• Home
  • »
  • News
  • »
  • entertainment
  • »
  • Shiva Rajkumar: ಮಾತು ತಪ್ಪದ ಶಿವಣ್ಣ! ಘೋಸ್ಟ್ ಚಿತ್ರದಲ್ಲಿ ನಟ ಅಭಿಜಿತ್​ಗೆ ಚಾನ್ಸ್

Shiva Rajkumar: ಮಾತು ತಪ್ಪದ ಶಿವಣ್ಣ! ಘೋಸ್ಟ್ ಚಿತ್ರದಲ್ಲಿ ನಟ ಅಭಿಜಿತ್​ಗೆ ಚಾನ್ಸ್

ಘೋಸ್ಟ್ ಚಿತ್ರದಲ್ಲಿ ನಟ ಅಭಿಜಿತ್​ಗೆ ಚಾನ್ಸ್

ಘೋಸ್ಟ್ ಚಿತ್ರದಲ್ಲಿ ನಟ ಅಭಿಜಿತ್​ಗೆ ಚಾನ್ಸ್

ನಟ ಅಭಿಜಿತ್ ತುಂಬಾ ಸಂತೋಷದಲ್ಲಿಯೇ ಇದ್ದಾರೆ. ನುಡಿದಂತೆ ನಡೆದರು ಶಿವರಾಜ್​ ಕುಮಾರ್ ಅಂತಲೂ ಹೇಳಿಕೊಂಡಿದ್ದಾರೆ. ಸಿನಿಮಾರಂಗದಿಂದ ದೂರವೇ ಉಳಿದಿದ್ದ ಅಭಿಜಿತ್ ಈಗ ಮತ್ತೆ ದೊಡ್ಡಪರದೆಗೆ ಬರ್ತಿರೋ ಖುಷಿಯಲ್ಲಿದ್ದಾರೆ.

  • News18 Kannada
  • Last Updated :
  • Bangalore, India
  • Share this:

ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ (Shiva Rajkumar) ಅಂದ್ರೆ ಕನ್ನಡ ಚಿತ್ರರಂಗದಲ್ಲಿಯೇ ವಿಶೇಷ ಹೀರೋ ಅಂತಲೇ ಹೇಳಬಹುದು. ಎಲ್ಲರ ಜೊತೆಗೆ ಬರೆತು ನುಡಿದಂತೆ ನಡೆಯುವ ಸೂಪರ್ (Super Star) ಸ್ಟಾರ್. ಈ ಸ್ಟಾರ್ ಚಿತ್ರ ಜೀವನದಲ್ಲಿ ಅನೇಕ ಕಲಾವಿದರು ಬಂದು ಹೋಗಿದ್ದಾರೆ. ಹಾಗೆ ಬಂದೋರು ಶಿವರಾಜ್​ ಕುಮಾರ್​ ಅವರನ್ನ ತಮ್ಮದೇ ರೀತಿಯಲ್ಲಿಯೇ ನೆನಪಿಸಿಕೊಳ್ತಾರೆ. ಅಷ್ಟು ಸ್ಪೆಷಲ್ ಆಗಿರೋ ಶಿವರಾಜ್​ ಕುಮಾರ್​ ಅವರನ್ನ ಕನ್ನಡದ ನಟ ಅಭಿಜಿತ್​ (Abhijith) ತುಂಬಾ ಕೊಂಡಾಡಿದ್ದಾರೆ. ಹೀಗೆ ಈಗ ಶಿವರಾಜ್​​ ಕುಮಾರ್​ ಅವರನ್ನ ಹೊಗಳಲು ಒಂದು ಕಾರಣವೂ ಇದೆ. ಆ ಕಾರಣದ ಹೆಸರು (Ghost Cinema) ಘೋಸ್ಟ್ ಸಿನಿಮಾ. ಯಾಕೆ ? ಏನ್ ? ಈ ಹೊಗಳಿಕೆ ಹಿಂದಿನ ವಿಷಯ ಯಾವುದು ? ಅನ್ನೋದನ್ನ ಸ್ವತಃ ನಟ ಅಭಿಜಿತ್ ನ್ಯೂಸ್ 18 ಕನ್ನಡ ಡಿಜಿಟಲ್​ ಜೊತೆಗೆ ಹಂಚಿಕೊಂಡಿದ್ದಾರೆ.


ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತುಂಬಾ ವಿಶೇಷವಾದ ವ್ಯಕ್ತಿತ್ವದ ಕಲಾವಿದರು. ತಮ್ಮ ಪವರ್​​ಪುಲ್ ಎನರ್ಜಿಗೂ ಅಷ್ಟೇ ಹೆಸರು ವಾಸಿ, ಬೆಳ್ಳಿ ತೆರೆ ಮೇಲೆ ಅತಿ ಹೆಚ್ಚು ಮಿಂಚಿದ ಸೂಪರ್ ಸ್ಟಾರ್ ಕೂಡ ಹೌದು. ಕನ್ನಡದ ಈ ಸ್ಟಾರ್ ನಟ ಸ್ಮಾಲ್ ಸ್ಕ್ರೀನ್​ ಮೇಲೆ ಬಂದಿರೋದು ಕಡಿಮೇನೆ.


ಶಿವ ಕೊಟ್ಟ ಭರವಸೆ ಸುಳ್ಳಾಗಲಿಲ್ಲ-ಅದು ನಿಜವಾಗಿ ಖುಷಿ ತಂದಿದೆ
ಶಿವರಾಜ್ ಕುಮಾರ್ ಇತ್ತೀಚಿಗೆ ಡ್ಯಾನ್ಸ್ ರಿಯಾಲಿಟಿ ಶೋ ಡಿಕೆಡಿಯ ನಿರ್ಣಾಯಕರು ಆಗಿದ್ದರು. ಅದೇ ರೀತಿ ಇನ್ನೊಂದು ಕಡೆ ಜೋಡಿ ನಂಬರ್ ಒನ್ ವಿಶೇಷ ಶೋ ಕೂಡ ಇತ್ತು. ವಿಶೇಷವಾಗಿಯೇ ಈ ಎರಡೂ ಶೋಗಳ ಮಹಾಸಂಗಮದಲ್ಲಿ ಒಂದು ಚಮತ್ಕಾರ್ ಕೂಡ ಆಗಿಯೇ ಬಿಡ್ತು.


ಹೌದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಮಹಾಸಂಗಮದಲ್ಲಿ ನಟ ಅಭಿಜಿತ್ ಅವರಿಗೆ ಒಂದು ಭರವಸೆ ಕೊಟ್ಟಿದ್ದರು. "ನನ್ನ ಮುಂದಿನ ಸಿನಿಮಾದಲ್ಲಿ ನೀವೂ ಇರುತ್ತೀರಿ" ಅಂತಲೇ ಶಿವರಾಜ್ ಕುಮಾರ್ ಹೇಳಿದ್ದರು. ಅಷ್ಟೇ ನೋಡಿ, ಈ ಬಗ್ಗೆ ಅಭಿಜಿತ್ ಕೂಡ ನಮ್ಮೊಟ್ಟಿಗೆ ಹೇಳಿಕೊಂಡಿದ್ದರು.


Kannada Actor Abhijit Got Chance in Kannada Ghost Cinema
ಘೋಸ್ಟ್ ಸಿನಿಮಾದಲ್ಲಿ ಶಿವರಾಜ್ ಕುಮಾರ್- ಅಭಿಜಿತ್ ಅಭಿನಯ


ಇಷ್ಟೆಲ್ಲ ಆದ್ಮೇಲೆ ನುಡಿದಂತೆ ಶಿವರಾಜ್​​ ಕುಮಾರ್ ನಡೆದುಕೊಳ್ಳುವವರೇ ? ಅನ್ನೋ ಅನುಮಾನ ತುಂಬಿದ ಪ್ರಶ್ನೆಗಳೂ ಹಲವರಲ್ಲಿದ್ದವು. ಆದರೆ ಆ ಭರಸೆಯನ್ನ ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ ಈಗ ಉಳಿಸಿಕೊಂಡಿದ್ದಾರೆ.


ಕನ್ನಡದ ಘೋಸ್ಟ್ ಸಿನಿಮಾದಲ್ಲಿ ನಟ ಅಭಿಜಿತ್ ಅವರಿಗೆ ಚಾನ್ಸ್
ಶಿವರಾಜ್​ ಕುಮಾರ್ ಅಭಿನಯದ ಘೋಸ್ಟ್ ಚಿತ್ರಕ್ಕೆ ಇದೇ 12 ರಂದು ಮುಹೂರ್ತ ಆಗಿದೆ. ಡೈರೆಕ್ಟರ್ ಶ್ರೀನಿ ನಿರ್ದೇಶನದ ಈ ಚಿತ್ರದಲ್ಲಿ ಅಭಿಜಿತ್​ಗೆ ಒಂದು ಒಳ್ಳೆ ಚಾನ್ಸ್ ಕೂಡ ಸಿಕ್ಕಿದೆ. ಅದು ಮಹತ್ವದ ಚಾನ್ಸ್ ಅಂದ್ರೆ ತಪ್ಪೇ ಇಲ್ಲ ನೋಡಿ.


ಇದನ್ನೂ ಓದಿ: Kantara-Rishab Shetty Wife: ಕಾಂತಾರದಲ್ಲಿ ನಟಿಸಿದ್ದಾರೆ ರಿಷಬ್ ಶೆಟ್ಟಿ ಪತ್ನಿ! ಯಾವ ಪಾತ್ರ ಗೊತ್ತೇ?


ನಿಜ, ಕನ್ನಡದ ಘೋಸ್ಟ್ ಚಿತ್ರದಲ್ಲಿ ಅಭಿಜಿತ್​ ಅವರಿಗೆ ಒಳ್ಳೆ ಪಾತ್ರವನ್ನ ಕೊಡಲಾಗಿದೆ. ಈ ಪಾತ್ರದ ಬಗ್ಗೆ ಹೇಳಲು ಮತ್ತು ಇತರ ವಿವರ ತಿಳಿಸಲು, ಸ್ವತಃ ಶಿವರಾಜ್​ ಕುಮಾರ್ ಅವರು ಅಭಿಜಿತ್ ಅವರನ್ನ ಘೋಸ್ಟ್ ಸೆಟ್​ಗೆ ಕರೆದಿದ್ದರು.


"ನುಡಿದಂತೆ ನಡೆದರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್"
ನಟ ಅಭಿಜಿತ್ ತುಂಬಾ ಸಂತೋಷದಲ್ಲಿಯೇ ಇದ್ದಾರೆ. ನುಡಿದಂತೆ ನಡೆದರು ಶಿವರಾಜ್​ ಕುಮಾರ್ ಅಂತಲೂ ಹೇಳಿಕೊಂಡಿದ್ದಾರೆ. ಸಿನಿಮಾರಂಗದಿಂದ ದೂರವೇ ಉಳಿದಿದ್ದ ಅಭಿಜಿತ್, ಈಗ ಮತ್ತೆ ದೊಡ್ಡಪರದೆಗೆ ಬರ್ತಿರೋ ಖುಷಿಯಲ್ಲಿದ್ದಾರೆ.


Kannada Actor Abhijit Got Chance in Kannada Ghost Cinema
ಘೋಸ್ಟ್ ಚಿತ್ರದಲ್ಲಿ ಅಭಿಜಿತ್ ಮಹತ್ವದ ಪಾತ್ರದಲ್ಲಿ ಅಭಿನಯ


ತಮ್ಮ ಚಿತ್ರ ಜೀವನದಲ್ಲಿ ಮತ್ತೊಂದು ಹೊಸ ಅಧ್ಯಾಯ ಶುರು ಆಗಿದೆ ಅಂತಲೇ ಹೇಳಿಕೊಳ್ತಾರೆ. ಘೋಸ್ಟ್ ಸಿನಿಮಾದ ಸೆಟ್​ ನಲ್ಲಿ ಎಲ್ಲರೂ ಅತೀ ಗೌರವದಿಂದಲೇ ಅಭಿಜಿತ್ ಅವರನ್ನ ಸ್ವಾಗತಿಸಿದ್ದಾರೆ. ಶಿವರಾಜ್ ಕುಮಾರ್ ಸೇರಿದಂತೆ ನಿರ್ದೇಶಕ ಶ್ರೀನಿ, ನಿರ್ಮಾಪಕ ಸಂದೇಶ್ ನಾಗರಾಜ್ ಎಲ್ಲರೂ ಗೌರವದಿಂದಲೇ ವೆಲ್​ ಕಮ್ ಮಾಡಿದ್ದಾರೆ.


ಘೋಸ್ಟ್ ಸಿನಿಮಾ ಅಷ್ಟೇ ಅಲ್ಲ-ಇನ್ನೂ ಎರಡು ಚಿತ್ರಕ್ಕೂ ಅಭಿಜಿತ್ ಚಾನ್ಸ್
ಘೋಸ್ಟ್ ಚಿತ್ರದಲ್ಲಿ ನಟ ಅಭಿಜಿತ್ ಒಂದು ವಿಶೇಷ ಮತ್ತು ಮಹತ್ವದ ಪಾತ್ರವನ್ನೇ ಮಾಡುತ್ತಿದ್ದಾರೆ. ಈ ಚಿತ್ರ ಆದ್ಮೇಲೆ ಲೈಫ್ ಚೇಂಜ್ ಆಗುತ್ತದೆ ಎಂದು ನಿರ್ಮಾಪಕ ಸಂದೇಶ್ ನಾಗರಾಜ್ ಕೂಡ ಹೇಳಿದ್ದಾರೆ.


ಇದರ ಬೆನ್ನಲ್ಲಿಯೇ ಶಿವರಾಜ್ ಕುಮಾರ್ ಈಗಾಗಲೇ ಇನ್ನೂ ಎರಡು ಚಿತ್ರಕ್ಕೂ ಅಭಿಜಿತ್ ಹೆಸರು ರೆಫರ್ ಮಾಡಿದ್ದಾರೆ. ಅಲ್ಲಿಗೆ ಮೂರು ಸಿನಿಮಾಗಳಿಗೆ ಶಿವರಾಜ್ ಕುಮಾರ್ ಮೂಲಕ, ಅಭಿಜಿತ್​ ಅವರಿಗೆ ಸಿನಿಮಾಗಳಲ್ಲಿ ಅಭಿನಯಿಸೋಕೆ ಚಾನ್ಸ್ ಸಿಕ್ಕಿದೆ.


ಹ್ಯಾಟ್ರಿಕ್ ಹೀರೋ ಜೊತೆಗೆ ಅಭಿಜಿತ್ ಸ್ಕ್ರೀನ್ ಶೇರ್
ಈ ಒಂದು ಖುಷಿಯನ್ನ ಕೂಡ ಶೇರ್ ಮಾಡಿಕೊಂಡಿರೋ ಅಭಿಜಿತ್, ಘೋಸ್ಟ್ ಚಿತ್ರದ ತಮ್ಮ ಪಾತ್ರ ಕೇಳಿ ಖುಷಿಯಾಗಿದ್ದಾರೆ. ಶಿವರಾಜ್​ ಕುಮಾರ್ ಜೊತೆಗೂ ಸ್ಕ್ರೀನ್ ಶೇರ್ ಕೂಡ ಮಾಡಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ: Head Bush: ದಾವಣಗೆರೆಗೆ ಬರ್ತಿದಾರೆ ಡಾನ್ ಜಯರಾಜ್! ಮೋಹಕತಾರೆ ರಮ್ಯ, ಡಿಂಪಲ್ ಕ್ವೀನ್ ರಚಿತಾ ರಾಮ್ ಸಾಥ್!


ಆದರೆ ಇವರ ಪಾತ್ರದ ಚಿತ್ರೀಕರಣ ಎರಡನೇ ಹಂತದಲ್ಲಿಯೇ ಆಗುತ್ತದೆ. ಹಾಗಾಗಿಯೇ ಅಭಿಜಿತ್ ಮಹತ್ವದ ಪಾತ್ರದ ತಯಾರಿಯಲ್ಲಿಯೇ ತಮ್ಮನ್ನ ತಾವು ರೆಡಿ ಮಾಡಿಕೊಳ್ಳಲು ನಿರತರಾಗುತ್ತಿದ್ದಾರೆ.

First published: