• Home
  • »
  • News
  • »
  • entertainment
  • »
  • Bad Manners Release: ಬ್ಯಾಡ್​​ ಮ್ಯಾನರ್ಸ್ ರಿಲೀಸ್ ಯಾವಾಗ? 2023 ರ ಫೆಬ್ರವರಿ 16ಕ್ಕೆ ರಿಲೀಸ್ ಗ್ಯಾರಂಟಿನಾ?

Bad Manners Release: ಬ್ಯಾಡ್​​ ಮ್ಯಾನರ್ಸ್ ರಿಲೀಸ್ ಯಾವಾಗ? 2023 ರ ಫೆಬ್ರವರಿ 16ಕ್ಕೆ ರಿಲೀಸ್ ಗ್ಯಾರಂಟಿನಾ?

2023 ರ ಫೆಬ್ರವರಿ-16ಕ್ಕೆ ರಿಲೀಸ್ ಗ್ಯಾರಂಟಿನಾ?

2023 ರ ಫೆಬ್ರವರಿ-16ಕ್ಕೆ ರಿಲೀಸ್ ಗ್ಯಾರಂಟಿನಾ?

ಬ್ಯಾಡ್​ ಮ್ಯಾನರ್ಸ್ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದೆ. ಮುಂದಿನ ವರ್ಷ ಫೆಬ್ರವರಿ-16 ರಂದು ಬ್ಯಾಡ್​​ ಮ್ಯಾನರ್ಸ್ ರಿಲೀಸ್ ಆಗುತ್ತಿದೆ. ಬಲ್ಲ ಮೂಲಗಳಿಂದ ಈ ಮಾಹಿತಿ ಈಗ ನ್ಯೂಸ್​-18 ಕನ್ನಡಕ್ಕೆ ಈಗ ಸಿಕ್ಕಿದೆ.

  • News18 Kannada
  • Last Updated :
  • Bangalore [Bangalore], India
  • Share this:

 ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ (Abhishek Ambareesh) ಅಂಬರೀಶ್ ಅಭಿನಯದ ಬ್ಯಾಡ್​ (Bad Manners) ಮ್ಯಾನರ್ಸ್ ತನ್ನದೇ ರೀತಿಯಲ್ಲಿ ಸದ್ದು ಮಾಡುತ್ತಿದೆ. ದುನಿಯಾ (Duniya Suri) ಸೂರಿ ನಿರ್ದೇಶನ ಚಿತ್ರಕ್ಕೆ ಇದೆ. ಈ ಕಾರಣಕ್ಕೆ ಈ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಕೂಡ ಇದೆ. ಚಿತ್ರದ ಟೀಸರ್​​ (Cinema Teaser) ಕೂಡ ಈಗಾಗಲೇ ಅಭಿಷೇಕ್ ಖದರ್ ಅನ್ನ ತೋರಿದೆ. ಅಭಿಷೇಕ್ ಅಂಬರೀಶ್ ಚಿತ್ರ ಜೀವನದ ಈ ಎರಡನೇ ಸಿನಿಮಾದಲ್ಲಿ ಅಭಿಷೇಕ್ ಅಂಬರೀಶ್ ಕಂಪ್ಲೀಟ್ ಬದಲಾಗಿದ್ದಾರೆ. ಅಮರ್ ಚಿತ್ರ ವೀಕ್ಷಿಸಿದವ್ರಿಗೆ ಅಭಿ ಇಲ್ಲಿ ಬೇರೆ ಖದರ್ ತೋರಲಿದ್ದಾರೆ.  ಬ್ಯಾಡ್​ ಮ್ಯಾನರ್ಸ್ ಮೂಲಕ ಪೊಲೀಸ್ ಆಫೀಸರ್ ಆಗಿ ಮಿಂಚುತ್ತಿರೋ ಅಭಿ ಅಭಿನಯದ ಈ ಚಿತ್ರದ ಬಗ್ಗೆ ಈಗಲೇ ಭಾರೀ ಕುತೂಹಲ ಹುಟ್ಟಿಕೊಂಡಿದೆ.


ಬ್ಯಾಡ್​ ಮ್ಯಾನರ್ಸ್ ರಿಲೀಸ್ ಬಗ್ಗೆ ಹೆಚ್ಚಿದ ಕುತೂಹಲ
ಬ್ಯಾಡ್​ ಮ್ಯಾನರ್ಸ್ ಒಂದು ಪಕ್ಕಾ ಮಾಸ್ ಸಿನಿಮಾ ಅನಿಸುತ್ತಿದೆ. ದುನಿಯಾ ಸೂರಿ ಅವರ ಸಿನಿಮಾದಲ್ಲಿ ಏನೋ ಹೊಸದನ್ನೆ ಹೇಳಿರುತ್ತಾರೆ. ಕ್ರೈಮ್ ಟಚ್ ಇದಕ್ಕೆ ಇರೋದು ಗ್ಯಾರಂಟಿ. ಅದು ಸೂರಿ ಅವರ ಸ್ಟೈಲ್ ಕೂಡ ಹೌದು. ಈ ಹಿಂದಿನ ಟಗರು ಅದಕ್ಕೆ ದಿ ಬೆಸ್ಟ್ ಎಕ್ಸಾಂಪಲ್.


ಬ್ಯಾಡ್​​ ಮ್ಯಾನರ್ಸ್ ಬಗ್ಗೆ ಒಂದು ನಿರೀಕ್ಷೆ ಇದೆ. ಸೂರಿ ಸಿನಿಮಾದಲ್ಲಿ ಅಭಿನಯಿಸಿದವ್ರು ಗ್ಯಾರಂಟಿ ಹಿಟ್ ಆಗುತ್ತಾರೆ. ಡಾಲಿ ಧನಂಜಯ್ ಅದಕ್ಕೆ ಒಳ್ಳೆ ಉದಾಹರಣೆ ಅಂದ್ರೆ ತಪ್ಪೇ ಇಲ್ಲ. ಧನಂಜಯ್ ಈಗ ಯಾವ ಮಟ್ಟಿಗೆ ಇದ್ದಾರೆ ಅನ್ನೋದು ಅಷ್ಟೇ ಸತ್ಯ.


Kannada Actor Abhishek Ambareesh Acted Bad Manners Film is Going to Release on Feb16th S 
ಬ್ಯಾಡ್​ ಮ್ಯಾನರ್ಸ್ ಕೆಲಸ ಎಲ್ಲ ಮುಗೀತಾ?


ಬ್ಯಾಡ್​ ಮ್ಯಾನರ್ಸ್ ಕೆಲಸ ಎಲ್ಲ ಮುಗೀತಾ?
ದುನಿಯಾ ಸೂರಿ ತಮ್ಮ ಚಿತ್ರಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿರುತ್ತಾರೆ. ಗಟ್ಟಿಕಥೆಯನ್ನ ಇಟ್ಟುಕೊಂಡೇ ಸ್ಕ್ರೀನ್​​ ಪ್ಲೇ ಮತ್ತು ಡೈಲಾಗ್ ಅಂತಲೇ ಕುಳಿತುಕೊಳ್ಳುತ್ತಾರೆ. ಬ್ಯಾಡ್​​ ಮ್ಯಾನರ್ಸ್ ಚಿತ್ರದಲ್ಲೂ ಅದು ಎದ್ದು ಕಾಣುತ್ತಿದೆ. ಅಮರ್ ಚಿತ್ರದ ನಾಯಕನನ್ನ ರಗಢ್ ಪೊಲೀಸ್​ ಆಫೀಸರ್ ಮಾಡಿ ಬೆಳ್ಳಿ ತೆರೆಗೆ ತರುತ್ತಿದ್ದಾರೆ.




ಬ್ಯಾಡ್​ ಮ್ಯಾನರ್ಸ್ ಸಿನಿಮಾದ ಬಹುತೇಕ ಕೆಲಸ ಪೂರ್ಣಗೊಂಡಿದೆ. ಹಾಡಿನ ಚಿತ್ರೀಕರಣ ಈಗ ನಡೀತಾ ಇದೆ. ಸಿನಿಮಾದ ಚಿತ್ರೀಕರಣ ಹೆಚ್ಚು ಕಡಿಮೆ ಇದೇ ತಿಂಗಳಲ್ಲಿಯೇ ಪೂರ್ಣಗೊಳ್ಳುತ್ತಿದೆ. ನವೆಂಬರ್​-19 ರಂದು ಚಿತ್ರೀಕರಣ ಕಟ್ಟ ಕಡೆಯ ಕೆಲಸ ಮುಗಿಸಿ ಕುಂಬಳ ಕಾಯಿ ಕೂಡ ಒಡೆಯಲಾಗುತ್ತಿದೆ.


Kannada Actor Abhishek Ambareesh Acted Bad Manners Film is Going to Release on Feb16th S 
ಬ್ಯಾಡ್​ ಮ್ಯಾನರ್ಸ್ ರಿಲೀಸ್ ಬಗ್ಗೆ ಹೆಚ್ಚಿದ ಕುತೂಹಲ


ಬ್ಯಾಡ್​ ಮ್ಯಾನರ್ಸ್ ಫೆಬ್ರವರಿ-16ಕ್ಕೆ ರಿಲೀಸ್
ಬ್ಯಾಡ್​ ಮ್ಯಾನರ್ಸ್ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದೆ. ಮುಂದಿನ ವರ್ಷ ಫೆಬ್ರವರಿ-16 ರಂದು ಬ್ಯಾಡ್​​ ಮ್ಯಾನರ್ಸ್ ರಿಲೀಸ್ ಆಗುತ್ತಿದೆ. ಬಲ್ಲ ಮೂಲಗಳಿಂದ ಈ ಮಾಹಿತಿ ಈಗ ನ್ಯೂಸ್​-18 ಕನ್ನಡಕ್ಕೆ ಈಗ ಸಿಕ್ಕಿದೆ.


ಬ್ಯಾಡ್​ ಮ್ಯಾನರ್ಸ್ ಸಿನಿಮಾ ಮೂಲಕ ಅಭಿಷೇಕ್ ಅಂಬರೀಶ್ ಪ್ರೇಕ್ಷಕರಲ್ಲಿ ಹೊಸ ಭರಸೆ ಮೂಡಿಸಿದ್ದಾರೆ. ಇಡೀ ಸಿನಿಮಾ ಹೊರ ಬಂದ್ಮೇಲೆ ಬೇರೆ ಲೆವಲ್​ಗೆ ಹೋಗುವ ಚಾನ್ಸಸ್ ಜಾಸ್ತಿನೇ ಇದೆ. ಸಿನಿಮಾದ ಕಂಟೆಂಟ್​ ಕೂಡ ಸ್ಟ್ರಾಂಗ್​ ಆಗಿಯೇ ಇರೋವಂತೆ ಕಾಣುತ್ತಿದೆ.


ಇದನ್ನೂ ಓದಿ: Dooradarshana Film: ದೂರದರ್ಶನ ಇದು ಚಂದನವನದ ಪ್ರಸ್ತುತಿ! ಇದು ಟಿವಿ ಬಂದ ಕಥೆ!


ಬ್ಯಾಡ್​​ ಮ್ಯಾನರ್ಸ್ ಚಿತ್ರದ ಮೂಲಕ ಅಭಿಷೇಕ್ ಅಂಬರೀಶ್ ಜನರನ್ನ ರಂಜಿಸೋಕೆ ಫೆಬ್ರವರಿ-16ಕ್ಕೆ ಬರ್ತಿದ್ದಾರೆ. ಇನ್ನು ಸುರೇಂದ್ರ ನಾಥ್ ಹಾಗೂ ಅಮ್ರಿ ಈ ಚಿತ್ರಕ್ಕೆ ಕಥೆ ಮಾಡಿಕೊಟ್ಟಿದ್ದಾರೆ. ಸೂರಿ ಹಾಗೂ ಅಮ್ರಿ ಸೇರಿ ಬ್ಯಾಡ್​​ ಮ್ಯಾನರ್ಸ್ ಸಿನಿಮಾದ ಚಿತ್ರಕಥೆ ಮಾಡಿದ್ದಾರೆ.


ಟಗರು ಖ್ಯಾತಿಯ ಸಂಗೀತ ನಿರ್ದೇಶಕ ಚರಣ್ ರಾಜ್ ಈ ಚಿತ್ರದಲ್ಲೂ ಸೂರಿ ಜೊತೆಗೆ ಕೆಲಸ ಮಾಡಿದ್ದಾರೆ. ಧನಪಾಲ್ ಆ್ಯಂಡ್ ಟೀಮ್ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಿದೆ. ಇನ್ನುಳಿದಂತೆ ಅಧಿಕೃತವಾಗಿ ರಿಲೀಸ್ ಡೇಟ್ ಅನ್ನ ಸಿನಿಮಾ ತಂಡ ಕೂಡ ಶೀಘ್ರದಲ್ಲಿಯೇ ಹೇಳಲಿದೆ.  ವೇಟ್ ಮಾಡಿ.

First published: