Dhruva Sarja Tests Corona Positive: ಧ್ರುವ ಸರ್ಜಾ, ಹೆಂಡತಿ ಪ್ರೇರಣಾಗೆ ಕೊರೋನಾ ಪಾಸಿಟಿವ್​

ಧ್ರುವ ಸರ್ಜಾಗೆ ಇತ್ತೀಚೆಗೆ ಕೊರೋನಾ ಲಕ್ಷಣಗಳು ಕಂಡು ಬಂದಿದ್ದವಂತೆ. ಈ ವೇಳೆ ಅವರು ಪರೀಕ್ಷೆಗೆ ಒಳಪಟ್ಟಾಗ ಕೊರೋನಾ ಇರುವ ವಿಚಾರ ಖಚಿತವಾಗಿದೆ.

news18-kannada
Updated:July 15, 2020, 2:57 PM IST
Dhruva Sarja Tests Corona Positive: ಧ್ರುವ ಸರ್ಜಾ, ಹೆಂಡತಿ ಪ್ರೇರಣಾಗೆ ಕೊರೋನಾ ಪಾಸಿಟಿವ್​
ಧ್ರುವ ಹಾಗೂ ಧ್ರುವ ಪತ್ನಿ
  • Share this:
ಕೊರೋನಾ ವೈರಸ್​ ಇಡಿ ವಿಶ್ವವನ್ನು ಕಾಡುತ್ತಿದೆ. ರಾಜಕಾರಣಿಗಳು, ಸಿನಿಮಾ ಮಂದಿ ಸೇರಿ ಎಲ್ಲರಿಗೂ ಕೊರೋನಾ ವೈರಸ್​ ಅಂಟುತ್ತಿದೆ. ಇತ್ತೀಚೆಗಷ್ಟೇ ಬಿಗ್​ ಬಿ ಅಮಿತಾಭ್​ ಬಚ್ಚನ್​ ಕುಟುಂಬಕ್ಕೆ ಕೊರೋನಾ ವಕ್ಕರಿಸಿತ್ತು. ಈಗ ಸ್ಯಾಂಡಲ್​ವುಡ್​ ನಟ ಧ್ರುವ ಸರ್ಜಾ ಕುಟುಂಬಕ್ಕೂ ಕೊರೋನಾ ಕಂಟಕ ಎದುರಾಗಿದೆ.

ಈ ಬಗ್ಗೆ ಖುದ್ದು ಧ್ರುವ ಸರ್ಜಾ ಟ್ವೀಟ್​ ಮಾಡಿದ್ದು, ತಮಗೆ ಕೊರೋನಾ ವೈರಸ್​ ಇರುವುದನ್ನು ಖಚಿತಪಡಿಸಿದ್ದಾರೆ. "ಕೊರೋನಾ ಲಕ್ಷಣಗಳು ಇದ್ದಿದ್ದರಿಂದ ನಾವು ಪರೀಕ್ಷೆಗೆ ಒಳಪಟ್ಟಿದ್ದೆವು. ಈ ವೇಳೆ ಕೊರೋನಾ ಪಾಸಿಟಿವ್​ ಬಂದಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದೇವೆ. ನಾವು ಬೇಗ ಗುಣಮುಖರಾಗುತ್ತೇವೆ ಎನ್ನುವ ನಂಬಿಕೆ ಇದೆ. ನಮ್ಮ ಜೊತೆ ಸಂಪರ್ಕಕ್ಕೆ ಬಂದವರು ಕೊರೋನಾ ಟೆಸ್ಟ್​ ಮಾಡಿಸಿ ಮನೆಯಲ್ಲೇ ಇರಿ," ಎಂದು ಧ್ರುವ ಕೋರಿದ್ದಾರೆ.


ಧ್ರುವ ಸರ್ಜಾ ಇತ್ತೀಚೆಗೆ ಹೆಚ್ಚು ಜನರ ಸಂಪರ್ಕಕ್ಕೆ ಬಂದಿದ್ದರು. ಅದಕ್ಕೆ ಕಾರಣ ಅವರ ಅಣ್ಣ ಚಿರಂಜೀವಿ ಸರ್ಜಾ ಅವರ ಸಾವು. ಚಿರಂಜೀವಿ ಅಂತ್ಯ ಕ್ರಿಯೆ ವೇಳೆ ಸಾವಿರಾರು ಜನರು ಸೇರಿದ್ದರು. ಅಲ್ಲದೆ, ಅವರಿಗೆ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದ್ದಕ್ಕೆ ಆಸ್ಪತ್ರೆಗೂ ದಾಖಲಾಗಿದ್ದರು. ಈ ಅವಧಿಯಲ್ಲಿ ಅವರಿಗೆ ಕೊರೋನಾ ಅಂಟಿದೆ ಎನ್ನಲಾಗುತ್ತಿದೆ. ಇನ್ನು, ಧ್ರುವ ಕುಟುಂಬದವರು ಎಲ್ಲರನ್ನೂ ಕೊರೋನಾ ಟೆಸ್ಟ್​​ಗೆ ಒಳಪಡಿಸಲಾಗುತ್ತಿದೆ ಎನ್ನಲಾಗಿದೆ.

ಚಿರಂಜೀವಿ ಸರ್ಜಾ ಸಾವಿನ ನಂತರ ಧ್ರುವ ಸರ್ಜಾ ತುಂಬಾನೇ ಸೊರಗಿ ಹೋಗಿದ್ದಾರೆ. ಅಲ್ಲದೆ, ಚಿರು ಸಾವು ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ನೋವು ತಂದಿದೆ. ಹೀಗಿರುವಾಗಲೇ ಧ್ರುವಾ ಹಾಗೂ ಪ್ರೇರಣಾಗೆ ಕೊರೋನಾ ವೈರಸ್​ ಅಂಟಿರುವುದು ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ.
Published by: Rajesh Duggumane
First published: July 15, 2020, 2:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading