ಬೆಂಗಳೂರು (ಜ.26): ಕನ್ನಡದ ಖ್ಯಾತ ಕಿರುತೆರೆ ನಟ-ನಿರೂಪಕ, ಸಂಜೀವ ಕುಲಕರ್ಣಿ(49) ಅವರು ಶನಿವಾರದಂದು ನಿಧನರಾಗಿದ್ದಾರೆ.
ಸಂಜೀವ ಕುಲಕರ್ಣಿ ಹೃದ್ರೋಗ ತೊಂದರೆಯಿಂದ ಬಳಲುತ್ತಿದ್ದರು. ನಗರದ ನಾರಾಯಣ ಹೃದಯ ವಿಜ್ನಾನ ಸಂಸ್ಥೆಯ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸಂಜೀವ ಕುಲಕರ್ಣಿ ಅವರು ಕಿರುತೆರೆ ಧಾರಾವಾಹಿಯಲ್ಲಿ ನಟಿಸುತ್ತಿದ್ದರು ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ವೇದಿಕೆ ನಿರೂಪಣೆಯಲ್ಲಿ ಖ್ಯಾತಿ ಗಳಿಸಿದ್ದರು. ಈ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಡಿಮ್ಯಾಂಡಪ್ಪೋ ಡಿಮ್ಯಾಂಡು' ನಿರೂಪಣೆ ಮಾಡುತ್ತಿದ್ದರು. 'ಡಿಮ್ಯಾಂಡಪ್ಪೋ ಡಿಮ್ಯಾಂಡು‘ ಕಾರ್ಯಕ್ರಮದ ಒಂದು ಸಾವಿರ ಸಂಚಿಕೆಗಳನ್ನು ನಿರೂಪಣೆ ಮಾಡಿದ ದಾಖಲೆ ಮಾಡಿದ್ದರು. ರಾಜರಾಣಿ, ಏಟು ಎದಿರೇಟು, ನಿಗೂಢ ರಾತ್ರಿ, ನಾಗಿಣಿ ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು.
ಮೃತರನ್ನು ಗಿರಿನಗರದಲ್ಲಿರುವ ಅವರ ಮನೆಯಲ್ಲಿ ಇಂದು ಮುಂಜಾನೆ 9 ರ ತನಕ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶವಿದೆ.
ಇದನ್ನೂ ಓದಿ: ರಣವೀರ್ ತೊಟ್ಟ ಬಟ್ಟೆ ಇವ್ರದ್ದಂತೆ!; ಸಾಮಾಜಿಕ ತಾಣದಲ್ಲಿ ಟ್ರೋಲ್ ಆಗುತ್ತಿದ್ದಾರೆ ದೀಪಿಕಾ ಗಂಡ
ಇದನ್ನೂ ಓದಿ: ಕಿರುತೆರೆ ನಟಿ ಸೆಜೆಲ್ ಅತ್ಯಹತ್ಯೆಗೆ ಪ್ರೀತಿಯೇ ಕಾರಣವಾಯ್ತಾ..?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ