Kiranraj Movie: ಚಾರ್ಲಿ ಡೈರೆಕ್ಟರ್ ಮುಂದಿನ ಸಿನಿಮಾದ ಬಿಗ್ ಅಪ್ಡೇಟ್! ಹೀರೋ ಯಾರು?

ಚಾರ್ಲಿ ಬಳಿಕ ಕಿರಣ್‌ರಾಜ್ ಏನ್ ಮಾಡ್ತಿದ್ದಾರೆ ಗೊತ್ತೆ?

ಚಾರ್ಲಿ ಬಳಿಕ ಕಿರಣ್‌ರಾಜ್ ಏನ್ ಮಾಡ್ತಿದ್ದಾರೆ ಗೊತ್ತೆ?

ಚಾರ್ಲಿ ಡೈರೆಕ್ಟರ್ ಕಿರಣ್‌ರಾಜ್ ತಮ್ಮ ಸಿನಿ ಜರ್ನಿಯಲ್ಲಿ ಇನ್ನೂ ಒಂದು ಅದ್ಭುತ ಚಿತ್ರದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಸಲ ಕೈಗೆತ್ತಿಕೊಂಡಿರೋ ಕಥೆಯಲ್ಲಿ ಹಾರರ್ ಇದೆ. ಕಾಮಿಡಿಯ ಕಿಕ್ ಕೂಡ ಇರೋದು ಅಷ್ಟೇ ವಿಶೇಷ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಕನ್ನಡದಲ್ಲಿ ಪ್ರಾಣಿಗಳ ಸಿನಿಮಾ (Kiranraj Next Movie Updates) ಬರೋದು ಕಡಿಮೆ ಆಗಿವೆ. ಎಂ.ಪಿ. ಶಂಕರ್ ಇದ್ದಾಗ ಇಂತಹ ಸಿನಿಮಗಳು ಸಾಕಷ್ಟು ಬರ್ತಾ ಇದ್ದವು. ಯಾವುದೇ ನಿರ್ಬಂಧ ಇರಲಿಲ್ಲ ಬಿಡಿ. ಆದರೆ (777 Charlie Director Kiranraj) ಈಗ ಎಲ್ಲವೂ ಸೇರಿ ಪ್ರಾಣಿಗಳ ಸಿನಿಮಾಗಳು ಅಪರೂಪ ಆಗಿವೆ. ಆದರೂ ಕನ್ನಡದಲ್ಲಿ ಒಂದು ಡಾಗ್ ಸಿನಿಮಾ ಬಂತು. ಇದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ (Kiranraj Next Movie News) ಆಯಿತು. ಆ ಚಿತ್ರ ಬಂದ್ಮೇಲೆ ಎಲ್ಲರೂ ತಮ್ಮ ತಮ್ಮ ಡಾಗ್‌ಗಳಿಗೆ ಚಾರ್ಲಿ ಅಂತಲೇ ಹೇಳ್ತಾ ಇದ್ದರು. ಅಷ್ಟು ಪರಿಣಾಮ ಬೀರಿದ್ದ ಈ ಚಿತ್ರ ಮೊನ್ನೆ ಮೊನ್ನೆ ದಾದಾ ಸಾಹೇಬ್ ಫಾಲ್ಕೆ ಫಿಲ್ಮಂ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡಿದೆ. ಇದನ್ನ ನೋಡಿದ ಅಲ್ಲಿಯ ಅನೇಕರು  ಬಹುವಾಗಿಯೇ ಮೆಚ್ಚಿಕೊಂಡರು.


ಚಿತ್ರದ ನಿರ್ದೇಶಕ ಕಿರಣ್‌ರಾಜ್ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಕೂಡ ಇದೇ ಚಿತ್ರದಿಂದಲೇ ಬಂತು. ಆದರೆ ಈ ಸಿನಿಮಾ ಆದ್ಮೇಲೆ ಡೈರೆಕ್ಟರ್ ಕಿರಣ್‌ರಾಜ್ ಮತ್ಯಾವ ಸಿನಿಮಾವನ್ನ ಸದ್ಯಕ್ಕೆ ಮಾಡಿಲ್ಲ ನೋಡಿ.


Kannada 777 Charlie Director Kiranraj Next Movie Latest Updates
ಚಾರ್ಲಿ ಕಥೆಯನ್ನ ಬೆಳ್ಳಿ ತೆರೆಗೆ ತಂದ ಕಿರಣ್‌ರಾಜ್‌


ಚಾರ್ಲಿ ಡೈರೆಕ್ಟರ್ ಕಿರಣ್‌ರಾಜ್ ಮುಂದಿನ ಚಿತ್ರ ಯಾವುದು?


ಕಿರಣ್‌ರಾಜ್ ಸಿನಿಮಾ ಜೀವನದಲ್ಲಿ ಚಾರ್ಲಿ ತುಂಬಾನೇ ಸೆನ್ಸಿಬಲ್ ಸಿನಿಮಾ ಆಗಿದೆ. ಈ ಚಿತ್ರದಲ್ಲಿ ಧರ್ಮ ಮತ್ತು ಚಾರ್ಲಿ ಹೆಸರಿನ ನಾಯಿಯ ಗಟ್ಟಿ ಬಾಂಧವ್ಯದ ಕಥೆಯನ್ನ ತುಂಬಾ ಚೆನ್ನಾಗಿಯೆ ಕಿರಣ್‌ರಾಜ್ ಹೇಳಿದ್ದರು.



ಚಾರ್ಲಿ ಮುಂಚೆ ನಾನು ಮತ್ತು ಗುಂಡ ಚಿತ್ರ ರಿಲೀಸ್


ನಾನು ಮತ್ತು ಗುಂಡ ಚಿತ್ರ ಕೂಡ ಡಾಗ್ ಕಥೆಯನ್ನೆ ಹೇಳಿತ್ತು. ಆದರೆ ಇದು ಕಿರಣ್‌ರಾಜ್ ಹೇಳಿದ್ದ ರೀತಿ ಇರಲಿಲ್ಲ ಅನ್ನೋದು ಕೂಡ ಅಷ್ಟೇ ಸತ್ಯವಾದ ಮಾತಾಗಿದೆ. ಸಿನಿಮಾದಲ್ಲಿ ನಾಯಿಯಿಂದ ಅಭಿನಯ ತೆಗಿಸೋದು ಅಷ್ಟು ಸುಲಭ ಅಲ್ವೇ ಅಲ್ಲ. ಆದರೆ ಕಿರಣ್‌ರಾಜ್ ಆ ಕೆಲಸ ಮಾಡಿದ್ದರು.


ಚಾರ್ಲಿ ಕಥೆಯನ್ನ ಬೆಳ್ಳಿ ತೆರೆಗೆ ತಂದ ಕಿರಣ್‌ರಾಜ್‌


ಡಾಗ್‌ ಬಗ್ಗೆ ವಿಶೇಷ ಪ್ರೀತಿ ಇರೋ ಕಿರಣ್‌ರಾಜ್‌, ಟ್ರಿಪಲ್ ಸೆವನ್ ಚಾರ್ಲಿ ಸಿನಿಮಾದಲ್ಲಿ ತುಂಬಾ ಚೆನ್ನಾಗಿಯೇ ಕಥೆ ಹೇಳಿದ್ದರು. ಒಂದು ನಾಯಿ ಆಸೆಯನ್ನ ಈಡೇರಿಸೋ ಮಾಲೀಕನಾಗಿ ರಕ್ಷಿತ್ ಶೆಟ್ಟಿ ಇಲ್ಲಿ ಎಲ್ಲರ ಹೃದಯ ತಟ್ಟಿಯೇ ಬಿಟ್ಟರು.


ಚಾರ್ಲಿ ಸಿನಿಮಾ ರಿಲೀಸ್‌ ಆಗಿ ಎಷ್ಟು ವರ್ಷ ಆಯ್ತು?


ಹಾಗಾಗಿಯೇ ಕನ್ನಡದಲ್ಲಿ ಟ್ರಿಪಲ್ ಸೆವನ್ ಚಾರ್ಲಿ ಹಿಟ್ ಆಯಿತು. ಬೇರೆ ಬೇರೆ ಭಾಷೆಯಲ್ಲೂ ತೆರೆ ಕಂಡು ಕನ್ನಡದ ಹೆಮ್ಮೆಯನ್ನ ಹೆಚ್ಚಿಸಿತ್ತು. ಕಳೆದ ವರ್ಷ ಜೂನ್-10 ರಂದು ಈ ಚಿತ್ರ ರಿಲೀಸ್ ಕೂಡ ಆಗಿತ್ತು. ಆದರೆ ಮೊನ್ನೆ ಮೊನ್ನೆ ಈ ಚಿತ್ರ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ನಿರ್ದೇಶಕ ಕಿರಣ್‌ರಾಜ್‌ ಅವರಿಗೆ ಅತ್ತುತ್ತಮ ನಿರ್ದೇಶಕ ಪ್ರಶಸ್ತಿಯನ್ನ ಕೂಡ ತಂದುಕೊಟ್ಟಿದೆ.


ಚಾರ್ಲಿ ಬಳಿಕ ಕಿರಣ್‌ರಾಜ್ ಏನ್ ಮಾಡ್ತಿದ್ದಾರೆ ಗೊತ್ತೆ?


ಚಾರ್ಲಿ ಡೈರೆಕ್ಟರ್ ಕಿರಣ್‌ರಾಜ್ ತಮ್ಮ ಸಿನಿ ಜರ್ನಿಯಲ್ಲಿ ಇನ್ನೂ ಒಂದು ಅದ್ಭುತ ಚಿತ್ರದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಸಲ ಕೈಗೆತ್ತಿಕೊಂಡಿರೋ ಕಥೆಯಲ್ಲಿ ಹಾರರ್ ಇದೆ. ಕಾಮಿಡಿಯ ಕಿಕ್ ಕೂಡ ಇರೋದು ಅಷ್ಟೇ ವಿಶೇಷ. ಎರಡು ರೀತಿ ಕಂಟೆಂಟ್ ಇರೋ ಈ ಚಿತ್ರದ ಕೆಲಸದಲ್ಲಿಯೇ ಕಿರಣ್‌ರಾಜ್ ಸದ್ಯ ಬ್ಯುಸಿ ಇದ್ದಾರೆ.


Kannada 777 Charlie Director Kiranraj Next Movie Latest Updates
ಹಾರರ್ ಕಾಮಿಡಿ ಚಿತ್ರದ ಕೆಲಸದಲ್ಲಿ ಕಿರಣ್‌ರಾಜ್‌ ಬ್ಯುಸಿ


ಹಾರರ್ ಕಾಮಿಡಿ ಚಿತ್ರದ ಕೆಲಸದಲ್ಲಿ ಕಿರಣ್‌ರಾಜ್‌ ಬ್ಯುಸಿ


ಪ್ರೀ ಪ್ರೋಡಕ್ಷನ್ ಕೆಲಸ ಈಗಾಗಲೇ ಶುರು ಆಗಿದೆ. ಸಿನಿಮಾದ ಸ್ಕ್ರಿಪ್ಟ್ ಒಂದರ್ಧ ಹಂತಕ್ಕೆ ಬಂದಿದೆ. ಚಿತ್ರದಲ್ಲಿ ಫ್ಯಾಂಟಸಿ ಮತ್ತು ಅಡ್ವೆಂಚರ್ ಕೂಡ ಇರುತ್ತದೆ. ಆದರೆ ಇದು ಎರಡು ಭಾಷೆಯಲ್ಲಿ ತಯಾರಾಗುವ ಸಿನಿಮಾ ಆಗಿದೆ.


ಚಾರ್ಲಿ ಡೈರೆಕ್ಟರ್ ಮುಂದಿನ ಸಿನಿಮಾ ಯಾವುದು?


ಕನ್ನಡ ಮತ್ತು ಮಲೆಯಾಳಂ ಭಾಷೆಯಲ್ಲಿ ಈ ಚಿತ್ರವನ್ನ ಕಿರಣ್‌ರಾಜ್ ಡೈರೆಕ್ಟ್ ಮಾಡಲಿದ್ದಾರೆ. ಆದರೆ ಇತರ ಭಾಷೆಗೆ ಈ ಚಿತ್ರವನ್ನ ಡಬ್ ಮಾಡೋ ಪ್ಲಾನ್ ಕೂಡ ಸಿನಿಮಾ ತಂಡಕ್ಕೆ ಇದೆ. ಇದರ ಹೊರತಾಗಿ ಕಿರಣ್‌ರಾಜ್ ಅವರ ಬಳಿ ಒಂದಷ್ಟು ಕಥೆಗಳಿವೆ.


ಇದನ್ನೂ ಓದಿ: Dhananjay: ಲಕ್ ಚಿತ್ರದಲ್ಲಿ ನಟಿಸೋ ಲಕ್ ಡಾಲಿಗೆ ಇಲ್ವಾ? ಧನಂಜಯ್ ಹೇಳಿದ್ದೇನು?


ಆ ಎಲ್ಲ ಕಥೆಗಳನ್ನ ಬೆಳ್ಳಿ ತೆರೆ ಮೇಲೆ ತರಬೇಕು ಅನ್ನೋ ಕನಸು ಕಿರಣ್‌ರಾಜ್‌ ಅವರಿಗಿದ್ದು, ಸದ್ಯ ಹಾರರ್ ಕಾಮಿಡಿ ಚಿತ್ರದ ಎರಡು ಭಾಷೆಯ ಚಿತ್ರದ ಸ್ಕ್ರಿಪ್ಟಿಂಗ್ ಕೆಲಸದಲ್ಲಿಯೇ ಕಿರಣ್‌ರಾಜ್ ಮಗ್ನರಾಗಿದ್ದಾರೆ.

First published: