ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು (Action Prince Dhruva Sarja) ಪ್ರೇರಣಾ ದಂಪತಿಯ ಮಗಳು ಹೇಗಿದ್ದಾಳೆ. ಈ ಪುಟ್ಟ ರಾಜಕುಮಾರಿಯ ನೋಟ ಹೇಗಿದೆ.? ಎಷ್ಟು ಸುಂದರಿ ಈ ಪುಟ್ಟಿ ? ಅಪ್ಪನ ಹಾಗೆ ಇದ್ದಾಳಾ? ಇಲ್ಲ ಅಮ್ಮನ ಹೋಲುತ್ತಾಳಾ ? ಈ ಎಲ್ಲ (Kannada Actor Dhruva Sarja) ಪ್ರಶ್ನೆಗಳು ಕಳೆದ ಕೆಲವು ತಿಂಗಳಿನಿಂದಲೂ ಇವೆ. ಆದರೆ ಧ್ರುವ ಸರ್ಜಾ ತಮ್ಮ ಮಗಳನ್ನ ಇಲ್ಲಿವರೆಗೂ ಯಾರಿಗೂ ತೋರಿರಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಮಗಳ ಫೋಟೋ ಹಂಚಿಕೊಂಡರೂ ಮುಖ ಪಾತ್ರ (Dhruva Sarja Latest Updates) ಕಾಣಿಸುತ್ತಿರಲಿಲ್ಲ. ಅಷ್ಟು ಸ್ಪೆಷಲ್ ಆಗಿಯೇ (Sandalwood Hero Updates) ಮಗಳ ಮುಖವನ್ನ ಧ್ರುವ ಸರ್ಜಾ ಹೈಡ್ ಮಾಡುತ್ತಿದ್ದರು.
ಆದರೆ ಧ್ರುವ ಸರ್ಜಾ ಈಗ ಮಗಳ ಮುಖವನ್ನ ಎಲ್ಲರಿಗೂ ತೋರಿದ್ದಾರೆ. ಮಗಳೊಂದಿಗಿನ ತಮ್ಮ ಚಂದದ ಫೋಟೋ ಹಂಚಿಕೊಂಡಿದ್ದಾರೆ. ವಿಶೇಷ ಫೋಟೋಗಳ ಒಂದು ವಿಡಿಯೋವನ್ನ ಸ್ವತಃ ಧ್ರುವ ಸರ್ಜಾ ಶೇರ್ ಮಾಡಿದ್ದಾರೆ.
ಸರ್ಜಾ ಫ್ಯಾಮಿಲಿಯ ಪುಟ್ಟ ರಾಜಕುಮಾರಿ ಹೀಗಿದ್ದಾಳೆ ನೋಡಿ
ಧ್ರುವ ಸರ್ಜಾ ಫ್ಯಾಮಿಲಿಯ ರಾಜಕುಮಾರಿ ಹೇಗಿದ್ದಾಳೆ ? ಈಕೆ ಕಂಗಳು ಯಾರನ್ನ ಹೋಲುತ್ತವೆ ? ಅಪ್ಪನ ಮಗಳು ಈ ಪುಟ್ಟಿ ಯಾರನ್ನ ಹೋಲುತ್ತಾಳೆ ? ಎಲ್ಲ ಪ್ರಶ್ನೆಗೆ ಈಗಾಗಲೇ ತೆರೆ ಬಿದ್ದಿದೆ.
ಮಗಳ ಸ್ಪೆಷಲ್ ಫೋಟೋ ಹಂಚಿಕೊಂಡ ಆ್ಯಕ್ಷನ್ ಪ್ರಿನ್ಸ್ ಧ್ರುವ
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಮಗಳ ಚಂದದ ಫೋಟೋಗಳನ್ನ ಈಗ ಹಂಚಿಕೊಂಡಿದ್ದಾರೆ. ಇದರಲ್ಲಿ ಮಗಳ ಮುಖವನ್ನೂ ಅಷ್ಟೇ ಪ್ರೀತಿಯಿಂದಲೇ ತೋರಿದ್ದಾರೆ.
ಅಮ್ಮನ ಮಡಿಲಲ್ಲಿ ಸರ್ಜಾ ವಂಶದ ಪುಟ್ಟ ರಾಜಕುಮಾರಿ
ಅಮ್ಮ ಪ್ರೇರಣಾ ಮಡಿಲಿಲ್ಲ ಮಲಗಿದ ಮಗಳ ವಿಡಿಯೋವನ್ನ ಕೂಡ ಧ್ರುವ ಸರ್ಜಾ ರಿಲೀಸ್ ಮಾಡಿದ್ದಾರೆ. ಈ ಮೂಲಕ ಕನ್ನಡ ನಾಡಿನ ಧ್ರುವ ಸರ್ಜಾ ಫ್ಯಾನ್ಸ್ ತುಂಬಾ ಖುಷಿಪಟ್ಟಿದ್ದಾರೆ. ತಮ್ಮದೇ ರೀತಿಯಲ್ಲಿ ಬಾಸ್ ಮಗಳನ್ನ ಕೊಂಡಾಡಿದ್ದು, ಸರ್ಜಾ ವಂಶದ ಪುಟ್ಟ ರಾಜಕುಮಾರಿ ಅಂತಲೂ ಬಣ್ಣಿಸಿದ್ದಾರೆ.
ಅರ್ಜುನ್ ಸರ್ಜಾ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆ ಸಾಲಿಗೆ ಧ್ರುವ ಸರ್ಜಾ ಮತ್ತು ಪ್ರೇರಣಾ ಮೂಲಕ ಸರ್ಜಾ ಫ್ಯಾಮಿಲಿಗೆ ಮತ್ತೊಬ್ಬ ರಾಜಕುಮಾರಿ ಬಂದಿರೋದು ಇಡೀ ಫ್ಯಾಮಿಲಿಗೆ ಖುಷಿ ತಂದಿದೆ.
View this post on Instagram
ಇಲ್ಲಿವರೆಗೂ ಮಗಳ ಮುಖವನ್ನ ತೋರದ ಧ್ರುವ ಸರ್ಜಾ, ಮಗಳ ಸ್ಪೆಷಲ್ ಫೋಟೋ ಶೂಟ್ ಕೂಡ ಮಾಡಿಸಿದ್ದಾರೆ. ಈ ಮೂಲಕ ಸರ್ಜಾ ವಂಶದ ರಾಜಕುಮಾರಿ ಈ ಫೋಟೋ ಶೂಟ್ ಅಲ್ಲಿ ಕಂಗೊಳಿಸುತ್ತಿದ್ದಾಳೆ.
ಮಗಳೊಟ್ಟಿಗೆ ಪ್ರೇರಣಾ ಮುದ್ದಾಡುವ ಸ್ಪೆಷಲ್ ಫೋಟೋ
ಈ ಫೋಟೋ ಶೂಟ್ ಅಲ್ಲಿ ಇನ್ನೂ ಒಂದು ವಿಶೇಷ ಕೂಡ ಇದೆ. ಮಗಳೊಟ್ಟಿಗೆ ಅಮ್ಮ ಪ್ರೇರಣಾ ಕೂಡ ಇದ್ದಾರೆ. ಆ ಫೋಟೋಗಳು ಸ್ಪೆಷಲ್ ಆಗಿಯೇ ಇವೆ.
ಮುದ್ದು ಮಗಳನ್ನ ಮುದ್ದಾಡಿದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ
ಮಗಳನ್ನ ತುಂಬಾನೆ ಪ್ರೀತಿಸೊ ಅಪ್ಪ ಧ್ರುವ ಸರ್ಜಾ ಕೂಡ ಮಗಳ ಪ್ರತಿಯೊಂದು ನಗು-ಅಳು ಎಲ್ಲವೂ ನೋಡಿ ಖುಷಿಪಟ್ಟಿದ್ದಾರೆ. ಮದ್ದಾದ ಮಗಳನ್ನ ಅಷ್ಟೇ ಪ್ರೀತಿಯಿಂದಲೇ ಮುದ್ದಾಡಿದ್ದಾರೆ.
ಇದನ್ನೂ ಓದಿ: Ponniyin Selvan 2: ಒಟಿಟಿಯಲ್ಲಿ ಪೊನ್ನಿಯನ್ ಸೆಲ್ವನ್ 2 ಸ್ಟ್ರೀಮಿಂಗ್ ಡೇಟ್ ಫಿಕ್ಸ್!
ಆ ಕ್ಷಣ ಕೂಡ ಈ ಫೋಟೋಗಳಲ್ಲಿ ಕ್ಯಾಪ್ಚರ್ ಆಗಿದ್ದು, ಸ್ಪೆಷಲ್ ಫೋಟೋ ಮತ್ತು ವಿಡಿಯೋ ಕೋಲಾಜ್ ಮಾಡಿರೋ ಒಂದು ಸ್ಪೆಷಲ್ ವಿಡಿಯೋ ಈಗ ಎಲ್ಲರ ಗಮನ ಸೆಳೆದು ವೈರಲ್ ಆಗುತ್ತಿದೆ.
ಮಗಳಿಗಾಗಿ ಆಂಜನೇಯ ಟೆಂಪಲ್‌ನಲ್ಲಿ ಸ್ಪೆಷಲ್ ಪೂಜೆ
ಇದಕ್ಕೂ ಹೆಚ್ಚಾಗಿ ಮಗಳನ್ನ ಸರ್ಜಾ ಫ್ಯಾಮಿಲಿ ಆಂಜನೇಯ ಟೆಂಪಲ್‌ಗೂ ಕರೆದುಕೊಂಡು ಹೋಗಿದೆ. ಅಲ್ಲಿ ಸ್ಪೆಷಲ್ ಪೂಜೆಯನ್ನ ಕೂಡ ಮಾಡಿಸಿದೆ. ಆ ಒಂದು ವಿಷಯ ಈ ವಿಡಿಯೋದಲ್ಲೇ ರಿವೀಲ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ