ಅದೊಂದು ಸಂಜೆ ಹೆಚ್ಚು ಕಡಿಮೆ (Kannada A Movie Unknown Facts) ನಾಲ್ಕು ಗಂಟೆಯ ಸಮಯ. ಆಗ ನಾಲ್ಕು ಜನ ಲಹರಿ ವೇಲು ಅವರ ಆಡಿಯೋ ಕಂಪನಿಗೆ ಬಂದಿದ್ದರು. ಬಂದವರೇ ಮಾತು ಆರಂಭಿಸಿದ್ದರು. ಆ ಮಾತು ಆಡಿಯೋ ಖರೀದಿಗೆ ಸಂಬಂಧಿಸಿತ್ತು. ಆ ಹಿನ್ನೆಲೆಯಲ್ಲಿ ಲಹರಿ ವೇಲು ಆಡಿಯೋ ಕ್ಯಾಸೆಟ್ನಲ್ಲಿ ತಂದಿದ್ದ ರಫ್ ಆಡಿಯೋ (A Movie Super Songs) ಟ್ರ್ಯಾಕ್ ಕೇಳಿದ್ದರು. ಕೇಳ್ತಾ ಕೇಳ್ತಾನೇ ತುಂಬಾ ಖುಷಿಪಟ್ಟಿದ್ದರು. ಒಂದಲ್ಲ ಎರಡಲ್ಲ ಒಟ್ಟು ಐದು ಹಾಡುಗಳನ್ನ ಕೇಳಿದ್ದರು. ಒಂದೊಂದು ಹಾಡು ಒಂದೊಂದು ರೀತಿ ಇದ್ದವು. ಅಲ್ಲಿವರೆಗೂ ಸುಮಾರು (Real Star Upendra Movie) ಹಾಡುಗಳನ್ನ ಕೇಳಿದ್ದ ಲಹರಿ ವೇಲು ಅವರಿಗೆ ಈ ಹಾಡು ತುಂಬಾ ಇಷ್ಟ ಆಗಿದ್ದವು.
ಇವುಗಳಲ್ಲಿ ಮೂರು ಹಾಡುಗಳು ಗ್ಯಾರಂಟಿ (Super Hits Songs) ಹಿಟ್ ಅನ್ನುವ ಅಭಿಪ್ರಾಯಕ್ಕೂ ಬಂದಿದ್ದರು. ಅದೇ ಅಭಿಪ್ರಾಯವನ್ನ ಸಿನಿಮಾ ಟೀಮ್ ಮುಂದೆ ಹೇಳಿದಾಗ, ಕೇಳಿದವರ ಮೊಗದಲ್ಲಿ ಮಂದಹಾಸ ಮೂಡಿತು. ಮುದಿಡಿದ್ದ ತಾವರೆ ಅರಳಿದಂತೆ ಕಂಗೊಳಿಸಿತು.
ಅಂದು ಸಂಜೆ ನಾಲ್ವರು ಲಹರಿ ವೇಲು ಸಂಸ್ಥೆಗೆ ಬಂದಿದ್ದರು!
ಲಹರಿ ವೇಲು ಅವರ ಕಚೇರಿಗೆ ಬರುವ ಮುಂಚೆ ಆ ನಾಲ್ವರು ಬೇರೆ ಆಡಿಯೋ ಕಂಪನಿಗೆ ಹೋಗಿದ್ದರು. ಅಲ್ಲಿ ಹಾಡು ಕೇಳಿದವರೆಲ್ಲ ಒಳ್ಳೆ ಅಭಿಪ್ರಾಯವನ್ನ ವ್ಯಕ್ತಪಡಿಸಿರಲಿಲ್ಲ. ನೆಗೆಟಿವ್ ಆಗಿಯೇ ಮಾತನಾಡಿದ್ದರು. ಹೀಗಿದ್ದಾಗ ಆಡಿಯೋ ಹಕ್ಕು ಖರೀದಿಸೋದಾಗ್ಲಿ, ಅದನ್ನ ರಿಲೀಸ್ ಮಾಡೋದಾಗಲಿ ಎಲ್ಲಿಯ ಮಾತು ಹೇಳಿ?
ರಿಯಲ್ ಸ್ಟಾರ್ ಉಪೇಂದ್ರ, ಸಂಗೀತ ನಿರ್ದೇಶಕ ಗುರು ಕಿರಣ್, ಚಿತ್ರದ ನಿರ್ಮಾಪಕರಾದ ಮಂಜುನಾಥ್ ಮತ್ತು ಜಗನ್ನಾಥ್ ಅಂದು ಈ ಒಂದು ಸಮಸ್ಯೆಯನ್ನ ಎದುರಿಸಿದ್ದರು. ಅಂದು ಇವರ A ಚಿತ್ರದ ಆಡಿಯೋ ಖರೀದಿಸೋಕೆ ಯಾರೂ ಮುಂದೆ ಬಂದಿರಲಿಲ್ಲ. ಎಲ್ಲರೂ ಈ ಒಂದು ಚಿತ್ರದ ಆಡಿಯೋವನ್ನ ಕೇಳಿ ತಿರಸ್ಕರಿಸಿದ್ದರು.
A ಚಿತ್ರದ ಹಾಡುಗಳನ್ನ ಕೇಳಿ ಲಹರಿ ವೇಲು ಏನ್ ಹೇಳಿದ್ದರು?
ಆದರೆ ಒಂದು ಸಂಜೆ ನಾಲ್ಕು ಗಂಟೆ ಸುಮಾರಿಗೆ ಗುರು ಕಿರಣ್, ರಿಯಲ್ ಸ್ಟಾರ್ ಉಪೇಂದ್ರ, ನಿರ್ಮಾಪಕರಾದ ಜಗನ್ನಾಥ್ ಮತ್ತು ಮಂಜುನಾಥ್ ಲಹರಿ ಕಚೇಗೆ ಹೋಗಿದ್ದರು. ತಮ್ಮ ಚಿತ್ರದ ಆಡಿಯೋವನ್ನ ರಿಲೀಸ್ ಮಾಡಿಕೊಡಿ ಅಂತ ಹಾಡುಗಳನ್ನ ಕೇಳೊಕೆ ಲಹರಿ ವೇಲು ಅವರಿಗೆ ಕೊಟ್ಟರು.
ಆಗ ಅಷ್ಟೂ ಹಾಡುಗಳನ್ನ ಲಹರಿ ವೇಲು ಕೇಳಿದ್ದರು. ಕೇಳಿ ಹೊರ ಬಂದವ್ರೇ ಹಾಡುಗಳು ಸೂಪರ್ ಆಗಿವೆ ಅಂತಲೇ ಹೇಳಿದ್ದರು. ಅದನ್ನ ಕೇಳಿದ ಎಲ್ಲರಿಗೂ ಆಗ ಒಂದು ಉತ್ಸಾಹ ಬಂತು. ಸರ್ ನಿಜವಾಗ್ಲೂ ಹಾಡು ಚೆನ್ನಾಗಿ ಇದೆಯೇ ಅಂತಲೂ ಕೇಳಿದ್ದರು.
ಹಾಡುಗಳು ಚೆನ್ನಾಗಿರೋದಲ್ಲದೇ ಈ ಐದು ಹಾಡುಗಳಲ್ಲಿ ಮೂರು ಹಾಡುಗಳು ಹಿಟ್ ಆಗುತ್ತವೆ. ಇತರ ಎರಡು ಗೀತೆಗಳು ಸಿನಿಮಾ ನೋಡ್ತಾನೇ ಜನಕ್ಕೆ ಹತ್ತಿರ ಆಗುತ್ತವೆ ಅಂತಲೇ ಲಹರಿ ವೇಲು ಭವಿಷ್ಯ ನುಡಿದಿದ್ದರು. ಅವರು ಹೇಳಿದಂತೆ ಹಾಡುಗಳು ಹಿಟ್ ಆಗಿವೆ. ಈಗಲೂ A ಸಿನಿಮಾದ ಹಾಡುಗಳು ಜನರನ್ನ ಸೆಳೆಯುತ್ತಿವೆ.
ಆಡಿಯೋ ರಿಲೀಸ್ ಮಾಡಿದ್ರೆ ಸಾಕು ಬಿಡಿ ಸಾರ್!
ಹಂಗೋ ಹಿಂಗೋ ಸಿನಿಮಾ ಹಾಡುಗಳನ್ನ ಮಾತ್ರ ರಿಲೀಸ್ ಮಾಡಿದ್ರೆ ಸಾಕು, ದುಡ್ಡು ಕಾಸು ಏನೂ ಬೇಡ ಅಂತಲೇ ಸಿನಿಮಾ ಟೀಮ್ ಡಿಸೈಡ್ ಮಾಡಿತ್ತು. ಆದರೆ ಲಹರಿ ವೇಲು ಅವರು ಚಿತ್ರ ತಂಡದ ಈ ಒಂದು ಮಾತನ್ನ ಕೇಳಲಿಲ್ಲ. ಎಲ್ಲದಕ್ಕೂ ಒಂದು ಬೆಲೆ ಇರುತ್ತದೆ ಎಂದು ಹೇಳಿದ್ದರು. ನಾಳೆ ಬನ್ನಿ, ಇತರ ವಿಚಾರ ಮಾತನಾಡೋಣ ಅಂತಲೂ ಹೇಳಿ ಕಳಿಸಿದ್ದರು.
ಮರು ದಿನ ಸಿನಿಮಾ ಟೀಮ್ ನಾಲ್ಕು ಗಂಟೆ ಬದಲು ಮೂರುವರೆಗೆ ಬಂದಿತ್ತು. ಅಲ್ಲಿಗೆ ತಮ್ಮ ಕಚೇರಿ ಒಳಗೆ ಕರೆದ ಲಹರಿ ವೇಲು ಅವರು, ಸಿನಿಮಾ ಟೀಮ್ಗೆ ಒಂದು ಆಫರ್ ಕೊಟ್ರು. ನಿಮ್ಮ ಆಡಿಯೋ ಹಕ್ಕುಗಳನ್ನ 4.5 ಲಕ್ಷಕ್ಕೆ ಖರೀದಿಸುತ್ತೇವೆ ಅಂತ ಹೇಳಿದ್ದರು.
ವೇಲು ಕೊಟ್ಟ ಆಫರ್ ಕೇಳಿ ಶಾಕ್ ಆದ A ಸಿನಿಮಾ ಟೀಮ್!
ಇದನ್ನ ಕೇಳಿದ ನಿರ್ಮಾಪಕರಿಗೆ ಒಂದು ಕ್ಷಣ ಶಾಕ್ ಆಗಿತ್ತು. ನಮ್ಮ ಚಿತ್ರಕ್ಕೆ 45 ಸಾವಿರ ರೂಪಾಯಿ ಕೊಡ್ತೀರಾ ಅಂತಲೂ ಲಹರಿ ಅವರನ್ನ ಕೇಳಿದ್ದರು. ಆಗ ಲಹರಿ ವೇಲು ಹೇಳಿದರು. ನಾನು ಹೇಳಿರೋದು 45 ಸಾವಿರ ಅಲ್ಲ. 4.5 ಅಂದ್ರೆ, ನಾಲ್ಕು ಲಕ್ಷ 50 ಸಾವಿರ ರೂಪಾಯಿ ಅಂತಲೇ ರಿಪೀಟ್ ಮಾಡಿದರು. ಅಲ್ಲಿಗೆ ಸಿನಿಮಾ ಟೀಮ್ ಫುಲ್ ಖುಷ್ ಆಗಿ ಬಿಡ್ತು.
ಇನ್ನು ಚಿತ್ರದ ಆಡಿಯೋಗಳನ್ನ ಲಹರಿ ವೇಲು ಅವರು ಚೆನ್ನಾಗಿಯೇ ರಿಲೀಸ್ ಮಾಡಿಕೊಟ್ಟರು. ಕ್ಯಾಸೆಟ್ ಇದ್ದ ಕಾಲ ಅದು, ಎಲ್ಲ ಡೀಲರ್ಗಳಿಗೆ A ಸಿನಿಮಾದ ಕ್ಯಾಸೆಟ್ಗಳನ್ನ ಕೊಟ್ಟರು. ಆದರೆ ಕೆಲವು ದಿನಗಳ ಬಳಿಕ ಸುಮಾರು ಕ್ಯಾಸೆಟ್ಸ್ ವಾಪಾಸ್ ಬಂದವು. ಕಾರಣ, ಚಿತ್ರಕ್ಕೆ A ಅನ್ನೋ ಟೈಟಲ್ ಇದೆ ಅನ್ನೋದೇ ಪ್ರಾಬ್ಲಂ ಅಂತಲೇ ಹೇಳಿದ್ದರು.
100 ಕ್ಯಾಸೆಟ್ ಖರೀದಿಸಿದ್ರೆ 25 ಕ್ಯಾಸೆಟ್ ಉಚಿತ
ಆದರೆ ಲಹರಿ ವೇಲು ಒಂದು ಹೊಸ ಐಡಿಯಾ ಮಾಡಿದ್ದರು. 100 ಕ್ಯಾಸೆಟ್ಸ್ ತೆಗೆದುಕೊಂಡ್ರೆ, 25 ಕ್ಯಾಸೆಟ್ಗಳನ್ನ ಉಚಿತವಾಗಿ ಕೊಡುವುದಾಗಿ ಆಫರ್ ಬಿಟ್ಟರು ನೋಡಿ, ಆಗ ಡೀಲರ್ಗಳು ಫುಲ್ ಖುಷ್ ಆದರು. ಮುಗಿ ಬಿದ್ದು ಆಡಿಯೋ ಕ್ಯಾಸೆಟ್ಗಳನ್ನ ಖರೀದಿಸಿದ್ದರು.
ಹೀಗೆ ಆಡಿಯೋ ಕ್ಯಾಸೆಟ್ಗಳು ಸ್ಪೆಷಲ್ ಆಫರ್ನಲ್ಲಿ ಭಾರೀ ಸೇಲ್ ಆಗಿದ್ದವು. ಆದರೆ ಈ ಆಫರ್ ಅನ್ನ ಚಿತ್ರ 50 ದಿನ ಪೂರೈಸಿದ ಮೇಲೆ ಲಹರಿ ವೇಲು ಸ್ಟಾಪ್ ಮಾಡಿದ್ದರು. ಅಲ್ಲಿವರೆಗೂ ಈ ಹಾಡಿನ ಕ್ರೇಜ್ ಇನ್ನಿಲ್ಲದಂತೆ ಎಲ್ಲೆಡೆ ಪಸರಿಸಿಬಿಟ್ಟಿತ್ತು.
ಉಪ್ಪಿಯ A ಚಿತ್ರದ ಹಾಡು ಈಗಲೂ ಸೂಪರ್
ಹಾಗೆ ಭಾರೀ ಕ್ರೇಜ್ ಹುಟ್ಟುಹಾಕಿದ್ದ A ಸಿನಿಮಾ ಹಾಡುಗಳು ಈಗಲೂ ಕ್ರೇಜ್ ಉಳಿಸಿಕೊಂಡಿವೆ. ಲಹರಿ ವೇಲು ಅವರ ಅಂದಿನ ಜಡ್ಜ್ಮೆಂಟ್ ಈಗಲೂ ಸುಳ್ಳಾಗಿಲ್ಲ. ಅದು ಓಡ್ತಾನೆ ಇದೆ ಅಂತಲೇ ಹೇಳಬಹುದು.
ಇದನ್ನೂ ಓದಿ: Pathaan Movie: ಪಠಾನ್ ಫಸ್ಟ್ ಡೇ, ಫಸ್ಟ್ ಶೋ ನೋಡ್ಲೇಬೇಕು, ಟಿಕೆಟ್ ಸಿಗದಿದ್ರೆ ಸಾಯ್ತೀನಿ! ಶಾರುಖ್ ಅಭಿಮಾನಿಯ ಹುಚ್ಚಾಟ
ಈ ಮೂಲಕ ಕನ್ನಡಕ್ಕೆ ಗುರು ಕಿರಣ್ರಂತಹ ಒಳ್ಳೆ ಸಂಗೀತ ನಿರ್ದೇಶಕರು ಸಿಕ್ಕರು. ಇದೇ ಚಿತ್ರದ ಮೂಲಕ ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿ ಬಂದರು. ಜನರ ಮನಸನ್ನ ಕೊಳ್ಳೆ ಹೊಡೀತಾನೇ ಇದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ