ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Action Prince Dhruva Sarja) ಅಭಿನಯದ ಮಾರ್ಟಿನ್ ಚಿತ್ರದ ಬಗ್ಗೆ ಇನ್ನಿಲ್ಲದಂತೆ ಕುತೂಹಲ ಇದೆ. ಡೈರೆಕ್ಟರ್ ಎ.ಪಿ. ಅರ್ಜುನ್ (Director A P Arjun) ತಮ್ಮ ಈ ಚಿತ್ರವನ್ನ ಅದ್ಭುತವಾಗಿಯೇ ತೆಗೆದಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ ಸೀನ್ ಅನ್ನೇ ಬರೋಬ್ಬರಿ 45 ದಿನ ತೆಗೆಯಲಾಗಿದೆ. ರೋಮಾಂಚನಗೊಳಿಸೋ (Super Action Scenes) ಆ್ಯಕ್ಷನ್ ದೃಶ್ಯಗಳೂ ಈ ಚಿತ್ರದಲ್ಲಿವೆ. ಸಾಹಸ ನಿರ್ದೇಶಕರಾದ ಕನ್ನಡದ ರವಿ ವರ್ಮ ಮತ್ತು ಟಾಲಿವುಡ್ನ ರಾಮ್-ಲಕ್ಷ್ಮಣ ಈ ಚಿತ್ರದ ದೃಶ್ಯಗಳನ್ನ ಭರ್ಜರಿಯಾಗಿಯೇ ತೆಗೆದಿದ್ದಾರೆ. ಕನ್ನಡದ ಪ್ಯಾನ್ (Martin Pan India Cinema) ಇಂಡಿಯಾ ಸಿನಿಮಾಗಳ ಲಿಸ್ಟ್ ಅಲ್ಲಿ ಇದು ಕೂಡ ಸೇರಲಿದೆ. ಇದಕ್ಕೂ ಹೆಚ್ಚಾಗಿ ಧ್ರುವ ಸರ್ಜಾ ಫ್ಯಾನ್ಸ್ಗೆ ದೊಡ್ಡ ಹಬ್ಬವೇ ಆಗಲಿದೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ .
ಮಾರ್ಟಿನ್ ಚಿತ್ರದಲ್ಲಿವೆ ರೋಮಾಂಚನಗೊಳಿಸೋ ಸೀನ್!
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಜಬರ್ ದಸ್ತ್ ಆಗಿಯೇ ಇದೆ. ಈ ಚಿತ್ರದಲ್ಲಿ ಬರುವ ಸಾಹಸ ದೃಶ್ಯಗಳು ಭರ್ಜರಿಯಾಗಿಯೇ ಇವೆ. ಸೀಟ್ ಮೇಲೆ ಕುಳಿತ ಪ್ರೇಕ್ಷಕ ಅಕ್ಷರಶಃ ರೋಮಾಂಚನಗೊಳ್ಳಲಿದ್ದಾರೆ. ಅಂತಹ ಸೀನ್ಗಳೇ ಈ ಚಿತ್ರದಲ್ಲಿರೋದು ಒಟ್ಟು ಚಿತ್ರ ಹೈಲೈಟ್ಸ್ ಆಗಿದೆ.
ಮಾರ್ಟಿನ್ ಕನ್ನಡದ ಮತ್ತೊಂದು ಹೆಮ್ಮೆ ಚಿತ್ರ ಆಗಲಿದೆ
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಈ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗೋ ಸಾಧ್ಯತೆ ಜಾಸ್ತಿ ಇದೆ. ಬಹು ಭಾಷೆಯಲ್ಲಿಯೇ ಕನ್ನಡದ ಮಾರ್ಟಿನ್ ತಯಾರ್ ಆಗುತ್ತಿದೆ. ಪ್ರತಿ ಭಾಷೆಯಲ್ಲೂ ಮಾರ್ಟಿನ್ ತನ್ನದೇ ಖದರ್ ತೋರಲಿದೆ.
ಮಾರ್ಟಿನ್ ಸಿನಿಮಾ ದೃಶ್ಯಗಳು ಅದ್ಭುತವಾಗಿಯೇ ಬಂದಿದೆ. ಮೈಂಡ್ ಬ್ಲೋಯಿಂಗ್ ಅಂತೀವಲ್ಲ. ಹಾಗೇನೆ ಈ ಚಿತ್ರದಲ್ಲಿ ದೃಶ್ಯಗಳು ಇರೋದು ವಿಶೇಷವೇ ಆಗಿದೆ.
ಮಾರ್ಟಿನ್ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ರೋಮಾಂಚಕ!
ಮಾರ್ಟಿನ್ ಸಿನಿಮಾದ ಕಟ್ಟ ಕಡೆಯ ದೃಶ್ಯ ಅದ್ಭುತವಾಗಿಯೇ ಬಂದಿದೆ. ಇಬ್ಬರು ಸಾಹಸ ನಿರ್ದೇಶಕರು ಈ ಒಂದು ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಟಾಲಿವುಡ್ನ ರಾಮ್-ಲಕ್ಷ್ಮಣ ಚಿತ್ರದ ಮಹತ್ವದ ಸಾಹಸ ದೃಶ್ಯಗಳನ್ನೆ ಡೈರೆಕ್ಟ್ ಮಾಡಿದ್ದಾರೆ.
ಬರೋಬ್ಬರಿ 45 ದಿನ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ಚಿತ್ರೀಕರಣ
ಕನ್ನಡದ ಹೆಸರಾಂತ ಸಾಹಸ ನಿರ್ದೇಶಕ ರವಿ ವರ್ಮ ಚೇಜಿಂಗ್ ಸೀನ್ಗಳನ್ನ ತೆಗೆದಿದ್ದಾರೆ. ಚಿತ್ರದ ಕ್ಲೈಮ್ಯಾಕ್ ದೃಶ್ಯಗಳನ್ನ ಬರೋಬ್ಬರಿ-45 ದಿನಗಳವರೆಗೂ ತೆಗೆಯಲಾಗಿದೆ.
ಹಾಗೆ ಚಿತ್ರದ ಇತರ ದೃಶ್ಯಗಳೂ ಅದ್ಭುತವಾಗಿಯೇ ಬಂದಿದೆ. ಇದರ ಜೊತೆಗೆ ಕನ್ನಡದ ಈ ಚಿತ್ರವೂ ಕೂಡ ಮತ್ತೊಂದು ಬಿಗ್ ಸಿನಿಮಾ ಆಗಲಿದೆ. ಇಲ್ಲಿವರೆಗೂ ಕಾಂತಾರ ಮತ್ತು ಕೆಜಿಎಫ್ ತನ್ನದೇ ರೀತಿಯಲ್ಲಿ ಜನರಲ್ಲಿ ಮೋಡಿ ಮಾಡಿವೆ.
ಆ್ಯಕ್ಷನ್ ಪ್ರಿನ್ಸ್ "ಮಾರ್ಟಿನ್" ಮತ್ತೊಂದು ಕೆಜಿಎಫ್ ಆಗುತ್ತಾ?
ಮಾರ್ಟಿನ್ ಕೂಡ ದೊಡ್ಡ ಭರವಸೆಯ ಚಿತ್ರವೇ ಆಗಿದೆ. ಈ ಚಿತ್ರದ ಬಗ್ಗೆನೂ ಒಂದು ದೊಡ್ಡ ನಿರೀಕ್ಷೆ ಇದೆ. ಡೈರೆಕ್ಟರ್ ಎ.ಪಿ.ಅರ್ಜುನ್ ತಮ್ಮ ಈ ಸಿನಿಮಾವನ್ನ ಅದ್ಭುತವಾಗಿಯೇ ತೆಗೆದಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಈ ಚಿತ್ರವೂ ಕನ್ನಡದ ಮತ್ತೊಂದು ಬಿಗ್ ಹಿಟ್ ಸಿನಿಮಾ ಆಗಲಿದೆ. ಈಗಾಗಲೇ ಪ್ಯಾನ್ ಇಂಡಿಯಾ ಲಿಸ್ಟ್ ನಲ್ಲಿ ಕಾಂತಾರ, ಕೆಜಿಎಫ್ ಸಿನಿಮಾ ಇವೆ. ಅದೇ ಸಾಲಿಗೇನೆ ಕನ್ನಡದ ಮಾರ್ಟಿನ್ ಕೂಡ ಸೇರಲಿದೆ ಅನ್ನೋದೇ ಈಗೀನ ನಿರೀಕ್ಷೆ ಮತ್ತು ಭರವಸೆ ಆಗಿದೆ.
ಇದನ್ನೂ ಓದಿ: Reeshma Nanaiah: ಉಪ್ಪಿ ಜೊತೆ ರೊಮ್ಯಾನ್ಸ್ ಮಾಡಲಿರೋ ಕೊಡಗಿನ ಕುವರಿ ಇವರೇ!
ಇನ್ನು ಮಾರ್ಟಿನ್ ಸಿನಿಮಾದ ಚಿತ್ರೀಕರಣ ಈಗ ಬಹುತೇಕ ಪೂರ್ಣಗೊಂಡಿದೆ. ಇದರ ಬೆನ್ನಲ್ಲಿಯೇ ಈ ಚಿತ್ರದ ಸೋ ರೀಲ್ಸ್ ನೋಡಿದವ್ರೆ ವಾರೇ ವ್ಹಾ ಅಂತಲೇ ಉದ್ಘಾರ ತೆಗೆಯುತ್ತಿದ್ದಾರೆ. ಉಳಿದಂತೆ ಕನ್ನಡದ ಮಾರ್ಟಿನ್ ಎಲ್ಲರ ಮತ್ತು ಎಲ್ಲ ಭಾಷೆಯ ಪ್ರೇಕ್ಷಕರ ಹೃದಯ ಗೆಲ್ಲೋಕೆ ರೆಡಿ ಆಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ