ರೆಬಲ್ ಸ್ಟಾರ್ ಅಂಬರೀಶ್ (Abhishek Ambareesh) ಅವರ ಪುತ್ರ ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಹೊಸ ಹಲ್ ಚಲ್ ಎಬ್ಬಿಸಿದ್ದಾರೆ. ಬ್ಯಾಡ್ ಮ್ಯಾನರ್ಸ್ ಚಿತ್ರದ ಚಿತ್ರೀಕರಣ ಮುಗಿಸಿರೋ ಅಭಿ ಕೊಂಚ ರಿಲ್ಯಾಕ್ಸ್ ಇದ್ದಂತ ಕಾಣುತ್ತಿದೆ. ಇಲ್ಲಿವರೆಗೂ (Car) ಕಾರ್ನಲ್ಲಿಯೇ ಓಡುತ್ತಿದ್ದ ಅಭಿಷೇಕ್ ಅಂಬರೀಶ್, ಬೆಂಗಳೂರು ಮೆಟ್ರೋ ಟ್ರೇನ್ ನಲ್ಲೂ ಪ್ರಯಾಣ ಮಾಡಿದ್ದಾರೆ. ಸಾಹಸ ಸಿಂಹ (Vishnuvardhan) ವಿಷ್ಣುವರ್ಧನ್ ಅವರ ಗೃಹ ಪ್ರವೇಶಕ್ಕೂ ಇನ್ನೂ ಒಂದು ವಿಶೇಷ ಕೆಲಸವನ್ನ ಕೂಡ ಮಾಡಿದ್ದಾರೆ. ಅಭಿಷೇಕ್ ಅಭಿನಯದ ಕಾಳಿ (Kaali Cinema) ಸಿನಿಮಾ ಕೂಡ ಸೆಟ್ಟೇರುತ್ತಿದೆ. ಈ ಎಲ್ಲ ವಿಷಯಗಳ ಮೂಲಕ ಅಭಿಷೇಕ್ ಅಂಬರೀಶ್ ಈಗ ಹಲ್ ಚಲ್ ಎಬ್ಬಿಸಿದ್ದಾರೆ. ಇದರ ಸುತ್ತ ಒಂದು ಸ್ಟೋರಿ ಇಲ್ಲಿದೆ ಓದಿ.
ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಹೊಸ ಹಲ್ ಚಲ್!
ರೆಬಲ್ ಸ್ಟಾರ್ ಅಂಬರೀಶ್ ಎಲ್ಲರ ಹಾಟ್ ಫೇವರಿಟ್ ನಟರೇ ಆಗಿದ್ದರು. ಇಂಡಸ್ಟ್ರೀಯಲ್ಲಿ ಎಲ್ಲರಿಗೂ ಸ್ನೇಹಿತರಾಗಿದ್ದರು. ಅಂಬರೀಶ್ ಅವರಿಗೆ ವಿರೋಧಿಗಳು ಇದ್ದರು ಅನ್ನೋದೇ ಇಲ್ಲ.
ಅಂತಹ ಅಂಬರೀಶ್ ಪುತ್ರ ಅಭಿಷೇಕ್ ಕೂಡ ಅಪ್ಪನಂತೆ ಫ್ರೆಂಡ್ಲಿ ಆಗಿಯೇ ಇದ್ದಾರೆ. ಅಂಬರೀಶ್ ಪುತ್ರ ಅನ್ನೋ ಅಹಂ ಕೂಡ ಎಲ್ಲೂ ಕಾಣೋದಿಲ್ಲ ಬಿಡಿ. ಅಪ್ಪನಂತೆ ಎಲ್ಲರ ಜೊತೆಗೆ ಫ್ರೆಂಡ್ಲಿಯಾಗಿಯೇ ಅಭಿಷೇಕ್ ಮಾತನಾಡುತ್ತಾರೆ. ಅಪ್ಪನಂತೆ ಬಿಂದಾಸ್ ಆಗಿಯೂ ಇದ್ದಾರೆ.
ಮೆಟ್ರೋ ಟ್ರೈನ್ ನಲ್ಲಿ ಪ್ರಯಾಣ ಮಾಡಿದ ಜೂನಿಯರ್ ರೆಬಲ್
ಅಭಿಷೇಕ್ ಅಂಬರೀಶ್ ಸಾಮಾನ್ಯವಾಗಿಯೇ ಹೆಚ್ಚು ಕಾರ್ನಲ್ಲಿಯೇ ಓಡಾಡುತ್ತಾರೆ. ಬೈಕ್ ಓಡಿಸೋದು ಇದೆ ಅಂದ್ರೆ ತಪ್ಪಿಲ್ಲ ಬಿಡಿ. ಅಂಬರೀಶ್ ಪುತ್ರ ಮೊಟ್ಟ ಮೊದಲ ಬಾರಿಗೆ ಬೆಂಗಳೂರು ಟ್ರೈನ್ನಲ್ಲಿ ಓಡಾಡಿದ್ದಾರೆ. ಆ ಅನುಭವವನ್ನ ಫೋಟೋದಲ್ಲಿ ವೀಡಿಯೋದಲ್ಲೂ ನೋಡಬಹುದು.
ಅಭಿಷೇಕ್ ಅಂಬರೀಶ್ ಬೆಂಗಳೂರಿನಿ ಸಿಲ್ಕ್ ಇನ್ಸ್ಟಿಟ್ಯೂಟ್ನಿಂದ ಸಾರಕಿ ಜೆಪಿನಗರದ ವರೆಗೂ ಪ್ರಯಾಣ ಬೆಳೆಸಿದ್ದಾರೆ. ವಿಶೇಷವಾಗಿ ಅಭಿಷೇಕ್ ಅಂಬರೀಶ್ ಮೆಟ್ರೋ ಸ್ಟೇಷನ್ನಲ್ಲಿ ಆರಾಮಾಗಿಯೇ ಓಡಾಡಿಕೊಂಡಿದ್ದಾರೆ. ರಿಲ್ಯಾಕ್ಸ್ಡ್ ಆಗಿಯೇ ಮೆಟ್ರೋ ಪ್ರಯಾಣ ಬೆಳೆಸಿದ್ದಾರೆ.
ಅಭಿಷೇಕ್ಗೆ ಮದಗಜ ಡೈರೆಕ್ಟರ್ ಮಹೇಶ್ ಸಾಥ್
ಅಭಿಷೇಕ್ ಅಂಬರೀಶ್ ಮೆಟ್ರೋ ಪ್ರಯಾಣದಲ್ಲಿ ಅಯೋಗ್ಯ, ಮದಗಜ ಚಿತ್ರದ ಡೈರೆಕ್ಟರ್ ಮಹೇಶ್ ಕುಮಾರ್ ಕೂಡ ಜೊತೆಯಾಗಿದ್ದಾರೆ. ಇಬ್ಬರೂ ಬಿಂದಾಸ್ ಆಗಿಯೇ ಟ್ರೈನ್ ಪ್ರಯಾಣ ಬೆಳೆಸಿ ಖುಷಿ ಪಟ್ಟಿದ್ದಾರೆ. ಈ ವಿಶೇಷ ಅನುಭವದ ಕ್ಷಣವನ್ನ ವೀಡಿಯೋ ಮತ್ತು ಫೋಟೋದಲ್ಲೂ ಕ್ಯಾಪ್ಚರ್ ಮಾಡಲಾಗಿದೆ.
ದಾದನ ಮನೆಗೆ ಅಂಬಿ ಕಾರ್ ತೆಗೆದುಕೊಂಡು ಬಂದ ಅಭಿಷೇಕ್
ರೆಬಲ್ ಸ್ಟಾರ್ ಅಂಬರೀಶ್ ಮತ್ತು ಸಾಹಸ ಸಿಂಹ ವಿಷ್ಣುವರ್ಧನ್ ಕುಚ್ಚಿಕ್ಕೂ ಗೆಳೆಯರು ಅನ್ನೋದು ಎಲ್ಲರಿಗೂ ಗೊತ್ತಿದೆ. ಇವರ ಫ್ಯಾಮಿಲಿ ಕೂಡ ಆತ್ಮೀಯರಾಗಿದ್ದರು ಅನ್ನೋದು ತಿಳಿದಿದೆ.
ಅದರಂತೆ ವಿಷ್ಣುವರ್ಧನ್ ಅವರ ಮನೆಯ ಗೃಹಪ್ರವೇಶ ಕೂಡ ಮೊನ್ನೆ 26 ರಂದು ಆಗಿದೆ. ಈ ಒಂದು ಕಾರ್ಯಕ್ರಮಕ್ಕೆ ಇಂಡಸ್ಟ್ರೀಯ ಎಲ್ಲರೂ ಬಂದು ಹೋಗಿದ್ದಾರೆ.
ಅಂಬಿ ಪುತ್ರ ಅಭಿಷೇಕ್ ಅಂಬರೀಶ್, ತಂದೆ ಅಂಬರೀಶ್ ಬಳಸುತ್ತಿದ್ದ ಕಾರನ್ನೆ ವಿಷ್ಣು ಮನೆಗೆ ತೆಗೆದುಕೊಂಡು ಬಂದಿದ್ದರು. ತಾವೇ ಸ್ವತಃ ಅದನ್ನ ಚಲಾಯಿಸಿಕೊಂಡು ಬಂದಿರೋದು ವಿಶೇಷ ಅನಿಸಿತು.
ಇದನ್ನೂ ಓದಿ: Abhishek Ambareesh: ಕಾಳಿ ಸಿನಿಮಾ ಮುಹೂರ್ತ ಫಿಕ್ಸ್! ಅಭಿಷೇಕ್ ನಿಶ್ಚಿತಾರ್ಥದ ಬಳಿಕ ಶೂಟಿಂಗ್ ಸ್ಟಾರ್ಟ್
ಅಭಿಷೇಕ್ ಅಂಬರೀಶ್ ಸದ್ಯ ಬ್ಯಾಡ್ ಮ್ಯಾನರ್ಸ್ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಸಿನಿಮಾದ ಕೆಲಸ ಮುಗಿಯುತ್ತಿದ್ದಂತೇನೆ, ಈ ಹಿಂದೇನೆ ಒಪ್ಪಿಕೊಂಡ ಕಾಳಿ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೂ ಸಜ್ಜಾಗುತ್ತಿದ್ದಾರೆ. ಅಭಿಷೇಕ್ ಇದೇ 11 ರಂದು ನಿಶ್ಚಿತಾರ್ಥ ಕೂಡ ಮಾಡಿಕೊಳ್ಳುತ್ತಿದ್ದಾರೆ ಅನ್ನೋ ಸುದ್ದಿನೂ ಭಾರೀ ಹರಿದಾಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ