ಕನ್ನಡದಲ್ಲಿ 1981 ರಲ್ಲಿ ಒಂದು (Aalemane Movie) ಸಿನಿಮಾ ಬಂದಿತ್ತು. ಆಲೆಮನೆ ಅನ್ನೋದು ಈ ಚಿತ್ರದ ಶೀರ್ಷಿಕೆ. ಈ ಚಿತ್ರದ ಕಥೆಗಿಂತಲೂ ಆಲೆಮನೆ ಸಿನಿಮಾ ಅಂದ ಕೂಡಲೆ ಮೊದಲಿಗೆ ಈ ಚಿತ್ರದ ಆ ಒಂದು ಹಾಡು ನೆನಪಿಗೆ ಬರುತ್ತದೆ. ನಮ್ಮೂರ ಮಂದಾರ ಹೂವೇ (Nammoora Mandara Hoove Hit Song) ಅಂತ ಶುರು ಆಗೋ ಈ ಗೀತೆಯ ಮೊದಲ ಸಾಲನ್ನ ಡೈರೆಕ್ಟರ್ ಸುನಿಲ್ ಕುಮಾರ್ ದೇಸಾಯಿ ಅವರು, ತಮ್ಮ ಚಿತ್ರಕ್ಕೆ ಶೀರ್ಷಿಕೆ ಆಗಿಟ್ಟುಕೊಂಡರು. ಹಾಗೆ 1995 ರಲ್ಲಿ ನಮ್ಮೂರ ಮಂದಾರ ಹೂವೇ ಅಂತ ಚಿತ್ರ ತೆರೆಗೆ ಬಂದಿತ್ತು. ಆದರೆ ಆಲೆಮನೆ (Aalemane Movie Song) ಚಿತ್ರದಲ್ಲಿ ಹಲವು ಹಾಡುಗಳಿವೆ. ಅವುಗಳಲ್ಲಿ ನಮ್ಮೂರ ಮಂದಾರ ಹೂವೇ ಹಾಡು ಬಹಳಷ್ಟು ಖ್ಯಾತಿಗಳಿಸಿತ್ತು.
ಇದನ್ನ ಬರೆದಿದ್ದ ಕವಿ ದೊಡ್ಡರಂಗೇಗೌಡರು (Doddarangegowda) ಈ ಒಂದು ಗೀತೆಯನ್ನ ಯಾರನ್ನ ನೆನಪಿಸಿಕೊಂಡು ಬರೆದರು ಅನ್ನೋ ವಿಶೇಷ ವಿಷಯ ಇಲ್ಲಿದೆ ಓದಿದೆ.
ನಮ್ಮೂರ ಮಂದಾರ ಹೂವೇ ನನ್ನ ಒಲುಮೆ ಬಾಂದಳದಾ ಚಲುವೆ. ಹೌದು, ಇದನ್ನ ಯಾವ ಕಾಲದಲ್ಲಾದ್ರೂ ಕೇಳಿ, ಒಂದು ತಾಜಾತನ ಈ ಗೀತೆಯಲ್ಲಿ ವ್ಯಕ್ತವಾಗುತ್ತದೆ.
ನಮ್ಮೂರ ಮಂದಾರ ಹೂವೇ ಹಾಡಲ್ಲಿದೆ ತಾಜಾತನ
ಇದನ್ನ ಕೇಳುವ ಪ್ರತಿ ಮನಸ್ಸಿನಲ್ಲೂ ಒಂದು ಹೊಸ ಭಾವನೆ ಮೂಡುತ್ತದೆ. ಅವರವರ ಮಂದಾರ ಹೂವನ್ನ ಅವರವರು ನೆನಪಿಸಿಕೊಳ್ಳಬಹುದೇನೋ. ಹಾಗೆ ತುಂಬಾ ಅದ್ಭುತ ಮತ್ತು ಸರಳ ಸಾಲುಗಳ ಈ ಗೀತೆ ಇಡೀ ಚಿತ್ರಕ್ಕೆ ಒಂದು ರೀತಿ ಪ್ರಮೋಷನ್ ಸಾಂಗ್ ರೀತಿನೇ ಆಗಿ ಬಿಟ್ಟಿತ್ತು.
ನಮ್ಮೂರ ಮಂದಾರ ಹೂವೇ ಹಾಡನ್ನ ಕೇಳ್ತಾ ಕೇಳ್ತಾ ಹೋದಂತೆ, ಎಷ್ಟು ಒಳ್ಳೆ ಸಂಗೀತ ಕೊಟ್ಟಿದ್ದಾರೆ ಅನ್ನುವ ಭಾವನೆ ಕೂಡ ಮೂಡುತ್ತದೆ. ಅಶ್ವಥ್-ವೈದಿ ಸಂಗೀತದಲ್ಲಿ ಈ ಹಾಡು ಮತ್ತಷ್ಟು ಹೊಸ ಭಾವನೆಯನ್ನ ಕಟ್ಟಿಕೊಟ್ಟಿತ್ತು.
ಚಿತ್ರದ ಅಷ್ಟೂ ಹಾಡು ಬರೆದರು ದೊಡ್ಡರಂಗೇಗೌಡರು
ನಮ್ಮೂರ ಮಂದಾರ ಹೂವೇ ಹಾಡು ಕೇಳಿದಾಗ, ಚಿತ್ರದ ಹೆಸರು ನಮ್ಮೂರ ಮಂದಾರ ಹೂವೇ ಅಂತಲೇ ಇರಬಹುದು ಅನ್ನುವಷ್ಟು ಈ ಗೀತೆ ಜನರ ಮೇಲೆ ಪ್ರಭಾವ ಬೀರಿತ್ತು.
ಆದರೆ ಈ ಚಿತ್ರಕ್ಕೆ ಆಲೆಮನೆ ಅನ್ನುವ ಶೀರ್ಷಿಕೆಯನ್ನ ಇಡಲಾಗಿತ್ತು. ಇದಕ್ಕೂ ಮೊದಲು ಈ ಚಿತ್ರಕ್ಕೆ ಬೇರೆ ಟೈಟಲ್ ಇತ್ತು. ಹಾಗೆ ಈ ಚಿತ್ರಕ್ಕೆ ಹಾಡು ಬರೆಯಲು ಕುಳಿತ ಚಿತ್ರ ಸಾಹಿತಿ ದೊಡ್ಡರಂಗೇಗೌಡರು ಈ ಚಿತ್ರಕ್ಕೆ ಈ ಬೇರೆ ಶೀರ್ಷಿಕೆ ಇಡಿ ಅಂತಲೂ ಹೇಳಿದರು.
ಚಿತ್ರಕ್ಕೆ ಆಲೆಮನೆ ಶೀರ್ಷಿಕೆ ಕೊಟ್ಟವರು ಯಾರು?
ಕಬ್ಬಿನ ಗದ್ದೆ ಸುತ್ತ-ಮುತ್ತ ಹಾಗೂ ಆಲೆಮನೆ ಸುತ್ತ ಇಡೀ ಕಥೆ ನಡೆಯುತ್ತಿದೆ. ಹೀಗಿರೋವಾಗ ಯಾಕೆ ಈ ಚಿತ್ರಕ್ಕೆ ಉದ್ದನೆಯ ಶೀರ್ಷಿಕೆ ಬೇಕು ಎಂದು ಕೇಳಿದ್ದ ದೊಡ್ಡರಂಗೇಗೌಡರು, ಆಲೆಮನೆ ಅಂತ ಯಾಕೆ ಶೀರ್ಷಿಕೆ ಇಡಬಾರದು ಅಂತ ಕೇಳಿದರು.
ಅದೇ ಟೈಟಲ್ ಕೊನೆಯಾಯಿತು. ಚಿತ್ರದ ನಟ-ನಿರ್ದೇಶಕ ಮೋಹನ್ ಕುಮಾರ್ ತಮ್ಮ ಈ ಚಿತ್ರಕ್ಕೆ ಆಲೆಮನೆ ಅಂತ ಹೆಸರಿಟ್ಟರು. ಚಿತ್ರದಲ್ಲಿ ಧಾರವಾಡ ಮೂಲದ ನಟ ಸುರೇಶ್ ಹೆಬ್ಳೀಕರ್ ಹೀರೋ ಆಗಿ ಅಭಿನಯಿಸಿದ್ದರು. ರೂಪಾ ಚಕ್ರವರ್ತಿ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು.
ಆಲೆಮನೆ ಹಾಡು ಹುಟ್ಟಿದ್ದು ಹೇಗೆ? ಇಲ್ಲಿದೆ ಓದಿ
ಇವರ ಪ್ರೇಮ ಕಥೆಯನ್ನ ಹೇಳಿಲಿಕ್ಕೆ ಒಂದು ಹಾಡು ಬೇಕಲ್ವೇ? ಆಗಲೇ ದೊಡ್ಡರಂಗೇಗೌಡರಿಗೆ ಒಂದು ಒಳ್ಳೆ ಪ್ರೇಮ ಗೀತೆ ಬರೆದುಕೊಡಿ ಅಂತ ಹೇಳಾಯಿತು. ಆಗಲೇ ದೊಡ್ಡರಂಗೇಗೌಡರು ನಮ್ಮೂರ ಮಂದಾರ ಹೂವೇ ಬರೆಯೋಕೆ ಶುರು ಮಾಡಿದರು.
ನಮ್ಮೂರ ಮಂದಾರ ಹೂವೇ ಗೀತೆಯನ್ನ ಪತ್ನಿ ರಾಜೇಶ್ವರಿ ಗೌಡ ಅವರನ್ನ ನೆನಪಿಸಿಕೊಂಡು ಬರೆದಿದ್ದಾರೆ. ಹಾಗೆ ಈ ಬಗ್ಗೆ ಸ್ವತಃ ದೊಡ್ಡರಂಗೇಗೌಡ ಅವರು ಹಲವು ಸಂದರ್ಶನದಲ್ಲೂ ಹೇಳಿಕೊಂಡಿದ್ದಾರೆ.
ನಮ್ಮೂರ ಮಂದಾರ ಹೂವೇ ಹಾಡಿಗೆ ಸ್ಪೂರ್ತಿ ಏನು?
ಪತ್ನಿಯನ್ನ ನೆನಪಿಸಿಕೊಂಡು ಬರೆದ ಗೀತೆಯನ್ನ ಇಡೀ ಕನ್ನಡ ನಾಡು ಮೆಚ್ಚಿಕೊಂಡಿದೆ. ಇದಕ್ಕೆ ಒಳ್ಳೆ ಸಂಗೀತ ಕೊಟ್ಟ ಅಶ್ವಥ್ ವೈದಿ ಅವರ ಕೆಲಸವನ್ನು ಕನ್ನಡ ಜನತೆ ಬಹುವಾಗಿಯೇ ಮೆಚ್ಚಿಕೊಂಡಿತ್ತು.
ಆಲೆಮನೆ ಚಿತ್ರದ ಹಾಡನ್ನ ಕೇಳ್ತಾ ಹೋದ್ರೆ, ಸಂಗೀತವೂ ಅಲೆ..ಅಲೆಯಾಗಿಯೇ ಮನಸ್ಸಿಗೆ ಇಳಿಯುತ್ತದೆ. ನಮ್ಮೂರ ಮಂದಾರ ಹೂವೇಯನ್ನ ಕಲ್ಪಿಸಿಕೊಳ್ಳುವಂತೆ ಮಾಡುತ್ತದೆ.
ಗೌಡರ ಹಾಡು ಮುಂದೆ ಸಿನಿಮಾ ಟೈಟಲ್ ಆಯಿತು!
ಸುನಿಲ್ ಕುಮಾರ್ ದೇಸಾಯಿ ಅವರು ಸಾಹಿತ್ಯ ಪ್ರಿಯರು ಆಗಿದ್ದಾರೆ. ಇವರ ಈ ಒಂದು ಆಸಕ್ತಿಯಿಂದಲೇ ಶಿವರಾಜ್ ಕುಮಾರ್ ಮತ್ತು ರಮೇಶ್ ಅರವಿಂದ್ ಅಭಿನಯದ ಚಿತ್ರಕ್ಕೆ ನಮ್ಮೂರ ಮಂದಾರ ಹೂವೆ ಅಂತ ಇಟ್ಟರು.
ಇದನ್ನೂ ಓದಿ: Tagaru Movie: ವಾರೆ ನೋಟ ಬೀರಿದ ಶಿವನ ಟಗರಿಗೆ 5 ವರ್ಷ, ಡಾಲಿ ಗೆದ್ದು ಬೀಗಿದ ಈ ಚಿತ್ರದ ಪಾರ್ಟ್-2 ಬರುತ್ತಾ?
ಹಾಗೆ ಹೆಸರಿಟ್ಟ ಚಿತ್ರವೂ ಹಿಟ್ ಆಗಿತ್ತು. ನಮ್ಮೂರ ಮಂದಾರ ಹೂವೇ ಹಾಡಿನ ಖ್ಯಾತಿ ಇನ್ನೂ ಇದೆ. ಇದನ್ನ ಕೇಳಿದ ಪ್ರತಿಯೊಬ್ಬರು ಹೆಚ್ಚು ಇಷ್ಟಪಡುತ್ತಾರೆ ಅಂತ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ