• Home
  • »
  • News
  • »
  • entertainment
  • »
  • Dhruva Sarja: ಆ್ಯಕ್ಷನ್ ಪ್ರಿನ್ಸ್ ಈಗ KD ಆಗ್ತಿದ್ದಾರೆ! ಧ್ರುವ ಸರ್ಜಾ ಹೊಸ ಸಿನಿಮಾ ಟೈಟಲ್ ಟೀಸರ್ ನೋಡಿ ಬೆಂಕಿ ಎಂದ್ರು ಫ್ಯಾನ್ಸ್!

Dhruva Sarja: ಆ್ಯಕ್ಷನ್ ಪ್ರಿನ್ಸ್ ಈಗ KD ಆಗ್ತಿದ್ದಾರೆ! ಧ್ರುವ ಸರ್ಜಾ ಹೊಸ ಸಿನಿಮಾ ಟೈಟಲ್ ಟೀಸರ್ ನೋಡಿ ಬೆಂಕಿ ಎಂದ್ರು ಫ್ಯಾನ್ಸ್!

ಟೈಟಲ್ ಟೀಸರ್ ನೋಡಿ ಬೆಂಕಿ ಎಂದ್ರು ಫ್ಯಾನ್ಸ್

ಟೈಟಲ್ ಟೀಸರ್ ನೋಡಿ ಬೆಂಕಿ ಎಂದ್ರು ಫ್ಯಾನ್ಸ್

'KD' ಸಿನಿಮಾದ ಟೈಟಲ್ ಟೀಸರ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಫ್ಯಾನ್ಸ್‌ಗೆ ದೊಡ್ಡ ಹಬ್ಬವೇ ಆಗಿದೆ. ಪೋಸ್ಟರ್ ಅಂತೂ ಸೂಪರ್ ಆಗಿಯೇ ಬಂದಿದೆ. ಎರಡನ್ನೂ ಈಗಾಗಲೇ ವಾಟ್ಸ್​ ಅಪ್​ ಗ್ರೂಪ್ ನಲ್ಲಿ ಶೇರ್ ಮಾಡಿಕೊಳ್ಳಲು ಅಭಿಮಾನಿಗಳು ಆರಂಭಿಸಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡ ಚಿತ್ರರಂಗದಲ್ಲಿ ಡೈರೆಕ್ಟರ್ (Director Jogi Prem) ಜೋಗಿ ಪ್ರೇಮ್ ಮತ್ತೊಮ್ಮೆ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಕಳೆದ ಕೆಲವು ತಿಂಗಳಿನಿಂದಲೂ ತಮ್ಮ ಮತ್ತು ಧ್ರುವ ಸರ್ಜಾ (Dhruva Sarja) ಸಿನಿಮಾದ ಬಗ್ಗೆ ಭಾರೀ ಹೈಪ್ ಕ್ರಿಯೇಟ್ ಮಾಡ್ತಾನೇ ಬಂದಿದ್ದಾರೆ. ಟೈಟಲ್ (Title Launch) ಲಾಂಚ್ ಮಾಡಲು ಕೂಡ ಒಂದು ಅದ್ದೂರಿ ಕಾರ್ಯಕ್ರಮವನ್ನೇ ಮಾಡ್ತಾ ಇದ್ದಾರೆ. ಅದೇ ರೀತಿ ಅದ್ದೂರಿ ಕಾರ್ಯಕ್ರಮದಲ್ಲಿಯೇ ಸಿನಿಮಾ ಟೈಟಲ್ ಲಾಂಚ್ ಕೂಡ ಮಾಡಿದ್ದಾರೆ. ಆ ಟೈಟಲ್ ಏನೂ ಗೊತ್ತೇ? ಹೌದು, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇನ್ಮುಂದೆ K.D ಎಂದು ಕರೆಸಿಕೊಳ್ಳುವಷ್ಟು ಸೂಪರ್ ಆಗಿಯೇ ಟೈಟಲ್ ಟೀಸರ್ ಮಾಡಿದ್ದಾರೆ. ಬನ್ನಿ, ಇದರ ಬಗೆಗಿನ ಇನ್ನಷ್ಟು ವಿಷಯ ಹೇಳ್ತಿವಿ.


ಟೈಟಲ್ ಟೀಸರ್ ನೋಡಿ ಬೆಂಕಿ ಎಂದ್ರು ಫ್ಯಾನ್ಸ್
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಜೋಗಿ ಪ್ರೇಮ್ ಮೊದಲ ಬಾರಿಗೆ ಕೆ.ಡಿ. ಚಿತ್ರಕ್ಕಾಗಿಯೇ ಒಂದಾಗಿದ್ದಾರೆ. ಮೊದಲ ಸಿನಿಮಾ ಅಂದ್ಮೇಲೆ ಒಂದಷ್ಟು ಹೈಪ್ ಇರಲೇಬೇಕು ಅಲ್ಲವೇ? ಅದರಲ್ಲೂ ಜೋಗಿ ಪ್ರೇಮ್ ಸಿನಿಮಾ ಅಂದಾಗ ಹೈಪ್ ಇರದೇ ಇದ್ರೆ ಹೇಗೆ?


ಹೌದು, ಜೋಗಿ ಪ್ರೇಮ್ ತಮ್ಮ K.D ಚಿತ್ರದ ಟೈಟಲ್ ಲಾಂಚ್ ಗಾಗಿಯೇ ದೊಡ್ಡ ಕಾರ್ಯಕ್ರಮವನ್ನೆ ಮಾಡಿದ್ದಾರೆ. ಬಾಲಿವುಡ್​ ನಿಂದ ಸಂಜಯ್ ದತ್ ಇದಕ್ಕಾಗಿಯೇ ಬೆಂಗಳೂರಿಗೆ ಬಂದಿದ್ದಾರೆ. ಮಾಲಿವುಡ್​ನ ಸೂಪರ್ ಸ್ಟಾರ್ ಮೋಹನ್ ಲಾಲ್ ಕೂಡ ಈ ಒಂದು ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ.


ತಮಿಳಿನ ನಟ ವಿಜಯ್ ಸೇತುಪತಿಯವನ್ನ ಕೂಡ ಜೋಗಿ ಪ್ರೇಮ್ ಆಹ್ವಾನಿಸಿ ಬಂದಿದ್ದಾರೆ. ಹೀಗೆ ಎಲ್ಲ ಭಾಷೆಯ ನಟರು ಈ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮಕ್ಕೆ ಬಂದು ಚಿತ್ರ ತಂಡಕ್ಕೆ ವಿಶ್ ಮಾಡಿದ್ದಾರೆ.


Kannada Actor Action Prince Dhruva Sarja New Film Title Launched
K.D ಟೈಟಲ್ ಟೀಸರ್ ಅನ್ನ ಬೆಂಕಿ ಅನ್ನೋದ್ಯಾಕೆ?


K.D ಚಿತ್ರದ ಟೈಟಲ್ ಟೀಸರ್ ಹೇಗಿದೆ?
K.D ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಆಗುತ್ತದೆ. ಈ ಹಿನ್ನೆಲೆಯಲ್ಲಿಯೇ ಸಿನಿಮಾದ ಟೈಟಲ್ ಟೀಸರ್ ಬಹು ಭಾಷೆಯಲ್ಲಿಯೇ ರಿಲೀಸ್ ಆಗಿದೆ. K.D ಪಾತ್ರಧಾರಿ ಧ್ರುವ ಲುಕ್ ಕೂಡ ಬೆಂಕಿ ಆಗಿಯೇ ಇದೆ.


ಇದನ್ನೂ ಓದಿ: Pooja Hegde: ಮಿರರ್ ಡ್ರೆಸ್​ನಲ್ಲಿ ಪೂಜಾ ಹೆಗ್ಡೆ! ಅಬ್ಬಾ ಅಭಿಮಾನಿಯ ರಿಯಾಕ್ಷನ್ ನೋಡಿ


K.D ಚಿತ್ರದ ಟೈಟಲ್ ಟೀಸರ್​ ನಲ್ಲಿ ಧ್ರುವ ಸರ್ಜಾ ಜೈಲಿನಿಂದ ಹೊರ ಬಂದ K.D ರೀತಿಯಲ್ಲಿಯೇ ಬಿಂಬಿಸಲಾಗಿದೆ. ರೆಟ್ರೋ ಲುಕ್​ ನಲ್ಲಿಯೇ ಧ್ರುವ ಸರ್ಜಾ ಇಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಈ ಒಂದು ಮೊದಲ ಟೀಸರ್ ಬೆಂಕಿಯಾಗಿದೆ.


K.D ಟೈಟಲ್ ಟೀಸರ್ ಅನ್ನ ಬೆಂಕಿ ಅನ್ನೋದ್ಯಾಕೆ?
K.D ಟೈಟಲ್ ಬೆಂಕಿ ಆಗಿಯೇ ಇದೆ. ಇಡೀ ಟೀಸರ್​ನಲ್ಲಿ ಬೆಂಕಿನೇ ಇದೆ. ಧ್ರುವ ಸರ್ಜಾ ಎಂಟ್ರಿಯಲ್ಲೂ ಸುತ್ತ-ಮುತ್ತಲು ಬೆಂಕಿನೇ ಇದೆ. ಕೈಯಲ್ಲಿ ಮಚ್ಚು ಕೂಡ ಇದೆ. ಲುಕ್ ಅಲ್ಲೂ ಸಖತ್ ರಗಢ್ ಫೀಲ್ ಕೂಡ ಕಾಣುತ್ತದೆ.




ಅಲ್ಲಿಗೆ ಇದೊಂದು ಆ್ಯಕ್ಷನ್ ಪ್ಯಾಕ್ಡ್ ಪ್ಯಾನ್ ಇಂಡಿಯಾ ಸಿನಿಮಾನೇ ಅನ್ನೋ ಮಟ್ಟಿಗೇನೆ K.D ಚಿತ್ರದ ಟೀಸರ್ ಇದೆ. K.D ಸಿನಿಮಾದ ಹಿಂದೆ ದೊಡ್ಡ ಟೆಕ್ನಿಕ್ ಟೀಮ್ ಇದೆ. ಟೀಸರ್ ನೋಡಿದ್ರೆ, ಅದು ನಿಜ ಅಂತಲೇ ಹೇಳಬಹುದು.


K.D ಚಿತ್ರದ ಟೈಟಲ್ ಟೀಸರ್ ಧ್ರುವನ ಫ್ಯಾನ್ಸ್ ಗೆ ಹಬ್ಬ
K.D ಸಿನಿಮಾದ ಟೈಟಲ್ ಟೀಸರ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಫ್ಯಾನ್ಸ್ ಗೆ ದೊಡ್ಡ ಹಬ್ಬವೇ ಆಗಿದೆ. ಪೋಸ್ಟರ್ ಅಂತೂ ಸೂಪರ್ ಆಗಿಯೇ ಬಂದಿದೆ. ಎರಡನ್ನೂ ಈಗಾಗಲೇ ವಾಟ್ಸ್​ ಅಪ್​ ಗ್ರೂಪ್ ನಲ್ಲಿ ಶೇರ್ ಮಾಡಿಕೊಳ್ಳಲು ಅಭಿಮಾನಿಗಳು ಆರಂಭಿಸಿದ್ದಾರೆ.


ಇದನ್ನೂ ಓದಿ: Head Bush Censor Board Review: ಹೆಡ್ ಬುಷ್ ಚಿತ್ರ ರಿಲೀಸ್ ಮುಂಚೇನೆ ರಿವ್ಯೂ,ಸಾಗರೋತ್ತರ ಸೆನ್ಸಾರ್ ಮಂಡಳಿ ಸದಸ್ಯ ಕೊಟ್ಟ ಸಖತ್ ರಿಪೋರ್ಟ್ !


ನಿಜಕ್ಕೂ ಟೈಟಲ್ ಟೀಸರ್ ಹಾಗೇನೆ ಇದೆ. ಇಷ್ಟು ಬಿಟ್ಟರೇ. ಟೈಟಲ್ ಟೀಸರ್ ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿಯೇ ನಡೆದಿದೆ. ಉಳಿದಂತೆ ಬಾಕಿ ಮಾಹಿತಿಗಾಗಿ ವೇಟ್ ಮಾಡಿ.

First published: