂತಕ್ಕೆ ಬಂದಿದೆ. ಬಿಡುಗಡೆ ದಿನ ನವೆಂಬರ್-11 ಅಂತಲೂ ಸಿನಿಮಾ ಟೀಮ್ ಹೇಳಿದೆ. ನಿರ್ಮಾಪಕ ರಾಘವೇಂದ್ರ ಕೂಡ ಇದನ್ನ ಈಗಾಗಲೇ ಹೇಳಿಕೊಂಡಿದ್ದಾರೆ. ದಿನವೂ ಹೊಸ ಹೊಸ ಪೋಸ್ಟರ್ ಗಳು ಸಿನಿಮಾ ಸುದ್ದಿಯನ್ನ ಕೂಡ ರಿವೀಲ್ ಮಾಡುತ್ತಿವೆ.


ಡಾರ್ಲಿಂಗ್ ಕೃಷ್ಣನ ಸಿನಿಮಾದಲ್ಲಿ ಅಜಯ್ ರಾವ್ -ರಾಘವೇಂದ್ರ
ದಿಲ್​ಪಸಂದ್ ಸಿನಿಮಾದಲ್ಲಿ ಅಜಯ್ ರಾವ್ ಅಭಿನಯಸಿದ್ದಾರೆ. ಈ ವಿಷಯವನ್ನ ಪೋಸ್ಟರ್ ಮೂಲಕ ಸಿನಿಮಾ ಟೀಮ್ ಕೂಡ ಹೇಳಿಕೊಂಡಿದೆ. ನಿರ್ಮಾಪಕ ರಾಘವೇಂದ್ರ ಸಹ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೂ ಈ ವಿಷಯ ಹೇಳಿದ್ದಾರೆ.


"ನಮ್ಮ ಸಿನಿಮಾದಲ್ಲಿ ಅಜಯ್ ರಾವ್ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಅಜಯ್ ಒಂದು ಮಹತ್ವದ ರೋಲ್ ನಿಭಾಯಿಸುತ್ತಿದ್ದಾರೆ. ಇದು ಚಿತ್ರಕ್ಕೆ ತುಂಬಾ ಮಹತ್ವದ ರೋಲ್ ಕೂಡ ಆಗಿದೆ. ಒಬ್ಬ ಯಶಸ್ವಿ ಉದ್ಯಮಿಯಾಗಿಯೇ ಅಜಯ್ ರಾವ್ ಇಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ " ಎಂದು ನಿರ್ಮಾಪಕ ರಾಘವೇಂದ್ರ ರಿವೀಲ್ ಮಾಡಿದ್ದಾರೆ.


Kannada Actor Ajai Rao Acted in Dil pasad Film
ಡಾರ್ಲಿಂಗ್ ಕೃಷ್ಣನ ಸಿನಿಮಾದಲ್ಲಿ ಅಜಯ್ ರಾವ್


ಅಜಯ್ ರಾವ್ ಕೂಡ ಈ ಚಿತ್ರದ ಈ ಒಂದು ರೋಲ್​ ನಲ್ಲಿ ಅದ್ಭುತವಾಗಿಯೇ ಕಾಣಿಸುತ್ತಿದ್ದಾರೆ. ಸ್ಟೈಲಿಶ್ ಉದ್ಯಮಿ ರೀತಿನೂ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಕನ್ನಡದ ಇಬ್ಬರು ಕೃಷ್ಣರು ಒಂದೇ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.


ದಿಲ್​ಪಸಂದ್ ಸಿನಿಮಾದಲ್ಲಿ ಕೃಷ್ಣ ಆ್ಯಂಡ್ ಕೃಷ್ಣ ಮೀಟ್ ಆಗ್ತಾರಾ?
ಡೈರೆಕ್ಟರ್ ಶಿವ ತೇಜಾ ನಿರ್ದೇಶನದ ದಿಲ್​ಪಸಂದ್ ಸಿನಿಮಾದಲ್ಲಿ ಕೃಷ್ಣ ಆ್ಯಂಡ್ ಕೃಷ್ಣ ಮುಖಾ-ಮುಖಿ ಆಗ್ತಾರಾ? ಈ ಪ್ರಶ್ನೆಗೆ ಉತ್ತರ ಇನ್ನೂ ಸೀಕ್ರೆಟ್ ಆಗಿಯೇ ಇದೆ. ಆದರೆ ಸಿನಿಮಾ ತಂಡ ಈಗ ಸಿನಿಮಾದಲ್ಲಿ ಅಜಯ್ ರಾವ್ ಇದ್ದಾರೆ ಅನ್ನೋದನ್ನೂ ಕೂಡ ಅಷ್ಟೇ ವಿಶೇಷವಾಗಿಯೇ ಹೇಳುತ್ತಿದ್ದಾರೆ.


ಇನ್ನುಳಿದಂತೆ ಕನ್ನಡದ ದಿಲ್​ಪಸಂದ್ ಸಿನಿಮಾದ ಅರ್ಜುನ್ ಜನ್ಯ ಸಂಗೀತದ ಹಾಡುಗಳು ಮೋಡಿ ಮಾಡುತ್ತಿವೆ. ಚಿತ್ರದ ನಾಯಕಿ ನಿಶ್ವಿಕಾ ನಾಯ್ಡು ಈಗಾಗಲೇ ಈ ಹಾಡುಗಳಲ್ಲಿ ರಾಮ ರಾಮ ಹಾಡಿಗೆ ರೀಲ್ಸ್ ಮಾಡಿ ದಿಲ್ ಖುಷ್ ಆಗಿದ್ದಾರೆ.
ನಟಿ ಮೇಘಾ ಶೆಟ್ಟಿ ತಮ್ಮದೇ ರೀತಿಯಲ್ಲಿ ದಿಲ್​ಪಸಂದ್ ಸಿನಿಮಾವನ್ನ ಪ್ರಮೋಷನ್ ಮಾಡುತ್ತಿದ್ದಾರೆ. ಹೀಗೆ ಇಲ್ಲೂ ಡಾರ್ಲಿಂಗ್​ ಕೃಷ್ಣನಿಗೆ ಇಲ್ಲೂ ಇಬ್ಬರು ಹೀರೋಯಿನ್​ಗಳಿದ್ದಾರೆ.


ಇದನ್ನೂ ಓದಿ: Kantara Craze: ರಂಗೋಲಿಯಲ್ಲಿ ಮೂಡಿದ ಪಂಜುರ್ಲಿ; ಕಲರ್​ ಫುಲ್​ ಆಗಿ ಮೂಡಿದೆ ರಿಷಬ್ ಚಿತ್ರ


ಇವರ ಮಧ್ಯ ಕೃಷ್ಣ ಅಜಯ್ ರಾವ್ ಕೂಡ ಬಂದಿದ್ದಾರೆ. ಅಲ್ಲಿಗೆ ಇಬ್ಬರು ಹೀರೋಯಿನ್​ಗಳು ಇಬ್ಬರು ಕೃಷ್ಣ ಒಂದೇ ಸಿನಿಮಾದಲ್ಲಿ ಬಂದು ಮೋಡಿ ಮಾಡಲು ರೆಡಿ ಆಗಿದ್ದಾರೆ.

First published: