KD Cinema News: ಕೆಡಿ ಚಿತ್ರದ ನಾಯಕಿ ಯಾರು? ರೀಷ್ಮಾನಾ? ಶ್ರೀಲೀಲಾನಾ? ಅಧಿಕೃತ ಘೋಷಣೆ ಯಾವಾಗ?

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೆಡಿ ಸಿನಿಮಾ ನಾಯಕಿ ಯಾರು?

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೆಡಿ ಸಿನಿಮಾ ನಾಯಕಿ ಯಾರು?

ಸಿನಿಮಾದ ನಾಯಕಿಯ ವಿಷಯ ಇನ್ನೂ ಅನೌನ್ಸ್ ಆಗಿಲ್ಲ. ಆದಷ್ಟು ಬೇಗ ಕೆಡಿ ಚಿತ್ರದ ನಾಯಕಿ ಯಾರು ಅನ್ನೋದನ್ನ ಅಧಿಕೃತವಾಗಿಯೇ ಅನೌನ್ಸ್ ಮಾಡುತ್ತೇವೆ ಎಂದು ಕೆವಿಎನ್ ಪ್ರೋಡಕ್ಷನ್ ಹೆಡ್ ಸುಪ್ರೀತ್, ನ್ಯೂಸ್-18 ಕನ್ನಡ ಡಿಜಿಟಲ್‌ ತಿಳಿಸಿದ್ದಾರೆ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:
  • published by :

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ (Action Prince KD Movie Updates) ಕೆಡಿ ಸಿನಿಮಾದ ಸದ್ಯ ಯಾವ ಹೊಸ ಮಾಹಿತಿನೂ ಹೊರ ಬಿದ್ದಿಲ್ಲ. ಹಾಗೇನಾದ್ರೂ ಹೊರ ಬಂದ್ರೆ, ಅದನ್ನ ಜೋಗಿ ಪ್ರೇಮ್ ಅಧಿಕೃತವಾಗಿಯೇ (KD Cinema Heroine Updates) ಹೇಳುತ್ತಾರೆ. ಆ ವಿಷಯದಲ್ಲಿ ಕೆಡಿ ಚಿತ್ರದ ಸತ್ಯವತಿ ಪಾತ್ರಧಾರಿ ಶಿಲ್ಪಾ ಶೆಟ್ಟಿ ಕ್ಯಾರೆಕ್ಟರ್ ರಿವೀಲ್ ಆಗಿದೆ. ನಾಯಕ ಧ್ರುವ ಸರ್ಜಾ ರೋಲ್‌ ಹೇಗಿದೆ ಅನ್ನುವುದು ತಿಳಿದಿದೆ. ಆದರೆ ಈ (Kannada Action Cinema) ಚಿತ್ರದ ನಾಯಕಿಯ ಕಥೆ ಏನೂ? ಈ ಒಂದು ಪ್ರಶ್ನೆಗೆ ಅಧಿಕೃತವಾದ ಮಾಹಿತಿ ಹೊರ ಬಂದಿಲ್ಲ. ಇಡೀ ಸಿನಿಮಾ ಯಾವ ಕಾಲಘಟ್ಟದಲ್ಲಿ ನಡೆಯುತ್ತದೆ ಅನ್ನುವ (KD Movie Latest Viral News) ವಿಷಯವೂ ತಿಳಿದಿಲ್ಲ.


ಆದರೂ ಇದೀಗ ಒಂದಷ್ಟು ಇಂಟ್ರಸ್ಟಿಂಗ್ ವಿಷಯ ಹರಿದಾಡುತ್ತಿದೆ. ಅದರ ಸುತ್ತ ಇಲ್ಲೊಂದು ಸ್ಟೋರಿ ಇದೆ ಓದಿ.


Kannada Actor Action Prince Dhruva Sarja KD Film Heroine Updates
ಕೆಡಿ ಚಿತ್ರದ ನಾಯಕಿಯ ಯಾರು? ಅಧಿಕೃತ ಅನೌನ್ಸ್‌ಮೆಂಟ್ ಯಾವಾಗ?


ಕೆಡಿ ಸಿನಿಮಾದ ಸಂಜಯ್ ದತ್ ರೋಲ್ ಹೇಗಿರುತ್ತದೆ?


ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಕೆಡಿ ಸಿನಿಮಾ ಹಲ್‌ ಚಲ್ ಬೇರೆ ಇದೆ. ಪ್ಯಾನ್ ಇಂಡಿಯಾ ಸಿನಿಮಾ ಅನ್ನೋ ಕಾರಣಕ್ಕೆ ಇಡೀ ಸಿನಿಮಾ ದೊಡ್ಡಮಟ್ಟದಲ್ಲಿಯೇ ತಯಾರಾಗುತ್ತಿದೆ. ಬಾಲಿವುಡ್‌ನಿಂದ ಸಂಜಯ್ ದತ್ ಬಂದು ಅಭಿನಯಿಸುತ್ತಿದ್ದಾರೆ.
ಸತ್ಯವತಿ ಶಿಲ್ಪಾ ಶೆಟ್ಟಿ ರೋಲ್ ಈಗಾಗಲೇ ರಿವೀಲ್


ಇದೇ ಬಾಲಿವುಡ್‌ನಿಂದ ಸತ್ಯವತಿ ಪಾತ್ರಕ್ಕಾಗಿ ನಟಿ ಶಿಲ್ಪಾ ಶೆಟ್ಟಿ ಬಣ್ಣ ಹಚ್ಚಿ ಹೋಗಿದ್ದಾರೆ ಅನ್ನೋ ಸುದ್ದಿ ಇದೆ. ಸತ್ಯವತಿ ಪಾತ್ರ ಏನೂ ಅನ್ನೋದನ್ನ ಕೂಡ ರಿವೀಲ್ ಆಗಿದೆ. ಆದರೆ ಈ ಚಿತ್ರದ ನಾಯಕಿ ಯಾರು ಅನ್ನುವ ಸುದ್ದಿ ಮಾತ್ರ ಇನ್ನು ರಿವೀಲ್ ಆಗಿಲ್ಲ.


ಆದರೆ ಕೆಡಿ ಸಿನಿಮಾದ ನಾಯಕಿಯರ ವಿಷಯದಲ್ಲಿ ಇಬ್ಬರು ನಾಯಕಿಯರು ಹೆಸರು ಕೇಳಿ ಬಂದಿತ್ತು. ಶ್ರೀಲೀಲಾ ಮತ್ತು ರೀಷ್ಮಾ ನಾಣಯ್ಯ ಅವರ ಹೆಸರು ಬಲವಾಗಿಯೇ ಕೇಳಿ ಬಂದಿದೆ. ನಿರ್ಮಾಣ ಸಂಸ್ಥೆ ಕೂಡ ಕನ್ನಡದ ಹುಡಿಗನೇ ಸಿನಿಮಾಗೆ ಇರಲಿ ಅಂತ ಹೇಳಿದ್ದರ ಬೆನ್ನಲ್ಲಿಯೇ ಈ ಹೆಸರು ಕೇಳಿ ಬಂದಿದ್ದವು.


ಕೆಡಿ ಚಿತ್ರಕ್ಕೆ ಶ್ರೀಲೀಲಾನಾ ಕೊಡಗಿನ ಕುವರಿ ರೀಷ್ಮಾ ನಾಣಯ್ಯನಾ?


ಇವರಲ್ಲಿ ಶ್ರೀಲೀಲಾ ತೆಲುಗು ಚಿತ್ರರಂಗದಲ್ಲಿಯೇ ಹೆಚ್ಚು ಹೆಸರು ಮಾಡುತ್ತಿದ್ದಾರೆ. ರೀಷ್ಮಾ ನಾಣಯ್ಯ ಈಗಾಗಲೇ ಬೇಡಿಕೆಯ ನಟಿ ಆಗುತ್ತಿದ್ದಾರೆ. ಬಾನದಾರಿಯಲ್ಲಿ ಸಿನಿಮಾದಲ್ಲಿ ರೀಷ್ಮಾ ಅಭಿನಯಿಸಿದ್ದಾರೆ. ಈ ಹಿಂದಿನ ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತದಲ್ಲೂ ರೀಷ್ಮಾ ನಾಣಯ್ಯ ಇದ್ದಾರೆ. ಹಾಗಾಗಿಯೇ ಕೆಡಿ ಚಿತ್ರದಲ್ಲಿ ರೀಷ್ಮಾನೇ ನಾಯಕಿ ಆಗೋ ಸಾಧ್ಯತೆ ಜಾಸ್ತಿ ಅಂತಲೇ ಗೆಸ್ ಮಾಡಬಹುದು.


ಈ ಕುರಿತು ಪ್ರೋಡಕ್ಷನ್ ಹೌಸ್ ಕೂಡ ಈ ಒಂದು ವಿಷಯವನ್ನ ಅಧಿಕೃತವಾಗಿ ಶೀಘ್ರದಲ್ಲಿಯೇ ಹೇಳಲಿದೆ. ಈ ಬಗ್ಗೆ ಕೆವಿಎನ್ ಪ್ರೋಡಕ್ಷನ್ ಹೆಡ್ ಸುಪ್ರೀತ್, ನ್ಯೂಸ್-18 ಕನ್ನಡ ಡಿಜಿಟಲ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.


ಕೆಡಿ ಚಿತ್ರದ ನಾಯಕಿಯ ಯಾರು? ಅಧಿಕೃತ ಅನೌನ್ಸ್‌ಮೆಂಟ್ ಯಾವಾಗ?


ಸಿನಿಮಾದ ನಾಯಕಿಯ ವಿಷಯ ಇನ್ನೂ ಅನೌನ್ಸ್ ಆಗಿಲ್ಲ. ಆದಷ್ಟು ಬೇಗ ಕೆಡಿ ಚಿತ್ರದ ನಾಯಕಿ ಯಾರು ಅನ್ನೋದನ್ನ ಅಧಿಕೃತವಾಗಿಯೇ ಅನೌನ್ಸ್ ಮಾಡುತ್ತೇವೆ ಎಂದು ಸುಪ್ರೀತ್ ತಿಳಿಸಿದ್ದಾರೆ.


Kannada Actor Action Prince Dhruva Sarja KD Film Heroine Updates
ಕೆಡಿ ಚಿತ್ರಕ್ಕೆ ಶ್ರೀಲೀಲಾನಾ ಕೊಡಗಿನ ಕುವರಿ ರೀಷ್ಮಾ ನಾಣಯ್ಯನಾ?


ಈ ಚಿತ್ರದಲ್ಲಿ ಬರುವ ಕಥೆ ಯಾವ ಕಾಲಘಟ್ಟದ್ದು ಅನ್ನೋ ಕುತೂಹಲವೂ ಇದೆ. ಅದರ ಬಗ್ಗೆ ಹೇಳೋದಾದ್ರೆ, ಇಡೀ ಸಿನಿಮಾ ರೆಟ್ರೋ ಕಾಲಕ್ಕೆ ನಿಮ್ಮನ್ನ ಕರೆದುಕೊಂಡು ಹೋಗುತ್ತಿದೆ. 1968 ರಿಂದ 1978 ಕಾಲಘಟ್ಟದಲ್ಲಿಯೇ ಸಿನಿಮಾದ ಕಥೆ ನಡೆಯುತ್ತದೆ.


ಕೆಡಿ ಚಿತ್ರದಲ್ಲಿ ಜೋಗಿ ಪ್ರೇಮ್ ಯಾವ ಡಾನ್ ಕಥೆ ಹೇಳ್ತಿದ್ದಾರೆ?


ಇಂತಹ ಈ ಚಿತ್ರದಲ್ಲಿ ಜೋಗಿ ಪ್ರೇಮ್ ಯಾವ ಡಾನ್ ಕಥೆಯನ್ನ ಹೇಳ್ತಿದ್ದಾರೆ ಅನ್ನೋದು ಮಾತ್ರ ರಿವೀಲ್ ಆಗಿಲ್ಲ. ಆದರೆ ಚಿತ್ರದ ಟೀಸರ್ ಮಾತ್ರ ಭಯಂಕರ ಕೆಡಿಯ ಕಥೆಯನ್ನ ಜೋಗಿ ಪ್ರೇಮ್ ಹೇಳ್ತಿದ್ದಾರೆ ಅನ್ನೋ ಸತ್ಯವನ್ನ ಹೇಳುತ್ತಿದೆ.


ಇದನ್ನೂ ಓದಿ: Prabhu Deva Dance: ಇಂಡಿಯನ್ ಮೈಕಲ್ ಜಾಕ್ಸನ್ ಜೊತೆ ರಮೇಶ್ ಮೂನ್ ವಾಕ್ ಝಲಕ್

top videos


    ಇದರ ಹೊರತಾಗಿ ಕೆಡಿ ಚಿತ್ರ ಡೈರೆಕ್ಟರ್ ಜೋಗಿ ಪ್ರೇಮ್, ಎಂದಿನಂತೆ ತಮ್ಮ ಚಿತ್ರದ ಯಾವ ವಿಷಯವನ್ನ ಬಿಟ್ಟುಕೊಟ್ಟಿಲ್ಲ. ಚಿತ್ರದ ಪಾತ್ರಗಳ ಪೋಸ್ಟರ್‌ಗಳನ್ನ ರಿವೀಲ್ ಮಾಡೋ ಮೂಲಕ ಕುತೂಹಲವನ್ನ ಕ್ರಿಯೇಟ್ ಮಾಡುತ್ತಿದ್ದಾರೆ. ಈ ಒಂದು ಕುತೂಹಲದಲ್ಲಿ ಸಂಜಯ್ ದತ್ ರೋಲ್ ಹೇಗೆ ಇರುತ್ತದೆ ಅನ್ನುವ ಪ್ರಶ್ನೆ ಕೂಡ ಕುತೂಹಲ ಮೂಡಿಸುತ್ತಿದೆ.

    First published: