• Home
  • »
  • News
  • »
  • entertainment
  • »
  • Shruthi-Abhijit: 30 ವರ್ಷಗಳ ಬಳಿಕ ಹಿಟ್​ ಜೋಡಿ ತೆರೆ ಮೇಲೆ; ಮೋಡಿ ಮಾಡ್ತಾರಾ ಶೃತಿ-ಅಭಿಜಿತ್

Shruthi-Abhijit: 30 ವರ್ಷಗಳ ಬಳಿಕ ಹಿಟ್​ ಜೋಡಿ ತೆರೆ ಮೇಲೆ; ಮೋಡಿ ಮಾಡ್ತಾರಾ ಶೃತಿ-ಅಭಿಜಿತ್

ಶೃತಿ ಸಾರಾ-ಅಭಿಜಿತ್ ಖಾಸಿಮ್ ಪಾತ್ರದಲ್ಲಿ ಅಭಿನಯ

ಶೃತಿ ಸಾರಾ-ಅಭಿಜಿತ್ ಖಾಸಿಮ್ ಪಾತ್ರದಲ್ಲಿ ಅಭಿನಯ

ನಟ ಅಭಿಜಿತ್ ಎಂದೂ ನಾನ್​ ವೆಜ್ ಸೇವಿಸಿದವ್ರೇ ಅಲ್ಲ. ಮೊಟ್ಟೆ ಕೂಡ ಸೇವಿಸಿಲ್ಲ ಅನ್ನೋದೇ ವಿಶೇಷ. ಈ ವಿಶೇಷ ನಾಯಕ ನಟ ಈ ಚಿತ್ರದಲ್ಲಿ ಮಟನ್ ಶಾಪ್ ಮಾಲೀಕ ಆಗಿದ್ದಾರೆ. ಇದನ್ನ ಅಷ್ಟೇ ವಿಶೇಷವಾಗಿಯೇ ಹೇಳು ಅಭಿಜಿತ್ ತುಂಬಾ ಖುಷಿಯಿಂದಲೇ ಈ ಪಾತ್ರ ಮಾಡ್ತಿರೋದಾಗಿಯೂ ತಿಳಿಸುತ್ತಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದಲ್ಲಿ ಅನೇಕ ಹಿಟ್ (Hit Pair) ಪೇರ್ ಇದ್ದಾರೆ. ಇವರ ಸಿನಿಮಾಗಳು ಬಂದ್ರೆ ಜನ ಮುಗಿ ಬಿದ್ದು ನೋಡ್ತಿದ್ದರು. ಈಗ ಕಾಲ ಬದಲಾಗಿದೆ. ಮೇಕಿಂಗ್ (Cinema Making) ಸಿನಿಮಾಗಳ ಅಬ್ಬರವೇ ಹೆಚ್ಚು. ಇದರ ಮಧ್ಯೆ ಕಂಟೆಂಟ್ (Content) ಸಿನಿಮಾಗಳು ಕನ್ನಡಿಗರನ್ನ ಸೆಳೆಯುತ್ತಿವೆ. ಅದೇ ರೀತಿ ಈ ಹಿಂದೆ ಫ್ಯಾಮಿಲಿ (Family Cinema) ಸಿನಿಮಾಗಳು ಹೆಚ್ಚು ಜನರನ್ನ ಸೆಳೆಯುತ್ತಿದ್ದವು. ಆಗಲೇ ನಟಿ ಶೃತಿ ಅವರ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದ್ದವು. ನಾಯಕ ನಟ ಅಭಿಜಿತ್ ಚಿತ್ರಗಳೂ ಸಖತ್ ಆಗಿಯೇ ಓಡಿದ್ದು ಇದೆ. ಈ ಕಲಾವಿದರು ಸುಮಾರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಕನ್ನಡಿಗರ ಮನಸನ್ನೂ ಗೆದ್ದಿದ್ದಾರೆ. ಶೃತಿ ಹಾಗೂ ಅಭಿಜಿತ್ ಹೀರೋ-ಹೀರೋಯಿನ್ ಆಗಿಯೇ ಕನ್ನಡಿಗರ ಹೃದಯ ಕದ್ದಿದ್ದಾರೆ.


ಆದರೆ ಈಗ ಇದೇ ಜೋಡಿ 30 ವರ್ಷದ ಬಳಿಕ ಮತ್ತೆ ಜೋಡಿಯಾಗಿದೆ. ಹಾಗೆ ಜೋಡಿಯಾದ ಸಿನಿಮಾದ ಹೆಸರು ವಿಶೇಷವಾಗಿಯೆ ಇದೆ.


ನ್ಯೂಸ್-18 ಕನ್ನಡ ಡಿಜಿಟಲ್​ಗೆ ಈ ಸಿನಿಮಾ ಬಗ್ಗೆ ಸ್ವತಃ ನಟ ಅಭಿಜಿತ್ ಮಾತನಾಡಿದ್ದಾರೆ. ತಮ್ಮ ಮತ್ತು ಶೃತಿ ಅವರ ಪಾತ್ರದ ಒಂದಷ್ಟು ವಿಶೇಷ ವಿಷಯವನ್ನೂ ರಿವೀಲ್ ಮಾಡಿದ್ದಾರೆ.


ಸುಮಾರು 30 ವರ್ಷದ ಬಳಿಕ ತೆರೆ ಹಂಚಿಕೊಂಡ ಶೃತಿ-ಅಭಿಜಿತ್
ಶೃತಿ ಮತ್ತು ಅಭಿಜಿತ್ ಕನ್ನಡ ಚಿತ್ರರಂಗ ಕಂಡ ಅದ್ಭುತ ಪೇರ್ ಗಳಲ್ಲಿ ಒಂದಾಗಿದೆ. ಈ ಹಿಂದೆ ಅನೇಕ ಸಿನಿಮಾಗಳಲ್ಲಿ ತೆರೆ ಹಂಚಿಕೊಂಡದ್ದು ಇದೆ. ಈ ಜೋಡಿ ಈಗ ಮತ್ತೆ ಒಟ್ಟಿಗೆ ಅಭಿನಯಿಸುತ್ತಿದೆ. ಹೌದು, ಕೊನೆಯದಾಗಿ ಸ್ವತಃ ಅಭಿಜಿತ್ ಹೇಳುವಂತೆ, ಶೃತಿ ಮತ್ತು ಅಭಿಜಿತ್ ನಟಿಸಿದ ಸಿನಿಮಾ, ಸತ್ಯ ಜ್ವಾಲೆ ಚಿತ್ರವೇ ಆಗಿದೆ.


ಈ ಚಿತ್ರದ ಬಳಿಕ ಶೃತಿ ಮತ್ತು ಅಭಿಜಿತ್ ಅಭಿನಯಿಸಿರಲಿಲ್ಲ. ಆದರೆ ಈಗ ಈ ಜೋಡಿ ಮತ್ತೆ ಒಟ್ಟಿಗೆ ಅಭಿನಯಿಸೋಕೆ ಅಟ್ಲಿ ಹೆಸರಿನ ಸಿನಿಮಾ ಸಪೊರ್ಟ್ ಮಾಡಿದೆ. ಹೊಸಬರ ಮಧ್ಯೆ ಈ ಅನುಭವಿ ಕಲಾವಿದರು ಒಟ್ಟಿಗೆ ನಟಿಸಿದ್ದು, ಮತ್ತೊಮ್ಮೆ ಕನ್ನಡಿಗರನ್ನ ರಂಜಿಸೋಕೆ ಬರ್ತಿದ್ದಾರೆ.


Kannada Actor Abhijith Playing Muslim Charector in Attli Film
ಮುಸ್ಲಿಂ ಫ್ಯಾಮಿಲಿ ಗಂಡ-ಹೆಂಡತಿ ಪಾತ್ರದಲ್ಲಿ ಅಭಿನಯ


ಮುಸ್ಲಿಂ ಫ್ಯಾಮಿಲಿ ಗಂಡ-ಹೆಂಡತಿ ಪಾತ್ರದಲ್ಲಿ ಅಭಿನಯ
ನಟ ಅಭಿಜಿತ್ ಫಸ್ಟ್ ಟೈಮ್ ಮುಸ್ಲಿಂ ಪಾತ್ರ ಮಾಡಿದ್ದಾರೆ. ಈ ಹಿಂದಿನ ಯಾವುದೇ ಚಿತ್ರದಲ್ಲೂ ಈ ರೀತಿಯ ಪಾತ್ರವನ್ನ ಮಾಡಿಯೆ ಇಲ್ಲ ಅನ್ನೋದನ್ನ ಹೇಳೋಕೆ ಮರೆಯಲಿಲ್ಲ ನಟ ಅಭಿಜಿತ್, ಯಾಕೆಂದ್ರೆ ಇದು ಇವರಿಗೆ ಸಿನಿ ಜರ್ನಿಯ ವಿಶೇಷ ಪಾತ್ರವೇ ಆಗಿದೆ.


ಶೃತಿ ಸಾರಾ-ಅಭಿಜಿತ್ ಖಾಸಿಮ್ ಪಾತ್ರದಲ್ಲಿ ಅಭಿನಯ
ಹೌದು, ಶೃತಿ ಅವರು ನಿಭಾಯಿಸಿರೋ ಪಾತ್ರದ ಹೆಸರು ಸಾರಾ ಅಂತಲೇ ಇದೆ. ಇವರ ಜೊತೆಗೆ ಅಭಿನಯಸ್ತಿರೋ ನಟ ಅಭಿಜಿತ್ ಇಲ್ಲಿ ಖಾಸಿಮ್ ಹೆಸರಿನ ಪಾತ್ರವನ್ನೆ ಮಾಡುತ್ತಿದ್ದಾರೆ. ಇವರ ಜೋಡಿಯ ಚಿತ್ರೀಕರಣ ಈಗಾಗಲೇ ಬಹುತೇಕ ಪೂರ್ಣ ಕೂಡ ಆಗಿದೆ.


ಇದನ್ನೂ ಓದಿ: Rishab Shetty: ತನ್ನ ಪತ್ನಿಗೆ ಥ್ಯಾಂಕ್ಸ್ ಹೇಳಿದ ರಿಷಬ್ ಶೆಟ್ಟಿ,ಯಾಕ್ ಗೊತ್ತೇ? ಈ ಸ್ಟೋರಿ ನೋಡಿ


ಯುವ ನಿರ್ದೇಶಕ ರಂಗನಾಥ್ ಈ ಜೋಡಿಯ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ವಿನಯ್ ಅನ್ನೋ ಹೊಸಬ ಒಳ್ಳೆ ಡೈಲಾಗ್​ ಅನ್ನೇ ಬರೆದುಕೊಟ್ಟಿದ್ದಾರೆ. ಇವುಗಳನ್ನ ಓದಿದ್ರೇನೆ ಸಾಕು, ತುಂಬಾ ಖುಷಿ ಆಗುತ್ತದೆ. ಅಷ್ಟೇ ಉತ್ಸಾಹದಲ್ಲಿಯೇ ಡೈಲಾಗ್ ಹೇಳಬೇಕು ಅನಿಸುತ್ತದೆ ಎಂದು ಅಭಿಜಿತ್ ಹೇಳುತ್ತಾರೆ.


Kannada Actor Abhijith Playing Muslim Charector in Attli Film
ನಾನು ನಾನ್ ವೆಜ್ ತಿನ್ನೋದಿಲ್ಲ-ಮೊಟ್ಟೆನೂ ತಿಂದೇ ಇಲ್ಲ !


ನಾನು ನಾನ್ ವೆಜ್ ತಿನ್ನೋದಿಲ್ಲ-ಮೊಟ್ಟೆನೂ ತಿಂದೇ ಇಲ್ಲ !
ನಟ ಅಭಿಜಿತ್ ಎಂದೂ ನಾನ್​ ವೆಜ್ ಸೇವಿಸಿದವ್ರೇ ಅಲ್ಲ. ಮೊಟ್ಟೆ ಕೂಡ ಸೇವಿಸಿಲ್ಲ ಅನ್ನೋದೇ ವಿಶೇಷ. ಈ ವಿಶೇಷ ನಾಯಕ ನಟ ಈ ಚಿತ್ರದಲ್ಲಿ ಮಟನ್ ಶಾಪ್ ಮಾಲೀಕ ಆಗಿದ್ದಾರೆ. ಇದನ್ನ ಅಷ್ಟೇ ವಿಶೇಷವಾಗಿಯೇ ಹೇಳುವ ಅಭಿಜಿತ್ ತುಂಬಾ ಖುಷಿಯಿಂದಲೇ ಈ ಪಾತ್ರ ಮಾಡ್ತಿರೋದಾಗಿಯೂ ತಿಳಿಸುತ್ತಾರೆ.


ನಾನು ಹೀರೋ ಅಲ್ಲ-ಶೃತಿ ಹೀರೋಯಿನ್ ಅಲ್ಲ
ಅಟ್ಲಿ ಚಿತ್ರದಲ್ಲಿ ನಾಯಕ ನಟಿ ಪೂಜಾ ಜನಾರ್ಧನ್ ಅವರ ತಂದೆ-ತಾಯಿ ಪಾತ್ರದಲ್ಲಿಯೇ ಅಭಿಜಿತ್ ಮತ್ತು ಶೃತಿ ಅಭಿನಯಿಸುತ್ತಿದ್ದಾರೆ. ಇವರ ಈ ಚಿತ್ರದ ಕಥೆಯು ಚೆನ್ನಾಗಿಯೇ ಇದೆ. ಚಿತ್ರಕಥೆನೂ ಅದ್ಭುತವಾಗಿಯೇ ಇದೆ.


ಚಿತ್ರದ ನಿರ್ದೇಶಕ ರಂಗನಾಥ್ ಈ ಹಿಂದೆ ಪ್ರಭುತ್ವ, ಅರಿವುದಂತಹ ಚಿತ್ರ ಮಾಡಿದ್ದಾರೆ. ಅಟ್ಲಿ ಇವರ ಮೂರನೇ ಸಿನಿಮಾ ಆಗಿದೆ. ರಿಷಬ್ ಶೆಟ್ಟಿ ಈ ಚಿತ್ರದ ಟೈಟಲ್ ರಿವೀಲ್ ಕೂಡ ಮಾಡಿದ್ದಾರೆ.


ಇದನ್ನೂ ಓದಿ: Gautham Karthik: ಪ್ರೀತಿಯಲ್ಲಿ ಬಿದ್ದ ಮತ್ತೊಂದು ತಾರಾ ಜೋಡಿ, ಮದುವೆ ಊಟ ಯಾವಾಗ ಎಂದ ಫ್ಯಾನ್ಸ್!


ಅಭಿಜಿತ್ ಮತ್ತು ಶೃತಿ ಅಲ್ಲದೇ ಸಿನಿಮಾದಲ್ಲಿ ಅತುಲ್ ಕುಲಕರ್ಣಿ, ರವಿ ಕಾಳೆ, ನಾಜರ್ ಇನ್ನೂ ಅನೇಕರು ಅಭಿನಯಿಸಿದ್ದಾರೆ. ಸದ್ಯಕ್ಕೆ ಚಿತ್ರದ ಮೊದಲ ಹಂತದ ಚಿತ್ರೀಕರಣ ಆಗಿದೆ. ಎರಡನೇ ಹಂತದ ಚಿತ್ರೀಕರಣ ಇನ್ನೇನು ಶುರು ಆಗುತ್ತದೆ.

First published: