• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Martin Movie: ಮಾತು ಕಮ್ಮಿ-ಆ್ಯಕ್ಷನ್ ಜಾಸ್ತಿ! ಮಾರ್ಟಿನ್ ಚಿತ್ರ ಬಗ್ಗೆ ಧ್ರುವ ಹೇಳಿದ್ದಿಷ್ಟು

Martin Movie: ಮಾತು ಕಮ್ಮಿ-ಆ್ಯಕ್ಷನ್ ಜಾಸ್ತಿ! ಮಾರ್ಟಿನ್ ಚಿತ್ರ ಬಗ್ಗೆ ಧ್ರುವ ಹೇಳಿದ್ದಿಷ್ಟು

ಮಾತು ಕಡಿಮೆ ಆಡೊ ಕನ್ನಡದ ಮಾರ್ಟಿನ್!

ಮಾತು ಕಡಿಮೆ ಆಡೊ ಕನ್ನಡದ ಮಾರ್ಟಿನ್!

ಪ್ರೆಸ್​ಮೀಟ್​ನಲ್ಲಿ ಪತ್ರಕರ್ತರು ಒಂದು ಪ್ರಶ್ನೆ ಕೇಳಿದರು. ನಿಮ್ಮ ಸಿನಿಮಾದಲ್ಲಿ ಮಾತುಗಳು ಇವೆಯೇ? ಅದಕ್ಕೆ ಧ್ರುವ ಸರ್ಜಾ ಉತ್ತರ ಕೊಟ್ಟರು. ನಾನು ನಮ್ಮ ಡೈರೆಕ್ಟರ್​ಗೆ ಕೇಳಿದೆ. ಡೈಲಾಗ್ ಜಾಸ್ತಿ ಕೊಡಿ ಎಂದು, ಆದರೆ ಅವರು ಕೊಡಲಿಲ್ಲ ಎಂದು ಧ್ರುವ ಸರ್ಜಾ ಹೇಳಿದ್ರು.

 • News18 Kannada
 • 3-MIN READ
 • Last Updated :
 • Bangalore [Bangalore], India
 • Share this:

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಸಿನಿಮಾಗಳಲ್ಲಿ ಸಖತ್ ಡೈಲಾಗ್ ಇರುತ್ತವೆ. ಥಿಯೇಟರ್​​​ನಲ್ಲಿ ಕುಳಿತ ಬಿಸಿ ರಕ್ತದ ಹುಡುಗರು ಇವುಗಳನ್ನ ಕೇಳಿ ಬೇಜಾನ್ (Dhruva Sarja Martin Movie) ಎಂಜಾಯ್ ಮಾಡುತ್ತಾರೆ. ಮಸ್ತ್ ಮಾತಿರೋ ಧ್ರುವ ಸರ್ಜಾ ಚಿತ್ರಗಳಲ್ಲಿ ಫೈಟ್ಸ್ ಅಷ್ಟೇ ಇಂಟ್ರಸ್ಟಿಂಗ್ ಆಗಿಯೇ ಇವೆ. ಇದಕ್ಕೆ ಎಕ್ಸಾಂಪಲ್ ಸುಮಾರು ಸಿನಿಮಾಗಳಿವೆ. ಆ್ಯಕ್ಷನ್ ಜೊತೆಗೆ ಮಾತಿಗೂ (Pan India Martin Film) ಫೇಮಸ್ ಆಗಿರೋ ಧ್ರುವ ಸರ್ಜಾ ಪೊಗರು (Pogaru Movie) ಚಿತ್ರದಲ್ಲಿ ಎರಡೂ ವಿಷಯದಲ್ಲಿ ಸ್ವಲ್ಪ ಜಾಸ್ತಿನೇ ಎಫರ್ಟ್ ಹಾಕಿದ್ದರು. ಆದರೆ ಮಾರ್ಟಿನ್ ಚಿತ್ರದಲ್ಲಿ ಎಲ್ಲವೂ ಬದಲಾಗಿದೆ. ಇಲ್ಲಿರೋದೇಲ್ಲ ಸ್ಪೆಷಲ್ ವಿಷಯವೇ ಆಗಿದೆ. ಇದರ ಬಗ್ಗೆ ಸ್ವತಃ ಧ್ರುವ ಸರ್ಜಾ ಮತ್ತು ನಿರ್ದೇಶಕ ಎ.ಪಿ.ಅರ್ಜುನ್ ಹೇಳಿಕೊಂಡಿದ್ದಾರೆ.


ಮಾರ್ಟಿನ್ ಚಿತ್ರದಲ್ಲಿ ಮಾತು ಕಡಿಮೆ-ಆ್ಯಕ್ಷನ್ ಜಾಸ್ತಿ!


ಮಾತಿಲ್ಲದ ಮಾರ್ಟಿನ್ ಚಿತ್ರದಲ್ಲಿ ಆ್ಯಕ್ಷನ್ ಮಾತನಾಡುತ್ತದೆ. ಅವಶ್ಯ ಇದ್ದಲ್ಲಿ ಮಾತುಗಳು ಇಲ್ಲಿ ಮಹತ್ವ ಪಡೆಯುತ್ತವೆ. ಈ ಒಂದು ಭಾವನೆ ಈಗ ಮೂಡಲು ಸಿನಿಮಾ ತಂಡ ಹಂಚಿಕೊಂಡ ಒಂದಷ್ಟು ವಿಷಯವೇ ಕಾರಣ ಆಗಿದೆ.


Kannada Action Prince Dhruva Sarja New Movie Martin Interesting Matter Reveal
ಪತ್ರಕರ್ತರು ಕೇಳಿದರು ಧ್ರುವ ಸರ್ಜಾ ಹೇಳಿದರು!


ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಚಿತ್ರ ಜೀವನದಲ್ಲಿ ಹಲವು ಸಿನಿಮಾಗಳು ಬಂದಿವೆ. ಈ ಚಿತ್ರಗಳಲ್ಲಿ ಧ್ರುವ ಸರ್ಜಾ ಮಾಸ್ ಡೈಲಾಗ್ ಹೊಡೆದಿದ್ದಾರೆ. ಅದರಿಂದ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಮಾತು ಕಡಿಮೆ ಆಡೊ ಕನ್ನಡದ ಮಾರ್ಟಿನ್!
ಒಂದು ರೀತಿ ಡೈಲಾಗ್ ಹೊಡೆಯೋದ್ರೆಲ್ಲಿ ಬ್ಯಾಂಡ್ ಆಗಿರೋ ನಟ ಧ್ರುವ ಸರ್ಜಾ ಆ್ಯಕ್ಷನ್ ವಿಷಯದಲ್ಲೂ ಬೇಜಾನ್ ಖದರ್ ತೋರಿದ್ದಾರೆ. ಈ ಕಾರಣಕ್ಕೇನೆ ಅಭಿಮಾನಿಗಳು ಧ್ರುವ ಸರ್ಜಾ ಅವರನ್ನ ಆ್ಯಕ್ಷನ್ ಪ್ರಿನ್ಸ್ ಅಂತಲೂ ಕರೆಯುತ್ತಾರೆ.


ಧ್ರುವ ಸರ್ಜಾ ಅವರ ಈ ಹಿಂದಿನ ಪೊಗರು ಚಿತ್ರದಲ್ಲಿ ಎಲ್ಲವೂ ಜಾಸ್ತಿ ಇತ್ತು. ಡೈಲಾಗ್ ಅಂತ ಬಂದ್ರೆ, ಧ್ರುವ ಸರ್ಜಾ ಇಲ್ಲಿ ಸುಧೀರ್ಘ ಡೈಲಾಗ್ ಹೇಳಿದ್ದರು. ಆ್ಯಕ್ಷನ್ ಅಂತೂ ಇಡೀ ಥಿಯೇಟರ್​​ಗಳಲ್ಲಿ ಬೇರೆ ಲೆವಲ್​ನ ವೈಬ್ರೇಷನ್ ಕ್ರಿಯೇಟ್ ಮಾಡಿತ್ತು.


ಮಾರ್ಟಿನ್ ಚಿತ್ರದಲ್ಲಿ ಮಾತು ಕಡಿಮೆ-ಧ್ರುವ ಸರ್ಜಾ!
ಆದರೆ ಮಾರ್ಟಿನ್ ಚಿತ್ರದಲ್ಲಿ ಎಲ್ಲವೂ ಇದೆ. ಮಾತು ಮಾತ್ರ ಕಡಿಮೆ ಅನ್ನೋದನ್ನ ಧ್ರುವ ಸರ್ಜಾ ಹೇಳಿದ್ದಾರೆ. ಡೈರೆಕ್ಟರ್ ಎ. ಪಿ. ಅರ್ಜುನ್ ಕೂಡ ಇದನ್ನೇ ಹೇಳುತ್ತಾರೆ.


ಚಿತ್ರದ ವಿಶೇಷ ಪ್ರೆಸ್​ಮೀಟ್​​ನಲ್ಲಿ ಈ ಒಂದು ವಿಷಯವನ್ನ ಡೈರೆಕ್ಟರ್ ಎ. ಪಿ. ಅರ್ಜುನ್ ಮತ್ತು ಧ್ರುವ ಸರ್ಜಾ ಹೇಳಿಕೊಂಡಿದ್ದಾರೆ. ಡೈರೆಕ್ಟರ್ ಎ.ಪಿ.ಅರ್ಜುನ್ ಕೂಡ ಇದೇ ವಿಷಯವನ್ನ ಹೇಳಿದ್ರು.


ಪತ್ರಕರ್ತರು ಕೇಳಿದರು ಧ್ರುವ ಸರ್ಜಾ ಹೇಳಿದರು!


ಪ್ರೆಸ್​ ಮೀಟ್​​ಲ್ಲಿ ಪತ್ರಕರ್ತರು ಒಂದು ಪ್ರಶ್ನೆ ಕೇಳಿದರು. ನಿಮ್ಮ ಸಿನಿಮಾದಲ್ಲಿ ಮಾತುಗಳು ಇವೆಯೇ? ಅದಕ್ಕೆ ಧ್ರುವ ಸರ್ಜಾ ಉತ್ತರ ಕೊಟ್ಟರು. ನಾನು ನಮ್ಮ ಡೈರೆಕ್ಟರ್​ಗೆ ಕೇಳಿದೆ. ಡೈಲಾಗ್ ಜಾಸ್ತಿ ಕೊಡಿ ಎಂದು, ಆದರೆ ಅವರು ಕೊಡಲಿಲ್ಲ ಎಂದು ಧ್ರುವ ಸರ್ಜಾ ಹೇಳಿದ್ರು.


ನಿಜ, ಧ್ರುವ ಸರ್ಜಾ ಹೀಗೆ ತಮ್ಮ ಚಿತ್ರದಲ್ಲಿ ಡೈಲಾಗ್ ಇಲ್ಲವೇ ಇಲ್ಲ ಅನ್ನೋದನ್ನ ಹೇಳಿದರು. ಹಾಗಂತ ಇದು ಡೈಲಾಗ್ ಲೆಸ್ ಸಿನಿಮಾ ಅಲ್ಲ. ಎಲ್ಲಿ ಅವಶ್ಯ ಇದೆಯೋ ಅಲ್ಲಿ ಡೈಲಾಗ್ ಇವೆ. ಆದರೆ ಕಮ್ಮಿ ಇವೆ ಅನ್ನೋದನ್ನ ಡೈರೆಕ್ಟರ್ ಎ.ಪಿ.ಅರ್ಜುನ್ ಹೇಳಿದರು.


Kannada Action Prince Dhruva Sarja New Movie Martin Interesting Matter Reveal
ಮಾರ್ಟಿನ್​ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್​ಗಳ ಅಬ್ಬರ


ಮಾರ್ಟಿನ್​ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್​ಗಳ ಅಬ್ಬರ
ಮಾರ್ಟಿನ್ ಚಿತ್ರದಲ್ಲಿ ಆ್ಯಕ್ಷನ್ ಜಾಸ್ತಿ ಇದೆ. ಇದಕ್ಕೆ ಚಿತ್ರದ ಪೋಸ್ಟರ್ ನೋಡಿದ್ರೆ ಸಾಕು ಅದು ನಿಮಗೆ ಅರ್ಥ ಆಗುತ್ತದೆ. ಅಂತಹ ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್​​ಗಳನ್ನ ತೆಗೆಯಲಾಗಿದೆ. ಇಬ್ಬರು ಸಾಹಸ ನಿರ್ದೇಶಕರಾದ ರಾಮ-ಲಕ್ಷ್ಮಣ ಮತ್ತು ರವಿ ವರ್ಮ ಕ್ಲೈಮ್ಯಾಕ್ಸ್ ಗೆ ಕೆಲಸ ಮಾಡಿದ್ದಾರೆ.


ಇದನ್ನೂ ಓದಿ:  Martin Movie: ಆ್ಯಕ್ಷನ್ ಪ್ರಿನ್ಸ್ ಮಾರ್ಟಿನ್ ಬಿಗ್ ಅಪ್ಡೇಟ್! ಟೀಸರ್ ರಿಲೀಸ್ ಡೇಟ್ ಫಿಕ್ಸ್


ಮಾರ್ಟಿನ್ ಚಿತ್ರದ ಟೀಸರ್ ಇದೇ ತಿಂಗಳು 23 ರಂದು ರಿಲೀಸ್ ಆಗುತ್ತಿದೆ. ಈ ವಿಷಯ ಸೇರಿದಂತೆ ಹತ್ತು ಹಲವು ವಿಚಾರಗಳನ್ನ ಸಿನಿಮಾದ ನಿರ್ಮಾಪಕ ಉದಯ್ ಮೆಹತಾ, ನಿರ್ದೇಶಕ ಎ. ಪಿ. ಅರ್ಜುನ್, ನಾಯಕ ನಟ ಧ್ರುವ ಸರ್ಜಾ ಈಗ ಹಂಚಿಕೊಂಡದ್ದಾರೆ. ಅವುಗಳಲ್ಲಿ ಮಾರ್ಟಿನ್ ಚಿತ್ರದಲ್ಲಿ ಮಾತು ಕಡಿಮೆ ಅನ್ನೋದೇ ಸದ್ಯ ಹೆಚ್ಚು ಗಮನ ಸೆಳೆಯುತ್ತಿದೆ.

First published: