Terror Adityaa: ಡೆಡ್ಲಿ ಸೋಮ ಆದಿತ್ಯ ಇದೀಗ ಟೆರರ್, ಬಹು ಭಾಷೆ ಟೀಸರ್ ರಿಲೀಸ್

ಆದಿತ್ಯ ಜನ್ಮ ದಿನದಂದು ಟೆರರ್ ಟೀಸರ್ ರಿಲೀಸ್

ಆದಿತ್ಯ ಜನ್ಮ ದಿನದಂದು ಟೆರರ್ ಟೀಸರ್ ರಿಲೀಸ್

ಚಿತ್ರದ ಈ ಒಂದು ವಿಶೇಷ ಟೀಸರ್‌ ಆರಂಭದಲ್ಲಿ ಕನ್ನಡ ಚಿತ್ರರಂಗದ ಎಲ್ಲ ಕಲಾವಿದರನ್ನ ಸ್ಮರಿಸಲಾಗಿದೆ. ಪುಟ್ಟಣ್ಣ ಕಣಗಾಲ್, ಡಾಕ್ಟರ್ ರಾಜ್‌ಕುಮಾರ್, ನಿರ್ಮಾಪಕ ವೀರಸ್ವಾಮಿ, ಶಂಕರ್ ನಾಗ್, ಪುನೀತ್ ರಾಜಕುಮಾರ್, ರೆಬಲ್ ಸ್ಟಾರ್ ಅಂಬರೀಶ್, ವಿಷ್ಣುವರ್ಧನ್, ಹೀಗೆ ಇನ್ನೂ ಅನೇಕರು ಇಲ್ಲಿದ್ದಾರೆ.

ಮುಂದೆ ಓದಿ ...
  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಕನ್ನಡ ಚಿತ್ರರಂಗದಲ್ಲಿ ಡೆಡ್ಲಿ ಸೋಮ ಅಂತಲೇ (Adityaa Acted Terror Movie ) ಗುರುತಿಸಿಕೊಳ್ಳುವ ನಟ ಆದಿತ್ಯ ಅಭಿನಯದ ಟೆರರ್ ಚಿತ್ರದ ಡೆಡ್ಲಿ ಟೀಸರ್ ರಿಲೀಸ್ ಆಗಿದೆ. ಈ ಚಿತ್ರದ ಕೆಲಸ ಈಗಾಗಲೇ ಶುರು (Terror Movie Teaser Release) ಆಗಿದ್ದು, ಬಹುತೇಕ ಶೂಟಿಂಗ್ ಕೆಲಸವ ಕೂಡ ಪೂರ್ಣಗೊಂಡಿದೆ. ಈ ಚಿತ್ರದ ಪೋಸ್ಟರ್ ಅತಿ ಹೆಚ್ಚು ಗಮನ ಸೆಳೆದಿತ್ತು. ನಾಲ್ಕು ತಿಂಗಳ ಹಿಂದೆ ಚಿತ್ರದ ಕ್ಯಾರೆಕ್ಟರ್ ಟೀಸರ್ ಹೊರ (Adityaa Terror Movie Updates) ಬಂದು ಆದಿತ್ಯ ನಿರ್ವಹಿಸಿದ್ದ ಪಾತ್ರದ ಝಲಕ್ ಸಿಕ್ಕಿತ್ತು. ಆದರೆ ಇದೀಗ ಸಿನಿಮಾದ ಟೀಸರ್ ರಿಲೀಸ್ ಆಗಿ ಇಡೀ ಚಿತ್ರದ ಒಂದು ಝಲಕ್ ಕೊಟ್ಟಿದೆ. ಇದರ ಬಗ್ಗೆ (Terror Movie Updates) ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.


ಟೆರರ್ ಚಿತ್ರದ ಮೂಲಕ ಹೊಸ ಲುಕ್‌ ಅಲ್ಲಿ ಡೆಡ್ಲಿ ಆದಿತ್ಯ


ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ ಅಭಿನಯದ ಸಿನಿಮಾ ಬಂದು ಬಹಳ ದಿನಗಳೇ ಆಗಿತ್ತು. ಟೆರರ್ ಸಿನಿಮಾ ಆ ಗ್ಯಾಪ್‌ ಅನ್ನ ತುಂಬುತ್ತಿತ್ತು. ಸೂಪರ್ ಲುಕ್ ಸಖತ್ ಫೀಲ್ ಅನ್ನುವ ರೀತಿಯಲ್ಲಿ ಟೆರರ್ ಚಿತ್ರ ಇದೆ ಅನಿಸುತ್ತಿದೆ.


Kannada Actor Adityaa Acted Terror Movie Teaser Release
ಟೆರರ್ ಸಿನಿಮಾ ಡೈರೆಕ್ಟರ್ ಯಾರು ಗೊತ್ತೆ?


ಟೆರರ್ ಸಿನಿಮಾದ ಸಖತ್ ಆ್ಯಕ್ಷನ್ ಧಮಾಕಾ


ಚಿತ್ರದಲ್ಲಿ ಆ್ಯಕ್ಷನ್ ಕೂಡ ಮಸ್ತ್ ಆಗಿಯೇ ಇರೋ ಹಾಗೆ ಕಾಣುತ್ತಿವೆ. ಇದರಿಂದ ಇಡೀ ಟೀಸರ್ ಮತ್ತಷ್ಟು ಇನ್ನಷ್ಟು ರಂಗೇರುವಂತಿದೆ. ಇದರಲ್ಲಿ ಒಂದು ಅಂಡರ್ ಗ್ರೌಂಡ್ ಬ್ರಿಡ್ಜ್‌ನಲ್ಲಿ ದೃಶ್ಯ ಇದೆ. ಇದು ನಿಜಕ್ಕೂ ಸ್ಪೆಷಲ್ ಅನಿಸುತ್ತದೆ.




ಟೆರರ್ ಚಿತ್ರದಲ್ಲಿ ಆದಿತ್ಯ ಎರಡು ರೀತಿ ಲುಕ್?


ಆದಿತ್ಯ ಅಂತು ಈ ಒಂದು ದೃಶ್ಯದಲ್ಲಿ ಸೂಪರ್ ಆಗಿಯೇ ಕಾಣಿಸುತ್ತಾರೆ. ಚಿತ್ರದ ಇದೇ ದೃಶ್ಯದಲ್ಲಿ ಇನ್ನೂ ಒಂದು ಸರ್ಪ್ರೈಜ್ ಕೂಡ ಇದೆ. ಸೂಪರ್ ಕೂಲ್ ಆ್ಯಕ್ಷನ್ ಹೀರೋ ರೀತಿ ಕಾಣೊ ಆದಿತ್ಯ, ಸಡನ್ ಆಗಿಯೇ ಇಲ್ಲಿ ಕನ್ನಡಕ ಹಾಕಿಕೊಡು ಬಂದು ಬಿಡ್ತಾರೆ. ಹಾಗೆ ಬಂದು ಒಂದು ಸ್ಮೈಲ್ ಕೊಡ್ತಾರೆ.


ಟೆರರ್ ಚಿತ್ರದಲ್ಲಿ ಆದಿತ್ಯ ಡಬಲ್ ರೋಲ್ ಮಾಡ್ತವ್ರಾ?


ಈ ಒಂದು ಸ್ಮೈಲ್ ಅಲ್ಲಿ ಏನೋ ಒಂದು ಟೆರರ್ ಐಡಿಯಾ ಕೂಡ ನುಸುಳಿದಂತೆ ಕಾಣುತ್ತದೆ. ಅಲ್ಲಿಗೆ ಈ ಟೀಸರ್ ಮುಗಿಯುತ್ತದೆ. ಆದರೆ ಟೆರರ್ ಸಿನಿಮಾದಲ್ಲಿ ಆದಿತ್ಯ ಡಬಲ್ ರೋಲ್ ಮಾಡಿದ್ದಾರಾ? ಅನ್ನುವ ಅನುಮಾನ ಕೂಡ ಮೂಡುತ್ತದೆ. ಆದರೆ ಆ ರೀತಿ ಇಲ್ಲಿವರೆಗೂ ಯಾವುದೇ ವಿಷಯ ಹೊರ ಬಂದಿಲ್ಲ ಬಿಡಿ.




ದಿಗ್ಗಜ ಕಲಾವಿದರಿಗೆ ಟೆರರ್ ವಿಶೇಷ ಗೌರವ


ಚಿತ್ರದ ಈ ಒಂದು ವಿಶೇಷ ಟೀಸರ್‌ ಆರಂಭದಲ್ಲಿ ಕನ್ನಡ ಚಿತ್ರರಂಗದ ಎಲ್ಲ ಕಲಾವಿದರಿಗೆ ಸ್ಮರಿಸಲಾಗಿದೆ. ಪುಟ್ಟಣ್ಣ ಕಣಗಾಲ್, ಡಾಕ್ಟರ್ ರಾಜ್‌ಕುಮಾರ್, ನಿರ್ಮಾಪಕ ವೀರಸ್ವಾಮಿ, ಶಂಕರ್ ನಾಗ್, ಪುನೀತ್ ರಾಜಕುಮಾರ್, ರೆಬಲ್ ಸ್ಟಾರ್ ಅಂಬರೀಶ್, ವಿಷ್ಣುವರ್ಧನ್ ಹೀಗೆ ಇನ್ನೂ ಅನೇಕರು ಇಲ್ಲಿದ್ದಾರೆ.


Kannada Actor Adityaa Acted Terror Movie Teaser Release
ಟೆರರ್ ಚಿತ್ರದಲ್ಲಿ ಆದಿತ್ಯ ಡಬಲ್ ರೋಲ್ ಮಾಡ್ತವ್ರಾ?


ಟೆರರ್ ಸಿನಿಮಾ ಡೈರೆಕ್ಟರ್ ಯಾರು ಗೊತ್ತೆ?


ಟೆರರ್ ಸಿನಿಮಾ ಬಹು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಕಥೆ ಬರೆದು ಚಿತ್ರವನ್ನ ರಂಜನ್ ಶಿವರಾಮ್‌ಗೌಡ ನಿರ್ದೇಶನ ಮಾಡುತ್ತಿದ್ದಾರೆ. ಹರ್ಷವರ್ಧನ್ ರಾಜ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ.


ಆದಿತ್ಯ ಜನ್ಮ ದಿನದಂದು ಟೆರರ್ ಟೀಸರ್ ರಿಲೀಸ್


ಸಿನಿಮಾ ತಂಡ ನಾಯಕ ಆದಿತ್ಯ ಅವರಿಗೆ ಈ ಮೂಲಕ ವಿಶೇಷ ಗಿಫ್ಟ್ ಕೂಡ ಕೊಟ್ಟಿದೆ. ಇದಕ್ಕೆ ಕಾರಣ ಮೇ-4 ರಂದು ಆದಿತ್ಯ ಜನ್ಮ ದಿನ ಆಚರಿಸಿಕೊಳ್ಳುತ್ತಾರೆ.


ಇದನ್ನೂ ಓದಿ: Reeshma Nanaiah: KD ಲೇಡಿ ಮಚ್ ಲಕ್ಷ್ಮಿ ಮಸ್ತ್ ಮಸ್ತ್ ಡ್ಯಾನ್ಸ್! ಹಳೆ ಹಾಡು ಹೊಸ ಕುಣಿತ, ವಿಡಿಯೋ ಸಖತ್ ವೈರಲ್


ಈ ಹಿನ್ನೆಲೆಯಲ್ಲಿ ಈ ದಿನವೆ ಸಿನಿಮಾ ಟೀಸರ್ ರಿಲೀಸ್ ಆಗಿದೆ. ವಿಶೇಷ ಫೀಲ್ ಅನ್ನ ಕೂಡ ಕೊಡ್ತಾಯಿದೆ.

First published: