ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ (Abhishek Ambareesh) ಅಭಿನಯದ ಮೂರನೇ ಸಿನಿಮಾದ ಮುಹೂರ್ತದ ಡೇಟ್ ಫಿಕ್ಸ್ ಆಗಿದೆ. ಮುಂದಿನ ತಿಂಗಳು ಈ ಚಿತ್ರದ ಚಿತ್ರೀಕರಣ ಕೂಡ ಆರಂಭಗೊಳ್ಳಲಿದೆ. ವಿಶೇಷವೆಂದ್ರೆ ಈ ಚಿತ್ರದ ಮುಹೂರ್ತ ಬೆಂಗಳೂರಿನ ಬಂಡಿ (Bandi Mahakalamma Temple) ಮಹಾಕಾಳಮ್ಮ ದೇವಸ್ಥಾನದಲ್ಲಿಯೇ ಆಗೋ ಸಾಧ್ಯತೆ ಇದೆ. ಸಿನಿಮಾದ ಹೆಸರು "ಕಾಳಿ" ಅಂತಲೂ ಇದೆ. ಅಲ್ಲಿಗೆ ಸಿನಿಮಾದ ಮೇಲೆ ಮಹಾಕಾಳಮ್ಮ ದೇವಿಯ ಆಶೀರ್ವಾದ ಮೊದಲೇ ಇದ್ದಂತಿದೆ. ವಿಶೇಷವಾಗಿ ಈ ದೇವಸ್ಥಾನದಲ್ಲಿ ಪೂಜೆ ಆಗಿರೋ ಅಷ್ಟೂ ಸಿನಿಮಾಗಳು (Cinema Success) ಯಶಸ್ಸು ಕಂಡಿವೆ. ಅದರಂತೆ ಇದೇ ದೇವಸ್ಥಾನದಲ್ಲಿ ಅಭಿಷೇಕ್ ಅಂಬರೀಶ್ ಅಭಿನಯದ ಕಾಳಿ (Kali Film) ಚಿತ್ರದ ಮುಹೂರ್ತ ಮಾಡೋ ಸಾಧ್ಯತೆ ಕೂಡ ಇದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಅಭಿ ಅಭಿನಯದ "ಕಾಳಿ" ಚಿತ್ರದ ಶೂಟಿಂಗ್ ಶೀಘ್ರದಲ್ಲಿಯೇ ಶುರು
ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಸಿನಿಮಾ ಜರ್ನಿ ಸ್ವಿಂಗ್ ನಲ್ಲಿ ಸ್ಟಾರ್ ಆಗಿದೆ. ಒಂದರ ಹಿಂದೆ ಒಂದು ಸಿನಿಮಾ ಅನೌನ್ಸ್ ಆಗಿವೆ. ಈಗಾಗಲೇ ಒಪ್ಪಿಕೊಂಡ ಸಿನಿಮಾಗಳಲ್ಲಿ ಬ್ಯಾಡ್ ಮ್ಯಾನರ್ಸ್ ಚಿತ್ರದ ಚಿತ್ರೀಕರಣ ಆಲ್ ಮೋಸ್ಟ್ ಕಂಪ್ಲಿಟ್ ಆಗಿದೆ.
ಬ್ಯಾಡ್ ಮ್ಯಾನರ್ಸ್ ಕಂಪ್ಲೀಟ್ ಆಗಿದ್ದೇ ತಡ, ಕಾಳಿ ಸಿನಿಮಾದ ಕೆಲಸವನ್ನ ಶುರು ಮಾಡೋಕೆ ಡೈರೆಕ್ಟರ್ ಕೃಷ್ಣ ಪ್ಲಾನ್ ಮಾಡಿದ್ದಾರೆ. ಅದರಂತೆ ಕೊನೆಯ ಹಂತದಲ್ಲಿರೋ ಬ್ಯಾಡ್ ಮ್ಯಾನರ್ಸ್ ಚಿತ್ರದ ಕೆಲಸ ಮುಗಿದೆ. ಅದಕ್ಕೇನೆ ಈಗ ಕಾಳಿ ಸಿನಿಮಾ ಟೀಮ್ ಮುಹೂರ್ತ ಮಾಡೋಕೆ ಮುಂದಾಗಿದೆ.
ಅಭಿಷೇಕ್ ಅಂಬರೀಶ್ "ಕಾಳಿ" ಚಿತ್ರದ ಮುಹೂರ್ತ ಫಿಕ್ಸ್
ಅಭಿ ಅಭಿನಯದ ಕಾಳಿ ಸಿನಿಮಾಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ತಿಂಗಳ ನವೆಂಬರ್-28 ರಂದು ಚಿತ್ರಕ್ಕೆ ಮುಹೂರ್ತ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಸಿದ್ದತೆಗಳು ಈಗ ಶುರು ಆಗಿವೆ.
ಅಭಿಷೇಕ್ ಅಂಬರೀಶ್ ಈ ಚಿತ್ರದಲ್ಲಿ ವಿಶೇಷವಾಗಿಯೇ ಕಾಣಿಸುತ್ತಿದ್ದಾರೆ. ಕಾಳಿ ಪೋಸ್ಟರ್ ನೋಡಿದ್ರೆ ಸಾಕು, ಸಿನಿಮಾದ ಅಭಿ ಕ್ಯಾರೆಕ್ಟರ್ ನ ಗತ್ತು ತಿಳಿದು ಬಿಡುತ್ತದೆ.
ಅಭಿಷೇಕ್ ಜನ್ಮ ದಿನಕ್ಕೆ ಡೈರೆಕ್ಟರ್ ಕೃಷ್ಣ ಪೋಸ್ಟರ್ ಮಾತ್ರ ರಿಲೀಸ್ ಮಾಡಿದ್ದರು. ಅಷ್ಟು ಬಿಟ್ರೆ ಚಿತ್ರ ತಂಡ ಇದೀಗ ಶೂಟಿಂಗ್ ಪ್ಲಾನ್ ಮಾಡಿಕೊಂಡಿದೆ. ಮುಹೂರ್ತ ಮುಗಿದ ಬಳಿಕ ಶೂಟಿಂಗ್ ಹೋಗೋಕೆ ಡೈರೆಕ್ಟರ್ ಕೃಷ್ಣ ಪ್ಲಾನ್ ಮಾಡಿಕೊಂಡಿದ್ದಾರೆ.
ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥದ ಬಳಿಕ "ಕಾಳಿ" ಶೂಟಿಂಗ್ ಶುರು
ಡೈರೆಕ್ಟರ್ ಕೃಷ್ಣ ತಮ್ಮ ಈ ಚಿತ್ರದ ಚಿತ್ರೀಕರಣದ ಪ್ಲಾನಿಂಗ್ ಮಾಡಿಕೊಳ್ಳುತ್ತಿದ್ದಾರೆ. ನಾಯಕ ನಟ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥದ ಬಳಿಕವೇ ಕಾಳಿಸಿ ಸಿನಿಮಾ ಶೂಟಿಂಗ್ continue ನಡೆಯುತ್ತದೆ ಎಂದು ನ್ಯೂಸ್-18 ಕನ್ನಡದ ಡಿಜಿಟಲ್ಗೆ ತಿಳಿಸಿದ್ದಾರೆ.
ಚಿತ್ರದ ಮುಹೂರ್ತ ಬೆಂಗಳೂರಿನ ಬಂಡಿ ಮಹಾಕಾಳಮ್ಮ ದೇವಸ್ಥಾನ ಇಲ್ಲವೇ ಮೈಸೂರಿನಲ್ಲಿ ಮಾಡುವ ಪ್ಲಾನ್ ಕೂಡ ಇದೆ. ಈ ಹಿನ್ನೆಲೆಯಲ್ಲಿಯೇ ಡೈರೆಕ್ಟರ್ ಕೃಷ್ಣ ಪಕ್ಕಾ ಪ್ಲಾನ್ ಕೂಡ ಮಾಡಿಕೊಳ್ಳುತ್ತಿದ್ದಾರೆ. ಮೈಸೂರು ಇಲ್ಲವೇ ಬೆಂಗಳೂರಿನ ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿ ಸಿನಿಮಾದ ಮುಹೂರ್ತ ಮಾಡಲಾಗುವುದು ಅಂತಲೂ ಕೃಷ್ಣ ಹೇಳಿದರು.
ಸಿನಿಮಾದವರಿಗೆ ಸಕ್ಸಸ್ ಕೊಡ್ತಾಳೆ ಬಂಡಿ ಮಹಾಕಾಳಮ್ಮ
ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿ ಮುಹೂರ್ತ ಆದ್ರೆ ಸಿನಿಮಾ ಸಕ್ಸಸ್ ಆಗುತ್ತವೆ. ಈ ಒಂದು ನಂಬಿಕೆ ಕನ್ನಡ ಇಂಡಸ್ಟ್ರೀಯಲ್ಲಿ ಇದ್ದೇ ಇದೆ. ಈ ಹಿನ್ನೆಲೆಯಲ್ಲಿಯೇ ಅನೇಕ ಸಿನಿಮಾಗಳ ಮುಹೂರ್ತ ಇಲ್ಲಿಯೇ ಆಗುತ್ತದೆ.
ಇದನ್ನೂ ಓದಿ: Kannada Pan India Cinema: ಕನ್ನಡದಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ; ಡೈರೆಕ್ಟರ್ ಯಾರು ಗೊತ್ತಾ? ?
ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿ ಟಗರು ಚಿತ್ರಕ್ಕೆ ಮುಹೂರ್ತ ಆಗಿತ್ತು. ಹೆಡ್ ಬುಷ್ ಚಿತ್ರದ ಸಕ್ಸಸ್ ಯಾತ್ರೆ ಕೂಡ ಇಲ್ಲಿಂದಲೇ ಶುರು ಆಗಿತ್ತು. ಕನ್ನಡ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಸಿನಿಮಾಗಳ ಮುಹೂರ್ತ ಬಹುತೇಕ ಇಲ್ಲಿಯೇ ಆಗುತ್ತದೆ.
ಒಟ್ಟಾರೆ, ಕನ್ನಡ ಇಂಡಸ್ಟ್ರಿ ಮೇಲೆ ಬಂಡಿ ಮಹಾಕಾಳಮ್ಮನ ಆಶೀರ್ವಾದ ಇದ್ದೇ ಇದೆ ಅಂತಲೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ